Site icon Vistara News

ವಿಸ್ತಾರ TOP 10 NEWS : ಮಧ್ಯಮ ವರ್ಗದ ಮನಗೆಲ್ಲಲು ʼನಿರ್ಮಲಾಮೃತʼ ಬಜೆಟ್‌ ಮಂಡನೆ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

vistara top 10 news budget 2023 targetted on middle class and more news of the day

#image_title

1. Union Budget 2023 ವಿಸ್ತಾರ ಸಮಗ್ರ : ಆರ್ಥಿಕ ಶಿಸ್ತಿಗಾಗಿ ರಕ್ಷಣಾತ್ಮಕ ಆಟ, ಆದಾಯ ತೆರಿಗೆಯ ಜೂಟಾಟ
ಎಲ್ಲರೂ ನಿರೀಕ್ಷೆ ಮಾಡಿದಂತೆ ದೊಡ್ಡ ಮಟ್ಟದ ಜನಪ್ರಿಯ ಘೋಷಣೆಗಳಿಲ್ಲ. ಆದರೆ, ಜನಪರವಾದ ಹಲವು ಕಾರ್ಯಕ್ರಮಗಳಿವೆ. ಆರ್ಥಿಕ ಶಿಸ್ತನ್ನು ಉಳಿಸಿಕೊಂಡೇ ಅಭಿವೃದ್ಧಿಯ ದಾರಿಯಲ್ಲಿ ಸಾಗುವ ಪ್ರಯತ್ನವಿದೆ. ಮಧ್ಯಮ ವರ್ಗ ಯಾವತ್ತೂ ಕಾತರದ ಕಾಯುವ ಆದಾಯ ತೆರಿಗೆ ಪರಿಷ್ಕರಣೆಯ ಕನಸು ನಿಜವಾಗಿದೆಯಾದರೂ ಹಲವು ಗೊಂದಲಗಳ ಗೂಡಾಗಿದೆ. ಹೀಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಮಂಡಿಸಿದ ೨೦೨೩-೨೪ನೇ ಸಾಲಿನ ಕೇಂದ್ರ ಬಜೆಟ್‌ (Union Budget 2023)ಹಣ ಸಂಗ್ರಹ ಮತ್ತು ಖರ್ಚಿನ ಬ್ಯಾಲೆನ್ಸ್‌ ಮಾಡುವಲ್ಲಿ ಶಕ್ತವಾಗಿದೆ. ಆದರೆ, ಒಂದು ಬಜೆಟ್‌ ಸೃಷ್ಟಿಸಬಹುದಾದ ಕ್ರೇಜ್‌, ಚರ್ಚೆ ಹುಟ್ಟುಹಾಕುವಲ್ಲಿ ಹಿಂದೆಬಿದ್ದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Union Budget 2023: ಮಧ್ಯಮ ವರ್ಗಕ್ಕೆ ಬಂಪರ್‌, ವಾರ್ಷಿಕ 7 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ
ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ, ತೆರಿಗೆದಾರರಿಗೆ ಬಂಪರ್‌ ಅನುಕೂಲವನ್ನು ಘೋಷಿಸಿದ್ದು, (Union Budget 2023) ವಾರ್ಷಿಕ 7 ಲಕ್ಷ ರೂ. ತನಕ ಆದಾಯಕ್ಕೆ ತೆರಿಗೆಯನ್ನು ಪಾವತಿಸಬೇಕಿಲ್ಲ. ಏಕೆಂದರೆ ಈ ಹಿಂದಿನ 5 ಲಕ್ಷ ರೂ. ತನಕದ ರಿಬೇಟ್‌ ಅನ್ನು 7 ಲಕ್ಷ ರೂ.ಗೆ ಏರಿಸಲಾಗಿದೆ. ಇದು ಹೊಸ ತೆರಿಗೆ ಪದ್ಧತಿಗೆ ಅನ್ವಯವಾಗುತ್ತದೆ. ‌ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Union budget 2023 : ತೆರಿಗೆ ಶ್ರೇಣಿ ಬದಲಾವಣೆಯಿಂದ ಏನು ವ್ಯತ್ಯಾಸ? ಯಾರಿಗೆ ಲಾಭ? ಯಾರಿಗೆ ನಷ್ಟ?

3. Union budget 2023 : ಕರ್ನಾಟಕಕ್ಕೆ ಕೊಡುಗೆ; ಭದ್ರಾ ಮೇಲ್ದಂಡೆ ಯೋಜನೆಗೆ 5200 ಕೋಟಿ ರೂ.
ಮಧ್ಯ ಕರ್ನಾಟಕದ ಕೃಷಿಗೆ ವರದಾನವಾಗಲಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ೫೨೦೦ ಕೋಟಿ ರೂ. ಪ್ರಕಟಿಸಲಾಗಿದೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಹಂತದಲ್ಲಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Budget 2023 : ಮೋದಿ ಸರ್ಕಾರ ಅನುದಾನ ಘೋಷಿಸಿದ ಭದ್ರಾ ಮೇಲ್ದಂಡೆ ಯೋಜನೆ ಏನು? ಅದರಿಂದ ಯಾರಿಗೆ ಲಾಭ? ಇಲ್ಲಿದೆ ಸಂಪೂರ್ಣ ವಿವರ

4. Union budget 2023 : ದೇಶವನ್ನು ಮುನ್ನಡೆಸಲಿರುವ ಸಪ್ತರ್ಷಿಗಳು: ನಿರ್ಮಲಾ ಸೀತಾರಾಮನ್‌ ಹೇಳಿದ ಋಷಿಗಳ ಕಥೆ ಏನು?
ದೇಶದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸಪ್ತರ್ಷಿಗಳು ನಮ್ಮನ್ನು ಮಾರ್ಗದರ್ಶಕರಾಗಿ ಮುನ್ನಡೆಸಲಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಜೈಮಿನಿಯ ಬ್ರಾಹ್ಮಣದ ಪ್ರಕಾರ ಅಗಸ್ತ್ಯ, ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ವಸಿಷ್ಠ, ವಿಶ್ವಾಮಿತ್ರರು ಸಪ್ತರ್ಷಿಗಳಾಗಿದ್ದು, ಅವರ ಮಾರ್ಗದರ್ಶನದ ಆಧಾರದಲ್ಲಿ ದೇಶದ ಆರ್ಥಿಕ ಬೆಳವಣಿಗೆ ನಡೆಯಲಿದೆ ಎಂದು ಸಚಿವೆ ತಿಳಿಸಿದರು. ೨೦೨೩-೨೪ನೇ ಸಾಲಿನ ಕೇಂದ್ರ ಬಜೆಟ್‌ನ್ನು (Union budget 2023) ಏಳು ಅಂಶಗಳನ್ನು ಆಧರಿಸಿ ತಯಾರಿಸಲಾಗಿದೆ ಎನ್ನುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಪ್ತರ್ಷಿಯ ವಿವರಣೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Union Budget 2023 : ಸಹಜ ಕೃಷಿಯತ್ತ ಒಲವು, ಸಿರಿಧಾನ್ಯಕ್ಕೆ ಪ್ರೋತ್ಸಾಹ
ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ರೋಗ ಮುಕ್ತ ಮತ್ತು ಗುಣಮಟ್ಟದ ಗಿಡಗಳನ್ನು ಒದಗಿಸಲು ಕೇಂದ್ರ ಸರ್ಕಾರವು “ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್‌ʼʼ ಎಂಬ ಹೊಸ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ (Union Budget 2023) ಪ್ರಕಟಿಸಿದೆ. ಇದಕ್ಕಾಗಿ 2,200 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ. ಈ ಯೋಜನೆಯ ಮೂಲಕ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ದೇಶೀಯ ತಳಿಯ ಗಿಡಗಳನ್ನು ರೈತರಿಗೆ ಒದಗಿಸಲಾಗುತ್ತದೆ. ಈ ಯೋಜನೆಯ ಕುರಿತು ಮುಂದೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Union Budget 2023: ಯಾವುದು ತುಟ್ಟಿ, ಯಾವುದು ಅಗ್ಗ?
ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ನಲ್ಲಿ ಹಲವು ಸೆಸ್‌ಗಳ ಪ್ರಸ್ತಾವ ಮಾಡಿದ್ದಾರೆ. ಹಲವು ತೆರಿಗೆಗಳನ್ನು ಸಡಲಿಸಿದ್ದಾರೆ. ಕೆಲವು ಕಡೆ ಆಮದು ಸುಂಕ ಏರಿಸಲಾಗಿದೆ. ಹೀಗಾಗಿ ಕೆಲವು ವಸ್ತುಗಳು ಅಗ್ಗವಾಗಲಿದ್ದು, ಇನ್ನು ಕೆಲವು ತುಟ್ಟಿಯಾಗಲಿವೆ. ಕ್ಯಾಮೆರಾ, ಲೆನ್ಸ್‌, ಮೊಬೈಲ್‌ ಫೋನ್‌ಗಳು, ಫೋನ್‌ ಚಾರ್ಜರ್‌, ಟಿವಿ ಪ್ಯಾನೆಲ್‌ಗಳ ಬಿಡಿಭಾಗಗಳು, ಈಥೈಲ್‌ ಆಲ್ಕೋಹಾಲ್‌, ಸಿಗಡಿ ಉತ್ಪನ್ನ, ವಜ್ರ ತಯಾರಿಕೆಯಲ್ಲಿ ಬಳಸುವ ವಸ್ತುಗಳು, ಇಂಗು, ಕೋಕೋ ಬೀಜಗಳು ಅಗ್ಗವಾಗುತ್ತಿವೆ. ಇವುಗಳ ಮೇಲಿನ ಸೆಸ್‌ ಅಥವಾ ಆಮದು ಸುಂಕವನ್ನು ನಿರ್ಮಲಾ ಇಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Union Budget 2023: ಗುಜರಿ ವಾಹನವೂ ಬೇಡ, ಗುಜರಿ ರಾಜಕೀಯವೂ ಬೇಡ! ನಿರ್ಮಲಾ ಆಣಿಮುತ್ತು!
2023ರ ಬಜೆಟ್‌ ಮಂಡನೆ ಸಂದರ್ಭದಲ್ಲಿ ಹಳೆಯ ವಾಹನಗಳ ಗುಜರಿ ನೀತಿಯ ಕುರಿತು ಪ್ರಸ್ತಾಪ ಮಾಡುತ್ತಿದ್ದಾಗ ಬಾಯಿ ತಪ್ಪಿ ಆಡಿದ ಒಂದು ಪದ, ರಸಪ್ರಸಂಗಕ್ಕೆ ಕಾರಣವಾಯಿತು. ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಹಾಗೂ ಫಿಟ್ ಆಗಿರದ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರ ಸರಕಾರದ ಗುಜರಿ ನೀತಿ-2022ಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ʼold pollutant’ ಎನ್ನಬೇಕಿದ್ದ ಅವರು ಬಾಯ್ತಪ್ಪಿನಿಂದ ʼold political’ ಎಂದುಬಿಟ್ಟರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Budget 2023 : ಕೇಂದ್ರ ಸರ್ಕಾರದ ಬಜೆಟ್ ʼಸೀಡ್‌‌ಲೆಸ್ ಕಡಲೆಕಾಯಿʼ ಇದ್ದಂತಿದೆ!: ಕಾಂಗ್ರೆಸ್‌ ಟೀಕೆ
ಕೇಂದ್ರ ಸರಕಾರದ ಬಜೆಟ್ “ಸೀಡ್‌‌ಲೆಸ್ ಕಡಲೆಕಾಯಿ” ಇದ್ದಂತಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ’20 ಲಕ್ಷ ಕೋಟಿ ಪ್ಯಾಕೇಜ್’ ಎಂಬ ಬಿಳಿಕಾಗೆ ತೋರಿಸಿದಂತೆಯೇ ಈ ಬಜೆಟ್ ಕೂಡ! ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವಸಮುದಾಯಕ್ಕೆ ಯಾವುದೇ ಭರವಸೆ ಇಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ. ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿ ಮಾಡಿದೆ ಕೇಂದ್ರ ಸರ್ಕಾರ ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. High court furious : ಬೇಕಾಬಿಟ್ಟಿ ಖರ್ಚು ಮಾಡಲು ದುಡ್ಡಿದೆ, ಮಕ್ಕಳ ಸಮವಸ್ತ್ರಕ್ಕೆ ದುಡ್ಡಿಲ್ವಾ?: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ
ನೀವು ಏನೇನೋ ಉತ್ಸವಗಳನ್ನು ಮಾಡುತ್ತೀರಿ. ಯಾವ್ಯಾವುದಕ್ಕೋ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತೀರಿ. ಆದರೆ, ನಿಮಗೆ ಮಕ್ಕಳಿಗೆ ಸರಿಯಾದ ಸಮವಸ್ತ್ರ, ಶೂ ಕೊಡ್ಲಿಕ್ಕೆ ದುಡ್ಡಿಲ್ಲ ಅಲ್ವಾ? ಅಧಿಕಾರಿಗಳಿಗೆ ನಾಚಿಕೆ ಆಗಬೇಕು, ಅವರಿಗೆ ಮಾನ ಮರ್ಯಾದೆಯೂ ಇಲ್ಲ, ಆತ್ಮಸಾಕ್ಷಿಯೂ ಇಲ್ಲ: ಹೀಗೆ ರಾಜ್ಯ ಹೈಕೋರ್ಟ್‌ ಮಂಗಳವಾರ ಸರ್ಕಾರವನ್ನು ಕಟುವಾಗಿ ಟೀಕಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral Video : ವೈರಲ್‌ ಆಗ್ತಿದೆ ಐಸ್‌ಕ್ರೀಂ ದೋಸೆ ವಿಡಿಯೊ, ರುಚಿ ಹೇಗಿರಬಹುದು?
ದಕ್ಷಿಣ ಭಾರತದವರಾದ ನಾವು ದೋಸೆ ಬಿಟ್ಟಿರುವುದಕ್ಕೆ ಸಾಧ್ಯವೇ ಇಲ್ಲ. ಇನ್ನು ಐಸ್‌ಕ್ರೀಂ ಕೂಡ ನಮ್ಮ ಇಷ್ಟದ ತಿನಿಸುಗಳ ಪಟ್ಟಿಗೇ ಸೇರಿಕೊಳ್ಳುತ್ತದೆ. ಈ ಎರಡು ಇಷ್ಟದ ಆಹಾರವನ್ನು ಒಟ್ಟು ಮಾಡಿಕೊಟ್ಟರೆ? ಯೋಚಿಕೊಂಡರೇ ಭಯಾನಕ ಎನಿಸುವ ಕಾಂಬಿನೇಷನ್‌ ಅನ್ನು ಈಗ ಬೀದಿ ಬದಿ ವ್ಯಾಪಾರಿಗಳು ನಿಜ ಮಾಡಿ ತೋರಿಸಲಾರಂಭಿಸಿಬಿಟ್ಟಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್‌ (Viral Video) ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Ramesh Jarkiholi : ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಚಿಕಿತ್ಸೆ ಕೊಡಿಸಲಿ: ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿ.ಕೆ. ಶಿವಕುಮಾರ್‌ ಮೊದಲ ಪ್ರತಿಕ್ರಿಯೆ
  2. Road Accident: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾಂಕ್ರಿಟ್‌ ಮಿಕ್ಸರ್ ಲಾರಿ; ಕಾರಿನಲ್ಲಿದ್ದ ತಾಯಿ-ಮಗಳು ದಾರುಣ ಸಾವು
  3. Privacy policy: ಹೊಸ ಗೌಪ್ಯತಾ ನೀತಿ ಒಪ್ಪದವರಿಗೆ ತೊಂದರೆ ಇಲ್ಲ, 5 ಪತ್ರಿಕೆಗಳಲ್ಲಿ ಪ್ರಚಾರ ಮಾಡಿ: ವಾಟ್ಸಾಪ್‌ಗೆ ಸುಪ್ರೀಂ ಸೂಚನೆ
  4. Anganawadi Workers: ಸಚಿವ ಹಾಲಪ್ಪ ಆಚಾರ್ ಸಂಧಾನ ಯಶಸ್ವಿ; ಪ್ರತಿಭಟನೆ ಕೈಬಿಟ್ಟ ಅಂಗನವಾಡಿ ಕಾರ್ಯಕರ್ತೆಯರು
  5. Massive Avalanche: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ರೆಸಾರ್ಟ್‌ನಲ್ಲಿ ಹಿಮಪಾತ; ಇಬ್ಬರು ವಿದೇಶಿ ಪ್ರವಾಸಿಗರ ಸಾವ
Exit mobile version