Site icon Vistara News

ವಿಸ್ತಾರ TOP 10 NEWS:‌ ಬಿಜೆಪಿ ಪಟ್ಟಿ ಮತ್ತಷ್ಟು ವಿಳಂಬದಿಂದ, ಅಗ್ನಿಪಥಕ್ಕೆ ವಿಜಯದವರೆಗಿನ ಪ್ರಮುಖ ಸುದ್ದಿಗಳಿವು

vistara top 10 news BJP candidates list delay to agnipath victory and more news

#image_title

1. BJP Karnataka:‌ ಬಿಜೆಪಿ ಪಟ್ಟಿ ಬಹುತೇಕ ಸಿದ್ಧ; ಬುಧವಾರದವರೆಗೆ ಬಿಡುಗಡೆ ಇಲ್ಲ: ದಿಢೀರನೆ ಬೆಂಗಳೂರಿನ ಕಡೆಗೆ ಯಡಿಯೂರಪ್ಪ
ವಿಧಾನಸಭೆ ಚುನಾವಣೆಗೆ ಟಿಕೆಟ್‌ ಘೋಷಿಸಲು ಭಾನುವಾರ ದಿನಪೂರ್ತಿ ಸಭೆಯ ನಂತರ ಸೋಮವಾರವೂ ಬಿಜೆಪಿ ಸಭೆಗಳು ಮುಂದುವರಿದಿವೆ. ಅನೇಕ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದರೂ ಇನ್ನೂ ಕಗ್ಗಂಟಾಗಿರುವ ಅನೇಕ ಕ್ಷೇತ್ರಗಳಿವೆ. ಇದೇ ವೇಳೆ ಬಿಜೆಪಿಯ ಅನೇಕ ಆಕಾಂಕ್ಷಿಗಳಿಗೆ ಮೌಖಿಕವಾಗಿ ಹೈಕಮಾಂಡ್‌ ಸೂಚನೆ ನೀಡಿದ್ದು, ನಾಮಪತ್ರ ದಿನಾಂಕವನ್ನೂ ನಿಗದಿಪಡಿಸಿಕೊಂಡಿದ್ದಾರೆ. ಮಂಗಳವಾರ ಅಥವಾ ಬುಧವಾರ ಪಟ್ಟಿ ಬಿಡುಗಡೆ ಆಗಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Inside Story: ಬರಗಾಲದಲ್ಲಿ ಎರಡು ಬೆಳೆ ತೆಗೆಯೋ ಎಂಟಿಬಿ ಐಡಿಯಾಕ್ಕೆ ಹೌಹಾರಿದ ಯಡಿಯೂರಪ್ಪ!: ರೋಲ್ಸ್ ರಾಯ್ಸ್ ಏರಿ ಹೊರಟ ನಾಗರಾಜು
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಹೊಸಕೋಟೆಯ ಎಂಟಿಬಿ ನಾಗರಾಜ್ ಸಿರಿವಂತರಲ್ಲಿ ಸಿರಿವಂತರು. ಅವರ ಘೋಷಿತ ಆಸ್ತಿಯೇ 1,224 ಕೋಟಿ ರೂಪಾಯಿ. ಹೀಗಿರುವ ನಾಗರಾಜು ವ್ಯವಹಾರದಲ್ಲಿ ಬಹಳ ಚಾಣಾಕ್ಷ. ನನಗೆ ಈ ಬಾರಿ ಎಂಎಲ್‌ಎ ಟಿಕೆಟ್ ಬೇಡ, ಕ್ಷೇತ್ರ ತ್ಯಾಗ ಮಾಡ್ತೇನೆ ಎಂಬ ಎಂಟಿಬಿ ನಾಗರಾಜು ವೈಯಕ್ತಿಕ ಲೆಕ್ಕಾಚಾರ ಬೇರೆಯೇ ಇದೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election: ಚುನಾವಣಾ ಅಕ್ರಮ; ನಗದು ಸೇರಿ 100 ಕೋಟಿ ರೂ. ದಾಟಿದ ಜಪ್ತಿ ವಸ್ತುಗಳ ಮೌಲ್ಯ!
ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಹೀಗಾಗಿ ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಈ ನಡುವೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.29ರಿಂದ ಈವರೆಗೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ನಗದು ಸೇರಿ ವಿವಿಧ ವಸ್ತುಗಳ ಮೌಲ್ಯ 100 ಕೋಟಿ ರೂಪಾಯಿ ಗಡಿ ದಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Nandini vs Amul: ಬೆಂಗಳೂರಲ್ಲಿ ಅಮುಲ್ ಹಾಲು, ಉತ್ಪನ್ನಗಳನ್ನು ಬೀದಿಗೆಸೆದು ಕರವೇ ಪ್ರತಿಭಟನೆ
ಕರ್ನಾಟಕದಲ್ಲಿ ಅಮುಲ್ ಹಾಲು-ಮೊಸರು ಮಾರಾಟ ಹಾಗು ನಂದಿನಿಯನ್ನು ಅಮುಲ್ ಜೊತೆಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಹಾಲು, ಮೊಸರು, ತುಪ್ಪ, ಬೆಣ್ಣೆ, ಚೀಜ್ ಇತ್ಯಾದಿ ಅಮುಲ್ ಉತ್ಪನ್ನಗಳಾದ ಬೀದಿಗೆಸೆದು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಅಮುಲ್ ಹಾಲು-ಮೊಸರು ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. CRPF Recruitment: ಕೇಂದ್ರ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಕನ್ನಡದಲ್ಲೂ ಪರೀಕ್ಷೆ ನಡೆಸಿ ಎಂದ ಸಿದ್ದರಾಮಯ್ಯ, ಕುಮಾರಸ್ವಾಮಿ
ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್‌) ನೇಮಕಾತಿಗೆ ನಡೆಸಲಾದ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸದಿರುವ ಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. IPL 2023 : ಹೀಗೆ ಆಡಿದ್ರೆ ರಾಹುಲ್​ಗೆ ಕಷ್ಟವಿದೆ ಎಂದು ಎಚ್ಚರಿಕೆ ಕೊಟ್ಟ ಮಾಜಿ ಕೋಚ್​
ಕನ್ನಡಿಗ ಹಾಗೂ ಐಪಿಎಲ್​ನ ಲಕ್ನೊ ಸೂಪರ್​ ಜಯಂಟ್ಸ್​ ತಂಡದ ನಾಯಕ ಕೆ. ಎಲ್​ ರಾಹುಲ್​ ಬ್ಯಾಟ್​ನಿಂದ ದೊಡ್ಡ ಮೊತ್ತದ ಸ್ಕೋರ್​ಗಳು ಮೂಡಿ ಬರುತ್ತಿಲ್ಲ. ಐಪಿಎಲ್​ನಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡುತ್ತಿರುವ ಹೊರತಾಗಿಯೂ ಅವರು ಹೆದರಿಕೊಂಡು ಬ್ಯಾಟ್​ ಮಾಡುತ್ತಿದ್ದು, ಕಡಿಮೆ ಸ್ಟ್ರೈಕ್​ ರೇಟ್​ ಹೊಂದಿದ್ದಾರೆ. ಉಳಿದ ಬ್ಯಾಟರ್​​ಗಳು ಅಬ್ಬರಿಸುತ್ತಿರುವ ನಡುವೆಯೇ ಕೆ. ಎಲ್​ ರಾಹುಲ್​ ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗಿರುವುದು ಕ್ರಿಕೆಟ್ ವಿಶ್ಲೇಷಕರ ಗಮನಕ್ಕೆ ಬಂದಿದೆ. ಅದರ ಕುರಿತು ಕಾಮೆಂಟ್​ಗಳನ್ನು ಕೂಡ ಶುರು ಮಾಡಿಕೊಂಡಿದ್ದಾರೆ. ಅಂತೆಯೇ ಭಾರತ ತಂಡದ ಮಾಜಿ ಕೋಚ್​ ರವಿ ಶಾಸ್ತ್ರಿ ಕೂಡ ರಾಹುಲ್​ ಬ್ಯಾಟಿಂಗ್​ ಬಗ್ಗೆ ಎಚ್ಚರಿಕೆ ನೀಡಲು ಮರೆತಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Supreme Court: ಅಗ್ನಿಪಥ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಅಗ್ನಿಪಥ ಯೋಜನೆಯ (Agnipath scheme) ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ವಜಾ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಗ್ನಿಪಥವು ಸಿಂಧುತ್ವವನ್ನು ಹೊಂದಿದ್ದು, ನಿರಂಕುಶವಾಗಿಲ್ಲ ಎಂದು ಹೇಳಿದೆ. ಅಲ್ಲದೇ, ಅಗ್ನಿಪಥ್ ಯೋಜನೆಯನ್ನು ಪರಿಚಯಿಸುವ ಮೊದಲು ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಹೇಳಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Amit Shah: ದೇಶದ ಒಂದಿಂಚೂ ಜಾಗ ಬಿಡಲ್ಲ; ಅರುಣಾಚಲ ಪ್ರದೇಶದಲ್ಲಿ ಚೀನಾಗೆ ಅಮಿತ್‌ ಶಾ ಸ್ಪಷ್ಟ ಸಂದೇಶ
ಲಡಾಕ್‌ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮೆರೆಯುವ, ಅರುಣಾಚಲ ಪ್ರದೇಶಕ್ಕೆ ಭಾರತದ ಯಾವುದೇ ನಾಯಕರು ಭೇಟಿ ನೀಡಿದರೆ ಆಕ್ಷೇಪ ವ್ಯಕ್ತಪಡಿಸುವ ಕಪಟಿ ಚೀನಾಗೆ ಅರುಣಾಚಲ ಪ್ರದೇಶದಲ್ಲಿ ನಿಂತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. “ಭಾರತದ ಒಂದೇ ಒಂದು ಇಂಚು ಜಾಗವನ್ನೂ ಬೇರೆಯವರು ಆತಿಕ್ರಮಣ ಮಾಡಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Monsoon 2023: ಈ ವರ್ಷ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ! ಸ್ಕೈಮೆಟ್ ಹವಾಮಾನ ವರದಿಯಲ್ಲಿ ಏನಿದೆ?
ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ (Monsoon 2023) ಎಂದು ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ (Skymet) ಸೋಮವಾರ ತಿಳಿಸಿದೆ. ಎಲ್ ನಿನೊ ಜೊತೆಗೆ, ಮಾನ್ಸೂನ್ ಮೇಲೆ ಪ್ರಭಾವ ಬೀರುವ ಇತರ ಅಂಶಗಳು ಮಳೆ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಕೇಂದ್ರ ಸರ್ಕಾರದ ಭಾರತೀಯ ಹವಾಮಾನ ಇಲಾಖೆ ಇನ್ನೂ ಮಳೆಗಾಲ ಸಂಬಂಧ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ. ಈಗ ಬಿಡುಗಡೆಯಾಗಿರುವುದು ಖಾಸಗಿ ಸಂಸ್ಥೆಯ ವರದಿಯಾಗಿದೆ. ಮತ್ತಷ್ಟು ಪ್ರಮುಖ ಸುದ್ದಿಗಳಿವು.
ಹೆಚ್ಚಿನ ಓದಿಗಾಗಿ: Weather Report: ಕರಾವಳಿ, ಉತ್ತರ ಒಳನಾಡಿನಲ್ಲಿ ತಾಪಮಾನ ಏರಿಕೆ; ಚಿಕ್ಕಮಗಳೂರು, ಹಾಸನ ಸೇರಿ 5 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

10. Beware Of Beer: ಬಿಯರ್‌ ಪ್ರಿಯರೇ ಎಚ್ಚರ; ಎಣ್ಣೆ, ಮಾಂಸದಲ್ಲಿದೆ ಕ್ಯಾನ್ಸರ್‌ಕಾರಕ ಅಂಶ
ವಾರಕ್ಕೊಮ್ಮೆ ಪಾರ್ಟಿ ಮಾಡಿ, ಕಂಠಪೂರ್ತಿ ಬಿಯರ್‌ ಸೇವಿಸಿ, ಹೊಟ್ಟೆ ತುಂಬ ಮಾಂಸ ಸೇವನೆ ಮಾಡುವವರು ಓದಲೇಬೇಕಾದ ಸುದ್ದಿ ಇದು. ಮದ್ಯ, ಮಾಂಸದ ಪ್ರಿಯರಿಗೆ ಅಧ್ಯಯನ ವರದಿಯೊಂದು ಕಹಿ ಸುದ್ದಿ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Weather Report: ಕರಾವಳಿ, ಉತ್ತರ ಒಳನಾಡಿನಲ್ಲಿ ತಾಪಮಾನ ಏರಿಕೆ; ಚಿಕ್ಕಮಗಳೂರು, ಹಾಸನ ಸೇರಿ 5 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
  2. Musk Follows Modi: ಟ್ವಿಟರ್‌ನಲ್ಲಿ ಮೋದಿಯನ್ನು ಫಾಲೋ ಮಾಡಿದ ಎಲಾನ್‌ ಮಸ್ಕ್‌; ಭಾರತಕ್ಕೂ ಬರುತ್ತಾ ಟೆಸ್ಲಾ?
  3. Pushpa 2: ಅಲ್ಲು ಅರ್ಜುನ್‌ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇಕೆ? ಕಾರಣ ಇದು!
  4. Weekend With Ramesh: ದತ್ತಣ್ಣ ಮದುವೆ ಆಗದೇ ಇರಲು ಕಾರಣವೇನು? ಗೆಳೆಯ ಬಿಚ್ಚಿಟ್ಟ ರಹಸ್ಯವೇನು?
  5. Air India: ಕ್ಯಾಬಿನ್ ಸಿಬ್ಬಂದಿಗೆ ಪ್ರಯಾಣಿಕ ಹಲ್ಲೆ, ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಸ್

Exit mobile version