Site icon Vistara News

ವಿಸ್ತಾರ TOP 10 NEWS | ಗುಜರಾತ್‌ BJP ಇತಿಹಾಸದಿಂದ ಹಿಮಾಚಲ ಕಾಂಗ್ರೆಸ್‌ ಮಂದಹಾಸವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news- bjp historic win in gujarat to cngress win in himachal pradesh and more news

ಬೆಂಗಳೂರು: ಗುಜರಾತ್‌ನಲ್ಲಿ ಬಿಜೆಪಿ ನಿರೀಕ್ಷೆಯಂತೆಯೇ ಜಯಗಳಿಸಿದ್ದರೂ ಐತಿಹಾಸಿಕ ಸಂಖ್ಯೆಯಲ್ಲಿ ಜಯಗಳಿಸಿ ಪ್ರಧಾನಿ ನರೇಂದ್ರ ಮೋದಿ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹಿಮಾಚಲ ಪ್ರದೇಶದಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‌ ಗೆಲುವಿನ ಮಂದಹಾಸ ಬೀರಿದೆ. ದೆಹಲಿ ಸ್ಥಳೀಯ ಸಂಸ್ಥೆಯಲ್ಲಿ ಬುಧವಾರವಷ್ಟೇ ಜಯಭೇರಿ ಬಾರಿಸಿದ್ದ ಆಮ್‌ ಆದ್ಮಿ ಪಕ್ಷ ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲಿಸುವಷ್ಟರಲ್ಲೇ ಧನ್ಯತೆ ಪಡೆದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Gujarat Election Results | ಗುಜರಾತ್‌ನಲ್ಲಿ ಮೋದಿ ಸುನಾಮಿ, ಸತತ 7ನೇ ಬಾರಿಗೆ ಅಧಿಕಾರದತ್ತ ಬಿಜೆಪಿ, ಕಾಂಗ್ರೆಸ್‌ ಧೂಳೀಪಟ
ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶದ ಆರಂಭಿಕ ಸುತ್ತಿನಲ್ಲೇ ಬಿಜೆಪಿ ಸತತ 7ನೇ ಬಾರಿಗೆ ಪ್ರಚಂಡ ಬಹುಮತ ಗಳಿಸಿ ಅಧಿಕಾರದ ಗದ್ದುಗೆಗೆ ಏರುವುದು ಸ್ಪಷ್ಟವಾಗಿ ಕಾಣಿಸಿದೆ. ಬಿಜೆಪಿ 156 ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಇದುವರೆಗಿನ ಗರಿಷ್ಠ ಸಂಖ್ಯೆಯ ಸೀಟುಗಳನ್ನು ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಮತ್ತಷ್ಟು ಇಂಬು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Gujarat Election Results | ಮಸ್ಲಿಮ್‌ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ; ಏನಿದು ತಂತ್ರ?

2. Himachal Election Result | ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಗೆಲುವು, ಕಾರಣಗಳು ಹಲವು!
ಬಿಕ್ಕಟ್ಟಿನ ದಿನಗಳನ್ನು ಎದುರಿಸುತ್ತಿರುವ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಗೆಲುವು, ಆ ಪಕ್ಷಕ್ಕೆ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ. ಸತತ ಸೋಲುಗಳಿಂದ ಜರ್ಜರಿತವಾಗಿದ್ದ ಕಾಂಗ್ರೆಸ್ ಈ ಗೆಲುವು ಬಹಳ ಮುಖ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Himachal Election Result | ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಮತ ಗಳಿಕೆಯ ಅಂತರ 1%ಕ್ಕಿಂತಲೂ ಕಡಿಮೆ!

3. Gujarat election results | ಗುಜರಾತ್‌ ಮತಗಳ ಬಲದಿಂದ ರಾಷ್ಟ್ರೀಯ ಪಕ್ಷವಾಗುತ್ತಿದೆ ಆಮ್‌ ಆದ್ಮಿ ಪಾರ್ಟಿ
ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಮ್‌ ಆದ್ಮಿ ಪಾರ್ಟಿ, ಗುಜರಾತ್‌ ರಾಜ್ಯದ ಜನತೆಯ ಮತಗಳಿಂದಲೇ ʻರಾಷ್ಟ್ರೀಯ ಪಕ್ಷʼ ಎನಿಸಿಕೊಳ್ಳುವ ಸಾಧ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಆಪ್‌ ಮುಖಂಡ, ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟ್ವೀಟ್‌ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Gujarat Election Result | 27 ವರ್ಷಗಳ ಬಳಿಕವೂ ಗುಜರಾತ್‌ನಲ್ಲಿ ಸೋಲದ ಬಿಜೆಪಿ, ಈಗ ಮತ್ತಷ್ಟು ಬಲಾಢ್ಯ, ಏನಿದರ ಹಿನ್ನೋಟ?

4. Gujarat Election Result | ಗುಜರಾತ್‌ನಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿಗೆ ಇಲ್ಲಿದೆ ಪಂಚ ಕಾರಣ!
ಗುಜರಾತ್‌ನಲ್ಲಿ ಕಳೆದ ೨೭ ವರ್ಷ ಅಧಿಕಾರದ ಬರ ಅನುಭವಿಸಿದ ಕಾಂಗ್ರೆಸ್‌ಗೆ ಮತ್ತೆ ೫ ವರ್ಷ ಅಧಿಕಾರ ಮರೀಚಿಕೆಯಾಗಿದೆ. ಕಳೆದ ಬಾರಿ ತೀವ್ರ ಸ್ಪರ್ಧೆಯೊಡ್ಡಿದ್ದ ಕಾಂಗ್ರೆಸ್‌ ಈ ಬಾರಿ ಹೀನಾಯವಾಗಿ (Gujarat Election Result) ಸೋತಿದೆ. ಬಿಜೆಪಿಯ ಭದ್ರಕೋಟೆಯನ್ನು ಭೇದಿಸಲು ಸಶಕ್ತ ಪಕ್ಷವಾಗಿ ಹೊರಹೊಮ್ಮುವಲ್ಲಿ ಅದು ವಿಫಲವಾಗಿದೆ. ಹಾಗಾದರೆ, ಕಾಂಗ್ರೆಸ್‌ ಸೋಲಿಗೆ ಕಾರಣಗಳೇನು? ಇಲ್ಲಿದೆ ಮಾಹಿತಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Himachal Election Result | ಮೋದಿ, ಠಾಕೂರ್ ಇದ್ದೂ ಹಿಮಾಚಲದಲ್ಲಿ ಬಿಜೆಪಿ ಸೋತಿದ್ದೇಕೆ?
ತಿಹಾಸ ಸೃಷ್ಟಿಸುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಹಿಮಾಚಲ ಪ್ರದೇಶದ ಮತದಾರರು ನಿರಾಸೆ ಮೂಡಿಸಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರವು ಒಲಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯಂಥ ಜನಪ್ರಿಯ ಹಾಗೂ ಪ್ರಭಾವಿ ನಾಯಕ, ಜನಪ್ರಿಯ ಲೀಡರ್ ಸಿಎಂ ಜೈರಾಂ ಠಾಕೂರ್ ಅವರಂಥರು ಇದ್ದೂ ಬಿಜೆಪಿ ಸೋಲು ಕಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Gujarat Election results | ಗುಜರಾತ್‌ನಲ್ಲಿ ಬಿಜೆಪಿಯ ಐತಿಹಾಸಿಕ ವಿಜಯಕ್ಕೆ ಆಪ್‌ ಕಾರಣವಾಯಿತೇ?
ಗುಜರಾತ್‌ನ ೧೮೨ ವಿಧಾನಸಭಾ ಕ್ಷೇತ್ರಗಳ ಪೈಕಿ ೧೫೬ ಸ್ಥಾನಗಳನ್ನು ಗೆದ್ದುಕೊಂಡು ಬೀಗಿದೆ ಬಿಜೆಪಿ. ಕಾಂಗ್ರೆಸ್‌ ೧೭ ಸ್ಥಾನಕ್ಕೆ ಕುಸಿದಿದೆ. ಹಾಗಿದ್ದರೆ ಮಹಾ ವಿಜಯ ಮತ್ತು ಮಹಾಪತನದ ನಡುವೆ ಕೊಂಡಿಯಾಗಿ ನಿಂತಿರುವುದು ಆಮ್‌ ಆದ್ಮಿ ಪಾರ್ಟಿಯಾ? ಈ ಒಂದು ಪ್ರಶ್ನೆ ಫಲಿತಾಂಶವನ್ನು (Gujarat Election results) ನೋಡಿದ ಎಲ್ಲರ ಮನದಲ್ಲೂ ಮೂಡುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ʼಗುಜರಾತ್‌ ಮಾದರಿʼ ಜಪದಲ್ಲಿ ಕರ್ನಾಟಕ ಬಿಜೆಪಿ: ಕಾರ್ಯಕರ್ತರಲ್ಲಿ, ಹಿರಿಯರಲ್ಲಿ ಆತಂಕ
ಸಾಮಾನ್ಯವಾಗಿ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದಲ್ಲಿ ಕೇಳಿಬರುವ ʼಗುಜರಾತ್‌ ಮಾದರಿʼ ಇದೀಗ ಕರ್ನಾಟಕ ಬಿಜೆಪಿ ವಲಯದಲ್ಲಿ ರಿಂಗಣಿಸುತ್ತಿದೆ. ಹೊಸದಾಗಿ ಚುನಾವಣೆ ಎದುರಿಸಬೇಕಾದವರು ಇದೇ ಮಾದರಿ ತಮಗೂ ಬೇಕು ಎಂದು ಹುಚ್ಚೆದ್ದು ಕುಣಿಯುತ್ತಿದ್ದರೆ ಹಿರಿಯರು ಮಾತ್ರ ʼಇದೆಲ್ಲ ಕರ್ನಾಟಕದಲ್ಲಿ ವರ್ಕೌಟ್‌ ಆಗಲ್ಲʼ ಎಂದು ಆತಂಕದಿಂದಲೇ ಆಲೋಚಿಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಕರ್ನಾಟಕದಲ್ಲಿ ಸುಮ್ಮನೆ ಇದ್ದರೂ ಗೆಲ್ತೀವಿ; ತಂತ್ರಗಾರಿಕೆಯೇ ಬೇಡ ಎಂದ ಸಿದ್ದರಾಮಯ್ಯ: ಯಾವ್ಯಾವ ನಾಯಕರು ಏನೇನು ಹೇಳಿದರು?

8. Border Dispute | ಕರ್ನಾಟಕಕ್ಕೆ ಸಂಘರ್ಷವೇ ಬೇಕೆಂದರೆ ನಾವೂ ಸಿದ್ಧ: ರಾಜ್‌ ಠಾಕ್ರೆ ಸುದೀರ್ಘ ಪತ್ರ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ (Border Dispute) ಸಂಬಂಧಪಟ್ಟಂತೆ ಈಗ ಮಹಾರಾಷ್ಟ್ರ ನವನಿರ್ಮಾಣ ಸೇನೆ ವರಿಷ್ಠ ರಾಜ್ ಠಾಕ್ರೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಈಗಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಘರ್ಷ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದು, ಸಂಘರ್ಷವೇ ಬೇಕೆಂದರೆ ಅದಕ್ಕೆ ನಾವು ಸಿದ್ಧ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. TET Result 2022 | ಮುಂದಿನ ವಾರವೇ ಟಿಇಟಿ ಪರೀಕ್ಷೆ ರಿಸ್ಟಲ್‌; ಸಚಿವ ಬಿ.ಸಿ ನಾಗೇಶ್‌ ಟ್ವೀಟ್‌
ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ (TET Result 2022) ಮುಂದಿನ ವಾರದಲ್ಲಿ ಪ್ರಕಟಗೊಳ್ಳಲಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Weather Report | ಮಾಂಡೌಸ್​ ಚಂಡಮಾರುತ ಎಫೆಕ್ಟ್‌; ಎಲ್ಲೆಲ್ಲಿ ಭಾರಿ ಮಳೆ, ಎಲ್ಲಿ ಸಾಧಾರಣ?
ತಮಿಳುನಾಡಿಗೆ ಮಾಂಡೌಸ್​ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಬೀರಲಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ಐಎಂಡಿ (Weather Report) ನೀಡಿದೆ. ತಮಿಳುನಾಡು, ಪುದುಚೆರಿ, ಆಂಧ್ರ ಪ್ರದೇಶದ ಕರಾವಳಿಯಲ್ಲಿ ಮಾಂಡೌಸ್ ಚಂಡಮಾರುತದ ಪರಿಣಾಮವಾಗಿ ರಾಜ್ಯದ ದಕ್ಷಿಣ ಒಳನಾಡಿಗೆ ನಾಲ್ಕು ದಿನ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Tippu Nija Kanasugalu | ʼಟಿಪ್ಪು ನಿಜಕನಸುಗಳುʼ ಕೃತಿ ಮಾರಾಟಕ್ಕಿದ್ದ ತಾತ್ಕಾಲಿಕ ನಿಷೇಧ ರದ್ದು
  2. Supreme Court | ಕೊಲಿಜಿಯಂ ಕಾನೂನುಬದ್ಧ, ಅನುಸರಿಸಬೇಕು : ಕೇಂದ್ರಕ್ಕೆ ಸುಪ್ರೀಂ ಸೂಚನೆ
  3. BCCI MEETING | ಬಾಂಗ್ಲಾ ವಿರುದ್ಧದ ಸರಣಿ ಸೋಲಿನ ಬಳಿಕ ದಿಢೀರ್​ ಸಭೆ ನಡೆಸಲು ಮುಂದಾದ ಬಿಸಿಸಿಐ
  4. Home loan Interest | ರೆಪೊ ದರ ಎಫೆಕ್ಟ್:‌ ಕೆಲ ಬ್ಯಾಂಕ್‌ಗಳಲ್ಲಿ ಗೃಹಸಾಲ ಬಡ್ಡಿ ದರ ಏರಿಕೆ
Exit mobile version