Site icon Vistara News

ವಿಸ್ತಾರ TOP 10 NEWS | ಕರ್ನಾಟಕದತ್ತ ಮುಖ ಮಾಡಿದ ಬಿಜೆಪಿಯಿಂದ, 150 ಕೋಟಿ ಟ್ವಿಟರ್‌ ಖಾತೆ ಡಿಲೀಟ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news BJP turned focus towards karnataka to elon musc swift action in twitter and more news

ಬೆಂಗಳೂರು: ಗುಜರಾತ್‌ ಗೆಲುವಿನ ನಂತರ ಪ್ರಮುಖ ರಾಜ್ಯವಾದ ಕರ್ನಾಟಕದತ್ತ ಬಿಜೆಪಿ ದೃಷ್ಟಿ ನೆಟ್ಟಿದ್ದು, ಇದೇ ತಿಂಗಳು 15ರಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ಕಾಂಗ್ರೆಸ್‌ನ ಭರವಸೆಯ ನಾಯಕಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೊರಹೊಮ್ಮುವ ಮುನ್ಸೂಚನೆ ನೀಡಿದ್ದಾರೆ, ಮಲ್ಲಿಕಾರ್ಜುನ ಖರ್ಗೆಯವರ ಭರ್ಜರಿ ಸ್ವಾಗತಕ್ಕೆ ಕಲಬುರಗಿ ಸಜ್ಜಾಗಿದೆ, ನಿಷ್ಕ್ರಿಯ ಖಾತೆಗಳನ್ನು ಡಿಲೀಟ್‌ ಮಾಡಲು ಎಲಾನ್‌ ಮಸ್ಕ್‌ ಮುಂದಾಗಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ವಿಸ್ತಾರ Exclusive | ಗುಜರಾತ್‌ ನಂತರ ಕರ್ನಾಟಕದತ್ತ ಮುಖ ಮಾಡಿದ ಬಿಜೆಪಿ; ಡಿ.15 ರಂದು ರಾಜ್ಯಕ್ಕೆ ಜೆ.ಪಿ. ನಡ್ಡಾ ಆಗಮನ; 10 ವರ್ಚುವಲ್‌ ರ‍್ಯಾಲಿ
ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ನಾಟಕದತ್ತ ಗಮನ ಕೇಂದ್ರೀಕರಿಸಿರುವ ರಾಷ್ಟ್ರೀಯ ಬಿಜೆಪಿ ವರಿಷ್ಠರು ಕರ್ನಾಟಕದ ಪ್ರವಾಸ ಆರಂಭಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಡಿಸೆಂಬರ್‌ 15ಕ್ಕೆ ಕರ್ನಾಟಕಕ್ಕೆ ಆಗಮಿಸಿ, ಕೊಪ್ಪಳದಿಂದ ರಾಜ್ಯದ 10 ಕಡೆಗಳಲ್ಲಿ ವರ್ಚುವಲ್‌ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election | ಗುಜರಾತ್‌ನಂತೆ ಕರ್ನಾಟಕದಲ್ಲಿ ಹಿರಿಯರಿಗೆ ಕೊಕ್‌ ಕೊಡುವ ಸುದ್ದಿ ಇದೆ: ಬೈರತಿ ಬಸವರಾಜ್

2. AICC ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತವರಿಗೆ ಮಲ್ಲಿಕಾರ್ಜುನ ಖರ್ಗೆ: ಕಲ್ಯಾಣ ಕ್ರಾಂತಿ ಸಮಾವೇಶದ ಮೂಲಕ ಸ್ವಾಗತ
ಎಐಸಿಸಿ ಅಧ್ಯಕ್ಷರಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಶನಿವಾರ ತವರು ಜಿಲ್ಲೆ ಆಗಮಿಸುತ್ತಿದ್ದು, ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ. ಖರ್ಗೆ ಅವರ ಕರ್ಮ ಭೂಮಿ ಕಲಬುರ್ಗಿಯಲ್ಲಿ ಬೃಹತ್‌ ಸಮಾವೇಶವನ್ನು ಶನಿವಾರ ಆಯೋಜನೆ ಮಾಡಲಾಗಿದ್ದು, ಅದಕ್ಕೆ ಕಲ್ಯಾಣ ಕ್ರಾಂತಿ ಸಮಾವೇಶ ಎಂದು ಹೆಸರಿಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಹೆಣಗಾಡುತ್ತಿದ್ದಾರೆ ಎಂದ ಪರಮೇಶ್ವರ್‌ ಹೇಳಿಕೆ: ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ
ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಡಿ.ಕೆ. ಶಿವಕುಮಾರ್ ಆ ಸ್ಥಾನವನ್ನು ನಿಭಾಯಿಸಲು ಒಮ್ಮೊಮ್ಮೆ ಗಾಬರಿಪಡುತ್ತಾರೆ. ಇಡೀ ರಾಜ್ಯದಲ್ಲಿ ಪಕ್ಷದ ಆಗುಹೋಗುಗಳನ್ನು ನಿಭಾಯಿಸಲು ಡಿ.ಕೆ. ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿ, ಇಡೀ ವಿಚಾರವನ್ನು ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದ ಕಡೆಗೆ ತಿರುಗಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Priyanka Gandhi | ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಹೊಸ ‘ಎಲೆಕ್ಷನ್ ಸ್ಟಾರ್’ ಪ್ರಿಯಾಂಕಾ ಗಾಂಧಿ!
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲ ಪ್ರದೇಶ ಚುನಾವಣೆಯ ಗೆಲುವು ಆ ಪಕ್ಷದ ಉತ್ಸಾಹವನ್ನು ಹೆಚ್ಚಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಹಲವು ಎಲೆಕ್ಷನ್ ಸೋತಿದ್ದ ಕಾಂಗ್ರೆಸ್‌ಗೆ ಈಗ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಹೊಸ ಆಶಾ ಕಿರಣವಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಗೆಲುವಿನಲ್ಲಿ ಪ್ರಿಯಾಂಕಾ ಅವರ ಪಾತ್ರ ಹಿರಿದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. NCPCR Order | ಮದರಸಾಗಳಲ್ಲಿ ಮುಸ್ಲಿಮೇತರರಿಗೂ ಶಿಕ್ಷಣ, ಎಲ್ಲ ರಾಜ್ಯದಲ್ಲಿ ತನಿಖೆಗೆ ಆದೇಶಿಸಿದ ಎನ್‌ಸಿಪಿಸಿಆರ್
ದೇಶಾದ್ಯಂತ ಸರ್ಕಾರಿ ಅನುದಾನಿತ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳ ಪ್ರವೇಶದ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್)‌ (NCPCR Order) ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Anjanadri Hill | ಧರ್ಮ ಸಹಿಷ್ಣುತೆಗೆ ಸಾಕ್ಷಿಯಾದ ಅಂಜನಾದ್ರಿ; ಮುಸ್ಲಿಂ ಕುಟುಂಬದಿಂದ ಹನುಮನಿಗೆ ವಿಶೇಷ ಪೂಜೆ
ರಾಮನ ಬಂಟ ಹನುಮ ಜನಿಸಿದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ (Anjanadri Hill) ಶುಕ್ರವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಮಧ್ಯೆ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇದೇ ವೇಳೆ ಮುಸ್ಲಿಂ ಕುಟುಂಬವೊಂದು ಹನುಮನ ದರ್ಶನಕ್ಕೆ ಬಂದಿದ್ದು ವಿಶೇಷವಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Aamir Khan | ಮಾಜಿ ಪತ್ನಿ ಕಿರಣ್ ರಾವ್ ಜತೆ ಹಿಂದು ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್‌: ಏನಿದರ ವಿಶೇಷತೆ?
ಬಾಲಿವುಡ್‌ ನಟ ಆಮೀರ್‌ ಖಾನ್‌ (Aamir Khan ) ಈ ಹಿಂದೆ ಅಷ್ಟೇ ನಟನೆಯಿಂದ ದೂರ ಇರುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆಮೀರ್‌ ಖಾನ್‌ ತಮ್ಮ ಪ್ರೊಡಕ್ಷನ್ಸ್ ಹೌಸ್ ಆಫೀಸ್‌ನಲ್ಲಿ ಕಳಶ ಪೂಜೆ ಮಾಡಿದ್ದಾರೆ. ಹಿಂದು ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇನ್ನೂ ವಿಶೇಷ ಎಂದರೆ ಮಾಜಿ ಪತ್ನಿ ಕಿರಣ್ ರಾವ್ ಅವರು ಆಮೀರ್‌ ಅವರಿಗೆ ಸಾಥ್ ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Twitter Accounts Delete | 150 ಕೋಟಿ ಟ್ವಿಟರ್‌ ಖಾತೆ ರದ್ದುಗೊಳಿಸಲು ಮಸ್ಕ್‌ ತೀರ್ಮಾನ, ಏನಿದಕ್ಕೆ ಕಾರಣ?
ಟ್ವಿಟರ್‌ ಖರೀದಿಸಿದ ಬಳಿಕ ಎಲಾನ್‌ ಮಸ್ಕ್‌ ಕೈಗೊಂಡ ಹತ್ತಾರು ಕ್ರಮಗಳು ಸುದ್ದಿಯಾಗಿವೆ. ಇದರ ಬೆನ್ನಲ್ಲೇ ಎಲಾನ್‌ ಮಸ್ಕ್‌ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದಾರೆ. ಟ್ವಿಟರ್‌ ಖಾತೆ ತೆರೆದು, ಸಕ್ರಿಯರಾಗಿರದ ಸುಮಾರು ೧೫೦ ಕೋಟಿ ಖಾತೆಗಳನ್ನು ಡಿಲೀಟ್‌ (Twitter Accounts Delete) ಮಾಡಲು ತೀರ್ಮಾನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Anirudh Jatkar | ನಿರ್ಮಾಪಕರ ಸಂಘದ ಸದಸ್ಯರು ಗೈರು: ʻಬ್ಯಾನ್‌ ಮಾಡುವಂತಹ ಕೆಲಸ ಏನು ಮಾಡಿದ್ದೇನೆ ನಾನು: ಅನಿರುದ್ಧ
ಕಿರುತೆರೆ ನಿರ್ಮಾಪಕರ ಸಂಘವು ಯಾವುದೇ ಕಾರಣಕ್ಕೂ ಅನಿರುದ್ಧ ಅವರ ಮಾತನ್ನು ಒಪ್ಪುತ್ತಿಲ್ಲ. ಎರಡು ವರ್ಷಗಳ ಕಾಲ ಯಾವುದೇ ನಿರ್ಮಾಪಕರು ಅನಿರುದ್ಧ ಅವರಿಗೆ ಅವಕಾಶ ಕೊಡುವುದು ಬೇಡ ಎಂದು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯುತ್ತಿಲ್ಲ. ಹಾಗಾಗಿ ಅನಿರುದ್ಧ ವಾಣಿಜ್ಯ ಮಂಡಳಿಯ ಕದ ತಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮಕ್ಕಳ ಕಥೆ | ರಾಮಣ್ಣನ ಸಂದೂಕ
ಗೆಳೆಯ ರಾಮಣ್ಣ ತನ್ನಲ್ಲಿ ಇಟ್ಟು ಹೋದ ಕಬ್ಬಿಣದ ಪೆಟ್ಟಿಗೆಯನ್ನು ಇಲಿ ತಿಂದಿತು ಎಂದ ರಂಗಣ್ಣ. ರಾಮಣ್ಣ ಇದನ್ನು ನಂಬಿದನೇ? ಮುಂದೇನಾಯಿತು? ಓದಿ, ಈ ಮಕ್ಕಳ ಕಥೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version