Site icon Vistara News

ವಿಸ್ತಾರ TOP 10 NEWS | ಬೆಂಗಳೂರು Pothole ಸಮಸ್ಯೆಯಿಂದ ಮಂಗಳೂರು Toll Gate ವಿವಾದದವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 18102022

ಬೆಂಗಳೂರು: ಬೆಂಗಳೂರಿನ ವಾಹನ ಸವಾರರ ಜೀವನವನ್ನೇ ನರಕವಾಗಿಸಿರುವ ಬೆಂಗಳೂರು ರಸ್ತೆ ಗುಂಡಿಗಳು ಇದೀಗ ರಾಷ್ಟ್ರೀಯ ಮಟ್ಟದಲ್ಲೂ ಬ್ರ್ಯಾಂಡ್‌ ಬೆಂಗಳೂರಿನ ಮಾನ ತೆಗೆಯುತ್ತಿವೆ. ಕರ್ನಾಟಕದಲ್ಲಿ ಮುಂದಿನ 8 ವರ್ಷಗಳಲ್ಲಿ ಜನಸಂಖ್ಯೆ ಪ್ರಮಾಣ ಕುಸಿಯುವುದರ ಕುರಿತು ಮೋಹನದಾಸ್‌ ಪೈ ವರದಿಯಲ್ಲಿ ಉಲ್ಲೇಖವಾಗಿದೆ, ಬಿಸಿಸಿಐ ಅಧ್ಯಕ್ಷರಾಗಿ ಕನ್ನಡಿಗ ಆಯ್ಕೆಯಾಗಿದ್ದಾರೆ, ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಗುಜರಾತ್‌ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಗರಂ ಆಗಿದೆ, ಮಂಗಳೂರಿನಲ್ಲಿ ಟೋಲ್‌ಗೇಟ್‌ ವಿರುದ್ಧದ ಪ್ರತಿಭಟನೆ ಜೋರಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ವಿಸ್ತಾರ Explainer | ಮಳೆ ಅನಾಹುತ, ರಸ್ತೆ ಗುಂಡಿ: ಬೆಂಗಳೂರಿನ ಪ್ರತಿಷ್ಠೆ ರಾಷ್ಟ್ರ ಮಟ್ಟದಲ್ಲಿ ಬೀದಿಪಾಲು

ಬೆಂಗಳೂರು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೂರನೇ ಅತಿದೊಡ್ಡ ನಗರ. ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿ ಹಬ್ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಕೋಟ್ಯಂತರ ಮಂದಿಯ ಬದುಕು ರೂಪಿಸಿದೆ. ಆದರೆ ಈಗ ಮಳೆ ಮತ್ತು ರಸ್ತೆ ಗುಂಡಿಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತುತ್ತಾಗಿದೆ. ಮಳೆ ಮತ್ತು ರಸ್ತೆ ಗುಂಡಿಗಳು ಬೆಂಗಳೂರಿನ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿವೆ. ಇದಕ್ಕೆ ಯಾರು ಹೊಣೆ? ಬೆಂಗಳೂರು ಅಭಿವೃದ್ಧಿಗಾಗಿ ಸರ್ಕಾರ ಮೀಸಲಿಡುವ ಸಾವಿರಾರು ಕೋಟಿ ರೂ.ಗಳು ಎಲ್ಲಿ ಹೋಗುತ್ತವೆ? ಈ ಕುರಿತ ಅವಲೋಕನ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Vistara ವಿಶ್ಲೇಷಣೆ | 8 ವರ್ಷದಲ್ಲಿ ಕರ್ನಾಟಕ ಜನಸಂಖ್ಯೆ ಕುಸಿತ: ಮೋಹನದಾಸ್‌ ಪೈ ವರದಿ

ದೇಶದಲ್ಲೆ ಅತ್ಯಧಿಕ ಸ್ಟಾರ್ಟಪ್‌ಗಳನ್ನು ಹೊಂದಿರುವ ರಾಜ್ಯ, ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕ ರಾಜ್ಯಕ್ಕೆ ಮುಂದಿನ ಎಂಟು ವರ್ಷದಲ್ಲಿ ಹೆಚ್ಚಿನ ಸವಾಲುಗಳು ಹಾಗೂ ಜನಸಂಖ್ಯೆಯ ಗಂಡಾಂತರ ಎದುರಾಗಲಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಮುಖ್ಯವಾಗಿ, ಕುಸಿಯುತ್ತಿರುವ ಫಲವತ್ತತೆ, ಯುವಕರ ಸಂಖ್ಯೆ ಕುಸಿತ, ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಳದಂತಹ ಅನೇಕ ಸಂಗತಿಗಳನ್ನು ತಿಳಿಸಿಕೊಟ್ಟಿದೆ.
ಇನ್ಫೋಸಿಸ್‌ ಸಹ ಸಂಸ್ಥಾಪಕ ಟಿ.ವಿ. ಮೋಹನದಾಸ್‌ ಪೈ ಹಾಗೂ ಆರ್ಥಿಕ ತಜ್ಞೆ ನಿಶಾ ಹೊಳ್ಳ ಅವರು ಸಿದ್ಧಪಡಿಸಿ, ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಬಿಡುಗಡೆ ಮಾಡಿದ ʼಕರ್ನಾಟಕ- $೧ ಲಕ್ಷ ಕೋಟಿ ಜಿಡಿಪಿ ಮಹತ್ವಾಕಾಂಕ್ಷೆʼ ಕುರಿತ ವರದಿಯಲ್ಲಿ ಇಂತಹ ಅಂಶಗಳನ್ನು ತಿಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಹಲಾಲ್‌ ಮಾರ್ಕ್‌ ವಸ್ತುಗಳ ಖರೀದಿಸದಂತೆ ಜಾಗೃತಿ; ಕೆಎಫ್‌ಸಿ ಎದುರು ಪ್ರತಿಭಟನೆ

ರಾಜ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆರಂಭಿರುವ ಹಲಾಲ್‌ ಮುಕ್ತ ದೀಪಾವಳಿ ಅಭಿಯಾನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಸ್ಲಾಮಿಕ್‌ ನಿಯಮಗಳಂತೆ ಸಿದ್ಧಪಡಿಸಿರುವ ಹಲಾಲ್‌ ಮಾರ್ಕ್‌ ಹೊಂದಿರುವ ಮಾಂಸ ಮತ್ತು ಇತರ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಧಾನ ಉದ್ದೇಶ. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಕೈ ಜೋಡಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ, ಅಭಿಯಾನಗಳು ನಡೆಯುತ್ತಿವೆ. ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್‌ ಮುತಾಲಿಕ್‌ ಕೂಡಾ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Roger Binny | ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

1983ರ ವಿಶ್ವ ಕಪ್ ವಿಜೇತ ತಂಡದ ಭಾಗವಾಗಿದ್ದ ಕರ್ನಾಟಕ ಮೂಲದ ಕ್ರಿಕೆಟಿಗ ರೋಜರ್ ಬಿನ್ನಿ (Roger Binny) ಅವರು ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ. ಇವರು ಬಿಸಿಸಿಐಗೆ 36ನೇ ಅಧ್ಯಕ್ಷರು. ಈ ಮೊದಲು ಸೌರವ್ ಗಂಗೂಲಿ ಅಧ್ಯಕ್ಷರಾಗಿದ್ದರು. ಜಯ ಶಾ ಅವರು ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಇತರ ಪದಾಧಿಕಾರಿಗಳ ಪಟ್ಟಿ ಹೀಗಿದೆ: ಆಶೀಶ್ ಸೇಲಾರ್-ಖಜಾಂಚಿ, ರಾಜೀವ್ ಶುಕ್ಲಾ-ಉಪಾಧ್ಯಕ್ಷ ಮತ್ತು ದೇವಜಿತ್ ಸೈಕಿಯಾ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿದ್ದ ಅರುಣ್ ಧುಮಾಲ್ ಅವರು ಮುಂದಿನ ಐಪಿಎಲ್ ಅಧ್ಯಕ್ಷರಾಗಲಿದ್ದಾರೆ. ಮತ್ತಷ್ಟು ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Toll gate ಗಲಾಟೆ: ಮಂಗಳೂರಿನಲ್ಲಿ ಟೋಲ್ ಗೇಟ್ ಕಿತ್ತೆಸೆಯಲು ಮುಂದಾದ ಪ್ರತಿಭಟನಾಕಾರರು

ಕಳೆದ ಹಲವು ವರ್ಷಗಳಿಂದ ಭಾರೀ ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸುರತ್ಕಲ್ ಟೋಲ್ ಗೇಟನ್ನು ಕಿತ್ತೆಸೆಯಲು ಮುಂದಾಗಿರುವ ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ಪಡುತ್ತಿದ್ದಾರೆ. ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ ಲೆಕ್ಕಿಸದೆ ಪ್ರತಿಭಟನಾಕಾರರು ಮುಂದಾಗಿದ್ದು, ಪೊಲೀಸರು ಲಾಠಿಚಾರ್ಜ್‌ ಮೂಲಕ ಚದುರಿಸಲು ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಹಲವು ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Bilkis Bano Case | ಅಪರಾಧಿಗಳ ಬಿಡುಗಡೆ ಸಂಬಂಧ ಗುಜರಾತ್ ಅಫಿಡವಿಟ್‌ಗೆ ಸುಪ್ರೀಂ ಗರಂ

ಬಿಲ್ಕಿಸ್ ಬಾನೊ ಗ್ಯಾಂಗ್ ರೇಪ್ ಪ್ರಕರಣ(Bilkis Bano Case)ದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಸಂಬಂಧ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸರ್ಕಾರ ಸಲ್ಲಿಸಿರುವ ಅಫಿಡವಿಟ್ ದೊಡ್ಡದಾಗಿದೆ, ಸರಿಯಾದ ಹೇಳಿಕೆಗಳ ಕೊರತೆ ಇದೆ. ಅಲ್ಲದೇ, ಯಾವುದೇ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Helicopter Crash | ಕೇದಾರನಾಥ್‌ನಲ್ಲಿ ಹೆಲಿಕಾಪ್ಟರ್ ಪತನ, 6 ಮಂದಿ ಸಾವು

ಉತ್ತರಾಖಂಡದ ಕೇದಾರನಾಥ ಬಳಿಯ ಗರುಡ ಚೆಟ್ಟಿ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತ(Helicopter Crash)ದಲ್ಲಿ ಪೈಲಟ್ ಸೇರಿ ಸೇರಿ ಒಟ್ಟು 6 ಜನರು ಮೃತಪಟ್ಟಿದ್ದಾರೆ. ಈ ಹೆಲಿಕಾಪ್ಟರ್ ಕೇದಾರನಾಥ ಕ್ಷೇತ್ರಕ್ಕೆ ಯಾತ್ರಿಗಳನ್ನು ಕರೆದುಕೊಂಡು ಹೋಗುತ್ತಿತ್ತು. ಕೇದರನಾಥದಿಂದ 2 ಕಿ.ಮೀ ದೂರದಲ್ಲಿ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿರುವ ಶಂಕೆಯೂ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಜಯಲಲಿತಾ ಸಾವಿನ ಪ್ರಕರಣದಲ್ಲಿ ಶಶಿಕಲಾ ತಪ್ಪಿತಸ್ಥೆ, ಹೆಚ್ಚಿನ ತನಿಖೆಗೆ ಶಿಫಾರಸು

ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಸಂದರ್ಭದ ಕುರಿತು ತನಿಖೆ ನಡೆಸಿದ್ದ ಆರ್ಮುಘಸ್ವಾಮಿ ಕಮಿಷನ್ (Arumughaswamy Commission) ವರದಿಯನ್ನು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. 2016ರಲ್ಲಿ ಜಯಲಲಿತಾ ಅವರು ನಿಧನರಾಗಿದ್ದರು. ಅವರ ಸಾವಿನ ಪರಿಸ್ಥಿತಿಯ ಕುರಿತು ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎ ಆರ್ಮುಘಸ್ವಾಮಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ನೀಡಿದ್ದ ವರದಿಯನ್ನು ಸ್ವೀಕರಿಸಿದ್ದ ಸರ್ಕಾರ ಇದೀಗ ವಿಧಾನಸಭೆಯಲ್ಲಿ ಮಂಡಿಸಿದೆ. ಜಯಲಲಿತಾ ಅವರು ಆಪ್ತೆ ವಿ ಶಶಿಕಲಾ ಅವರನ್ನು ತಪ್ಪಿತಸ್ಥೆ ಎಂದು ನಮೂದಿಸಿರುವ ಆಯೋಗವು ಅವರ ವಿರುದ್ಧ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿದೆ. ಇದೇ ವೇಳೆ, ಶಶಿಕಲಾ ಜತೆ ಇನ್ನೂ ಹಲವರನ್ನು ತಪ್ಪಿತಸ್ಥರು ಎಂದು ಹೆಸರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Asia Cup 2023 | ಏಷ್ಯಾ ಕಪ್‌ಗೆ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡಲ್ಲ ಎಂದ ಜಯ್‌ ಶಾ

ಮುಂಬಯಿ : ಪಾಕಿಸ್ತಾನದ ಅತಿಥ್ಯದಲ್ಲಿ ೨೦೨೩ರಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೇಳಿದ್ದಾರೆ. ಮಂಗಳವಾರ ಮುಂಬಯಿಯಲ್ಲಿ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು ಭಾರತ ತಂಡ ಪಾಕ್‌ಗೆ ಪ್ರಯಾಣ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಮುಂದಿನ ವರ್ಷದ ಏಷ್ಯಾ ಕಪ್‌ ಹಾಗೂ ೨೦೨೫ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆಸುವ ಆತಿಥ್ಯ ಲಭಿಸಿತ್ತು. ಹೀಗಾಗಿ ರಾಜಕೀಯ ವೈರತ್ವ ಹೊಂದಿರುವ ಪಾಕಿಸ್ತಾನದ ನೆಲಕ್ಕೆ ಭಾರತ ತಂಡ ಕಾಲಿಡುವುದೇ ಎಂಬ ಪ್ರಶ್ನೆ ಎದ್ದಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Kantara Collection | 18 ದಿನದಲ್ಲಿ ₹150 ಕೋಟಿ ಕ್ಲಬ್ ಸೇರಿತಾ ಕಾಂತಾರ?

ಕರುನಾಡಿನ ಕರಾವಳಿ ಕಥೆ ಈಗ ಜಗತ್ತಿನಾದ್ಯಂತ ಮನೆಮಾತಾಗಿದೆ. ‘ಕಾಂತಾರ’ ದೊಡ್ಡ ಯಶಸ್ಸು ಪಡೆಯುವ ಜೊತೆಗೆ ಬಾಕ್ಸ್​ ಆಫೀಸ್​ನಲ್ಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಬಿಡುಗಡೆಯಾದ 18 ದಿನದಲ್ಲಿ ‘ಕಾಂತಾರ’ ಸಿನಿಮಾ ₹150 ಕೋಟಿ (Kantara Collection) ಗಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಹಾಗೇ ₹150 ಕೋಟಿ ಗಳಿಸಿದ ಕನ್ನಡದ 5ನೇ ಸಿನಿಮಾ ಎಂಬ ಹೆಗ್ಗಳಿಕೆಗೂ ‘ಕಾಂತಾರ’ ಪಾತ್ರವಾಗಿದೆ. ‘ಕೆಜಿಎಫ್-1’ ಮೊದಲ ಬಾರಿಗೆ ₹150 ಕೋಟಿ ಸೇರಿದ ಕನ್ನಡ ಸಿನಿಮಾ ಆಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

ಕಾಂಗ್ರೆಸ್ ಭ್ರಷ್ಟಾಚಾರದ ಸಮಗ್ರ ದಾಖಲೆ ರಾಹುಲ್ ಗಾಂಧಿಗೆ ರವಾನೆ: ಸಿಎಂ ಬಸವರಾಜ ಬೊಮ್ಮಾಯಿ
MSP | ಗೋಧಿ, ಸಾಸಿವೆ, ಬಾರ್ಲಿ ಸೇರಿ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
5G | ಕಳೆದ 12 ತಿಂಗಳಲ್ಲಿ ಟೆಲಿಕಾಂ ಸಂಬಂಧಿತ ಉದ್ಯೋಗ ಹೆಚ್ಚಳ
RSS | ಸಂಘ ಪರಿವಾರದ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿಗೆ ಹೆಚ್ಚೆಚ್ಚು ಅವಕಾಶ ನೀಡಲು ಆರ್​ಎಸ್​ಎಸ್​ ಚಿಂತನೆ
⭕Video| ಅಮ್ಮ ನನಗಾಗಿ ಸನ್​ಸ್ಕ್ರೀನ್​ ಕಳಿಸಿಕೊಟ್ಟಿದ್ದಾರೆ, ಆದರೆ ನಾನು ಬಳಸುತ್ತಿಲ್ಲ; ಯಾತ್ರೆ ಮಧ್ಯೆ ರಾಹುಲ್​ ಗಾಂಧಿ ಮಾತುಕತೆ

Exit mobile version