Site icon Vistara News

ವಿಸ್ತಾರ TOP 10 NEWS: ʼಕಾಮನ್‌ ಮ್ಯಾನ್‌ʼ ಬಜೆಟ್‌ ನಿರೀಕ್ಷೆಯಿಂದ, ʼಹೊಡೆದು ಹಾಕಿʼ ಹೇಳಿಕೆಗೆ ಅಶ್ವತ್ಥನಾರಾಯಣ ವಿಷಾದದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-basavaraja bommai to present budget to ashwathnarayana issue and more news

#image_title

1. Karnataka Budget 2023 : ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ನೀಡುತ್ತಾರಾ ಜನಪ್ರಿಯ ಬಜೆಟ್‌?
ಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬೆಳಗ್ಗೆ ೧೦.೧೫ಕ್ಕೆ ೨೦೨೩-೨೪ನೇ ಸಾಲಿನ ರಾಜ್ಯ ಬಜೆಟ್‌ನ್ನು ಮಂಡಿಸಲಿದ್ದಾರೆ. ೨೦೨೩ರ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗಲಿರುವ ಈ ಲೇಖಾನುದಾನದ ಬಗ್ಗೆ ಭಾರಿ ಕುತೂಹಲವಿದೆ. ಸಿಎಂ ಬೊಮ್ಮಾಯಿ ಅವರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್‌ ಮಂಡನೆ ಮಾಡುವ ನಿರೀಕ್ಷೆ ಇದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಈಗಾಗಲೇ ಘೋಷಿಸಿರುವ ಕೆಲವು ಯೋಜನೆಗಳಿವೆ ಸಂವಾದಿಯಾಗಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka Election: ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟಿಪ್ಪು ಸುಲ್ತಾನ್‌ ಮಾದರಿಯಲ್ಲಿ ಹೊಡೆದು ಹಾಕಬೇಕು ಎಂದು ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ (Ashwathnarayan) ಅವರು ಸ್ಪಷ್ಟೀಕರಣ ನೀಡಿದ್ದು, ನಾನು ಹೇಳಿರುವುದು ರಾಜಕೀಯ ಅರ್ಥದಲ್ಲಿಯೇ ವಿನಃ ಬೇರೇನೂ ಅಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election : ಭ್ರಷ್ಟ, ಬಚ್ಚಲು ಬಾಯಿ ಮಾತಿಗೆ ನಾನು ಉತ್ತರ ಕೊಡೊಲ್ಲ: ಅಶ್ವತ್ಥನಾರಾಯಣ್‌ ಹೇಳಿಕೆಗೆ ಡಿಕೆಶಿ ಗರಂ
ಹೆಚ್ಚಿನ ಓದಿಗಾಗಿ: Karnataka Election: ನನ್ನನ್ನು ಹೊಡೆದು ಹಾಕಿ ಎಂದು ಹೇಳಿಸಿದ್ದು ಬಿಜೆಪಿ-ಆರೆಸ್ಸೆಸ್‌; ಅಶ್ವತ್ಥನಾರಾಯಣ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ

3. Assembly Session : ಆವತ್ತು ಹಣ ಪಡೆದಾಗ ನನ್ನ ಕೈ ಗೋಲ್ಡನ್‌ ಹ್ಯಾಂಡ್‌ ಆಗಿತ್ತು, ಈಗ ನಾನು ವಿಕಲಚೇತನನಾ?: ಸಿ.ಟಿ. ರವಿ ವಿರುದ್ಧ ಸಿಡಿದ ಕುಮಾರಸ್ವಾಮಿ
ʻಆವತ್ತು ಸಾಲ ತೀರಿಸಲು ಆಗಲ್ಲ ಅಂತ ನನ್ನ ಬಳಿ ಬಂದಿದ್ರಲ್ಲ.. ಸಹಾಯ ಮಾಡಿದ ನಂತರ ನೀವು ಬಂದು ಅಣ್ಣ ನಿನ್ನದು ಕೈಯಲ್ಲಾ.. ಗೋಲ್ಡನ್‌ ಹ್ಯಾಂಡ್‌ ಅಂತ ಹೇಳಿದ್ಯಲ್ಲಾ.. ಆಗ ನನ್ನ ಕೈ ಗೋಲ್ಡನ್‌ ಹ್ಯಾಂಡ್‌ ಆಗಿತ್ತು. ಈಗ ವಿಕಲಚೇತನ ಅಂತೀರಲ್ಲಾ..ʼʼ- ಹೀಗೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Contaminated Water: ಕಲುಷಿತ ನೀರು ಸೇವನೆ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪ್ರಕರಣದಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದ ವೃದ್ಧೆ ನರಸಮ್ಮ (70) ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ಸಾವಿಗೀಡಾಗಿದ್ದಾರೆ. ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Ration shops : ರೇಷನ್‌ ಅಂಗಡಿಗಳ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಪರಿಶೀಲನೆ, ಪ್ರಸ್ತಾಪದಲ್ಲಿ ಏನೇನಿದೆ?

ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Aero India 2023: ಶುಕ್ರವಾರ ಏರೋ ಇಂಡಿಯಾ ಕೊನೆಯ ಶೋ, ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನವನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಫೆ. 16 ಹಾಗೂ 17ರಂದು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ವೀಕ್ಷಣೆಗೆ ಅವಕಾಶವಿದ್ದು, ಇಂದು‌ ಮತ್ತು ನಾಳೆ ವೈಮಾನಿಕ‌ ಪ್ರದರ್ಶನದ ಕೊನೆಯ ದಿನಗಳಾಗಿವೆ. ಬೆಳಗ್ಗೆ 9‌.30ರಿಂದ‌ 11 ಗಂಟೆವರೆಗೂ‌ ಮೊದಲ‌ ಪ್ರದರ್ಶನ, ಮಧ್ಯಾಹ್ನ 2 ರಿಂದ 3.30ರವರೆಗೂ ಎರಡನೇ ಪ್ರದರ್ಶನ ನಡೆಯಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. WhatsApp New Feature: ನೀವು ಈಗ ವಾಟ್ಸಾಪ್‌ ಚಾಟ್‌ನಲ್ಲಿ100 ಮೀಡಿಯಾ ಫೈಲ್ ಕಳುಹಿಸಬಹುದು!
ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್‌ ಮತ್ತೆ ಹೊಸ ಫೀಚರ್‌ಗಳನ್ನು (WhatsApp New Feature) ಪರಿಚಯಿಸಿದೆ. ಈಗ ಬಳಕೆದಾರರು, ಡಾಕ್ಯುಮೆಂಟ್ ಕ್ಯಾಪ್ಷನ್ಸ್, ದೀರ್ಘ ಗ್ರೂಪ್ ವಿಷಯ ಮತ್ತು ವಿವರಣೆಗಳು ಹಾಗೂ ಸುಮಾರು 100 ಮೀಡಿಯಾ ಫೈಲ್‌ಗಳನ್ನು ಷೇರ್ ಮಾಡಬಹುದು. ಈ ಮೂರೂ ಫೀಚರ್‌ಗಳು ಎಲ್ಲ ಬಳಕೆದಾರರಿಗೆ ಲಭ್ಯ ಇದ್ದು, ಬಳಸಿಕೊಳ್ಳಬಹುದು. ಈ ಹೊಸ ಫೀಚರ್ಸ್‌ಗಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Vegetarian politics : ಸಿದ್ದರಾಮಯ್ಯ ಬಳಿಕ ಡಿ.ಕೆ. ಶಿವಕುಮಾರ್‌ ಕೂಡಾ ಸಂಪೂರ್ಣ ಸಸ್ಯಾಹಾರಿ; ನಾನ್‌ವೆಜ್‌ ಬಿಟ್ಟಿದ್ದೇಕೆ?
ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಮಾಂಸಾಹಾರ ಬಿಟ್ಟು ಪೂರ್ಣ ಸಸ್ಯಾಹಾರಿಯಾದ ಬೆನ್ನಿಗೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರು ತಾನೂ ಈಗ ಸಸ್ಯಾಹಾರಿ (Vegetarian politics) ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇತ್ತೀಚೆಗೆ ಕಂದಾಯ ಸಚಿವ ಅಶೋಕ್‌ ಅವರ ಗ್ರಾಮ ವಾಸ್ತವ್ಯದ ಕುರಿತ ಚರ್ಚೆಯ ವೇಳೆ ಸಿದ್ದರಾಮಯ್ಯ ತಾನು ಮಾಂಸಾಹಾರ ಬಿಟ್ಟು ಸಸ್ಯಾಹಾರಿಯಾದ ಕಥೆ ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Tripura Election 2023: ತ್ರಿಪುರಾದಲ್ಲಿ ಶೇ.81 ಮತದಾನ, ಒಟ್ಟಾರೆ ಶಾಂತಿಯುತ ಚುನಾವಣೆ, ಮಾರ್ಚ್ 2ಕ್ಕೆ ರಿಸಲ್ಟ್ ಪ್ರಕಟ
ಈಶಾನ್ಯ ಭಾರತದ ತ್ರಿಪುರಾ ರಾಜ್ಯ ವಿಧಾನಸಭೆಗೆ ಗುರುವಾರ ಚುನಾವಣೆ ನಡೆದಿದ್ದು(Tripura Election 2023), ಒಟ್ಟು ಶೇ.81ರಷ್ಟು ಮತದಾನವಾಗಿದೆ. ಅಂತಿಮ ಲೆಕ್ಕದಲ್ಲಿ ಈ ಮತದಾನ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಒಟ್ಟು 60 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮಾರ್ಚ್ 2ರಂದು ಫಲಿತಾಂಶ ಪ್ರಕಟವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Imran Khan: ಪಾಕ್‌ನಲ್ಲಿ ಕೆ.ಜಿ ತುಪ್ಪದ ಬೆಲೆ 600 ಶತಕೋಟಿ ರೂ., ಇಮ್ರಾನ್‌ ಖಾನ್‌ ಹೇಳಿಕೆಯ ವಿಡಿಯೊ ವೈರಲ್‌
ಜಗತ್ತಿನ ಯಾವುದೇ ನಾಯಕನು ಬಾಯ್ತಪ್ಪಿನಿಂದ ನೀಡುವ ಹೇಳಿಕೆಗಳು ಟೀಕೆಗೆ ಗುರಿಯಾಗುತ್ತವೆ. ಇನ್ನೂ ಕೆಲವೊಮ್ಮೆ ನಗೆಪಾಟಲಿಗೀಡಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತವೆ. ಬೇಜವಾಬ್ದಾರಿ ನಾಯಕ ಎಂಬ ಹಣೆಪಟ್ಟಿ ಅಂಟುವಂತೆ ಮಾಡುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನದಲ್ಲಿ ತುಪ್ಪದ ಬೆಲೆಯೇರಿಕೆ ಕುರಿತು ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ನೀಡಿದ ಹೇಳಿಕೆಯು ನಗೆಪಾಟಲೀಗೀಡಾಗಿದೆ. ಅವರು ಮಾತನಾಡಿದ ವಿಡಿಯೊ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Aadi Mahotsav: ನವ ಭಾರತವು ‘ಆದಿ’, ‘ಆಧುನಿಕತೆಯ’ ಸಂಗಮ, ಆದಿ ಮಹೋತ್ಸವ ಉದ್ಘಾಟನೆ ಬಳಿಕ ಮೋದಿ ಹೇಳಿಕೆ
  2. Lexi Chatbot: ಭಾರತದ ಮೊದಲ ಚಾಟ್‌ಜಿಪಿಟಿ ಬೆಂಬಲಿತ ಚಾಟ್‌ಬಾಟ್ ಲೆಕ್ಸಿ! ಇದು ಹೇಗೆ ಕೆಲಸ ಮಾಡುತ್ತದೆ?
  3. Union Cabinet: ದೇಶಾದ್ಯಂತ 2 ಲಕ್ಷ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಕೇಂದ್ರ ಅಸ್ತು, ಗ್ರಾಮೀಣ ರೈತರಿಗೆ ಬಲ
  4. DMK Councillor Arrested: ತಮಿಳುನಾಡಿನಲ್ಲಿ ಯೋಧನ ಹತ್ಯೆ, ಡಿಎಂಕೆ ಕೌನ್ಸಿಲರ್‌ ಬಂಧನ
  5. Sapthami Gowda Interview: ಮೂಗುತಿಯನ್ನು ಟ್ರೆಂಡ್‌ ಸೆಟ್‌ ಮಾಡಿದ ಕಾಂತಾರ ನಟಿ ಸಪ್ತಮಿ ಗೌಡ; ಈ ಬಗ್ಗೆ ಇವರು ಹೇಳೋದೇನು?
  6. Swara Bhaskar: ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸ್ವರಾ ಭಾಸ್ಕರ್
  7. Viral News : 161 ಕಿ.ಮೀ ಟ್ಯಾಕ್ಸಿಯಲ್ಲಿ ಸುತ್ತಾಡಿ ಮತ್ತೆ ವಾಪಸ್ ಮಾಲೀಕರ ಬಳಿಗೇ ಬಂದ ಜಾಣ ನಾಯಿ!
  8. Bhagavad Gita On Cloth: ಗಂಗಾ ಜಲ, ಮಣ್ಣು ಬಳಸಿ ಬಟ್ಟೆ ಮೇಲೆ ಭಗವದ್ಗೀತೆ ಸಾಲು ಬರೆದ ಮುಸ್ಲಿಂ ವ್ಯಾಪಾರಿ
Exit mobile version