1. Karnataka Election 2023 : ಬಿಜೆಪಿ ಮೂರನೇ ಪಟ್ಟಿ; ಶೆಟ್ಟರ್ ವಿರುದ್ಧ ಮಹೇಶ್ ಟೆಂಗಿನಕಾಯಿ ಕಣಕ್ಕೆ, ಉಳಿದ ಕ್ಷೇತ್ರಗಳಲ್ಲಿ ಯಾರು?
ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections 2023) ಸಂಬಂಧಿಸಿದಂತೆ ಮೂರನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ವಿರುದ್ಧ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Karnataka Elections : ಪಕ್ಷದ್ರೋಹ ಮಾಡಿಲ್ಲ, 10 ಬಾರಿ ಯೋಚಿಸಿ ಕಾಂಗ್ರೆಸ್ ಸೇರಿದ್ದೇನೆ; ಬಿ ಫಾರಂ ಸ್ವೀಕರಿಸಿದ ಜಗದೀಶ್ ಶೆಟ್ಟರ್
ನಾನು ಪಕ್ಷವನ್ನು ಕಟ್ಟಿದ ವ್ಯಕ್ತಿ. ಯಾವತ್ತೂ ಪಕ್ಷ ದ್ರೋಹ ಮಾಡುವವನಲ್ಲ. ಹತ್ತು ಬಾರಿ ಯೋಚನೆ ಮಾಡಿಯೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಸೋಮವಾರವಷ್ಟೇ ಕಾಂಗ್ರೆಸ್ ಸೇರಿದ (Karnataka Elections) ಮಾಜಿ ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಕಾಂಗ್ರೆಸ್ ಸೇರಿದ ಬಳಿಕ ಕೆಪಿಸಿಸಿ ಕಚೇರಿಯಲ್ಲೇ ಧಾರವಾಡ ಸೆಂಟ್ರಲ್ ಕ್ಷೇತ್ರದ ಸ್ಪರ್ಧೆಗಾಗಿ ಅವರು ಬಿ ಫಾರಂನ್ನು ಸ್ವೀಕರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿ ಫಾರಂ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Inside Story: ಶೆಟ್ಟರ್, ಸವದಿಗೆ ಕಾಂಗ್ರೆಸ್ ರೆಡ್ ಕಾರ್ಪೆಟ್; ಲಿಂಗಾಯತರಿಗೆ ಅವಮಾನ ಮಾಡಿದ ಶಾಪ ವಿಮೋಚನೆಯ ಲೆಕ್ಕಾಚಾರ!
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಆಗಮನದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು ಎನ್ನುವುದು ಆ ಪಕ್ಷದ ನಾಯಕರಿಗೆ ಎರಡನೇ ಪ್ರಮುಖ ವಿಚಾರ. ಅದಕ್ಕಿಂತಲೂ ಮುಖ್ಯವಾದ ಅಂಶದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka Election 2023: ಡಿ.ಕೆ.ಶಿವಕುಮಾರ್ ಸೇರಿ ವಿವಿಧ ಕಾಂಗ್ರೆಸ್ ನಾಯಕರಿಂದ ನಾಮಪತ್ರ ಸಲ್ಲಿಕೆ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಕಾವು ಜೋರಾಗಿದೆ. ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಮೂರು ಪಕ್ಷಗಳು ಭರ್ಜರಿ ಮತ ಬೇಟೆ ಆರಂಭಿಸಿವೆ. ಈ ನಡುವೆ ಸೋಮವಾರ ಕಾಂಗ್ರೆಸ್‌ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ. ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದರು. ಯಾರು ಎಲ್ಲಿ ನಾಮಪತ್ರ ಸಲ್ಲಿಸಿದರು ಎಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Election Affidavit: ಪಶು ಸಂಗೋಪನ ಸಚಿವ 6 ಕ್ರೇನ್, 3 ಜೆಸಿಬಿಗಳ ʼಪ್ರಭುʼ: ಔರಾದ್ ಕ್ಷೇತ್ರದಿಂದ ಪ್ರಭು ಚವ್ಹಾಣ್ ಅಭ್ಯರ್ಥಿ
5. Karnataka Election 2023: ಕರ್ನಾಟಕದಲ್ಲಿ ಮೋದಿ-ಯೋಗಿ ಜೋಡಿಯ ಮೋಡಿ; ಮೇ 4ರಂದು ಭರ್ಜರಿ ಪ್ರಚಾರ
ಕರ್ನಾಟಕದಲ್ಲಿ ದಿನೇದಿನೆ ಬೇಸಿಗೆಯ ಬಿಸಿಲಿಗಿಂತ ವಿಧಾನಸಭೆ ಚುನಾವಣೆಯ (Karnataka Election 2023) ಕಾವೇ ಜಾಸ್ತಿಯಾಗುತ್ತಿದೆ. ಟಿಕೆಟ್ ಸಿಕ್ಕವರು ಚುನಾವಣೆಗೆ ತಯಾರಾಗುತ್ತಿದ್ದರೆ, ಟಿಕೆಟ್ ಸಿಗದವರು ಮತ್ತೊಂದು ಪಕ್ಷಕ್ಕೆ ಜಿಗಿದು, ಟಿಕೆಟ್ ಪಡೆಯುತ್ತಿದ್ದಾರೆ. ಚುನಾವಣೆ ಪ್ರಚಾರವು ಇನ್ನಿಲ್ಲದ ಕಾವು ಪಡೆದುಕೊಳ್ಳುತ್ತಿದೆ. ಅದರಲ್ಲೂ, ಆಡಳಿತಾರೂಢ ಬಿಜೆಪಿಯು ಹಲವು ಬದಲಾವಣೆ, ತಂತ್ರಗಾರಿಕೆಯಿಂದ ಜನರ ಮನ ಸೆಳೆಯಲು ಯತ್ನಿಸುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ವಿಧಾನಸಭೆ ಚುನಾವಣೆಯನ್ನು ಮತ್ತಷ್ಟು ರಂಗೇರಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Karnataka Elections : ಮೋದಿಜಿ ಕರ್ನಾಟಕ ಬಿಜೆಪಿ ಸರ್ಕಾರದ 40% ಕಮಿಷನ್ ಬಗ್ಗೆ ಯಾಕೆ ಮೌನ?: ರಾಹುಲ್ ಗಾಂಧಿ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಅವರು ಹೋದಲ್ಲೆಲ್ಲ ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಕರ್ನಾಟಕಕ್ಕೆ ಬಂದಾಗ ಯಾಕೆ ಮೌನವಾಗುತ್ತಾರೆ? ಕರ್ನಾಟಕದಲ್ಲಿ (Karnataka Elections) ಯಾವುದೇ ಕಾಮಗಾರಿ ಮಾಡಬೇಕಾದರೂ ಗುತ್ತಿಗೆದಾರರು 40% ಕಮಿಷನ್ ಕೊಡಲೇಬೇಕಾದ ಪರಿಸ್ಥಿತಿ ಇದೆ ಎಂದು ಗುತ್ತಿಗೆದಾರರ ಸಂಘವೇ ನೇರವಾಗಿ ಪ್ರಧಾನಿಗಳಿಗೆ ಪತ್ರ ಬರೆದರೂ ಯಾಕೆ ಮೋದಿಯವರು ಮೌನವಾಗಿದ್ದಾರೆ?- ಹೀಗೆಂದು ನೇರವಾಗಿ ಪ್ರಶ್ನಿಸಿದರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Guddu Muslim In Karnataka: ಉಮೇಶ್ ಪಾಲ್ ಹತ್ಯೆಕೋರ ಗುಡ್ಡು ಮುಸ್ಲಿಂ ಕರ್ನಾಟಕದಲ್ಲಿ ಪತ್ತೆ, ಎನ್‌ಕೌಂಟರ್ ಭೀತಿ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಹತನಾಗುವ ಕೆಲವೇ ಸೆಕೆಂಡ್‌ಗಳಿಗೂ ಮುನ್ನ ಅತೀಕ್ ಅಹ್ಮದ್‌ನು ಗುಡ್ಡು ಮುಸ್ಲಿಂ (Guddu Muslim In Karnataka) ಬಗ್ಗೆಯೇ ಮಾತನಾಡುತ್ತಿದ್ದ. ಈ ಗುಡ್ಡು ಮುಸ್ಲಿಂ ಈಗ ಕರ್ನಾಟಕದಲ್ಲಿ ಪತ್ತೆಯಾಗಿದ್ದಾನೆ. ಎನ್‌ಕೌಂಟರ್ ಭೀತಿಯಿಂದಾಗಿ ಆತ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಭಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ: ಒಬ್ಬ ಯೋಧನನ್ನು ಬಂಧಿಸಿದ ಪಂಜಾಬ್ ಪೊಲೀಸರು, ಆತ ಗುಂಡು ಹಾರಿಸಿದ್ದೇಕೆ?
ಇತ್ತೀಚೆಗೆ ಭಟಿಂಡಾ ಸೇನಾ ನೆಲೆಯಲ್ಲಿ ನಡೆದ ಗುಂಡಿನ ಕಾಳಗ ಸಂಬಂಧ ಪಂಜಾಬ್ ಪೊಲೀಸರು ಒಬ್ಬ ಸೈನಿಕನನ್ನು ಬಂಧಿಸಿದ್ದಾರೆ. ಈ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರು. ಈ ಯೋಧರು ನಿದ್ರೆ ಮಾಡುತ್ತಿದ್ದಾಗ ಬಂಧಿತ ಸೈನಿಕ ಗುಂಡು ಹಾರಿಸಿದ್ದ. ಬಂಧಿತನನ್ನು ಆರ್ಮಿ ಗನ್ನರ್ ಮೋಹನ್ ದೇಸಾಯಿ ಎಂದು ಗುರುತಿಸಲಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ಸೇನಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Same Sex Marriage: ಸಲಿಂಗ ವಿವಾಹ ನಗರದ ಮೇಲ್ ಸ್ತರದವರ ದೃಷ್ಟಿಕೋನವಷ್ಟೆ! ಅರ್ಜಿಗಳನ್ನು ವಜಾ ಮಾಡಲು ಸುಪ್ರೀಂಗೆ ಕೇಂದ್ರ ಮನವಿ
ಸಲಿಂಗ ವಿವಾಹಕ್ಕೆ (Same Sex Marriage) ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ನ್ಯಾಯಾಲಯಗಳು ಸಲಿಂಗ ವಿವಾಹದ ಹಕ್ಕನ್ನು ಗುರುತಿಸುವ ಮೂಲಕ ಕಾನೂನನ್ನು ಸಂಪೂರ್ಣ ಪುನಃ ಬರೆಯಲು ಸಾಧ್ಯವಿಲ್ಲ. ಏಕೆಂದರೆ ಹೊಸ ಸಾಮಾಜಿಕ ಸಂಸ್ಥೆಯ ರಚನೆ ನ್ಯಾಯಾಂಗ ನಿರ್ಣಯದ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದೆ. ಸಲಿಂಗ ವಿವಾಹ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯ ಅರ್ಹತೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು (Central Governmen) ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿಸಲ್ಲಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral News : ಮನೆಯವರ ಬ್ಯಾಂಕ್ ಖಾತೆಯನ್ನೆಲ್ಲ ಬರಿದು ಮಾಡಿ, ರಸ್ತೆ ಮೇಲೆ 1.6 ಕೋಟಿ ರೂ. ಚೆಲ್ಲಿದ!
ಇತ್ತೀಚೆಗೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ ಹಣದ ಮಳೆ ಸುರಿಸಿದ್ದ ಸುದ್ದಿ ಎಲ್ಲೆಡೆ ಹರಿದಾಡಿ ಭಾರೀ ವೈರಲ್ ಆಗಿತ್ತು. ಇದೀಗ ಅಮೆರಿಕದಲ್ಲಿ ಇಂಥದ್ದೇ ಒಂದು ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ಕುಟುಂಬದವರೊಂದಿಗಿದ್ದ ಜಾಯಿಂಟ್ ಖಾತೆಯಲ್ಲಿದ್ದ ಹಣವನ್ನೆಲ್ಲ ಬರಿದು ಮಾಡಿ, ರಸ್ತೆಯ ಮೇಲೆ ಬರೋಬ್ಬರಿ 1.6 ಕೋಟಿ ರೂ. ಸುರಿದಿರುವ ವಿಚಾರ (Viral News) ಸುದ್ದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸ ಸಂಕಥನಕ್ಕೇ ತಿರುವು ನೀಡಿದ ಐತಿಹಾಸಿಕ ಕೃತಿ ʼಅಜೇಯʼ
- D ಕೋಡ್ ಅಂಕಣ: ರಾಹುಲ್ ಗಾಂಧಿ ವಿರುದ್ಧ ನರೇಂದ್ರ ಮೋದಿ ನಿರಂತರ ವಾಗ್ದಾಳಿ ನಡೆಸಲು ಏನು ಕಾರಣ?
- Agniveer Recruitment: ಅಗ್ನಿವೀರ್ ನೇಮಕಾತಿಯ ಪ್ರವೇಶ ಪರೀಕ್ಷೆಗೆ 2.5 ಲಕ್ಷ ಅಭ್ಯರ್ಥಿಗಳು ಹಾಜರ್
- Rahul Gandhi: ನಂದಿನಿ ಬೆಸ್ಟ್ ಅಂದ್ರು ರಾಹುಲ್; ಕಾಲೆಳೆದರು ಅಣ್ಣಾಮಲೈ, ತೇಜಸ್ವಿ ಸೂರ್ಯ!
- Kerala Train Fire: ರೈಲಿಗೆ ಬೆಂಕಿ ಇಟ್ಟ ಶಾರುಖ್ ಸೈಫಿ ಇಸ್ಲಾಂ ಮೂಲಭೂತವಾದಿ ಜಾಕೀರ್ ನಾಯ್ಕ್‌ನ ಅನುಯಾಯಿ