1. Assembly Session: ದೋಖಾ ಎಂದ ಬಿಜೆಪಿ, ಬಂಡಲ್ ಎಂದ ಸರ್ಕಾರ: ದಿನವಿಡೀ ಗಲಾಟೆಗೆ ಕಲಾಪ ಢಮಾರ್ !
ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕದ ಕುರಿತು ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕಾರಣದಿಂದಾಗಿ ವಿಧಾನಸಭೆ (Assembly Session) ರಣರಂಗವಾಯಿತು. ವಿಧಾನಸಭೆಯಲ್ಲೂ ಇದೇ ಗದ್ದಲ ಮುಂದುವರಿದು ಸದನದ ಎರಡನೇ ದಿನವೇ ಕಾರ್ಯಕಲಾಪಗಳು ಬಲಿಯಾದವು. ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಶಾಸಕರಿಗೆ ಮೂರು ದಿನ ತರಬೇತಿ ಕೊಡಿಸಿ ಪೀಠದಲ್ಲಿ ಆಸೀನರಾಗಿದ್ದ ಸ್ಪೀಕರ್ ಯು.ಟಿ. ಖಾದರ್, ಸದಸ್ಯರನ್ನು ನಿಭಾಯಿಸಲು ಮೊದಲ ದಿನವೇ ಹೈರಾಣಾದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: BJP Protest : ಗ್ಯಾರಂಟಿಗೆ ಕಂಡಿಷನ್ ಹಾಕಿ ಮೋಸ ಮಾಡಿದ್ರೆ ಹುಷಾರ್ ; ಕಾಂಗ್ರೆಸ್‌ಗೆ ಬಿಜೆಪಿ ಕಂಡಿಷನ್
2. Karnataka Politics: ಹನಿಮೂನ್ ಪೀರಿಯಡ್‌ನಲ್ಲೇ ಹೀಗಾದ್ರೆ ಮುಂದೆ ಹೇಗೆ?: ಸರ್ಕಾರದ ದಮ್ ಪ್ರಶ್ನಿಸಿದ ಎಚ್.ಡಿ. ಕುಮಾರಸ್ವಾಮಿ
ಈ ಸರ್ಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು ತಾಕತ್ತು ಸರ್ಕಾರಕ್ಕೆ (Karnataka Politics) ಇದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Assembly Session: ಮತಾಂತರ ನಿಷೇಧ, ಕೃಷಿ ಕಾನೂನುಗಳು ಈ ಅಧಿವೇಶನದಲ್ಲೇ ವಾಪಸ್: ಸದನ ಸಲಹಾ ಸಮಿತಿಯಲ್ಲಿ ಚರ್ಚೆ
ಈ ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಸಿಕೊಂಡು ಬಂದಿರುವ ಮತಾಂತರ ನಿಷೇಧ ಕಾನೂನು ಹಾಗೂ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಈ ಅಧಿವೇಶನದಲ್ಲೇ (Assembly Session) ರಾಜ್ಯ ಸರ್ಕಾರ ಹಿಂಪಡೆಯುವುದು ಬಹುತೇಕ ಖಚಿತವಾಗಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. BJP Reshuffle: 4 ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ; ಕರ್ನಾಟಕಕ್ಕೆ ಯಾರು?
2024ರ ಲೋಕಸಭೆ ಚುನಾವಣೆ (2024 Lok Sabha Election)ಗೆ ಇನ್ನೊಂದು ವರ್ಷವೂ ಇಲ್ಲ. ರಾಜಕೀಯ ವಲಯದಲ್ಲಿ, ರಾಷ್ಟ್ರೀಯ ಪಕ್ಷಗಳು-ಪ್ರಾದೇಶಿಕ ಪಕ್ಷಗಳಲ್ಲಿ ‘ಚುನಾವಣಾ ಚಟುವಟಿಕೆಗಳು’ ಪ್ರಾರಂಭವಾಗಿವೆ. ಇದೀಗ ಬಿಜೆಪಿ (Bharatiya Janata Party) ನಾಲ್ಕು ರಾಜ್ಯಗಳ ಬಿಜೆಪಿ ಮುಖ್ಯಸ್ಥರನ್ನು (BJP State Presidents) ಬದಲಿಸಿದೆ. ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳನ್ನು (BJP Reshuffle) ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. BJP Karnataka: ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ಹಾರಿದ ವೀಕ್ಷಕರು: ತಡವಾಗಲಿದೆ ರಾಜ್ಯ ಅಧ್ಯಕ್ಷರ ಘೋಷಣೆ
ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರನ್ನು ಮತ್ತು ರಾಜ್ಯ ಬಿಜೆಪಿ (BJP Karnataka) ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಕೇಂದ್ರದಿಂದ ಕಳಿಸಲಾಗಿದ್ದ ಮನಸುಖ್ ಮಂಡಾವಿಯಾ ಹಾಗೂ ವಿನೋದ್ ತಾವ್ಡೇ ಅವರ ವೀಕ್ಷಕರ ತಂಡ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅರ್ಧ ದಿನ ಉಳಿದಿದ್ದ ಇಬ್ಬರೂ, ಬಿಜೆಪಿಯ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಅನೇಕ ಶಾಸಕರ ಅಭಿಪ್ರಾಯ ಸಂಗ್ರಹಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Weather Report : ನಾಳೆ ಕರಾವಳಿಯಲ್ಲಿ ಮಳೆ ನರ್ತನ; ದಕ್ಷಿಣ ಒಳನಾಡಲ್ಲಿ ಅಬ್ಬರಿಸಲಿದ್ದಾನೆ ವರುಣ
ರಾಜ್ಯಾದ್ಯಂತ ನೈರುತ್ಯ ಮುಂಗಾರು (Southwest Monsoon) ಚುರುಕು ಪಡೆದುಕೊಂಡಿದ್ದು, ಹಲವೆಡೆ ವ್ಯಾಪಕ (Weather report) ಮಳೆಯಾಗುತ್ತಿದೆ. ಈಗಾಗಲೇ ಕರಾವಳಿಯಲ್ಲಿ ಮಳೆ (Rain News) ಆರ್ಭಟ ಮುಂದುವರಿದಿದ್ದು, ನಾಳೆ (ಜು.5) ಅತಿ ಹೆಚ್ಚು ಮಳೆಯಾಗಲಿದ್ದು, ರೆಡ್ ಅಲರ್ಟ್ (Red alert) ಘೋಷಣೆ ಮಾಡಲಾಗಿದೆ. ಕರಾವಳಿ ಭಾಗವಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮಳೆಯ ಅಬ್ಬರ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಬಿರುಗಾಳಿಯು ಗಂಟೆಗೆ 55- 65 ಕಿ.ಮೀ ವೇಗದಲ್ಲಿ ಬೀಸುವ ವಾತಾವರಣ ಇರಲಿದೆ. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡುವ ಸಂಬಂಧ ಜಿಲ್ಲಾಡಳಿತವು ಯಾವುದೇ ತೀರ್ಮಾನ ಮಾಡಿಲ್ಲ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. SCO Summit: ಶಾಂಘೈ ಒಕ್ಕೂಟದ ಸಭೆಯಲ್ಲಿ ಪ್ರಧಾನಿ ಮೋದಿ ‘ಉಗ್ರ’ ಮಾತು; ಪಾಕ್ ಬಗ್ಗೆ ನೇರ ಕಿಡಿನುಡಿ
ಶಾಂಘೈ ಸಹಕಾರ ಒಕ್ಕೂಟದ (SCO Summit) ಈ ಬಾರಿಯ ಶೃಂಗದ ಆತಿಥ್ಯವನ್ನು ಭಾರತ ವಹಿಸಿದೆ. ಅದರ ಪೂರ್ವಭಾವಿಯಾಗಿ ಈ ಒಕ್ಕೂಟದ ಭಾಗವಾಗಿರುವ ದೇಶಗಳ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಲಾಗುತ್ತಿದೆ. ಈ ಪೂರ್ವಭಾವಿ ಸಭೆಗಳನ್ನು ಭಾರತವೇ ಆಯೋಜಿಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಯವರು ವರ್ಚ್ಯುವಲ್ ಆಗಿ, ಎಸ್ಇಒ ಒಕ್ಕೂಟದ ದೇಶಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Karnataka Budget: ಸರ್ಕಾರ ಮಾಸಿಕ 1.75 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಉಳಿಸಬಹುದು; ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ 4,42,18,955 ಜನರಿದ್ದಾರೆ. ರಾಜ್ಯದ 6.9 ಕೋಟಿ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು 63.5% ಆಗುತ್ತದೆ. ಇದನ್ನು ನಂಬುವುದು ಬಹಳ ಕಷ್ಟ. ಕರ್ನಾಟಕದ ಬಜೆಟ್ ( Karnataka Budget) ಮಂಡನೆಯ ಸಮಯದಲ್ಲಿ ಈ ಕುರಿತು ಚಿಂತನೆ ಮಾಡಬೇಕಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Attack on Indian Consulate: ಸ್ಯಾನ್ ಫ್ರಾನ್ಸಿಸ್ಕೋದ ಇಂಡಿಯನ್ ಕಾನ್ಸುಲೇಟ್ ಕಚೇರಿ ಮೇಲೆ ಖಲಿಸ್ತಾನಿಯರಿಂದ ದಾಳಿ
ಲಂಡನ್‌ನಲ್ಲಿರುವ ಇಂಡಿಯನ್ ಹೈ ಕಮಿಷನ್ ಕಟ್ಟಡದಲ್ಲಿನ ತ್ರಿವರ್ಣ ಧ್ವಜವನ್ನು ಖಲಿಸ್ತಾನಿ ಪರ ಹೋರಾಟಗಾರರು ಕೆಳಗಿಳಿಸಿದ ಬೆನ್ನಲ್ಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಇಂಡಿಯನ್ ಕಾನ್ಸುಲೇಟ್(Indian Consulate) ಮೇಲೆ ದಾಳಿ ನಡೆಸುವ ವಿಡಿಯೋ ವೈರಲ್ ಆಗಿದೆ. ಜತೆಗೆ, ಕಟ್ಟಡದ ಗೋಡೆಯೊಂದರ ಮೇಲೆ ಅಮೃತ್‌ಪಾಲ್ ಬಿಡುಗಡೆ ಮಾಡಿ ಎಂದು ಗೀಚಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ನನ್ನ ದೇಶ ನನ್ನ ದನಿ ಅಂಕಣ: ಸ್ವಾತಂತ್ರ್ಯ ದಿನ ಆಚರಿಸುವ ನೈತಿಕತೆ ಇವರಿಗಿದೆಯೇ?
ಇಂದು ಅಮೆರಿಕನ್ನರ ಸ್ವಾತಂತ್ರ್ಯ ದಿನ (us independence day). ಇಲ್ಲಿನ ಲಕ್ಷಾಂತರ ಮೂಲನಿವಾಸಿಗಳನ್ನು ಕೊಂದುಹಾಕಿ, ಬರ್ಬರವಾಗಿ ನರಹತ್ಯಾಕಾಂಡಗಳನ್ನು ನಡೆಸಿ, ಇನ್ನಿಲ್ಲದಂತೆ ಶೋಷಿಸಿ ರೋಗರುಜಿನಗಳನ್ನು ಹರಡಿ, ಅಲ್ಲಿನ ಎಲ್ಲ ಸಂಸ್ಕೃತಿ – ನಾಗರಿಕತೆಗಳನ್ನು ನಾಶಮಾಡಿದ ಈ ಐರೋಪ್ಯರ ಸಂತತಿಗೆ ಸ್ವಾತಂತ್ರ್ಯ ದಿನ ಆಚರಿಸುವ ನೈತಿಕ ಅರ್ಹತೆ ಇದೆಯೇ? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.