Site icon Vistara News

VISTARA TOP 10 NEWS : ಒಬಿಸಿ ಮೀಸಲಾತಿಯ ಕಂಪನ, ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಚಿನ್ನ ಮತ್ತಿತರ ಸುದ್ದಿಗಳು

VISTARA top 10 NEWS

1. ಒಬಿಸಿ ಮೀಸಲಾತಿಯಲ್ಲಿ ಸಣ್ಣ ಸಮುದಾಯಕ್ಕೆ ಅನ್ಯಾಯ: ನ್ಯಾ. ಭಕ್ತವತ್ಸಲ ಅಸಮಾಧಾನ
ನ್ಯಾ. ಭಕ್ತವತ್ಸಲ ವರದಿಯನ್ನು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಗುರುವಾರ (ಅಕ್ಟೋಬರ್‌ 5) ಕೆಲವೊಂದು ಬದಲಾವಣೆಗಳೊಂದಿಗೆ ಅನುಮೋದನೆ ನೀಡಿದೆ. ಇದರಿಂದ ಹಿಂದುಳಿದ ವರ್ಗಗಳಿಗೆ ರಾಜಕೀಯ ಬಲ ಬರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಹಿಂದುಳಿದ ವರ್ಗಕ್ಕೆ ರಾಜಕೀಯವಾಗಿ ಈ ಒಪ್ಪಿಗೆ ಸೂಚಿಸಿರುವ ಮೀಸಲಾತಿ (OBC Reservation) ನಿರ್ಧಾರದ ಬಗ್ಗೆ ಸ್ವತಃ ಹೈಕೋರ್ಟ್‌‌ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅಸಮಾಧಾನವನ್ನು ಹೊರಹಾಕಿದ್ದಾರೆ. ಒಬಿಸಿಯ ಸಣ್ಣ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಈಗ ಒಪ್ಪಿರುವ ವರದಿಯಿಂದ ಲಿಂಗಾಯತ, ಒಕ್ಕಲಿಗರಿಗೆ ಹೆಚ್ಚಿನ ಲಾಭ
ಈ ಸುದ್ದಿಯನ್ನೂ ಓದಿ: ಒಬಿಸಿ ರಾಜಕೀಯ ಮೀಸಲಾತಿ; ಯಾವೆಲ್ಲ ಚುನಾವಣೆಗಳಿಗೆ ಅನುಕೂಲ?

2. ಸರ್ಕಾರಕ್ಕೆ 140 ದಿನ; 2,50,993 ಕೋಟಿ ರೂ. ಬಜೆಟ್‌ನಲ್ಲಿ ಬಿಡುಗಡೆಯಾಗಿದ್ದು ಚೂರುಪಾರು!
ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 140 ದಿನ ಕಳೆದಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಟೇಕ್‌ ಆಫ್‌‌ ಆಗಿಲ್ಲ. ಇದು ಶಾಸಕರು ಮತ್ತು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌‌ ಎಕ್ಸ್‌ಕ್ಲೂಸಿವ್‌ ರಿಪೋರ್ಟ್‌‌‌ ಅನ್ನು ಬಿಚ್ಚಿಟ್ಟಿದೆ. ಸರ್ಕಾರದಲ್ಲಿ ಅಭಿವೃದ್ಧಿಗೆ ಪೆಟ್ಟು ಬಿದ್ದಿದ್ದು, ಗ್ಯಾರಂಟಿಗೆ ಜೈ ಎಂದು ಹೇಳಲಾಗಿದ್ದರೂ ಅಭಿವೃದ್ಧಿಗೆ ಬೈ ಬೈ ಮಾಡಲಾಗಿದೆ ಎಂಬ ಸಂಗತಿ ಅಂಕಿ-ಅಂಶಗಳಿಂದ ಗೊತ್ತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಏಷಿಯನ್‌ ಗೇಮ್ಸ್‌: ಪುರುಷರ ಹಾಕಿ; 9 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ
ಏಷ್ಯನ್​ ಗೇಮ್ಸ್​ ಕ್ರೀಡಾಕೂಟದ ಪುರುಷರ ಹಾಕಿ ಫೈನಲ್​ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್​ ಜಪಾನ್​ ವಿರುದ್ಧ 5-1 ಗೋಲ್​ಗಳ ಅಂತರದಿಂದ ಗೆದ್ದಿದೆ. ಈ ಮೂಲಕ 9 ವರ್ಷಗಳ ಬಳಿಕ ಈ ಕೂಟದಲ್ಲಿ ಚಿನ್ನ ಗೆದ್ದಂತಾಗಿದೆ. ಮುಂದಿನ ವರ್ಷದ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಓದಿ: ಏಷ್ಯನ್‌ ಗೇಮ್ಸ್‌ನಲ್ಲಿ ನಂದಿನಿಗೆ ಕಂಚು, ಸಿರುಗುಪ್ಪದ ಧೋಬಿ ಕುಟುಂಬದಲ್ಲಿ ಬೆಳಗಿದ ಪ್ರತಿಭೆ

4. ಲಿಂಗಾಯತರಿಗೆ 7 ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಹಲವು ಸಮುದಾಯಕ್ಕೆ ಸಿಗದ ಮಂತ್ರಿಗಿರಿ: ಗುಡುಗಿದ ಸಿಎಂ ಆಪ್ತ
ಲಿಂಗಾಯತ ಸಿಎಂ ಬಗ್ಗೆ ಹೇಳಿಕೆ ನೀಡಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಸಿಎಂ ಸಿದ್ದರಾಮಯ್ಯ ಆಪ್ತ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಠೋಡ್‌ ತಿರುಗೇಟು ನೀಡಿದ್ದಾರೆ. ಲಿಂಗಾಯತ ಸಮುದಾಯದ ಏಳು ಮಂದಿಗೆ ಮಂತ್ರಿಗಿರಿ ಕೊಟ್ಟಿದ್ದರಿಂದ ಉಳಿದ ಸಮುದಾಯದವರಿಗೆ ಆ ಸ್ಥಾನ ಕೈತಪ್ಪಿದೆ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಇರಾನ್‌ನ ಮಹಿಳಾ ಹೋರಾಟಗಾರ್ತಿ ನರ್ಗೀಸ್‌ ಮೊಹಮ್ಮದಿಗೆ ನೊಬೆಲ್‌ ಶಾಂತಿ ಪ್ರಶಸ್ತಿ
ಇರಾನಿಯನ್‌ ಮಹಿಳಾ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ (Iranian activist Narges Mohammadi) ಅವರಿಗೆ 2023ರ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿಯನ್ನು (Nobel peace Prize) ಘೋಷಣೆ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಯಾರು ಈ ನೊಬೆಲ್‌ ಶಾಂತಿ ಪ್ರಶಸ್ತಿ ಗೆದ್ದ ನರ್ಗಿಸ್‌ ಮೊಹಮ್ಮದಿ? ಅವರೇಕೆ ಜೈಲಿನಲ್ಲಿದ್ದಾರೆ?

6. ಪಂಜಾಬ್‌ ಸಂಪೂರ್ಣ ದಿವಾಳಿ; ಉಚಿತಗಳಿಗಾಗಿ ಖಜಾನೆ ಖಾಲಿ, ಕರ್ನಾಟಕಕ್ಕೆ ಪಾಠ!
ಪಂಜಾಬ್ ರಾಜ್ಯ ಬೃಹತ್ ಸಾಲದ ಹೊರೆಯಿಂದ ತತ್ತರಿಸುತ್ತಿದೆ. ಮೂವರು ಅರ್ಥಶಾಸ್ತ್ರಜ್ಞರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಾಲ ಪರಿಹಾರ ನಿಧಿ (ಡಿಆರ್‌ಎಫ್) ಸ್ಥಾಪಿಸಲು ಸೂಚಿಸಿದ್ದಾರೆ. ರಾಜ್ಯ ದಿವಾಳಿತನದಿಂದ ಹೊರಬರಲು ಸಾರ್ವಜನಿಕರು ಸ್ವಯಂಪ್ರೇರಿತ ದೇಣಿಗೆ ಮಾಡಬೇಕೆಂದು ಕೋರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಆರ್‌ಬಿಐ ರೆಪೊ ದರ ಯಥಾಸ್ಥಿತಿ; ಸಾಲಗಾರರಿಗೆ ಬಡ್ಡಿ ಏರಿಕೆ ಬಿಸಿ ಇಲ್ಲ
ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶೇ.6.50ರ ಹಳೆ ದರವೇ ಮುಂದುವರಿಯುವ ಕಾರಣ ಬಡ್ಡಿಯ ಹೊರೆ ಇರುವುದಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. 2019ರ ಲೋಕಸಭೆ ಚುನಾವಣೆಗೆ ಅಡ್ಡಿ ಮಾಡಲು ನ್ಯೂಸ್‌ಕ್ಲಿಕ್‌ ಸಂಪಾದಕ ಪ್ರಬೀರ್‌ ಪಿತೂರಿ
ಚೀನಾದ ಹಣ ಪಡೆದು ಭಾರತದಲ್ಲಿ ಚೀನಾ ಪರ ಪ್ರಚಾರಾಂದೋಲನ ನಡೆಸಿದ ಪ್ರಕರಣದಲ್ಲಿ ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಹಾಗೆಯೇ, ನ್ಯೂಸ್‌ಕ್ಲಿಕ್‌ ಸಂಪಾದಕರೂ ಆದ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಅವರು 2019ರ ಲೋಕಸಭೆ ಚುನಾವಣೆಗೆ ಅಡ್ಡಿಯುಂಟು ಮಾಡಲು ಪಿತೂರಿ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಕನ್ನಡಿಗರ ಮನೆ ಮಗಳು ʼಮಂಗಳʼ ಇನ್ನು ಮನೆಗೆ ಬರುವುದಿಲ್ಲ!
ಸುಮಾರು 40 ವರ್ಷಗಳಿಂದ ಕನ್ನಡಿಗರ ಪಾಲಿನ ಮನೆ ಮಗಳಂತಿದ್ದ ʻಮಂಗಳʼ ವಾರ ಪತ್ರಿಕೆ (Mangala Weekly) ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮಂಗಳಾ ವಾರಪತ್ರಿಕೆಯ ಕೊನೆಯ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಇನ್ನೆಂದೂ ಮಂಗಳ ಪ್ರಕಟವಾಗುವುದಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಬಿಗ್‌ ಬಾಸ್‌ ಲಾಂಚ್‌ ಆಗುವ ದಿನವೇ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ 7 ಗ್ರ್ಯಾಂಡ್‌ ಫಿನಾಲೆ
ಭಾನುವಾರ (ಅಕ್ಟೋಬರ್ 8) ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಬಿಗ್ ಬಾಸ್ ಲಾಂಚ್ ಆಗಲಿದೆ. ಅದೇ ದಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರ್ಯಾಂಡ್‌ ಫಿನಾಲೆ ಕೂಡ ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 6ರಿಂದ 10:30ರವರೆಗೆ ಪ್ರಸಾರ ಕಾಣುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version