Site icon Vistara News

ವಿಸ್ತಾರ TOP 10 NEWS: ಸಂಪುಟ ವಿಸ್ತರಣೆಗೆ ದಿನಾಂಕ ಫೈನಲ್‌ನಿಂದ, ನಿಷೇಧ ಭೀತಿಯಲ್ಲಿ ಧೋನಿವರೆಗಿನ ಪ್ರಮುಖ ಸುದ್ದಿಗಳಿವು

vistara top 10 news cabinet expansion date finalised to MS Dhoni may be banned from final match and more news

#image_title

1. Cabinet Expansion : ಸಂಪುಟ ಬಿಕ್ಕಟ್ಟು ಅಂತ್ಯಕ್ಕೆ ಮುಹೂರ್ತ ಫಿಕ್ಸ್‌: ಶನಿವಾರ 24 ಸಚಿವರ ಪ್ರಮಾಣವಚನ
ಕಾಂಗ್ರೆಸ್‌ ಸರ್ಕಾರದ ಸಚಿವ ಸಂಫುಟ ಸರ್ಕಸ್‌ ನವದೆಹಲಿಯಲ್ಲಿ ಬಹುತೇಕ ಅಂತ್ಯ ಕಂಡಿದ್ದು, ಮೇ 27ರ ಶನಿವಾರ ಬೆಂಗಳೂರಿನಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಸುದೀರ್ಘ ಚರ್ಚೆಯ ಸಂದರ್ಭದಲ್ಲಿ ಸಚಿವರಾಗಬಹುದಾದ ಹಲವರ ಹೆಸರು ಚರ್ಚೆಗೆ ಬಂದಿವೆ. ಇದುವರೆಗಿನ ಮಾತುಕತೆಯಲ್ಲಿ 18 ಸಚಿವರ ಹೆಸರು ಫೈನಲ್‌ ಆಗಿದೆ. ಇನ್ನುಳಿದವರ ಹೆಸರು ಸದ್ಯದಲ್ಲೆ ಫೈನಲ್‌ ಆಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Congress Guarantee: ಗ್ಯಾರಂಟಿ ಈಡೇರಿಸದಿದ್ದರೆ ಮಹಿಳೆಯರು ಬೀದಿಗೆ ಬರೋದು ಗ್ಯಾರಂಟಿ ಎಂದ ಬೊಮ್ಮಾಯಿ
ಕಾಂಗ್ರೆಸ್‌ ಚುನಾವಣೆಗೆ ಮೊದಲು ನೀಡಿದ ಐದು ಗ್ಯಾರಂಟಿಗಳನ್ನು (Congress Guarantee) ಈಡೇರಿಸದೆ ಹೋದರೆ ಮಹಿಳೆಯರು ಗ್ಯಾರಂಟಿ ಕಾರ್ಡ್‌ ಹಿಡಿದುಕೊಂಡು ಬೀದಿಗೆ ಇಳಿಯುವುದು ಗ್ಯಾರಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ
ಹೆಚ್ಚಿನ ಓದಿಗಾಗಿ: Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

3. New Parliament: ನೂತನ ಸಂಸತ್‌ ಭವನ ಉದ್ಘಾಟನೆ ಬಹಿಷ್ಕಾರಕ್ಕೆ ಸೆಡ್ಡು ಹೊಡೆದ ಎಚ್‌.ಡಿ. ದೇವೇಗೌಡರು: ತೆರಳಲು ನಿರ್ಧಾರ
ನವದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್‌ ಭವನ ಉದ್ಘಾಟನಾ ಕಾರ್ಯಕ್ರಮವನ್ನು 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಬಹಿಷ್ಕರಿಸಿರುವ ಬೆನ್ನಿಗೇ, ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನಿರ್ಧರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: New Parliament Building: ಸಂಸತ್‌ ಭವನದ ಉದ್ಘಾಟನೆ; ರಾಷ್ಟ್ರಪತಿಗೆ ಆಹ್ವಾನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

4. HD Devegowda: ಜೆಡಿಎಸ್‌ ಆತ್ಮಾವಲೋಕನ ಸಭೆ; ಮತ್ತೆ ಪುಟಿದೇಳುವ ಪ್ರತಿಜ್ಞೆ; ಹೋರಾಟ ಗ್ಯಾರಂಟಿ ಅಂದ್ರು ಎಚ್‌ಡಿಕೆ
ಈ ಬಾರಿ ನಡೆದ ಚುನಾವಣೆಯಲ್ಲಿ ಪಂಚರತ್ನ ಯಾತ್ರೆ ಹೊರತಾಗಿಯೂ ಜೆಡಿಎಸ್‌ (JDS) ನಿರೀಕ್ಷಿತ ಸಾಧನೆ ಮಾಡದಿರುವ ಬಗ್ಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ನೇತೃತ್ವದಲ್ಲಿ ಪಕ್ಷದ ಆತ್ಮಾವಲೋಕನ ಸಭೆ ನಡೆಸಲಾಯಿತು. ಈ ವೇಳೆ ಪಕ್ಷ ಮತ್ತೆ ಪುಟಿದೇಳುತ್ತದೆ, ಪುಟಿದೇಳಲೇಬೇಕು ಎಂದು ವರಿಷ್ಠರು ಹೇಳಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡುವುದು ಬೇಡ ಎಂಬ ಸಂದೇಶವನ್ನು ರವಾನೆ ಮಾಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. H.D. Kumaraswamy: ಅತ್ತೂ ಕರೆದು ಟಿಕೆಟ್‌ ತೊಗೊತೀರ; ಆಮೇಲೆ ಮ್ಯಾಚ್‌ ಫಿಕ್ಸ್‌ ಮಾಡ್ಕೊತೀರ: ಪಕ್ಷದ ಅಭ್ಯರ್ಥಿಗಳ ಬಗ್ಗೆ ಕುಮಾರಸ್ವಾಮಿ ಆಕ್ರೋಶ
ಚುನಾವಣೆ ಹತ್ತಿರಕ್ಕೆ ಬಂದಾಗ ಬಂದು ಗೋಳಾಡಿ ಬೀ ಫಾರಂ ತೆಗೆದುಕೊಂಡು ಹೋಗುತ್ತೀರಿ, ಆಮೇಲೆ ಯಾವನ ಜತೆಗೊ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ ಎಂದು ಬೆಂಗಳೂರು ಜೆಡಿಎಸ್‌ ಅಭ್ಯರ್ಥಿಗಳ ಕುರಿತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Loksabha Election 2024: ಲೋಕಸಭೆಗೆ ಕಾಂಗ್ರೆಸ್‌ ತಯಾರಿ; ಮಂಡ್ಯದಲ್ಲಿ ಸುಮಲತಾ ವಿರುದ್ಧ ರಮ್ಯ?
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 224 ಸ್ಥಾನಗಳ ಪೈಕಿ 135ರಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಕಾಂಗ್ರೆಸ್‌ ತನ್ನ ಗೆಲುವಿನ ಅಭಿಯಾನವನ್ನು (Congress politics) ಲೋಕಸಭಾ ಚುನಾವಣೆಗೂ (Loksabha Election 2024) ಮುಂದುವರಿಸಲು ಕಾರ್ಯತಂತ್ರ ರೂಪಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಮೊದಲೇ ಕಾರ್ಯತಂತ್ರಗಳನ್ನು ರೂಪಿಸಿ ಜನರ ಮನಸ್ಸಿನಲ್ಲಿ ಅಚ್ಚೊತ್ತುವ ಮೂಲಕ ಗೆಲುವನ್ನು ದಾಖಲಿಸಿದ ಪಕ್ಷ ಲೋಕಸಭಾ ಚುನಾವಣೆಗೂ ಈಗಿನಿಂದಲೇ ತಯಾರಿಗೆ ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ಕ್ಷೇತ್ರವಾರು ಯಾರ ವಿರುದ್ಧ ಯಾರನ್ನು ನಿಲ್ಲಿಸಬೇಕು ಎಂಬ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Tipu Sultan: ಲಂಡನ್‌ನಲ್ಲಿ ಟಿಪ್ಪು ಸುಲ್ತಾನ್‌ ಖಡ್ಗ 140 ಕೋಟಿ ರೂ.ಗೆ ಹರಾಜು
ಮೈಸೂರು ಅರಸ ಟಿಪ್ಪು ಸುಲ್ತಾನನ (Tipu Sultan) ಖಡ್ಗವನ್ನು ಲಂಡನ್‌ನಲ್ಲಿ ಹರಾಜು ಹಾಕಲಾಗಿದ್ದು, 140 ಕೋಟಿ ರೂಪಾಯಿಗೆ (14 ದಶಲಕ್ಷ ಪೌಂಡ್‌) ಹರಾಜಾಗಿದೆ. ಲಂಡನ್‌ನಲ್ಲಿರುವ ಆಕ್ಷನ್‌ ಹೌಸ್‌ ‘ಬೊನ್ಹಾಮ್ಸ್‌ ಇಸ್ಲಾಮಿಕ್‌ ಆ್ಯಂಡ್‌ ಇಂಡಿಯನ್‌ ಆರ್ಟ್‌’ನಲ್ಲಿ ಹರಾಜಿಗೆ ಇಡಲಾಗಿದೆ. ಆದರೆ, ಖಡ್ಗವನ್ನು ಯಾರು ಖರೀದಿಸಿದ್ದಾರೆ, ಅವರ ಹಿನ್ನೆಲೆ ಎಂಬುದರ ಕುರಿತು ಬೊನ್ಹಾಮ್ಸ್‌ ಮಾಹಿತಿ ನೀಡಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೆರಡು ಚೀತಾ ಸಾವು; ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಭಾರತದಲ್ಲಿ ಚೀತಾ ಸಂತತಿಯ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರವೇನೋ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಚೀತಾಗಳನ್ನು ತಂದು ಬಿಟ್ಟಿದೆ. ಆದರೆ, ಮತ್ತೆ ಎರಡು ಚೀತಾ ಮರಿಗಳು ಮೃತಪಟ್ಟಿರುವುದು, ದಿನೇದಿನೆ ಚೀತಾಗಳ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿರುವುದು ದೇಶದಲ್ಲಿ ಸಂತತಿಯ ಅಳಿವು-ಉಳಿವಿನ ಪ್ರಶ್ನೆ ಎದ್ದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IPL 2023: ನಿಷೇಧ ಭೀತಿಯಲ್ಲಿ ಎಂ.ಎಸ್​ ಧೋನಿ; ಆತಂಕದಲ್ಲಿ ಚೆನ್ನೈ ತಂಡ
ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಈಗಾಗಲೇ ಫೈನಲ್​ ಪ್ರವೇಶಿಸಿದೆ. ಆದರೆ ಈ ಮಹತ್ವದ ಘಟದಲ್ಲೇ ತಂಡಕ್ಕೆ ದೊಡ್ಡ ಆತಂಕವೊಂದು ಎದುರಾಗಿದೆ. ತಂಡವನ್ನು ಫೈನಲ್​ಗೇರಿಸಿದ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಈ ಪಂದ್ಯದಿಂದ ಬ್ಯಾನ್ ಆಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Praveen Sood: ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್‌ ಸೂದ್‌ ಪದಗ್ರಹಣ
ಕರ್ನಾಟಕ ರಾಜ್ಯ ಪೊಲೀಸ್‌ ಮಾಜಿ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ‌(Praveen Sood) ಅವರು ಕೇಂದ್ರೀಯ ತನಿಖಾ ದಳದ (CBI) ನೂತನ ನಿರ್ದೇಶಕರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. 1986ರ ಬ್ಯಾಚ್‌, ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ಪ್ರವೀಣ್‌ ಸೂದ್‌ ಅವರು ಸಿಬಿಐನ 34ನೇ ನಿರ್ದೇಶಕರಾಗಿದ್ದಾರೆ. ಸುಬೋಧ್‌ ಕುಮಾರ್‌ ಜೈಸ್ವಾಲ್‌ ಅವರ ಅಧಿಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರವೀಣ್‌ ಸೂದ್‌ ಅವರನ್ನು ನೇಮಕ ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version