1. BJP Karnataka: ನಾನು ಅಂದರೆ ಬಿಜೆಪಿ, ಬಿಜೆಪಿ ಅಂದರೆ ನಾನು: ಫಟಾಫಟ್ ಉತ್ತರ ಕೊಟ್ಟು ಹೊರಬಂದ ಯತ್ನಾಳ್
ರಾಜ್ಯ ಬಿಜೆಪಿಯು (BJP Karnataka) ವಿಧಾನಸಭೆ ಚುನಾವನೆಯಲ್ಲಿ ಸೋತ ನಂತರದಲ್ಲಿ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾಯಕರ ಎದುರು ವಿಚಾರಣೆಗೆ ಶುಕ್ರವಾರ ಹಾಜರಾದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ತಮ್ಮ ಸ್ಪಷ್ಟೀಕರಣ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. BJP Karnataka: ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ನಾಯಕ?: ರೇಸ್‌ನಲ್ಲಿ ಐವರು; ಭಾನುವಾರ ಶಾಸಕಾಂಗ ಪಕ್ಷದ ಸಭೆ
ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಿರುವ ರಾಜ್ಯ ಬಿಜೆಪಿ (BJP Karnataka) ಕೊನೆಗೂ ಇದಕ್ಕೊಂದು ಮುಹೂರ್ತ ನಿಗದಿಪಡಿಸಿದೆ. ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ಆಯೋಜಿಸಿದ್ದಾರೆ. ಸದ್ಯ ಜಯಗಳಿಸಿರುವ 66 ಶಾಸಕರನ್ನು ಆಹ್ವಾನಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಮುಹೂರ್ತ ಫಿಕ್ಸ್; ವಿಧೇಯಕ ಕೂಡ ರೆಡಿ
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿ ಕುರಿತು ಚರ್ಚೆಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಕುರಿತು ಕಾನೂನು ಆಯೋಗವು ಅಭಿಪ್ರಾಯ ಸಂಗ್ರಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಏಕರೂಪ ನಾಗರಿಕ ಸಂಹಿತೆ ಪರ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ, ಜುಲೈನಲ್ಲಿ ಆರಂಭವಾಗುವ ಸಂಸತ್ ಮುಂಗಾರು ಅಧಿವೇಶನದಲ್ಲಿಯೇ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ವಿಸ್ತಾರ Explainer: Uniform Civil Code: ಏಕರೂಪ ನಾಗರಿಕ ಸಂಹಿತೆ: ಏನು, ಯಾಕೆ, ಹೇಗೆ?
4. Karnataka High Court: ಟ್ವಿಟರ್ಗೆ 50 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್ (Karnataka High court) ಮೆಟ್ಟಿಲೇರಿದ್ದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟರ್ಗೆ (Twitter) ತೀವ್ರ ಹಿನ್ನಡೆಯಾಗಿದೆ. ಕೇಂದ್ರದ ವಿರುದ್ಧ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, 50 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ‘ಟ್ವೀಟ್ಗಳನ್ನು ತೆಗೆದುಹಾಕಿ, ಟ್ವಿಟರ್ ಅಕೌಂಟ್ (Twitter Account)ಗಳನ್ನು ಬ್ಲಾಕ್ ಮಾಡಿ ಎಂದು ಟ್ವಿಟರ್ ಕಂಪನಿಗೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ’ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Anna bhagya Rice: ಅವೈಜ್ಞಾನಿಕ ಗೋದಾಮಿನಿಂದಾಗಿ ಟನ್‌ಗಟ್ಟಲೆ ಅನ್ನಭಾಗ್ಯ ಅಕ್ಕಿ ವೇಸ್ಟ್!
ಒಂದೆಡೆ ʼಅನ್ನಭಾಗ್ಯʼ ಕಾರ್ಯಕ್ರಮಕ್ಕಾಗಿ ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಗೆ (Anna bhagya Rice) ರಾಜ್ಯ ಸರ್ಕಾರ ಒದ್ದಾಡುತ್ತಿರುವ ಸಂದರ್ಭದಲ್ಲೇ, ಅವೈಜ್ಞಾನಿಕ ಗೋದಾಮು ವ್ಯವಸ್ಥೆಯಿಂದಾಗಿಯೇ ರಾಜ್ಯಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಅಧ್ಯಯನವೊಂದು ಹೊರಗೆಡಹಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Road accident: ಹೊಸಪೇಟೆ ಬಳಿ ಆಟೋ- ಲಾರಿ ಡಿಕ್ಕಿ: ಆರಕ್ಕೂ ಅಧಿಕ ಮಂದಿ ಸಾವು
ಹೊಸಪೇಟೆ (Vijaya Nagara News) ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ ಬಳಿ ಸಂಭವಿಸಿರುವ ಭೀಕರ ಅಪಘಾತದಲ್ಲಿ (Road accidnet) ಆರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎರಡು ಆಟೊಗಳು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Yogi Adityanath: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಜಾಗದಲ್ಲಿ ಮನೆ ನಿರ್ಮಿಸಿ, ಬಡವರಿಗೆ ಹಂಚಿದ ಯೋಗಿ
ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್, ರಾಜಕಾರಣಿಯೂ ಆಗಿದ್ದ, ಕೆಲ ತಿಂಗಳ ಹಿಂದಷ್ಟೇ ಹತ್ಯೆಗೀಡಾದ ಅತೀಕ್ ಅಹ್ಮದ್‌ನಿಂದ ವಶಪಡಿಸಿಕೊಂಡ ಜಾಗದಲ್ಲಿ ಉತ್ತರ ಪ್ರದೇಶ ಸರ್ಕಾರವು ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗೆ ಯೋಗಿ ಆದಿತ್ಯನಾಥ್ (Yogi Adityanath) ಅವರು ಶುಕ್ರವಾರ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಿದ್ದಾರೆ. ಒಂದು ಫ್ಲ್ಯಾಟ್‌ನಲ್ಲಿ ಎರಡು ಕೋಣೆ, ಬೇಸಿಕ್ ಕಿಚನ್ ಸೆಟಪ್, ಒಂದು ಬಾತ್‌ರೂಮ್ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Asian Kabaddi Championship: ಇರಾನ್ ಕಾಲೆಳೆದು ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್(Asian Kabaddi Championship) ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ತಂಡದ ಸೊಕ್ಕಡಗಿಸಿದ ಭಾರತ, ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೂರ್ನಿಯಲ್ಲಿ 8ನೇ ಬಾರಿ ಚಾಂಪಿಯನ್ ಆದ ಸಾಧನೆ ಮಾಡಿದೆ. ಪವನ್ ಸೆಹ್ರಾವತ್ (Pawan Sehrawat)ಅವರು ಮಿಂಚಿನ ರೈಡಿಂಗ್ ಮಾಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Harshika Poonacha: ಹಸೆಮಣೆ ಏರಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ; ಚಂದನವನದಲ್ಲಿ ಮತ್ತೊಂದು ಸಿಹಿ ಸುದ್ದಿ!
ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ ಪೊನ್ನಣ್ಣ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 24ರಂದು ಕೊಡವ ಸಂಪ್ರದಾಯದಂತೆ, ಕೊಡಗಿನಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾ ತಾರೆಯರು ಪಾಲ್ಗೊಳ್ಳುವ ನೀರಿಕ್ಷೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral News: ಫಸ್ಟ್ ನೈಟ್ ಆದ ಮರುದಿನವೇ ಹೆಣ್ಣುಮಗುವಿಗೆ ಜನ್ಮ ನೀಡಿದ ಯುವತಿ, ಗಂಡನಿಗೆ ಫಜೀತಿ
ಆಗ ತಾನೆ ಮದುವೆಯಾದವರು ಹೇಗಿರುತ್ತಾರೆ? ಗಂಡ-ಹೆಂಡತಿ ಅಂಟಿಕೊಂಡೇ ಇರುತ್ತಾರೆ, ಹನಿಮೂನ್‌ಗೆ ಎಲ್ಲಿ ಹೋಗಬೇಕು, ಮನೆಯಲ್ಲಿ ಎರಡು ನಿಮಿಷ ಯಾರೂ ಇರದಿದ್ದರೆ ಸಿಹಿಮುತ್ತು ನೀಡಬೇಕು ಎಂದು ಹಾತೊರೆಯುತ್ತಿರುತ್ತಾರೆ. ಆದರೆ, ತೆಲಂಗಾಣದಲ್ಲಿ ಯುವತಿಯೊಬ್ಬಳು ಮದುವೆಯಾದ ಮರುದಿನವೇ ಹೆಣ್ಣುಮಗುವಿಗೆ ಜನ್ಮ (Viral News) ನೀಡಿದ್ದಾಳೆ. ನೂರು ಕನಸು ಕಟ್ಟಿಕೊಂಡಿದ್ದ ಆಕೆಯ ಗಂಡನು ಪೆಚ್ಚುಮೋರೆ ಹಾಕಿಕೊಂಡು ಕೂರುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.