Site icon Vistara News

ವಿಸ್ತಾರ TOP 10 NEWS | ಗರಿಗೆದರಿದ ಸಂಪುಟ ನಿರೀಕ್ಷೆಯಿಂದ ಒಂದೇ ಓವರ್‌ನಲ್ಲಿ 7 ಸಿಕ್ಸರ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news- cabinet expansion on cards to hazare trophy sixer and more news

ಬೆಂಗಳೂರು: ಮಹಾರಾಷ್ಟ್ರ ಗಡಿ ವಿಚಾರವಾಗಿ ನವದೆಹಲಿಗೆ ತೆರಳುತ್ತಿರುವ ನಡುವೆಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯತ್ತಲೂ ಸಿಎಂ ಬಸವರಾಜ ಬೊಮ್ಮಾಯಿ ಚರ್ಚಿಸುತ್ತಾರೆ ಎಂಬ ಸುದ್ದಿ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಮಂಡ್ಯ ಸಂಸದೆ ಸುಮಲತಾ ಆಪ್ತ ಬಿಜೆಪಿ ಸೇರ್ಪಡೆ, ರಾಜಕೀಯಕ್ಕೆ ರೌಡಿಗಳ ಎಂಟ್ರಿ ಕುರಿತ ಚರ್ಚೆ, ದೆಹಲಿಯಲ್ಲಿ ಮತ್ತೊಂದು ʼಪೀಸ್‌ ಪೀಸ್‌ ಮರ್ಡರ್‌ʼ ಬೆಳಕಿಗೆ ಬಂದಿದೆ, ಒಂದೇ ಓವರ್‌ನಲ್ಲಿ ಏಳು ಸಿಕ್ಸರ್‌ ಬಾರಿಸಿದ ಹೊಸ ದಾಖಲೆ ಕ್ರಿಕೆಟ್‌ನಲ್ಲಿ ನಿರ್ಮಾಣವಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ದೆಹಲಿಯತ್ತ ಹೊರಟ ಬಸವರಾಜ ಬೊಮ್ಮಾಯಿ: ಸಂಭಾವ್ಯ ಹೊಸ ಸಚಿವರ ಪಟ್ಟಿ ಸಿದ್ಧ; ಹಾಲಿ ಸಚಿವರಲ್ಲಿ ಆತಂಕ
ಮಹಾರಾಷ್ಟ್ರ ಗಡಿಯೊಂದಿಗೆ ನಡೆದಿರುವ ಕಾನೂನು ವ್ಯಾಜ್ಯದ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನ ನವದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಹಾಗೂ ಬುಧವಾರದ ಪ್ರವಾಸದ ವೇಳೆ ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಚರ್ಚೆ ನಡೆಸಲು ಎರಡು ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಮಂಡ್ಯ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ BJP ಸೇರ್ಪಡೆ; ಫೈಟರ್‌ ರವಿ ಸೇರ್ಪಡೆಗೆ ಅಶ್ವತ್ಥನಾರಾಯಣ ಸಮರ್ಥನೆ
ದೇಶದಲ್ಲಿ ಪ್ರತಿಯೊಬ್ಬರೂ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಪ್ರೀತಿಸುತ್ತಾರೆ. ಕಾಂಗ್ರೆಸ್- ಜೆಡಿಎಸ್ ಕುಟುಂಬ ಪಕ್ಷಗಳಾದರೆ, ಬಿಜೆಪಿ ಜನಪರ ಪಕ್ಷ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಹಾಗೂ ಮಂಡ್ಯ ಸಂಸದೆ ಸುಮಲತಾ ಆಪ್ತ ಎಸ್. ಸಚ್ಚಿದಾನಂದ ಮತ್ತು ಇತರ ಕಾಂಗ್ರೆಸ್ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೌಡಿ ಶೀಟರ್‌ ಆಗಿದ್ದ ಫೈಟರ್‌ ರವಿ ಸೇರ್ಪಡೆ ಕುರಿತು ವಿವಿಧೆಡೆ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಅಶ್ವತ್ಥನಾರಾಯಣ ಸಮರ್ಥನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಧರ್ಮ ದಂಗಲ್‌ | ಬಿಜೆಪಿ ಶಾಸಕರ ವಿರುದ್ಧವೇ ತಿರುಗಿ ಬಿದ್ದ ಹಿಂದೂ ಸಂಘಟನೆಗಳು
ಹಿಂದೂ ಧಾರ್ಮಿಕ ಉತ್ಸವಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹಿಂದೂ ಸಂಘಟನೆಗಳ ಒತ್ತಡದ ವಿರುದ್ಧ ಮಾತನಾಡಿದ್ದ ಬಿಜೆಪಿ ಶಾಸಕರ ವಿರುದ್ಧ ಹಿಂದೂ ಸಂಘಟನೆಗಳು ತಿರುಗಿಬಿದ್ದಿವೆ.
ಚಿಕ್ಕಪೇಟೆಯ ಬಿಜೆಪಿ ಶಾಸಕ ಉದಯ ಗರುಡಾಚಾರ್ ಹಾಗೂ ಭಜರಂಗ ದಳದ ನಡುವೆ ಧರ್ಮ ವಾರ್ ಶುರುವಾಗಿದೆ. ನಾಳೆ ಷಷ್ಠಿ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿ ಪುರಂನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಬೆಳ್ಳಿ ತೇರು ನೇರವೇರಲಿದೆ. ಈ ವೇಳೆ ಹಿಂದೂಗಳನ್ನು ಹೊರತು ಪಡಿಸಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಭಜರಂಗದಳ ಮನವಿ ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Anjanadri Hill | ಅಂಜನಾದ್ರಿಯಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ಬೇಡ; ಜಿಲ್ಲಾಧಿಕಾರಿಗೆ ಹಿಂಜಾವೇ ಮನವಿ

4. Corporate Donation | 5 ವರ್ಷದಲ್ಲಿ ಗುಜರಾತ್‌ನಿಂದ ಬಿಜೆಪಿಗೆ 163 ಕೋಟಿ ರೂ. ಕಾರ್ಪೊರೇಟ್ ದೇಣಿಗೆ!
2017ರಿಂದ 2021ರ ಅವಧಿಯಲ್ಲಿ ಗುಜರಾತ್‌ನಿಂದ ಯಾವೆಲ್ಲ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ಕಾರ್ಪೊರೇಟ್ ದೇಣಿಗೆ (Corporate Donation) ಹರಿದು ಬಂದಿದೆ ಎಂಬ ಕುರಿತು ಅಸೋಶಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಐದು ವರ್ಷದ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೆ ಗರಿಷ್ಠ 163.54 ಕೋಟಿ ರೂ. ಕಾರ್ಪೊರೇಟ್ ದೇಣಿಗೆ ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Voter Data | ʼಚಿಲುಮೆʼ ಕೇಸ್‌ನಲ್ಲಿ ಮತ್ತೊಬ್ಬ ಬಂಧನ; ನಿರೀಕ್ಷಣಾ ಜಾಮೀನಿಗೆ ಮುಂದಾದ 200 BBMP ಅಧಿಕಾರಿಗಳು !
ಮತದಾರರ ಮಾಹಿತಿಯನ್ನು (Voter Data) ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪದಲ್ಲಿ ಮತ್ತೊಬ್ಬನನ್ನು ಪೊಲೀಸರು ಬಂದಿಸಿದ್ದು, ಚಿಲುಮೆ ಸಂಸ್ಥೆಯ ಪ್ರಕರಣದಲ್ಲಿ ಆರಕ್ಕೂ ಹೆಚ್ಚು ಜನರು ಬಂಧನವಾದಂತಾಗಿದೆ. ಇನ್ನೊಂದೆಡೆ ತಮಗೆ ಮಾನವ ಹಕ್ಕು ಉಲ್ಲಂಘನೆ ಆಗುವ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಆರೋಪಿಸಿದ್ದಾರೆ. 200ಕ್ಕೂ ಹೆಚ್ಚು ಅಧಿಕಾರಿಗಳಿಂದ ನಿರೀಕ್ಷಣಾ ಜಾಮೀನಿಗೆ ಸಿದ್ದತೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. PU Exam Date 2023 | ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ; ಮಾ.9 ರಿಂದಲೇ ಎಕ್ಸಾಮ್‌ ಶುರು
ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿದ್ದು (PU Exam Date 2023), ಮಾರ್ಚ್‌ 09 ರಿಂದ 29ರವರೆಗೆ ಪರೀಕ್ಷೆ ನಡೆಯಲಿದೆ. ತಾತ್ಕಾಲಿಕ ವೇಳಾ ಪಟ್ಟಿಯಲ್ಲಿ ಮಾರ್ಚ್‌ 10 ರಿಂದ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಈಗ ಒಂದು ದಿನ ಮೊದಲೇ ಪರೀಕ್ಷೆ ಆರಂಭವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Video| ಶ್ರದ್ಧಾ ಹತ್ಯೆ ಮಾದರಿಯಲ್ಲೇ ನಡೆದ ಮರ್ಡರ್​​; ಪತಿಯನ್ನು ಕೊಂದು, 22 ಪೀಸ್​​ಗಳಾಗಿ ಕತ್ತರಿಸಿ ಫ್ರಿಜ್​​ನಲ್ಲಿಟ್ಟ ಮಹಿಳೆ!
ಪ್ರೀತಿಸುತ್ತೇನೆ ಎಂದು ಜತೆಗಿದ್ದ ಲಿವ್​ ಇನ್​ ಪಾರ್ಟ್ನರ್​​ ಕೈಯಲ್ಲಿ ಹತ್ಯೆಗೀಡಾಗಿ, 35 ತುಂಡುಗಳಾಗಿ ಹೋದ ಶ್ರದ್ಧಾ ವಾಳ್ಕರ್​ ಕೇಸ್​​​ ಇಡೀ ದೇಶಕ್ಕೆ ಶಾಕ್​ ನೀಡಿದೆ. ಅದರ ತನಿಖೆಯಿನ್ನೂ ನಡೆಯುತ್ತಿದೆ. ಹೀಗಿರುವಾಗ ಇಂಥದ್ದೇ ಮಾದರಿಯಲ್ಲಿ ನಡೆದ ಇನ್ನೊಂದು ಕೊಲೆ ಕೇಸ್​ ಬೆಳಕಿಗೆ ಬಂದಿದೆ. ಅದೂ ಕೂಡ ರಾಷ್ಟ್ರರಾಜಧಾನಿ ದೆಹಲಿಯಲ್ಲೇ ನಡೆದ ಹತ್ಯೆ. ಇಲ್ಲಿ ಮಹಿಳೆ ತನ್ನ ಪತಿಯನ್ನು ಕೊಲೆ ಮಾಡಿ, 22 ತುಂಡುಗಳಾಗಿ ಕತ್ತರಿಸಿ ಬಿಸಾಕಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Vijay Hazare Trophy | ಒಂದೇ ಓವರ್‌ನಲ್ಲಿ 7 ಸಿಕ್ಸರ್‌, 43 ರನ್‌; ಇತಿಹಾಸ ಸೃಷ್ಟಿಸಿದ ಟೀಮ್‌ ಇಂಡಿಯಾ ಓಪನರ್‌
ಟೀಮ್‌ ಇಂಡಿಯಾ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ನ ಸ್ಟಾರ್‌ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ಕ್ರಿಕೆಟ್‌ ಕ್ಷೇತ್ರದಲ್ಲೊಂದು ವಿನೂತನ ದಾಖಲೆ ನಿರ್ಮಿಸಿದ್ದಾರೆ. ವಿಜಯ್‌ ಹಜಾರೆ ಟ್ರೋಫಿಯ (Vijay Hazare Trophy) ಕ್ವಾರ್ಟರ್‌ ಫೈನಲ್ಸ್‌ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ್ದು, ಇನಿಂಗ್ಸ್‌ನ ೪೯ನೇ ಓವರ್‌ನಲ್ಲಿ ಏಳು ಸಿಕ್ಸರ್‌ ಸಮೇತ ೪೩ ರನ್‌ ಸಿಡಿಸಿದ್ದಾರೆ. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಸೃಷ್ಟಿಯಾದ ನೂತನ ದಾಖಲೆ. ಅಂತೆಯೇ ಅವರು ೨೨೦ ರನ್‌ ಬಾರಿಸಿ ಅಜೇಯರಾಗಿ ಉಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Diabetes test | ರಾಜ್ಯದಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಧುಮೇಹ ಟೆಸ್ಟ್‌, 18 ತಿಂಗಳಲ್ಲಿ 100% ಪೂರ್ಣ
ಮಧುಮೇಹ (Diabetes test) ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ʼನಮ್ಮ ಕ್ಲಿನಿಕ್‌ʼ ಮೂಲಕ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. SSC Constable GD 2022 | ಹುದ್ದೆಗಳ ಸಂಖ್ಯೆ ದುಪ್ಪಟ್ಟು ಹೆಚ್ಚಳ; ಈಗ ಒಟ್ಟು 45,284 ಹುದ್ದೆಗಳಿಗೆ ನೇಮಕ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆ(CAPFs) ಮತ್ತು ವಿಶೇಷ ರಕ್ಷಣಾ ಪಡೆ (SSF)ಯಲ್ಲಿನ ಕಾನ್ಸ್‌ಟೇಬಲ್‌ ಹುದ್ದೆ (ಜನರಲ್‌ ಡ್ಯೂಟಿ) ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್‌ ಮತ್ತು ಮಾದಕದ್ರವ್ಯ ನಿಯಂತ್ರಣ ಬ್ಯುರೋದಲ್ಲಿನ ಸಿಪಾಯಿ ಹುದ್ದೆಗಳ ನೇಮಕಕ್ಕೆ (SSC Constable GD 2022) ಈ ಹಿಂದೆಯೇ ಅರ್ಜಿ ಆಹ್ವಾನಿಸಿದ್ದು, ಇದೀಗ ಹುದ್ದೆಗಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ಕಾಂಗ್ರೆಸ್‌ನಿಂದ ಮಲೆನಾಡ ಜನಾಕ್ರೋಶ ಪಾದಯಾತ್ರೆ; ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಾಗಿದ ಬೃಹತ್‌ ಜಾಥಾ
  2. ಮಂಗಳೂರು ಸ್ಫೋಟ | ಯಕ್ಷಗಾನ, ಕಂಬಳ, ಜಾತ್ರೆಗೆ ಹಿಂದುಗಳ ಸೋಗಿನಲ್ಲಿ ಉಗ್ರರು ಬಂದಾರು, ಹುಷಾರು: ಪೇಜಾವರ ಶ್ರೀ
  3. Kannada in Bangkok | ಬ್ಯಾಂಕಾಕ್‌ನ ಎಲೆಕ್ಟ್ರಾನಿಕ್‌ ಮಳಿಗೆಯಲ್ಲಿ ಕನ್ನಡದ ಕಂಪು: ಮಾತಾಡ್ತಿರೋರು ಕನ್ನಡಿಗರೇ ಅಲ್ಲ!
  4. MAHE Manipal | ತರಗತಿಯಲ್ಲಿ ಮುಸ್ಲಿಮರು ಟೆರರಿಸ್ಟ್‌ ಎಂದ ಉಪನ್ಯಾಸಕ: ವಿದ್ಯಾರ್ಥಿಯಿಂದ ತರಾಟೆ; ವಿಡಿಯೊ ವೈರಲ್
  5. Aditi Prabhudeva | ನಟಿ ಅದಿತಿ ಪ್ರಭುದೇವ ಮದುವೆ ಸಂಭ್ರಮದ ಫೋಟೊಗಳು ಇಲ್ಲಿವೆ!
  6. Antibiotics Use| ಸಣ್ಣಪುಟ್ಟ ಜ್ವರಕ್ಕೆಲ್ಲ ಆ್ಯಂಟಿಬಯೋಟಿಕ್​ ಔಷಧ ನೀಡಬೇಡಿ; ವೈದ್ಯರಿಗೆ ಸೂಚಿಸಿದ ವೈದ್ಯಕೀಯ ಸಂಶೋಧನಾ ಮಂಡಳಿ
Exit mobile version