ಬೆಂಗಳೂರು: ವಿವಿಧ ವಿಚಾರಗಳಿಗೆ ಕೋಪಗೊಂಡಿದ್ದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೋಪ ಶಮನವಾದಂತಿದೆ, ವಿಪರೀತ ಹೇಳಿಕೆಗಳಿಗೆ ಯಾವ ಪಕ್ಷದಲ್ಲೂ ಬೆಂಬಲ ಸಿಗುತ್ತಿಲ್ಲ, ಕುಷ್ಟಗಿಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಜಪಿಸಿದೆ, ಚೀನಾ ಯುದ್ಧ ಸನ್ನದ್ಧವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಪಠಾಣ್ ಸಿನಿಮಾ ಹಾಡಿನ ವಿವಾದ ಕುರಿತು ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದಾರ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಬಿ.ಎಸ್. ಯಡಿಯೂರಪ್ಪ ಮುನಿಸನ್ನು ತಣ್ಣಗಾಗಿಸಿದ ಸಿಎಂ ಬೊಮ್ಮಾಯಿ; ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ BSY
ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮುನಿಸು ಉಂಟಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲೇ, ವಿವಾದವನ್ನು ತಣ್ಣಗಾಗಿಸಲು ಬೊಮ್ಮಾಯಿ ಮುಂದಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಮೇಲುಕೋಟೆ ಕ್ಷೇತ್ರದ ಪಾಂಡವಪುರದಲ್ಲಿ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಯಡಿಯೂರಪ್ಪ ಅವರ ಮನೆಗೇ ಹೋಗಿ ಕರೆದುಕೊಂಡು ಹೋಗಿದ್ದಾರೆ ಸಿಎಂ ಬೊಮ್ಮಾಯಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಆಗ ಸತೀಶ್ ಜಾರಕಿಹೊಳಿ, ಪ್ರತಾಪ್ ಸಿಂಹ; ಈಗ ಡಿ.ಕೆ. ಶಿವಕುಮಾರ್: ವಿಪರೀತ ಹೇಳಿಕೆಗಳಿಗೆ ಎಲ್ಲಿಯೂ ಬಲವಿಲ್ಲ
ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರಬಹುದು ಎಂದು ತಿಳಿದಿರುವ ಅನೇಕ ನಾಯಕರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಉದಾಹರಣೆಗಳು ಪಾಠವಾಗುವಂತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಡಿಕೆಶಿ-ಸಿದ್ದು ಒಗ್ಗಟ್ಟಿನ ಮಂತ್ರ: ಕುಷ್ಟಗಿಯಿಂದ ಸ್ಪರ್ಧೆಯಿಲ್ಲ ಎಂದು ಘೋಷಿಸಿದ ಸಿದ್ದರಾಮಯ್ಯ
ಜಿಲ್ಲೆಯ ಕುಷ್ಟಗಿಯಲ್ಲಿ ಕಾಂಗ್ರೆಸ್ ನಾಯಕರು ರಣಕಹಳೆ ಮೊಳಗಿಸಿದ್ದಾರೆ. ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ 69ನೇ ಹುಟ್ಟು ಹಬ್ಬದ ಕಾರ್ಯಕ್ರಮದ ನೆಪದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮುಂದಿನ ಚುನಾವಣೆಯ ರಣಕಹಳೆ ಮೊಳಗಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Modi Putin Discuss | ಪುಟಿನ್ ಜತೆ ಮೋದಿ ಮಾತುಕತೆ, ಉಕ್ರೇನ್ ಮೇಲೆ ದಾಳಿ, ಜಿ-20 ಸಭೆ, ಭದ್ರತೆ ಸೇರಿ ಪ್ರಮುಖ ವಿಷಯ ಚರ್ಚೆ
ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ಕ್ಷಿಪಣಿ, ಬಾಂಬ್ ದಾಳಿಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Modi Putin Discuss) ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ, ದ್ವಿಪಕ್ಷೀಯ ಒಪ್ಪಂದ, ಭದ್ರತೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. India retaliates to Pak | ಪ್ರಧಾನಿ ಮೋದಿ ಕಟುಕ ಎಂದ ಭುಟ್ಟೋಗೆ 1971 ನರಮೇಧ ನೆನಪಿಸಿ, ತಿರುಗೇಟು ನೀಡಿದ ಭಾರತ!
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುಕ ಎಂದು ವೈಯಕ್ತಿಕ ದಾಳಿ ನಡೆಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರಿಗೆ ಭಾರತವು ತಿರುಗೇಟು ನೀಡಿದ್ದು, ”1971ರಲ್ಲಿ ಬಂಗಾಳಿಗಳು ಮತ್ತು ಹಿಂದೂಗಳ ವಿರುದ್ಧ ಪಾಕಿಸ್ತಾನದ ಆಡಳಿತಗಾರರ ನಡೆಸಿದ ನರಮೇಧವನ್ನು ಮರೆತಿರುವಂತೆ ಕಾಣುತ್ತಿದೆ,” ಎಂದು ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. New Year 2023 | ಹೊಸ ವರ್ಷಾಚರಣೆಗೆ ರಾಜಧಾನಿ ರೆಡಿ; ಪ್ರೇಮಿಗಳು, ಪತಿ-ಪತ್ನಿ ಡ್ಯಾನ್ಸ್‌ಗೆ ಸ್ಪೆಷಲ್ ಫ್ಲೋರ್, ರಕ್ಷಣೆಗೆ ಲೇಡಿ ಬೌನ್ಸರ್ಸ್!
ಪಾರ್ಟಿ, ಸೆಲೆಬ್ರೆಷನ್ ಎಂದರೆ ರಾಜಧಾನಿ ಬೆಂಗಳೂರಿಗರು ಯಾವಾಗಲೂ ಒಂದು ಹೆಜ್ಜೆ ಮುಂದು. ಆದರೆ ಈ ಸೆಲೆಬ್ರೆಷನ್ ಮೂಡ್‌ನ್ನು ಕೊರೊನಾ ಸೋಂಕು ಕಸಿದುಕೊಂಡಿತ್ತು. ಇದೀಗ ಕೊವಿಡ್ ನಿಧಾನವಾಗಿ ಸರಿದಿದ್ದು, ಜನರು ಹೊಸ ವರ್ಷವನ್ನು (New Year 2023) ಗತಗಾಲದಂತೆ ಬರಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಹಾಗಾದರೆ ಈ ಬಾರಿ ಏನೆಲ್ಲ ವಿಶೇಷತೆಗಳಿವೆ ಎಂಬುದರ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Rahul Gandhi | ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದೆ, ಸರ್ಕಾರ ಮಲಗಿದೆ, ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ರಾಹುಲ್ ಗಾಂಧಿ ಟೀಕೆ
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಡಿಸೆಂಬರ್ 9ರಂದು ಸಂಘರ್ಷ ನಡೆದಿದೆ. ಭಾರತದ ಯೋಧರು ಚೀನಾ ಸೈನಿಕರಿಗೆ ಪೆಟ್ಟು ನೀಡಿದರೂ ಗಡಿಯಲ್ಲಿ ಕಮ್ಯುನಿಸ್ಟ್ ರಾಷ್ಟ್ರದ ಕುತಂತ್ರಗಳು ನಡೆಯುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿರುವ ಮಧ್ಯೆಯೇ, “ಚೀನಾ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಮಂಗಳೂರು ಸ್ಫೋಟ | ಕೊಚ್ಚಿಯ ಲಾಡ್ಜ್‌ಗಳಿಗೆ ಬಾಂಬ್ ಐಟಂ ತರಿಸಿದ್ದ ಶಾರೀಕ್!
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣನಾದ ಶಾರೀಕ್, ಈ ಬಾಂಬ್ ತಯಾರಿಸಲೆಂದೇ ಕೇರಳ ಕೊಚ್ಚಿಯಲ್ಲಿ ಲಾಡ್ಜ್ ರೂಮು ಬುಕ್ ಮಾಡಿ ಅಲ್ಲಿಗೆ ಬಾಂಬ್ ತಯಾರಿ ಐಟಂಗಳನ್ನು ತರಿಸಿದ್ದ ಎಂಬುದು ಪತ್ತೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಎಲೆಕ್ಷನ್ ಹವಾ | ಯಲಬುರ್ಗಾ | ರಾಯಲ್ ವರ್ಸಸ್ ಸಾವ್ಕಾರ್ ಸಮರದಲ್ಲಿ ಮೂರನೆಯವರ ಪ್ರವೇಶ ಆಗುವುದೇ?
ಐದು ಬಾರಿ ಗೆಲುವು ಸಾಧಿಸಿ ಕಳೆದ ಚುನಾವಣೆಯಲ್ಲಿ ಸೋತ ಯಲಬುರ್ಗಾ ಕ್ಷೇತ್ರವನ್ನು ಮತ್ತೆ ಪಡೆಯಲು ಬಸವರಾಜ ರಾಯರಡ್ಡಿ ಪ್ರಯತ್ನಿಸುತ್ತಿದ್ದರೆ ಇತ್ತ ಮೂರು ಖಾತೆಗಳನ್ನು ನಿರ್ವಹಿಸಿ ಪ್ರಭಾವಿ ಸಚಿವರಾಗಿರುವ ಹಾಲಪ್ಪ ಆಚಾರ್ ಸಹ ಎರಡನೇ ಗೆಲುವು ದಾಖಲಿಸಲು ತಯಾರಿ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Shahrukh khan | ಪಠಾಣ್ ಕೇಸರಿ ವಿವಾದ: ಮೊದಲ ಬಾರಿಗೆ ಶಾರುಖ್ ಪ್ರತಿಕ್ರಿಯೆ!
ಶಾರುಖ್ ಖಾನ್ ಗುರುವಾರ ಸಂಜೆ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 (KIFF)ದಲ್ಲಿ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನ ವಿವಾದ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ವಿವಾದದ ಕುರಿತು ಮಾತನಾಡಿರುವ ಶಾರುಖ್ ಖಾನ್ (Shahrukh khan), ‘ʻನಾವು ಸಿನಿಮಾವನ್ನು ಸಿನಿಮಾದಂತೆ ನೋಡಬೇಕುʼ’ ಎಂದು ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- ಪಾದಯಾತ್ರೆ ಮಧ್ಯೆ ಮೇವು ಕತ್ತರಿಸಿದ ರಾಹುಲ್ ಗಾಂಧಿ: 100 ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ
- Hippo Swallows Kid | ಹಸಿವು ತಾಳದೆ 2 ವರ್ಷದ ಬಾಲಕನ ನುಂಗಿದ ನೀರಾನೆ, ಆದರೂ ಬಾಲಕ ಬದುಕುಳಿದಿದ್ದೇಗೆ?
- Sensex fall | ಸೆನ್ಸೆಕ್ಸ್ 400 ಅಂಕ ಕುಸಿತ, ಐಟಿ ಷೇರುಗಳಿಗೆ ಭಾರಿ ನಷ್ಟವೇಕೆ?
- Moral policing | ಬಸ್‌ನಲ್ಲಿ ಹೋಗುತ್ತಿದ್ದ ಹಿಂದು-ಮುಸ್ಲಿಂ ವಕೀಲ ಜೋಡಿಗೆ ತಡೆ: ಕಾರ್ಯಕರ್ತರ ಬೆವರಿಳಿಸಿದ ಯುವತಿ
- ಗೋ ಸಂಪತ್ತು | ಬೆರಣಿ; ಇದು ಚಿನ್ನದ ಗಣಿ!