Site icon Vistara News

ವಿಸ್ತಾರ TOP 10 NEWS | ಉಭಯ ರಾಜ್ಯ ಸದನದಲ್ಲೂ ಗಡಿ ಗದ್ದಲದಿಂದ ರಕ್ಕಸ ಶಿಕ್ಷಕ ಬಂಧನದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news border dispute discussion in maharashtra and karnataka and more news

ಬೆಂಗಳೂರು: ಮಹಾರಾಷ್ಟ್ರ ಹಾಗೂ ಕರ್ನಾಟಕ ವಿಧಾನಸಭೆಗಳಲ್ಲಿ ಗಡಿ ಸಮಸ್ಯೆ ಕುರಿತು ಚರ್ಚೆಗಳು ತೀವ್ರವಾಗಿ ನಡೆದಿವೆ. ಎನ್‌ಪಿಎಸ್‌ ರದ್ದುಪಡಿಸಲು ಪ್ರತಿಭಟನೆ ಜೋರಾಗಿದೆ, ವಿವಿಧ ಸಮುದಾಯಗಳು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟಿಸಿವೆ, ವಿದ್ಯಾರ್ಥಿಯನ್ನು ಕೊಂದ ರಕ್ಕಸ ಶಿಕ್ಷಕ ಬಂಧನವಾಗಿದ್ದಾನೆ, ಚೀನಾದಲ್ಲಿ ಕೊರೊನಾ ಮಿತಿಮೀರಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಕರ್ನಾಟಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ಗದ್ದಲ
1️⃣ ಬೆಳಗಾವಿ ಅಧಿವೇಶನ | ಮಹಾರಾಷ್ಟ್ರದವರು ಒಳ್ಳೆಯ ಜನ ಅಲ್ಲ ಎಂದ ಸಿದ್ದರಾಮಯ್ಯ: ರಾಜ್ಯದ ಹಿತ ಕಾಪಾಡಲು ನಿರ್ಣಯಕ್ಕೆ ಸಮ್ಮತಿ
ಇದ್ದಕ್ಕಿದ್ದಂತೆ ಗಡಿ ವಿವಾದವನ್ನು ಕೆದಕಿರುವ ಮಹಾರಾಷ್ಟ್ರದ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದು, ಸರ್ವ ಪಕ್ಷಗಳೂ ಒಗ್ಗಟ್ಟಿನಿಂದ ಈ ವಿಚಾರವನ್ನು ವಿರೋಧಿಸುವ ಕುರಿತು ಒಮ್ಮತ ಮೂಡಿದೆ. ಈ ಕುರಿತು ನಿರ್ಣಯವನ್ನು ಅಂಗೀಕರಿಸಲು ನಿರ್ಧರಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
2️⃣ Border Dispute | ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು!
ಗಡಿ ಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರವು ದೌರ್ಜನ್ಯ ನಡೆಸುತ್ತಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿ ಪಕ್ಷಗಳು ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದವು. ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಎನ್‌ಸಿಪಿಯ ಶಾಸಕ ಜಯಂತ್ ಪಾಟೀಲ್ ಅವರು, ಮರಾಠಿಗರನ್ನು ಭೇಟಿಯಾಗಲು ಹೋದ ನನ್ನ ಸಹೋದ್ಯೋಗಿ ಶಾಸಕ ಹಸನ್ ಮುಶ್ರಿಫ್ ಮೇಲೆ ಲಾಠಿ ಬೀಸಲಾಗಿದೆ ಎಂದು ಆಪಾದಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಬೆಳಗಾವಿ ಅಧಿವೇಶನ | ತೂಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಕಬ್ಬು ಸಾಗಣೆ ಮತ್ತು ತೂಕದಲ್ಲಿ ವ್ಯತ್ಯಾಸ ಇದೆ ಎನ್ನುವ ದೂರು ಆಧರಿಸಿ ಕಬ್ಬಿನ ತೂಕದ ಬಗ್ಗೆ ದೂರು ನೀಡಿದ ತರುವಾಯ ಮೊದಲನೆಯದಾಗಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಅಂಕಿ-ಅಂಶಗಳನ್ನು ಪಡೆಯಲಾಗಿದೆ. ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಲಿದೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಂಗಳವಾರ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಬೆಳಗಾವಿ ಅಧಿವೇಶನ | ಮರಾಠಾ ಮೀಸಲಾತಿಗಾಗಿ ಹೋರಾಟ: ಸರ್ಕಾರಕ್ಕೆ ಡಿ.30ರ ಗಡುವು ನೀಡಿದ ಹೋರಾಟಗಾರರು
ಬೆಳಗಾವಿಯ ಸುವರ್ಣ ಸೌಧದಲ್ಲಿ ಒಂದು ಕಡೆ ಅಧಿವೇಶನ (ಬೆಳಗಾವಿ ಅಧಿವೇಶನ) ನಡೆಯುತ್ತಿದ್ದರೆ, ಇನ್ನೊಂದು ಕಡೆ ಮೀಸಲಾತಿ ಹೋರಾಟದ ಕಿಚ್ಚೂ ಜೋರಾಗಿದೆ. ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ 2ಎ ಮೀಸಲಾತಿಗಾಗಿ ಸುವರ್ಣ ಸೌಧದ ಎದುರು ಕೊಂಡಸಕೊಪ್ಪದಲ್ಲಿ ಮರಾಠರು ಧರಣಿ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. NPS News | ಒಪಿಎಸ್‌ ಜಾರಿ ಕುರಿತು ಸದನದಲ್ಲಿ ಚರ್ಚೆ; ಹೋರಾಟ ನಿಲ್ಲದು ಎಂದ ಎನ್‌ಪಿಎಸ್‌ ನೌಕರರ ಸಂಘ
ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಿರುವ ಕುರಿತು ಸದನದಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಯಬೇಕಾಗಿದೆ. ಆ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ (NPS News) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Millet Lunch | ಬಿಜೆಪಿಯನ್ನು ನಾಯಿ, ಇಲಿ ಎಂದು ಟೀಕಿಸಿದ್ದ ಖರ್ಗೆ ಜತೆ ಪ್ರಧಾನಿ ಮೋದಿ ಸಿರಿಧಾನ್ಯ ಲಂಚ್!
ಬಿಜೆಪಿಯನ್ನು ನಾಯಿ ಹಾಗೂ ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಇಲಿ ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳವಾರ ಸಂಸತ್ತಿನಲ್ಲಿ ಆಯೋಜಿಸಲಾಗಿದ್ದ ಸಿರಿಧಾನ್ಯ (Millet Lunch) ಭೋಜನಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಇತರ ಸಂಸದರು ಹಾಜರಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Viral Video | ಚೀನಾದಲ್ಲಿ ಮತ್ತೆ ಮಿತಿಮೀರಿದ ಕೊರೊನಾ; ಆಸ್ಪತ್ರೆಗಳಲ್ಲಿ ಬೆಡ್​​ ಕೊರತೆ, ಶವಸಂಸ್ಕಾರ ಅವಿರತ
ಕೊರೊನಾ ವೈರಸ್​ ತವರು ಚೀನಾದಲ್ಲೀಗ ಆ ಸೋಂಕಿನದ್ದೆ ಸುದ್ದಿ. ಚೀನಾದಲ್ಲಿ ಕೊವಿಡ್​ ಸೋಂಕಿತರ ಸಂಖ್ಯೆ ವಿಪರೀತ ಆಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್​​ಗಳ ಕೊರತೆಯುಂಟಾಗುತ್ತಿದೆ. ಆಸ್ಪತ್ರೆಗಳಲ್ಲಿ ಕೊವಿಡ್​ 19 ರೋಗಿಗಳ ದಟ್ಟಣೆ ಇರುವ, ಮೃತದೇಹಗಳನ್ನು ಮಂಚದ ಮೇಲೆ ಮಲಗಿಸಿಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮಂಗಳೂರು ಸ್ಫೋಟ | 15 ಕುಕ್ಕರ್‌ ಬಾಂಬ್‌ಗೆ ರೆಡಿ ಮಾಡಿದ್ದ ಶಾರಿಕ್‌: ಮಾಜ್‌, ಯಾಸಿನ್‌ ಕೂಡಾ ಸದ್ಯವೇ ಎನ್‌ಎಐ ಕಸ್ಟಡಿಗೆ
ನವೆಂಬರ್‌ ೧೯ರಂದು ಸಂಜೆ ೪.೧೯ಕ್ಕೆ ಮಂಗಳೂರಿನ ನಾಗುರಿ ಬಳಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದ (ಮಂಗಳೂರು ಸ್ಫೋಟ) ಆರೋಪಿ, ಶಂಕಿತ ಉಗ್ರ ಮೊಹಮ್ಮದ್‌ ಶಾರಿಕ್‌ನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಇದರ ನಡುವೆಯೇ ಆತನ ವಿಚಾರಣೆಗೂ ಎನ್‌ಐಎ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Karnataka Election | ನನಗೂ, ರಮೇಶ್‌ ಜಾರಕಿಹೊಳಿಗೂ ಮಂತ್ರಿ ಪದವಿ ಕೊಡಲೇಬೇಕು: ಈಶ್ವರಪ್ಪ ಪಟ್ಟು
ನನಗೆ ಸಚಿವನಾಗಬೇಕೆಂದೇನೂ ಆಸೆ ಇಲ್ಲ. ಆದರೆ, ಆಪಾದನೆ ಬಂದಾಗ ರಾಜೀನಾಮೆ ನೀಡಿದ್ದೆ. ಈಗ ಆರೋಪ ಮುಕ್ತನಾಗಿದ್ದೇನೆ. ಕ್ಲೀನ್‌ ಚಿಟ್‌ ಸಿಕ್ಕರೆ ಪುನಃ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಹೀಗಾಗಿ ನಾನು ಸಚಿವ ಸ್ಥಾನ ಕೊಡಲೇಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Student murder | ವಿದ್ಯಾರ್ಥಿಯನ್ನು ಕೊಂದ ರಕ್ಕಸ ಶಿಕ್ಷಕ ಅರೆಸ್ಟ್‌: ಬಾಲಕನ ತಾಯಿ ಮೇಲಿನ ರೋಷವೇ ಕೊಲೆಗೆ ಕಾರಣ
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಗಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಭರತ್‌ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿನಿಯನ್ನು ಹೊಡೆದೇ ಕೊಂದು ಹಾಕಿದ ಕ್ರೂರಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿಯಾಗಿರುವ, ಹುಡುಗನ ತಾಯಿ ಗೀತಾ ಬಾರಕೇರಿ ಮೇಲಿನ ಸಿಟ್ಟೇ ಈ ಕೊಲೆಗೆ ಕಾರಣ ಎಂದು ಬಯಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಎಲೆಕ್ಷನ್‌ ಹವಾ | ಹರಿಹರ | ಜೆಡಿಎಸ್‌ ಅಭ್ಯರ್ಥಿ ಘೋಷಣೆಯಾಗಿದೆ, ಕಾಂಗ್ರೆಸ್‌-ಬಿಜೆಪಿಯಲ್ಲಿ ಪೈಪೋಟಿಯಿದೆ
ಜೆಡಿಎಸ್‌ ಭದ್ರಕೋಟೆ ಎನ್ನಲಾಗುವ ಹರಿಹರ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೆ ಜೆಡಿಎಸ್‌ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಅನೇಕ ಆಕಾಂಕ್ಷಿಗಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. DK Shivakumar| ಡಿಕೆಶಿ ಮನೆಯಲ್ಲೇ ಐಟಿ, ಇ.ಡಿ, ಸಿಬಿಐ ಕಚೇರಿ ತೆಗೆದುಬಿಡಿ: ರಣದೀಪ್‌ ಸುರ್ಜೇವಾಲಾ ಲೇವಡಿ
  2. ವಿಸ್ತಾರ Money Guide | ಮ್ಯೂಚುಯಲ್‌ ಫಂಡ್‌ ಹೂಡಿಕೆ ಹೇಗೆ? ಎಷ್ಟು ಹೂಡಿಕೆ ಮಾಡಬಹುದು?
  3. Viral News | ರೊಮೇನಿಯಾದ ಹೊಸ ಯೋಜನೆ: ಇಪ್ಪತ್ತು ಬಸ್ಕಿ ತೆಗೆದರೆ ಉಚಿತ ಬಸ್‌ ಟಿಕೆಟ್‌!
  4. ಶೋಪಿಯಾನ್​ನಲ್ಲಿ ಮುಂಜಾನೆಯೇ ಉಗ್ರರ ವಿರುದ್ಧ ಕಾರ್ಯಾಚರಣೆ; ಮೂವರು ಭಯೋತ್ಪಾದಕರ ಹತ್ಯೆ
  5. ನನ್ನ ದೇಶ ನನ್ನ ದನಿ ಅಂಕಣ | ದೆಹಲಿ ಬ್ರಿಟಿಷರ ರಾಜಧಾನಿ ಆದುದಾದರೂ ಹೇಗೆ?
  6. ಲೈಫ್‌ ಸರ್ಕಲ್‌ ಅಂಕಣ | ಕರ್ಮ ಮತ್ತು ಪುನರ್ಜನ್ಮದ ಸಂಬಂಧವೇನು?
  7. ದಶಮುಖ ಅಂಕಣ | ಮರೆಯಲಿ ಹ್ಯಾಂಗ- ಅಂದಿನ ಆ ಸೊಬಗ?
Exit mobile version