Site icon Vistara News

ವಿಸ್ತಾರ TOP 10 NEWS | ಕರ್ನಾಟಕಕ್ಕೆ ಪವಾರ್‌ ವಾರ್ನಿಂಗ್‌ನಿಂದ ರಾಜ್ಯದತ್ತ ಮುಖಮಾಡಿದ BJPವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-border dispute intensified between karnataka and maharashtra and more news of the day

ಬೆಂಗಳೂರು: ಬೆಳಗಾವಿ ಅಧಿವೇಶನ ಹತ್ತಿರವಾದಂತೆ ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ್ದು, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಕರ್ನಾಟಕಕ್ಕೆ ವಾರ್ನಿಂಗ್‌ ನೀಡುವ ಮಟ್ಟಕ್ಕೆ ಹೋಗಿದೆ. ಕರವೇ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ, ಗುಜರಾತ್‌ ನಂತರ ಬಿಜೆಪಿ ವರಿಷ್ಠರು ಕರ್ನಾಟಕದತ್ತ ದೃಷ್ಟಿ ನೆಟ್ಟಿದ್ದಾರೆ, ಬುಧವಾರ ರೆಪೊ ದರ ಹೆಚ್ಚಳ ಸಾಧ್ಯತೆಯಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Border Dispute | ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಕರ್ನಾಟಕಕ್ಕೆ ಶರದ್ ಪವಾರ್ ವಾರ್ನಿಂಗ್
ಬೆಳಗಾವಿ ಗಡಿ ವಿವಾದಕ್ಕೆ (Border Dispute) ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಘರ್ಷ ಉಲ್ಬಣಗೊಂಡಿದ್ದು, ಎನ್‌ಸಿಪಿ ನಾಯಕ ಶರದ್ ಪವಾರ್ (Sharad Pawar) ಅವರು, ”ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ,” ಎಂದು ಕರ್ನಾಟಕಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Border dispute |‌ ಗಡಿ ವಿವಾದವನ್ನು ಅನಗತ್ಯವಾಗಿ ಉದ್ರೇಕಿಸಿದರೆ ಅಪಾಯ: ಫಡ್ನವಿಸ್‌ಗೆ ಬುದ್ಧಿವಾದ ಹೇಳಿದ ಬೊಮ್ಮಾಯಿ

2. Border dispute | ಕರವೇ ನಾರಾಯಣ ಗೌಡ ಬಂಧನ: ಬೆಳಗಾವಿ ಪ್ರವೇಶ ತಡೆಗೆ ರೊಚ್ಚಿಗೆದ್ದ ಕಾರ್ಯಕರ್ತರು, ಮಹಾರಾಷ್ಟ್ರದ ಲಾರಿಗಳ ಮೇಲೆ ದಾಳಿ
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರ ಬೆಳಗಾವಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ತೀವ್ರ ಪ್ರತಿಭಟನೆಗೆ ಇಳಿದ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಗುಜರಾತ್‌ ನಂತರ ಕರ್ನಾಟಕದತ್ತ ಮುಖ ಮಾಡಿದ ಬಿಜೆಪಿ ವರಿಷ್ಠರು: ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಡಿ.18ರವರೆಗೂ ಜೀವಂತ
ಗುಜರಾತ್‌-ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳುತ್ತಿರುವುದು ಪಕ್ಷದ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ. ಡಿಸೆಂಬರ್‌ 8ಕ್ಕೆ ಫಲಿತಾಂಶಗಳು ಹೊರಬೀಳಲಿದ್ದು, ಅದಕ್ಕೂ ಮುನ್ನವೇ ಕರ್ನಾಟಕವೂ ಸೇರಿ ಭವಿಷ್ಯದ ಚುನಾವಣೆಗಳತ್ತ ಬಿಜೆಪಿ ವರಿಷ್ಠರು ದೃಷ್ಟಿ ನೆಟ್ಟಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

4. BJP ಕೈ ಸುಡಲಿದೆ 40%; SCST ಮೀಸಲಾತಿಯಿಂದ ಲಾಭವಿಲ್ಲ: ಲಂಡನ್‌ ವಿವಿ ರಾಜಕೀಯ ವಿಶ್ಲೇಷಕ ಜೇಮ್ಸ್‌ ಮೇನರ್‌ ಅಭಿಮತ
ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 40% ಭ್ರಷ್ಟಾಚಾರ ಆರೋಪದಿಂದ ಸಾಕಷ್ಟು ತೊಂದರೆ ಆಗಲಿದೆ ಎಂದು ಲಂಡನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಜೇಮ್ಸ್‌ ಮೇನರ್‌ ಅಭಿಪ್ರಾಯಪಟ್ಟಿದ್ದಾರೆ. ಹಾಗೂ, ಇತ್ತೀಚೆಗೆ ಬಿಜೆಪಿ ಸರ್ಕಾರ ನಡೆಸಿರುವ ಎಸ್‌ಸಿಎಸ್‌ಟಿ ಮೀಸಲಾತಿಯೂ ಅಷ್ಟೇನೂ ಪ್ರಯೋಜನಕ್ಕೆ ಬಾರದು ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Gharwapsi politics | ಕಾಂಗ್ರೆಸ್‌ನಲ್ಲಿ ಶುರುವಾಯ್ತು ಘರ್‌ ವಾಪ್ಸಿ ಆಂದೋಲನ: ಖರ್ಗೆ ಭೇಟಿಯಾದ ಎಚ್‌. ವಿಶ್ವನಾಥ್‌
ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಪರ್ವ ಆರಂಭಗೊಂಡಿದೆ. ಅದರ ಜತೆಗೆ ಹಲವು ನಾಯಕರು ಕಾಂಗ್ರೆಸ್‌ಗೆ ಘರ್‌ ವಾಪ್ಸಿ (Gharwapsi politics) ಮಾಡುವ ಉತ್ಸಾಹದಲ್ಲಿದ್ದಾರೆ. ಈಗ ಬಿಜೆಪಿಯಲ್ಲಿರುವ ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕರ ತಂಡವೊಂದು ಪಕ್ಷಕ್ಕೆ ಮರಳಲು ತುದಿಗಾಲಿನಲ್ಲಿ ನಿಂತಿದ್ದು, ಎಚ್‌. ವಿಶ್ವನಾಥ್‌ ವಹಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Datta jayanti | ಅನಸೂಯಾ ಯಾತ್ರೆಗೆ ಅದ್ಧೂರಿ ಚಾಲನೆ; ದತ್ತಪೀಠದತ್ತ ದತ್ತಾತ್ರೇಯನ ಭಕ್ತರು
ಬಾಬಾ ಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಡಿಸೆಂಬರ್‌ ೬ರಿಂದ ೮ರವರೆಗೆ ನಡೆಯಲಿರುವ ದತ್ತ ಜಯಂತಿ (Datta jayanti) ಅಂಗವಾಗಿ ಮಂಗಳವಾರ (ಡಿ.೬) ವಿವಿಧ ಕಾರ್ಯಕ್ರಮಗಳಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ʼದಲಿತ ವಿರೋಧಿ ಕಾಂಗ್ರೆಸ್‌ʼ: ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದಂದು ದಾಳಿ ನಡೆಸಿದ ಬಿಜೆಪಿ
ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದಂದು ಕಾಂಗ್ರೆಸ್‌ ನಾಯಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರೆ ಇತ್ತ ಕಾಂಗ್ರೆಸ್‌ ವಿರುದ್ಧವೇ ಬಿಜೆಪಿ ದಾಳಿ ನಡೆಸಿದೆ. ದಲಿತ ವಿರೋಧಿ ಕಾಂಗ್ರೆಸ್‌ ಎಂದು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಬರಹವನ್ನು ರಾಜ್ಯ ಬಿಜೆಪಿ ಪ್ರಕಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Murder case | ಮಗನ ದುಶ್ಚಟಕ್ಕೆ ಬೇಸತ್ತು ನಾನೇ ಅವನ ಕೊಲ್ಲಲು ಸುಪಾರಿ ಕೊಟ್ಟೆ; ತಪ್ಪೊಪ್ಪಿಕೊಂಡ ಉದ್ಯಮಿ ಭರತ್
ಸುಪಾರಿ ಕೊಟ್ಟು ಪುತ್ರನನ್ನೇ ಕೊಲ್ಲಿಸಿರುವ ಹುಬ್ಬಳ್ಳಿ ಉದ್ಯಮಿ ಭರತ್‌ ಜೈನ್‌ ಅದಕ್ಕೆ ಒಂದು ವರ್ಷದ ಹಿಂದೆಯೇ ಪ್ಲ್ಯಾನ್‌ ಮಾಡಿದ್ದ ಎಂಬ ಆಘಾತಕಾರಿ ಅಂಶ ತನಿಖೆ ವೇಳೆ ಗೊತ್ತಾಗಿದೆ. ಮಗನ ದುಶ್ಚಟವೇ ಕೊಲೆಗೆ ಮುಖ್ಯ ಕಾರಣ ಎಂದು ಆರೋಪಿ ತಂದೆ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Interest rate | ಆರ್‌ಬಿಐ ನೀತಿ ಸಭೆ ನಾಳೆ ಮುಕ್ತಾಯ, 0.25-30% ಬಡ್ಡಿ ದರ ಏರಿಕೆ?
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (RBI) ಹಣಕಾಸು ನೀತಿ ಸಮಿತಿಯ ಸಭೆ ಬುಧವಾರ ಮುಕ್ತಾಯವಾಗಲಿದ್ದು, (ಡಿ.7) ಬಡ್ಡಿ ದರ ಏರಿಕೆಯ (Interest rate) ಸಾಧ್ಯತೆ ಇದೆ. ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ಕಳೆದ ಜೂನ್‌ ಬಳಿಕ ಮೂರು ಸಲ ಬಡ್ಡಿ ದರವನ್ನು ಏರಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮೊರ್ಬಿ ಸೇತುವೆ ಕುಸಿತ, ಪ್ರಧಾನಿ ಮೋದಿ ವಿಚಾರದಲ್ಲಿ ಫೇಕ್​ ಟ್ವೀಟ್​; ಟಿಎಂಸಿ ವಕ್ತಾರ ಸಾಕೇತ್​ ಗೋಖಲೆಯನ್ನು ಬಂಧಿಸಿದ ಗುಜರಾತ್ ಪೊಲೀಸ್​
ಮೊರ್ಬಿ ಸೇತುವೆ ಕುಸಿತವಾದಾಗ ಎರಡು ದಿನ ಬಿಟ್ಟು ಪ್ರಧಾನಿ ಮೋದಿಗೆ ಅಲ್ಲಿ ಭೇಟಿ ಕೊಟ್ಟಿದ್ದರು. ಆದರೆ ಪ್ರಧಾನಿ ಮೋದಿ ಮೊರ್ಬಿ ಭೇಟಿಯಾದ ಸಂದರ್ಭದಲ್ಲಿ ಖರ್ಚಾದ ಹಣದ ಬಗ್ಗೆ ತಪ್ಪು ಮಾಹಿತಿಯುಳ್ಳ ಟ್ವೀಟ್ ಮಾಡಿದ ಆರೋಪದಡಿ ತೃಣಮೂಲ ಕಾಂಗ್ರೆಸ್​ ನಾಯಕ, ವಕ್ತಾರ ಸಾಕೇತ್​ ಗೋಖಲೆಯವರನ್ನು ಗುಜರಾತ್​​ನ ಸೈಬರ್​ ಘಟಕದ ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Karnataka Elections | ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಗುಂಪುಗಾರಿಕೆಗೆ ಡಿಕೆಶಿ ಗರಂ, 4 ಅಂಶಗಳ ಎಚ್ಚರಿಕೆ ಸಂದೇಶ ರವಾನೆ
  2. Rahul Gandhi | ಬಿಜೆಪಿ ಕಾರ್ಯಕರ್ತರತ್ತ ಕೈ ಬೀಸಿ, ಗಾಳಿಯಲ್ಲಿ ಮುತ್ತು ತೇಲಿಬಿಟ್ಟ ರಾಹುಲ್ ಗಾಂಧಿ!
Exit mobile version