Site icon Vistara News

ವಿಸ್ತಾರ TOP 10 NEWS: ವಿಧಾನಸಭೆಗೆ ಯಡಿಯೂರಪ್ಪ ವಿದಾಯದಿಂದ, ಕಾಂಗ್ರೆಸ್‌ನಿಂದ ಮೂರನೇ ‘ಗ್ಯಾರಂಟಿ’ ಘೋಷಣೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-BS Yediyurappa bids aideu to assembly to congress announces third guarantee and more news

#image_title

1. B.S. Yediyurappa: ನನ್ನ ಏಳಿಗೆಗೆ ಆರ್‌ಎಸ್‌ಎಸ್‌ ತರಬೇತಿಯೇ ಕಾರಣ: ವಿದಾಯ ಭಾಷಣದಲ್ಲಿ ಅನೇಕರನ್ನು ನೆನೆದು ಭಾವುಕರಾದ ಬಿ.ಎಸ್‌. ಯಡಿಯೂರಪ್ಪ
ಸತತವಾಗಿ ತಮ್ಮನ್ನು ವಿಧಾನಸಭೆಗೆ ಆಯ್ಕೆ ಮಾಡಿದ ಶಿಕಾರಿಪುರ ಜನತೆಗೆ ಅಭಿನಂದನೆ ಸಲ್ಲಿಸಿದ ಬಿ.ಎಸ್.‌ ಯಡಿಯೂರಪ್ಪ, ಈ ಸಮಯದಲ್ಲಿ ಏನು ಮಾತನಾಡಬೇಕು ಏನು ಮಾತನಾಡಬಾರದು ಎಂದು ತಿಳಿಯುತ್ತಿಲ್ಲ ಎಂದು ಭಾವುಕರಾದರು. 15ನೇ ವಿಧಾನಸಭೆಯ ಕಡೆಯ ದಿನವೂ ಆದ ಶುಕ್ರವಾರ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ತಮ್ಮ ವಿದಾಯದ ಭಾಷಣವನ್ನು ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: B.S. Yediyurappa: ಯೋಜನೆಗಳ ಮೂಲಕ ಜನಮಾನಸದಲ್ಲಿ ಬಿ.ಎಸ್‌. ಯಡಿಯೂರಪ್ಪ ಅಜರಾಮರ: ಎಸ್‌.ಎಂ. ಕೃಷ್ಣ ಪತ್ರ

2. Congress Guarantee: ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ಫ್ರೀ: ಕಾಂಗ್ರೆಸ್‌ನಿಂದ ಮೂರನೇ ಗ್ಯಾರಂಟಿ ʼಅನ್ನ ಭಾಗ್ಯʼ ಘೋಷಣೆ
ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ಎರಡು ಘೋಷಣೆಗಳನ್ನು ಮಾಡಿ ರಾಜಕೀಯ ಚರ್ಚೆಗೆ ಕಾರಣವಾಗಿರುವ ಕಾಂಗ್ರೆಸ್‌ ಇದೀಗ ಮೂರನೇ ಘೋಷಣೆ ಮಾಡಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಹೊಸ ಗ್ಯಾರಂಟಿಯನ್ನು ( Congress Guarantee) ಕಾಂಗ್ರೆಸ್‌ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Siddaramaiah: ಸದನದಲ್ಲಿ ನಾಲಿಲ್ಲದಿರುವಾಗ ಸಿಎಂ ಆರೋಪ ಮಾಡಿದ್ದಾರೆ: ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ
ನಾನು ಸದನದಲ್ಲಿ ಇಲ್ಲದಿರುವಾಗ ವೀರಾವೇಶದಿಂದ ಕೂಗಾಡಿದ್ದು ನೋಡಿದರೆ ಏನೋ ದೊಡ್ಡ ಹಗರಣ ನಡೆದಿದೆ, ಎಕರೆಗೆ 10 ಕೋಟಿ ಯಂತೆ 8000 ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುವ ರೀತಿಯಲ್ಲಿ ಜನರ ಮುಂದೆ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಬಜೆಟ್‌ ಮೇಲಿನ ಉತ್ತರದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ ಆರೋಪಗಳ ಕುರಿತು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Congress Plenary Session: ಸಿಡಬ್ಲ್ಯೂಸಿಗೆ ಎಲೆಕ್ಷನ್ ಇಲ್ಲ, ಸದಸ್ಯರ ನೇಮಕಕ್ಕೆ ಖರ್ಗೆ ಅಧಿಕಾರ ನೀಡಿದ ಕಾಂಗ್ರೆಸ್
ಕಾಂಗ್ರೆಸ್‌ನ ಉನ್ನತ ನಿರ್ಧಾರ ಕೈಗೊಳ್ಳುವ ಸಮಿತಿಯ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದಿಲ್ಲ. ಬದಲಿಗೆ ಮಲ್ಲಿಕಾರ್ಜುನ ಖರ್ಗೆ ಅವರು ನಾಮನಿರ್ದೇಶನ ಮಾಡಲಿದ್ದಾರೆಂದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ(Congress Plenary Session). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Labour Law: ಕೆಲಸದ ಅವಧಿ ವಿಸ್ತರಣೆಗೆ ಬಿಜೆಪಿ ಸದಸ್ಯರಿಂದಲೇ ವಿರೋಧ: ನಡುವೆಯೇ ಅಂಗೀಕಾರ
ದಿನಕ್ಕೆ 12ಗಂಟೆವರೆಗೆ ಕೆಲಸದ ಅವಧಿ ವಿಸ್ತರಣೆ ಮಾಡಲು ಅವಕಾಶವಿರುವ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ – 2023ಕ್ಕೆ (Labour Law) ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರೇ ವಿರೋಧ ವ್ಯಕ್ತಪಡಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Express Way: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್‌: ಸಂಸದ ಪ್ರತಾಪ್‌ ಸಿಂಹ ಸುದ್ದಿಗೋಷ್ಠಿ
ಬೆಂಗಳೂರು ಹಾಗೂ ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು (Express Way) ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 11 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಪ್ರಧಾನಿ ಮೋದಿಯನ್ನು ಅವಹೇಳನ ಮಾಡಿದ್ದಕ್ಕೆ ಬೇಷರತ್ ಕ್ಷಮೆಯಾಚಿಸಿದ ಕಾಂಗ್ರೆಸ್​ ನಾಯಕ ಪವನ್ ಖೇರಾ; ಅಸ್ಸಾಂ ಸಿಎಂ ಟ್ವೀಟ್​
ಸುದ್ದಿಗೋಷ್ಠಿಯಲ್ಲಿ ಗೌತಮ್​ ಅದಾನಿ ಷೇರು ಕುಸಿತದ ವಿಚಾರ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿಯವರನ್ನು ‘ನರೇಂದ್ರ ಗೌತಮದಾಸ್​ ಮೋದಿ’ ಎಂದು ಹೇಳಿದ್ದ ಕಾಂಗ್ರೆಸ್​ ಮುಖಂಡ, ವಕ್ತಾರ ಪವನ್ ಖೇರಾ (Pawan Khera) ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಬಳಿಕ ಸುಪ್ರೀಂಕೋರ್ಟ್​ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Narayana Murthy : ಭಾರತಕ್ಕೆ ಪ್ರಾಮಾಣಿಕತೆಯ ಸಂಸ್ಕೃತಿ ಬೇಕು, ಮೂನ್‌ಲೈಟಿಂಗ್‌ ವಿರುದ್ಧ ಮೂರ್ತಿ ಎಚ್ಚರಿಕೆ
ಇನ್ಫೋಸಿಸ್‌ ಸ್ಥಾಪಕ ನಾರಾಯಣಮೂರ್ತಿ ಮೂನ್‌ಲೈಟಿಂಗ್‌ ವಿರುದ್ಧ ಎಚ್ಚರಿಕೆ ನೀಡಿದ್ದು, ಭಾರತಕ್ಕೆ ಪ್ರಾಮಾಣಿಕತೆಯ ಸಂಸ್ಕೃತಿ ಬೇಕು. ಯಾವುದೇ ಪಕ್ಷಪಾತ ಇರಕೂಡದು. ಯುವಜನತೆ ಮೂನ್‌ಲೈಟಿಂಗ್‌ ಅಥವಾ ವರ್ಕ್‌ ಫ್ರಮ್‌ ಹೋಮ್‌ ಬೇಕೇಬೇಕು ಎಂದು ಒತ್ತಾಯ ಮಾಡಬಾರದು. ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಆಲಸ್ಯ ಬಿಡಬೇಕು ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಭಾರತೀಯ ಸಮಾಜದಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್
ಭಾರತೀಯ ಸಮಾಜದಲ್ಲಿ ಲಿವ್ ಇನ್ ರಿಲೇಷನ್‌ಶಿಪ್ (Live-in Relationship) ಸ್ವೀಕಾರವಲ್ಲ. ಸಂಬಂಧ ಮುರಿದ ಬಳಿಕ ಮಹಿಳೆಯು ಒಬ್ಬಂಟಿಯಾಗಿ ವಾಸಿಸುವುದು ಕಷ್ಟವಾಗುತ್ತದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸುಳ್ಳು ಮದುವೆ ಭರವಸೆ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ಕೋರ್ಟ್ ಈ ಅಭಿಪ್ರಾಯವನ್ನು ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಜೈಲು ಅಧಿಕಾರಿಗಳಿಗೆ ಹೆದರಿ ಮೊಬೈಲ್​ ನುಂಗಿದ್ದ ಕೈದಿಗೆ ನೋವಿಂದ ಮುಕ್ತಿ ಕೊಟ್ಟ ವೈದ್ಯರು; ಹೊಟ್ಟೆಯಿಂದ ಹೊರಬಂತು ಫೋನ್​
ಬಿಹಾರದ ಗೋಪಾಲ್​ಗಂಜ್​ ಕಾರಾಗೃಹದಲ್ಲಿ, ಜೈಲು ಅಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್​ ನುಂಗಿದ್ದ ಕೈದಿಗೆ ಅಂತೂ ವೈದ್ಯರು ನೋವಿನಿಂದ ಮುಕ್ತಿ ಕೊಟ್ಟಿದ್ದಾರೆ. ಆತನ ಹೊಟ್ಟೆಯಲ್ಲಿ ಇದ್ದಿದ್ದ ಮೊಬೈಲ್​​ನ್ನು ಹೊರಗೆ ತೆಗೆದಿದ್ದಾರೆ. ಗೋಪಾಲ್​ ಗಂಜ್​ ಕಾರಾಗೃಹದಲ್ಲಿ ಇದ್ದ ಕೈದಿ ಖಾಸಿರ್​ ಅಲಿ ಕದ್ದು ಮೊಬೈಲ್ ಬಳಕೆ ಮಾಡುತ್ತಿದ್ದ. ಶನಿವಾರ ಕಾರಾಗೃಹ ಅಧಿಕಾರಿಗಳು ತಪಾಸಣೆಗೆ ಬರುವ ವಿಚಾರ ತಿಳಿದು, ತಾನು ಸಿಕ್ಕಿಬೀಳುತ್ತೇನೆ ಎಂದು ಹೆದರಿ ಅದನ್ನು ನುಂಗಿದ್ದ. ಮರುದಿನ ಭಾನುವಾರ ಖಾಸಿರ್​ಗೆ ಸಿಕ್ಕಾಪಟೆ ಹೊಟ್ಟೆನೋವು ಬಂದಿತ್ತು. ಆತ ಮೊಬೈಲ್​ ನುಂಗಿದ್ದಾನೆಂದು ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಅವನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್‌ ಮಾಡಿ.

Exit mobile version