Site icon Vistara News

ವಿಸ್ತಾರ TOP 10 NEWS: ಮಣಿಪುರ ಗಲಭೆಕೋರರಿಗೆ ಅಮಿತ್‌ ಶಾ ಎಚ್ಚರಿಕೆಯಿಂದ, ಶಾಲೆಗಳಲ್ಲಿ ಸಂವಿಧಾನ ಓದು ಕಡ್ಡಾಯವರೆಗಿನ ಪ್ರಮುಖ ಸುದ್ದಿಗಳಿವು

vistara top 10 news Amit shah warns manipur rioters to constitution preamble reading in school to more news

#image_title

1. Congress Guarantee: ಗ್ಯಾರಂಟಿ ನಿರ್ಧಾರ ಶುಕ್ರವಾರ; ಘೋಷಣೆ ಮಾತ್ರ ಮುಂದಿನ ವಾರ?
ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ ಎಂದಿದ್ದ ಕಾಂಗ್ರೆಸ್‌ ಇದೀಗ ಸಾಕಷ್ಟು ಸಮಯ ತೆಗೆದುಕೊಂಡು ಚರ್ಚೆ ಮುಂದುವರಿಸಿದೆ. ಈಗಾಗಲೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿರುವ ಐದು ಗ್ಯಾರಂಟಿಗಳಲ್ಲಿ ಮೂರು ಯೋಜನೆಗಳ ಕುರಿತು ಶುಕ್ರವಾರದ ಎರಡನೇ ಸಂಪುಟ ಸಭೆಯಲ್ಲಿ ನಿರ್ಧಾರ ಆಗಲಿದೆಯಾದರೂ ಅದರ ಘೋಷಣೆ ಮಾತ್ರ ಮುಂದೂಡಿಕೆಯಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: ಕರೆಂಟ್​ ಬಿಲ್​ ಕೇಳಿದ್ದಕ್ಕೆ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ; ತಲೆನೋವು ತಂದಿಟ್ಟ ಕಾಂಗ್ರೆಸ್ ಗ್ಯಾರಂಟಿ

2. D.K. Shivakumar: ತಮಿಳುನಾಡಿನವರಿಗೆ ಹೃದಯ ಶ್ರೀಮಂತಿಕೆ ಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದೇಕೆ?
ತಮಿಳುನಾಡಿನವರು ನಮ್ಮ ಅಣ್ಣತಮ್ಮಂದಿರಂತಿದ್ದು, ಯಾವುದೇ ಧ್ವೇಷ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸಚಿವರು ಆಕ್ಷೇಪಿಸಿರುವುದರ ಕುರಿತು ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಶರಣಾಗಿ, ಇಲ್ಲವೇ ಶಿಕ್ಷೆಗೆ ಸಿದ್ಧರಾಗಿ; ಮಣಿಪುರ ಗಲಭೆಕೋರರಿಗೆ ಅಮಿತ್ ಶಾ ಖಡಕ್​ ಎಚ್ಚರಿಕೆ
ಮಣಿಪುರದಲ್ಲಿ ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೊಡುವ ಸಂಬಂಧ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ (Manipur Violence) ವಿಕೋಪಕ್ಕೆ ತಲುಪಿದ ಬೆನ್ನಲ್ಲೇ, ಈ ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ವಹಿಸಿ ಗೃಹ ಸಚಿವ ಅಮಿತ್ ಶಾ (Home Minister Amit Shah) ಆದೇಶ ಹೊರಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Education News: ಇನ್ನುಮುಂದೆ ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಓದುವುದು ಕಡ್ಡಾಯ
ರಾಜ್ಯದ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಲು ಮುಂದಾಗಿದೆ. ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ‌ ಎಲ್ಲರೂ ಸಂವಿಧಾನ ತೋರಿದ ಮಾರ್ಗದಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. LPG Price Cut: 19ಕೆಜಿ ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ; ಈಗೆಷ್ಟಿದೆ ದರ?
ಜೂನ್ ತಿಂಗಳ ಮೊದಲ ದಿನವಾದ ಇಂದು ತೈಲ ಮಾರುಕಟ್ಟೆ ಕಂಪನಿಗಳು, 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆ (19KG LPG Cylinder Price )ಯನ್ನು 83.50 ರೂಪಾಯಿ ಕಡಿತಗೊಳಿಸಿವೆ (LPG Price Cut). ಅದರ ಅನ್ವಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಷ್ಟು ದಿನ 19 ಕೆಜಿ ಗ್ಯಾಸ್ ಸಿಲಿಂಡರ್​ ಬೆಲೆ 1,856.50 ರೂಪಾಯಿ ಇದ್ದಿದ್ದು, ಅದೀಗ 1,773 ರೂ.ಗೆ ಇಳಿಕೆಯಾಗಿದೆ. ಕೋಲ್ಕತ್ತದಲ್ಲಿ 1875.50 ರೂ., ಮುಂಬೈಯಿಯಲ್ಲಿ 1725 ರೂ., ಚೆನ್ನೈನಲ್ಲಿ 1937 ರೂ.ಗೆ ಇಳಿಕೆಯಾಗಿದೆ. ಹಾಗೇ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1685.5 ರೂ.ಆಗಿದೆ. ಇನ್ನು ಗೃಹ ಬಳಕೆ ಅಂದರೆ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. GST Collection : ಮೇನಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಕರ್ನಾಟಕದಲ್ಲಿ ಎಷ್ಟು?
ಭಾರತದ ಜಿಎಸ್‌ಟಿ ಸಂಗ್ರಹ ಮೇನಲ್ಲಿ 1,57,090 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ 12% ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿದೆ. (GST) ಭಾರತ ಏಪ್ರಿಲ್‌ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿತ್ತು. ಇದರೊಂದಿಗೆ ಸತತ 14 ತಿಂಗಳಿಗೆ ಸರಾಸರಿ 1.4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಕೊಲೆ ಬೆದರಿಕೆ ಪತ್ರ ಬರೆದವನಿಗೆ ಕನ್ನಡ ಕಲಿಸಲು ಮುಂದಾದ ಕುಂ. ವೀರಭದ್ರಪ್ಪ; ಏಕೆ ಈ ನಿರ್ಧಾರ?
ಸಾಹಿತಿ ಕುಂ. ವೀರಭದ್ರಪ್ಪ (Kum Veerabhadrappa) ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಪತ್ರ ಬಂದಿದ್ದು, ಇದು ಅವರಿಗೆ ಬಂದು ತಲುಪಿದ 16ನೇ ಪತ್ರವಾಗಿದೆ. ಆದರೆ, ಈ ಎಲ್ಲ ಪತ್ರಗಳನ್ನು ಗಂಭೀರವಾಗಿ ಪರಿಗಣಿಸದ ವೀರಭದ್ರಪ್ಪ ಅವರು, ನನಗೆ ಬಂದಿರುವ ಬೆದರಿಕೆ ಪತ್ರಗಳಲ್ಲಿ (Threat Letter) ಕಾಗುಣಿತ ದೋಷಗಳು ಬಹಳಷ್ಟು ಇವೆ ಎಂಬುದೇ ನೋವಿನ ಸಂಗತಿಯಾಗಿದೆ. ಮೊದಲು ಅದನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Property Tax: ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಡಿ.ಕೆ. ಶಿವಕುಮಾರ್‌ ಬಂಪರ್‌ ಗಿಫ್ಟ್‌ ಘೋಷಣೆ
ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಿಹಿಸುದ್ದಿ ನೀಡಿದ್ದಾರೆ. ಅನೇಕ ದಿನಗಳಿಂದ ಬೆಂಗಳೂರಿನ ಆಸ್ತಿ ಮಾಲೀಕರ ಆಗ್ರಹವನ್ನು ಒಪ್ಪಿದ್ದಾರೆ. ಇಡೀ ವರ್ಷದ ಆಸ್ತಿ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟುವವರಿಗೆ ಶೇ.5 ವಿನಾಯಿತಿಯನ್ನು ಮೇ 31ರವರೆಗೆ ಬಿಬಿಎಂಪಿ ನೀಡಿತ್ತು. ಆದರೆ ಈ ಸಮಯದಲ್ಲಿ ಚುನಾವಣೆ ಕಾವು ಇದ್ದಿದ್ದರಿಂದ ಅನೇಕರು ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weekend With Ramesh: ವೀಕೆಂಡ್‌ ವಿತ್‌ ರಮೇಶ್‌ ಶೋದಲ್ಲಿ ಡಿ.ಕೆ ಶಿವಕುಮಾರ್; ಪ್ರಸಾರ ಯಾವಾಗ?
ಈ ವಾರ ವೀಕೆಂಡ್‌ ವಿತ್‌ ರಮೇಶ್‌ ಶೋದಲ್ಲಿ (Weekend With Ramesh) ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar)ಅವರು ಸಾಧಕರ ಕುರ್ಚಿ ಏರುತ್ತಿದ್ದಾರೆ. ಈ ಮೂಲಕ ರಾಜಕೀಯ ಸಾಧನೆಯ ಬಗ್ಗೆ ಅವರು ವೀಕೆಂಡ್ ಶೋನಲ್ಲಿ ಮಾತನಾಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral Video : ಸ್ಕೂಟರ್‌ನಲ್ಲೇ ಲಿಪ್‌ ಲಾಕ್‌! ಇದು ಹುಡುಗ-ಹುಡುಗಿ ಕಥೆಯಲ್ಲ, ಇಬ್ಬರು ಹುಡುಗರ ಕಥೆ!
ರಸ್ತೆಯಲ್ಲಿ ಗಾಡಿಯಲ್ಲಿ ಹೋಗುವಾಗ ಚೆಲ್ಲಾಟ ಮಾಡಬಾರದು ಎಂದು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿರುತ್ತದೆ. ಆದರೂ ಕೆಲವರು ದುಸ್ಸಾಹಸ ಮಾಡುವುದು ತಪ್ಪಿಸುವುದಿಲ್ಲ. ಅದೇ ರೀತಿಯಲ್ಲಿ ಇತ್ತೀಚೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರೇ ಲಿಪ್‌ ಲಾಕ್‌ ಮಾಡಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version