ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವಂತೆ ತನ್ನ ʼಶಕ್ತಿʼಯನ್ನು ಹೆಚ್ಚಿಸಿಕೊಳ್ಳಲು ರೌಡಿ ಹಿನ್ನೆಲೆ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂಬ ವಿಚಾರ ತೀವ್ರ ಚರ್ಚೆ ಆಗುತ್ತಿದ್ದಂತೆ ಬಿಜೆಪಿ ಯುಟರ್ನ್ ಮಾಡಿದೆ. ಮಹಾರಾಷ್ಟ್ರ ಗಡಿ ವಿವಾದದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎರಡೂ ರಾಜ್ಯಗಳ ಪೊಲೀಸರು ಮುಂದಾಗಿದ್ದಾರೆ, ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ ಹೆಚ್ಚಾಗಿದೆ, ಕೋವಿಡ್ ಲಸಿಕೆಯಿಂದಾದ ಸಾವಿಗೂ ತನಗೆ ಸಂಬಂಧವಿಲ್ಲವೆಂದು ಕೇಂದ್ರ ಸರ್ಕಾರ ಕೈತೊಳೆದುಕೊಂಡಿದೆ, ಗುಜರಾತ್ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ ʼರಾವಣʼ ಹೇಳಿಕೆ ವಿವಾದಕ್ಕೀಡಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ರೌಡಿ ಸುನಿಲ್ BJP ಸೇರ್ಪಡೆ ಇಲ್ಲ ಎಂದ ನಳಿನ್ ಕುಮಾರ್ ಕಟೀಲ್; ಈಗಾಗಲೆ ಸೇರಿರುವ ಫೈಟರ್ ರವಿ ಬಗ್ಗೆ ʼಸೈಲೆಂಟ್ʼ
ರೌಡಿ ಹಿನ್ನೆಲೆಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಎಲ್ಲ ವಿಚಾರಗಳನ್ನೂ ಪಕ್ಷದ ಗಮನಕ್ಕೆ ತರಬೇಕು ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ʼರೌಡಿʼ ಜಗಳದಿಂದ ಹಿಂದೆ ಸರಿದ CM ಬೊಮ್ಮಾಯಿ: ಟ್ವೀಟ್ ಮೂಲಕ ವಿವಾದ ತಣ್ಣಗಾಗಿಸುವ ಯತ್ನ
2. Border Dispute | ನಮಗೆ ಮೂಲಸೌಕರ್ಯ ಕೊಟ್ಟರಷ್ಟೇ ಮಹಾರಾಷ್ಟ್ರದಲ್ಲಿರುತ್ತೇವೆ; ಅಕ್ಕಲಕೋಟೆ ಗ್ರಾಮಸ್ಥರ ಖಡಕ್ ವಾರ್ನಿಂಗ್!
ನಾವು ಈಗಲೂ ಮಹಾರಾಷ್ಟ್ರದಲ್ಲೇ ಇರಲು ಸಿದ್ಧ, ಬದ್ಧ, ಆದರೆ, ಅವರು ಮೊದಲು ನಮಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕು. ಇಲ್ಲದಿದ್ದರೆ ನಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆಗೊಳ್ಳಲು ಬಿಡಬೇಕು ಎಂದು ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನ ಜನ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವು (Border Dispute) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Border Dispute | ಸುಪ್ರೀಂನಲ್ಲಿ ಏನೇ ತೀರ್ಪು ಬರಲಿ, ಸುರಕ್ಷತೆ ಆದ್ಯತೆಯಾಗಲಿ; ಕರ್ನಾಟಕ- ಮಹಾರಾಷ್ಟ್ರ ಪೊಲೀಸರ ತೀರ್ಮಾನ
3. ರಾಜ್ಯದಲ್ಲಿ ಮುಂದುವರಿದ ಮತಾಂತರ ಹಾವಳಿ; ಎರಡು ಪ್ರಕರಣ ಬೆಳಕಿಗೆ
1️⃣ Forced Conversion | ರೋಗ ಗುಣಪಡಿಸುವ ನೆಪದಲ್ಲಿ ಮುಗ್ಧ ಜನರ ಮತಾಂತರ ಯತ್ನ; ಪಾದ್ರಿ ವಿರುದ್ಧ ದೂರು
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಲಾರೆನ್ಸ್ ಫರ್ನಾಂಡಿಸ್ ಎಂಬಾತನ ವಿರುದ್ಧ ಮತಾಂತರ ಆರೋಪ ಕೇಳಿ ಬಂದಿದೆ. ಜೋಯಿಡಾದ ಕುಂಬಾರವಾಡ ಮೂಲದ ಪಾದ್ರಿಯಾಗಿರುವ ಲಾರೆನ್ಸ್ ಫರ್ನಾಂಡಿಸ್, ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳನ್ನು ಟಾರ್ಗೆಟ್ ಮಾಡಿ, ಮುಗ್ಧ ಜನರನ್ನು ಮರಳು ಮಾಡಿ ರೋಗ ಗುಣಪಡಿಸುವ ನೆಪದಲ್ಲಿ ಮತಾಂತರ ಯತ್ನಿಸಿದ್ದರಂತೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2️⃣ Religious Conversion | ಅನಧಿಕೃತ ಪ್ರಾರ್ಥನಾಲಯ ನಿರ್ಮಿಸಿ ಮತಾಂತರ ಆರೋಪ: ಹಿಂದು ಕಾರ್ಯಕರ್ತರಿಂದ ಮುತ್ತಿಗೆ
ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅನಧಿಕೃತ ಪ್ರಾರ್ಥನಾಲಯ ನಿರ್ಮಿಸಿ ಮತಾಂತರಕ್ಕೆ ಪ್ರಚೋದನೆ (Religious Conversion) ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಕಣ್ವ ರಸ್ತೆಯಲ್ಲಿರೋ ಮಿಶ್ರಾ ಫಾಮ್ ಹೌಸ್ ನಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಅಲ್ಲಿಗೆ ಹೋಗಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಕೋವಿಡ್ 19 ನಿಯಂತ್ರಣ ಲಸಿಕೆಯಿಂದ ಆಗುವ ಸಾವುಗಳಿಗೆ ಸರ್ಕಾರ ಹೊಣೆಯಲ್ಲ; ಸುಪ್ರೀಂಕೋರ್ಟ್ಗೆ ಕೇಂದ್ರದ ಅಫಿಡವಿಡ್
ಕೋವಿಡ್ 19 ಲಸಿಕೆಗಳಿಂದ ಆಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡಿವಿಟ್ ಸಲ್ಲಿಸಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಭಾರತದಲ್ಲಿ ನಾಗರಿಕರಿಗೆ ಪ್ರಮುಖವಾಗಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳು ಕೊರೊನಾವನ್ನು ನಿಯಂತ್ರಣ ಮಾಡುತ್ತವೆ ಎಂಬ ಮಾತುಗಳೊಂದಿಗೆ, ಕೊರೊನಾ ರೋಗ ನಿಯಂತ್ರಣಕ್ಕೆ ನೀಡುವ ಲಸಿಕೆಗಳು ಹೃದಯಾಘಾತ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇವು ದೇಹಕ್ಕೆ ಉಂಟು ಮಾಡಿದ ದುಷ್ಪರಿಣಾಮದಿಂದ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Siddaramaiah CM | ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು, ವರಿಷ್ಠರು ಸಿಎಂ ಮಾಡ್ಲೇಬೇಕು: ರಮೇಶ್ ಕುಮಾರ್ ವಾದ
ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಕಾಂಗ್ರೆಸ್‌ನೊಳಗಿನ ವಾದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಧ್ವನಿಗೂಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡುವ ಬುದ್ಧಿ ಬರಲಿ ಎಂದು ಕೋಲಾರದಲ್ಲಿ ಮಾತನಾಡಿದ ರಮೇಶ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಪರ ಒತ್ತಡ ಹೆಚ್ಚುವಂತೆ ಮಾಡಿದೆ. ಕೋಲಾರದ ವಕ್ಕಲೇರಿ ಗ್ರಾಮದ ಕಾಂಗ್ರೆಸ್ ಸಭೆಯಲ್ಲಿ ರಮೇಶ್ ಕುಮಾರ್ ಈ ಹೇಳಿಕೆ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Defection politics | ಜಿ.ಟಿ. ದೇವೇಗೌಡರ ಐವರು ಆಪ್ತ ನಾಯಕರು ಜೆಡಿಎಸ್‌ಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ ಫಿಕ್ಸ್
6. The Kashmir Files | ಕಾಶ್ಮೀರ್ ಫೈಲ್ಸ್ ಅಶ್ಲೀಲ, ಅಪಪ್ರಚಾರದ ಚಿತ್ರ ಎಂದ ಐಎಫ್‌ಎಫ್‌ಐ ಜ್ಯೂರಿ, ಇಸ್ರೇಲಿ ಚಿತ್ರ ನಿರ್ಮಾಪಕ ಲ್ಯಾಪಿಡ್
ಗೋವಾದಲ್ಲಿ ನಡೆದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಐಎಫ್‌ಎಫ್‌ಐನ ಜ್ಯೂರಿ ಮುಖ್ಯಸ್ಥ, ಇಸ್ರೇಲಿ ಚಿತ್ರ ನಿರ್ಮಾಪಕ ನಾಡವ್ ಲ್ಯಾಪಿಡ್ ಅವರು, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ (The Kashmir Files ) ಒಂದು ಅಶ್ಲೀಲ ಚಿತ್ರ ಹಾಗೂ ಅಪಪ್ರಚಾರವನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಎಂದು ಟೀಕಿಸಿದ್ದಾರೆ. ಇದು ಈಗ ವಿವಾದದ ಕಿಡಿ ಹೊತ್ತಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: The Kashmir Files | ಕಾಶ್ಮೀರ್ ಫೈಲ್ಸ್‌ಗೆ ನಿರ್ಮಾಪಕನ ಅವಹೇಳನ: ಭಾರತೀಯರ ಕ್ಷಮೆಯಾಚಿಸಿದ ಇಸ್ರೇಲ್ ರಾಯಭಾರಿ
7. Digital Rupee | ಬೆಂಗಳೂರಿನಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಡಿಸೆಂಬರ್ 1ಕ್ಕೆ ಬಿಡುಗಡೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಿಟೇಲ್ ಡಿಜಿಟಲ್ ರೂಪಾಯಿ (Digital Rupee) 2022ರ ಡಿಸೆಂಬರ್ 1ಕ್ಕೆ ಬೆಂಗಳೂರು, ದಿಲ್ಲಿ, ಮುಂಬಯಿ ಮತ್ತು ಭುವನೇಶ್ವರದಲ್ಲಿ ಬಿಡುಗಡೆಯಾಗಲಿದೆ. ಎರಡನೇ ಹಂತದಲ್ಲಿ ಅಹಮದಾಬಾದ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಪಟನಾ, ಶಿಮ್ಲಾದಲ್ಲಿ ಎರಡನೇ ಹಂತದಲ್ಲಿ ವಿಸ್ತರಣೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ವಿಸ್ತಾರ Money Guide | ರೂಪಾಯಿಯ ಡಿಜಿಟಲ್ ಕರೆನ್ಸಿ ಎಂದರೇನು? ಏನಿದರ ಉಪಯೋಗ?
8. ಪ್ರಧಾನಿ ಮೋದಿ ರಾವಣನಿದ್ದಂತೆ, ಪ್ರತಿ ಚುನಾವಣೆಯಲ್ಲೂ ಅವರ 10 ತಲೆ ಗೋಚರಿಸುತ್ತದೆ: ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ರಾವಣ ಇದ್ದಂತೆ. ಅವರಿಗೂ ರಾವಣನಂತೆ 10 ತಲೆಗಳು ಇವೆ. ನರೇಂದ್ರ ಮೋದಿಯವರ ರಾವಣನ ಸ್ವರೂಪ ಪ್ರತಿ ಚುನಾವಣೆಯಲ್ಲೂ ಗೋಚರವಾಗುತ್ತದೆ ಎಂದು ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Ravana controversy | ಖರ್ಗೆಯನ್ನು ಧೃತರಾಷ್ಟ್ರನಿಗೆ ಹೋಲಿಸಿದ ರವಿಕುಮಾರ್, ಸೋನಿಯಾಗೂ ಪುತ್ರ ವ್ಯಾಮೋಹ ಅಂದ್ರು
9. Sexual Assault | ತಡ ರಾತ್ರಿ ರ‍್ಯಾಪಿಡೋ ಬುಕ್ ಮಾಡಿದ್ದ ಯುವತಿ; ಚಾಲಕ, ಮತ್ತವನ ಸ್ನೇಹಿತನಿಂದ ರೇಪ್
ರಾತ್ರಿ ಸಂಚಾರಕ್ಕೆ ಬೆಂಗಳೂರು ಸೇಫ್ ಅಲ್ಲ ಎಂಬ ವಿಚಾರ ಮತ್ತೆ ರುಜುವಾತಾಗಿದೆ. ಆನ್‌ಲೈನ್ ಬುಕ್ಕಿಂಗ್ ಆ್ಯಪ್ ಮೂಲಕ ತಡ ರಾತ್ರಿ ಹೊರಟಿದ್ದ ಯುವತಿಯೊಬ್ಬಳನ್ನು ಬೈಕ್ ಚಾಲಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ತನ್ನ ಸ್ನೇಹಿತನನ್ನೂ ಕರೆಸಿಕೊಂಡು ಲೈಂಗಿಕ ದೌರ್ಜನ್ಯ (Sexual Assault) ನಡೆಸಿದ್ದಾನೆ. ಇಬ್ಬರೂ ಸೇರಿ ಬೆಳಗಿನ ಜಾವದ ವರೆಗೂ ಚಿತ್ರಹಿಂಸೆಯನ್ನು ಕೊಟ್ಟಿದ್ದಾರೆ. ದುರಂತವೆಂದರೆ ಈ ಕೃತ್ಯವು ಪ್ರಮುಖ ಆರೋಪಿಯ ಪ್ರೇಯಸಿ ಮುಂದೆಯೇ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Anti Rape Footwear | ಮಹಿಳೆಯರ ರಕ್ಷಣೆಗೆ ಆ್ಯಂಟಿ ರೇಪ್ ಫುಟ್‌ವೇರ್; ಕಲಬುರಗಿ ವಿದ್ಯಾರ್ಥಿನಿಯಿಂದ ಅಭಿವೃದ್ಧಿ
10. Oil prices | ಕಚ್ಚಾ ತೈಲ ದರ ಇಳಿಕೆ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ದರ ಕಡಿತ ಸಂಭವ
ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ದರ (Oil prices) ಕಡಿಮೆಯಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಕಳೆದ ಜನವರಿಯಿಂದ ಇಲ್ಲಿಯವರೆಗಿನ ಅವಧಿಯ ಕನಿಷ್ಠ ಮಟ್ಟದಲ್ಲಿದೆ. ಸೋಮವಾರ ಪ್ರತಿ ಬ್ಯಾರೆಲ್‌ಗೆ 2.6 ಡಾಲರ್ ತಗ್ಗಿದ್ದು, 80.97 ಡಾಲರ್‌ಗೆ ಇಳಿದಿದೆ. ಒಪೆಕ್ ಮತ್ತು ರಷ್ಯಾದಿಂದ ಮತ್ತೊಂದು ಸುತ್ತಿನ ತೈಲೋತ್ಪಾದನೆ ಕಡಿತದ ವರದಿಗಳು ದರವನ್ನು ಮತ್ತಷ್ಟು ಇಳಿಸಿದೆ. ಬೇಡಿಕೆ ಕುಸಿತವಾಗುವ ಆತಂಕ ಉಂಟಾಗಿರುವುದು ಇದಕ್ಕೆ ಕಾರಣ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Student suicide | ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಆಗಿದ್ದಕ್ಕೆ ನಿಂದಿಸಿದ ಪ್ರಿನ್ಸಿಪಾಲ್: ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ
- Dengue vaccine | ಶೀಘ್ರವೇ ಡೆಂಗೆ ಲಸಿಕೆ! ಅನುಮತಿ ಕೋರಿದ ಔಷಧ ಕಂಪನಿಗಳು
- Pakistan Taliban | ಕದನ ವಿರಾಮ ಅಂತ್ಯ, ದಾಳಿ ಎದುರಿಸಿ! ಪಾಕಿಸ್ತಾನಕ್ಕೆ ತೆಹ್ರೀಕ್-ಇ-ತಾಲಿಬಾನ್ ಎಚ್ಚರಿಕೆ
- ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಆರೋಗ್ಯ ಚೇತರಿಕೆ, ಪೊಲೀಸರಿಂದ ಆಸ್ಪತ್ರೆಯಲ್ಲೇ ವಿಚಾರಣೆ ಶುರು
- Viral video | 80 ವರ್ಷಗಳ ನಂತರ ಭೇಟಿಯಾದ ಗೆಳತಿಯರಿವರು!
- Indian Army Kite | ಪಾಕ್ ಡ್ರೋನ್ ಬೇಟೆಯಾಡಲು ನಮ್ಮ ಸೇನೆಯ ‘ಗಿಡುಗ’ ಸಜ್ಜು!