Site icon Vistara News

ವಿಸ್ತಾರ TOP 10 NEWS: ಶಮನವಾಗದ ಬಿಜೆಪಿ ಬಂಡಾಯದಿಂದ, ಉತ್ತರ ಪ್ರದೇಶದಲ್ಲಿ ಗೂಂಡಾ ಪುತ್ರನ ಎನ್‌ಕೌಂಟರ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news bjp rebellion to uttar pradesh gangsters son encounter and more news

#image_title

1. Karnataka Elections : ಬಿಜೆಪಿ ಮತ್ತೊಂದು ವಿಕೆಟ್‌ ಪತನ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪಕ್ಷ, ಶಾಸಕತ್ವಕ್ಕೆ ರಾಜೀನಾಮೆ
ಮೂಡಿಗೆರೆ ಕ್ಷೇತ್ರದ (Karnataka Elections) ಬಿಜೆಪಿ ಟಿಕೆಟ್‌ ವಂಚಿತ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ತಮ್ಮ ಶಾಸಕತ್ವಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ಮಿಸ್‌ ಆಗಿದ್ದು ಅವರ ಜಾಗಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಆಪ್ತರಾದ ದೀಪಕ್‌ ದೊಡ್ಡಯ್ಯ ಅವರಿಗೆ ಟಿಕೆಟ್‌ ಸಿಕ್ಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election 2023: ಕಾಂಗ್ರೆಸ್‌ ಸೇರ್ಪಡೆ ಚರ್ಚೆಗೆ ಸವದಿ ಸಭೆ; ಕೈ ಎತ್ತಿ ಬೆಂಬಲ ಸೂಚಿಸಿದ ಕಾರ್ಯಕರ್ತರು

2. Karnataka Election 2023: ಬಿಜೆಪಿ ಮೂರನೇ ಪಟ್ಟಿಯಲ್ಲೂ ಅಚ್ಚರಿಗಳಿವೆ: ನಳಿನ್‌ ಕುಮಾರ್‌ ಕಟೀಲ್
ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿ ಅಳೆದೂ ತೂಗಿ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಟಿಕೆಟ್‌ ವಂಚಿತರ ಅಸಮಾಧಾನ ಸ್ಫೋಟಗೊಂಡಿದೆ. ಭಿನ್ನಮತ ಶಮನಕ್ಕೆ ಈಗಾಗಲೇ ವರಿಷ್ಠರ ಸಹಿತ ರಾಜ್ಯ ಮುಖಂಡರು ಮುಂದಾಗಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel), “ಮೂರನೇ ಪಟ್ಟಿಯಲ್ಲೂ ಅಚ್ಚರಿಗಳಿವೆ” ಎಂದು ಹೇಳುವ ಮೂಲಕ ಮತ್ತಷ್ಟು ಬದಲಾವಣೆಗಳನ್ನು ನಿರೀಕ್ಷಿಸಿ ಎಂಬ ಸಂದೇಶವನ್ನು ಕೊಟ್ಟಿದ್ದಾರೆ.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. CM Basavaraj Bommai: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಬೊಮ್ಮಾಯಿ ದಂಪತಿ; ಸಿಎಂ ಜತೆ ಕಾಣಿಸಿಕೊಂಡ ರಿಷಬ್‌ ಶೆಟ್ಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಧಾರ್ಮಿಕ ಸ್ಥಳಗಳಿಗೆ ಕುಟುಂಬದವರೊಂದಿಗೆ ಭೇಟಿ ನೀಡುತ್ತಾ ಬರುತ್ತಿದ್ದು, ಈಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ನೀಡಿದ್ದಾರೆ. ಇದೇ ವೇಳೆ ದೇಗುಲಕ್ಕೆ ಖ್ಯಾತ ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಸಹ ಭೇಟಿ ನೀಡಿದ್ದು, ಸಿಎಂ ಜತೆ ಕಾಣಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election 2023: ಹಳೇ ಸೇಡು ತೀರಿಸಲು ಮುಂದಾದ ಸಿದ್ದರಾಮಯ್ಯ; ಚಾಮುಂಡೇಶ್ವರಿಯಲ್ಲಿ ಜಿಟಿಡಿ ಸೋಲಿಸಲು ಬಹಿರಂಗ ಕರೆ
ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ನಮ್ಮ ವೈರಿ ಜೆಡಿಎಸ್, ಬಿಜೆಪಿಯನ್ನು ಕಿತ್ತೆಸಿಯಿರಿ. ರಾಜಕೀಯವಾಗಿ ನನಗೆ ಜನ್ಮ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಹುಟ್ಟೂರು ಸಿದ್ದರಾಮನಹುಂಡಿಯು ವರುಣ ಕ್ಷೇತ್ರಕ್ಕೆ ಬರುತ್ತದೆ. ಆ ಕಾರಣಕ್ಕೆ ನಾನು ವರುಣಾಗೆ ಹೋಗಿದ್ದೆ. ಕಳೆದ ಬಾರಿ ನನಗೆ ಜನ್ಮ ನೀಡಿದ ಸ್ಥಳಕ್ಕೆ ನಿಂತು ರಾಜಕೀಯ ನಿವೃತ್ತಿ ಬಯಸಿದ್ದೆ. ಆದರೆ, ಜನ ನನ್ನನ್ನು ಸೋಲಿಸಿಬಿಟ್ಟರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಹೇಳಿದವರಿಗೆ ಮತ ನೀಡಿ. ನಿಮ್ಮೆಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ಅವರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. JDS Politics : ಹಾಸನ ಜೆಡಿಎಸ್‌ ತಿಕ್ಕಾಟಕ್ಕೆ ರಾಜೀ ಸೂತ್ರ; ಭವಾನಿ ರೇವಣ್ಣಗೆ ಚಾಮರಾಜ ಕ್ಷೇತ್ರದ ಟಿಕೆಟ್‌?
ಜಾತ್ಯತೀತ ಜನತಾದಳದ ಕೌಟುಂಬಿಕ ಸಾಮರಸ್ಯವನ್ನೂ ಕದಡಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿವಾದವನ್ನು ರಾಜಿಯಲ್ಲಿ ಬಗೆಹರಿಸುವ ಸಂಧಾನ ಸೂತ್ರವೊಂದನ್ನು ಹೆಣೆಯಲಾಗಿದೆ ಎಂದು ಹೇಳಲಾಗಿದೆ. ಅದರ ಪ್ರಕಾರ ನಡೆದರೆ ಭವಾನಿ ರೇವಣ್ಣ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗಲಿದೆ. ಆದರೆ, ಅವರು ಈಗ ಬಯಸಿರುವ ಹಾಸನ ಕ್ಷೇತ್ರದಲ್ಲಿ ಅಲ್ಲ. ಬದಲಾಗಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. BJP Karnataka: ಚಪ್ಪಲಿ ಧರಿಸದ ಬರಿಗಾಲ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದ ಬಿಜೆಪಿ: ಬೈಂದೂರಿನಿಂದ ಗುರುರಾಜ್‌ ಶೆಟ್ಟಿ ಗಂಟಿಹೊಳೆ
ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬುದಕ್ಕೆ ಅನುಗುಣವಾಗಿ ಬೈಂದೂರು ವಿಧಾನಸಭೆ ಕ್ಷೇತ್ರಕ್ಕೆ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಕಾಲಿಗೆ ಚಪ್ಪಲಿಯನ್ನೇ ಧರಿಸದ ಹಾಗೂ ಅತ್ಯಂತ ಸರಳ ವ್ಯಕ್ತಿಗೆ ಈ ಅವಕಾಶ ಒಲಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Atiq Ahmed: ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್​​ನ ಪುತ್ರನನ್ನು ಎನ್​ಕೌಂಟರ್​​​ನಲ್ಲಿ ಕೊಂದು ಹಾಕಿದ ಉತ್ತರ ಪ್ರದೇಶ ಪೊಲೀಸ್​
ಬಹುಜನ ಸಮಾಜ ಪಾರ್ಟಿ ಶಾಸಕ ರಾಜುಪಾಲ್ ಹತ್ಯೆ ಮತ್ತು ಆ ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​ನನ್ನು 2006ರಲ್ಲಿ ಅಪಹರಣ ಮಾಡಿದ್ದ ಆರೋಪದಡಿ ಜೈಲುಪಾಲಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಜಕಾರಣಿ/ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್​ನ (Atiq Ahmed) ಪುತ್ರ ಅಸಾದ್​ ಅಹ್ಮದ್​​ನನ್ನು ಇಂದು ಉತ್ತರ ಪ್ರದೇಶ ಪೊಲೀಸರು ಝಾನ್ಸಿ ಬಳಿ ಎನ್​ಕೌಂಟರ್​​ನಲ್ಲಿ ಕೊಂದು ಹಾಕಿದ್ದಾರೆ. ಅವನಿಂದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಅಪ್ಪ ಅತೀಕ್​ ಅಹ್ಮದ್​ ಕಟ್ಟಿಕೊಟ್ಟಿದ್ದ ವ್ಯವಸ್ಥಿತ ಕ್ರಿಮಿನಲ್ ಗೂಡಿನಿಂದ ಹೊರಬಂದು ಪೊಲೀಸರ ಬಲೆಗೆ ಬಿದ್ದು ಜೀವ ಬಿಟ್ಟ ಅಸಾದ್!

8. ಪಂಜಾಬ್​ ಭಟಿಂಡಾ ಸೇನಾ ನೆಲೆಯಲ್ಲಿ ಇನ್ನೊಬ್ಬ ಯೋಧ ಸಾವು; ತನಗೆ ತಾನೇ ಗುಂಡು ಹೊಡೆದುಕೊಂಡ ಕರ್ತವ್ಯ ನಿರತ ಸೈನಿಕ!
|ಪಂಜಾಬ್​ನ ಭಟಿಂಡಾ ಸೇನಾ ನೆಲೆಯಲ್ಲಿ (Bathinda military station) ನಿನ್ನೆಯಷ್ಟೇ ನಾಲ್ವರು ಯೋಧರು ಗುಂಡಿನ ದಾಳಿಗೆ ಬಲಿಯಾಗಿದ್ದರು. ಅದರ ಬೆನ್ನಲ್ಲೇ ಅಲ್ಲಿ ಒಬ್ಬ ಸೈನಿಕ ತನಗೆ ತಾನೇ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾನೆ. ಮೃತ ಸೈನಿಕನ ಹೆಸರು ಲಂಗು ರಾಜ್​ ಶಂಕರ್​ ಎಂದಾಗಿದ್ದು, ಈತ ಮಿಲಿಟರಿ ಸ್ಟೇಶನ್​ ಬಳಿ ಕಾವಲು ಕರ್ತವ್ಯದಲ್ಲಿದ್ದ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Covid 19 Updates: ಇಂದು 10 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​​ಗಳು ದಾಖಲು; ಪಾಸಿಟಿವಿಟಿ ರೇಟ್​ ಶೇ.4ಕ್ಕೆ ಏರಿಕೆ
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 10,158 ಕೊರೊನಾ ಕೇಸ್​​ಗಳು (Covid 19 Updates) ದಾಖಲಾಗಿವೆ. ನಿನ್ನೆ 7830 ಪ್ರಕರಣಗಳು ಪತ್ತೆಯಾಗಿದ್ದವು. ಅದಕ್ಕಿಂತ ಇಂದು ಶೇ.30ರಷ್ಟು ಜಾಸ್ತಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 44,998ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,42,10,127ಕ್ಕೆ ತಲುಪಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Modern Bhageeratha: ರಜೆಯಲ್ಲಿ ಏಕಾಂಗಿಯಾಗಿ 24 ಅಡಿ ಆಳದ ಬಾವಿ ಕೊರೆದ ವಿದ್ಯಾರ್ಥಿ: ಮನೆಗೆ ನೀರು ತಂದ ಆಧುನಿಕ ಭಗೀರಥ!
ಆಟವಾಡಿಕೊಂಡಿರುವ ವಯಸ್ಸಿನ ವಿದ್ಯಾರ್ಥಿಯೊಬ್ಬ ರಜೆಯ ಅವಧಿಯಲ್ಲಿ ತಾನೊಬ್ಬನೇ 24 ಅಡಿ ಆಳದ ಬಾವಿ ತೋಡಿ ಆಧುನಿಕ ಭಗೀರಥನಾಗಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Ambedkar Jayanti: ಸಾಮಾಜಿಕ ಅಸಮತೆಯನ್ನು ಕಾರ್ಲ್‌ ಮಾರ್ಕ್ಸ್‌ಗಿಂತ ವಿಭಿನ್ನವಾಗಿ ನೋಡಿದವರು ಡಾ. ಬಿ.ಆರ್‌. ಅಂಬೇಡ್ಕರ್
  2. Supreme Court: ಮುಸ್ಲಿಮ್ ಸಮುದಾಯದ ಶೇ.4 ಮೀಸಲು ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
  3. Rozgar Mela : ಪ್ರಧಾನಿ ಮೋದಿಯಿಂದ 71,000 ಮಂದಿಗೆ ಉದ್ಯೋಗ ನೇಮಕಾತಿ ಪತ್ರ ವಿತರಣೆ
Exit mobile version