Site icon Vistara News

VISTARA TOP 10 NEWS : ಜಾತಿ ಗಣತಿಗೆ ಕಾಂಗ್ರೆಸ್‌ ಕಂಗಾಲು; ಜಮೀರ್‌ಗೆ ವಿಜಯೇಂದ್ರ ಸವಾಲು

Vistara News top 10 2211

1. ಜಾತಿ ಗಣತಿ ವರದಿ ಬಿಡುಗಡೆಗೆ ಸಿಎಂ – ಡಿಸಿಎಂ ಡಿಶುಂ; ಯಾವ ಶಾಸಕ – ಸಚಿವರು ಯಾರ ಕಡೆಗೆ?
ರಾಜ್ಯ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವರದಿ ಸ್ವೀಕಾರದ ಪರವಾಗಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರೋಧ ನಿಲುವನ್ನು ಹೊಂದಿದ್ದಾರೆ. ಈ ಬಗ್ಗೆ ಇಬ್ಬರೂ ಬಹಿರಂಗವಾಗಿಯೇ ತಮ್ಮ ತಮ್ಮ ನಿಲುವುಗಳನ್ನು ಒಂದೊಂದು ಮೂಲಗಳ ಮೂಲಕ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಶಾಸಕ – ಸಚಿವರಲ್ಲಿಯೂ ಪರ – ವಿರೋಧ ಧೋರಣೆಗಳು ಕಂಡುಬಂದಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಜಾತಿ ಗಣತಿ ವಿರೋಧ ಮನವಿ ಪತ್ರಕ್ಕೆ ನಾನು ಸಹಿ ಮಾಡಬಾರದೇ? ಡಿಕೆಶಿ ಸಮರ್ಥನೆ
ಈ ಸುದ್ದಿ ಓದಿ: ಜಾತಿ ಗಣತಿ ಮೂಲ ವರದಿ ಇಲ್ಲ, ಸಹಿಯನ್ನೂ ಹಾಕಿಲ್ಲ: ಸರ್ಕಾರಕ್ಕೆ ಜಯಪ್ರಕಾಶ್‌ ಹೆಗ್ಡೆ ಪತ್ರ

2. ಜಮೀರ್‌ ಖಾನ್‌ ಅಧಿವೇಶನಕ್ಕೆ ಬರ್ಲಿ ನೋಡ್ಕೋಳ್ತೇನೆ ಎಂದ ವಿಜಯೇಂದ್ರ
ಸ್ಪೀಕರ್‌ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ಒಂದು ಜಾತಿ, ಧರ್ಮದ ಬಣ್ಣ ಕೊಡುವ ಕೆಲಸ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ (Zameer Ahmed Khan) ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು. ಇಲ್ಲವಾದರೆ ಅವರು ಮುಂದಿನ ಅಧಿವೇಶನದಲ್ಲಿ (Assembly Session) ಹೇಗೆ ಪಾಲ್ಗೊಳ್ಳುತ್ತಾರೋ ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಡಿ.23ಕ್ಕೆ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ; ಹಿಂದಿನ ಪರೀಕ್ಷೆ ಬರೆದವರಿಗೂ ಅವಕಾಶ
ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ (PSI Scam) ಮರು ಪರೀಕ್ಷೆಗೆ ಆದೇಶಿಸಿ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ (State Government) ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ (Karnataka High court) ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಈಗ ಪರೀಕ್ಷಾ ದಿನಾಂಕವೂ ಪ್ರಕಟಗೊಂಡಿದ್ದು, ಡಿ.23ಕ್ಕೆ ಪಿಎಸ್ಐ ಮರು‌ ಪರೀಕ್ಷೆ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ನ.22, 23ರಂದು ಗುಡುಗು, ಮಿಂಚು ಸಹಿತ ಭಾರಿ ಮಳೆ!
ರಾಜ್ಯದಲ್ಲಿ ಸೈಲೆಂಟ್‌ ಆಗಿದ್ದ ಮಳೆಯು ಮತ್ತೆ ಆಕ್ಟಿವ್‌ ಆಗಿದೆ. ಮುಂದಿನ ಎರಡು ದಿನಗಳು ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಪತಂಜಲಿ ತಪ್ಪು ಮಾಡಿದ್ರೆ 1000 ಕೋಟಿ ರೂ. ದಂಡ ಹಾಕಿ; ಆದ್ರೆ ವೈದ್ಯರಿಗೆ ಯಾವ ಶಿಕ್ಷೆ?: ರಾಮದೇವ್‌ ಕೆಂಡ
ವೈದ್ಯರ ಗುಂಪೊಂದು ಭಾರತದ ಯೋಗ(Yoga), ಆಯುರ್ವೇದದ (Ayurveda) ವಿರುದ್ಧ “ಅಪ್ರಚಾರ” ನಡೆಸುತ್ತಿದೆ. ಪತಂಜಲಿ ಮೇಲೆ ದಂಡ ಹಾಕಿದರೆ ಸಹಿಸಿಕೊಳ್ಳುತ್ತೇವೆ. ಆದರೆ, ಅಪಪ್ರಚಾರ ನಡೆಸುತ್ತಿರುವ ವೈದ್ಯರ ತಂಡಕ್ಕೆ ಏನು ಶಿಕ್ಷೆ ಎಂದು ಬಾಬಾ ರಾಮ್‌ದೇವ್‌ ಕೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿ, ಯೋಧ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯದಲ್ಲಿ ಉಗ್ರರರೊಂದಿಗೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಕ್ಯಾಪ್ಟನ್ ಶ್ರೇಣಿಯ ಇಬ್ಬರು ಸೇನಾ ಅಧಿಕಾರಿ (Army Officer) ಮತ್ತು ಮತ್ತೊಬ್ಬ ಯೋಧ (Soldier Died) ಹುತಾತ್ಮರಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಬೆಂಗಳೂರು ಕಂಬಳಕ್ಕೆ ರೆಡಿ; 300 ಕೋಣಗಳ ಅಬ್ಬರ, 8 ಲಕ್ಷ ಜನರ ಸಂಭ್ರಮ
ನವೆಂಬರ್‌ 25 ಮತ್ತು 26ರಂದು ಅದ್ಧೂರಿ ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace Ground) ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ಇದರಲ್ಲಿ 300 ಕೋಣಗಳು, 8 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ: Bangalore kambala : ಪುನೀತ್‌ ನೆನಪಿನಲ್ಲಿ ಬೆಂಗಳೂರು ಕಂಬಳ, ಕರೆಗಳ ಹೆಸರೇನು?

8.ಯಶಸ್ವಿ ಜೀವನಕ್ಕೆ 6 ಆರ್ಥಿಕ ಸೂತ್ರಗಳು, ಪಾಲಿಸಿ ನೋಡಿ!
ವ್ಯಕ್ತಿಯೊಬ್ಬನ ಜೀವನದ ಆರ್ಥಿಕ ಶಿಸ್ತು ಆತ ಮಾತ್ರವಲ್ಲದೆ ಇಡೀ ಕುಟುಂಬದ ಭವಿಷ್ಯವನ್ನು ಸುಸ್ಥಿರವಾಗಿಸಬಲ್ಲದು ಎನ್ನುತ್ತಾರೆ ತಜ್ಞರು. ಹಾಗಾದರೆ ಯಾವ ರೀತಿಯ ಶಿಸ್ತನ್ನು ರೂಢಿಸಿಕೊಳ್ಳಬೇಕು? ಆರ್ಥಿಕವಾಗಿ ಹೇಗೆ ಸದೃಢ ವಾಗಬಹುದು? ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ವಿಶ್ವ ಚಾಂಪಿಯನ್ನರಿಗೆ ಸವಾಲೊಡ್ಡೀತೇ ಯಂಗ್‌ ಟೀಮ್‌ ಇಂಡಿಯಾ?
ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿದ ಆಸ್ಟ್ರೇಲಿಯಾ ತಂಡ ಇನ್ನೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದೆ. ಸೂರ್ಯಕುಮಾರ್​ ಯಾದವ್​ ಅವರ ಸಾರಥ್ಯದಲ್ಲಿ ಐಪಿಎಲ್‌ ಹೀರೊಗಳೆಲ್ಲ ಬಲಿಷ್ಠ ಆಸ್ಟ್ರೇಲಿಯದ ಎದುರು ಟಿ20 ಸರಣಿಯಲ್ಲಿ(IND vs AUS T20) ಸಿಡಿದು ನಿಲ್ಲುವ ತುಡಿತದಲ್ಲಿದ್ದಾರೆ. ಆದರೆ, ಇದು ಸಾಧವೇ? ಪ್ರಶ್ನೆ ಸಹಜ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10 ಇವನು ಸಾಮಾನ್ಯ ಕಳ್ಳನಲ್ಲ, ಕಾರಲ್ಲಿ ಬಂದು ಎಳನೀರು ಕದಿಯೋ ರಮ್ಮಿ ಪ್ಲೇಯರ್‌!
ಇಲ್ಲೊಬ್ಬ ಕಳ್ಳನಿದ್ದಾನೆ. ಅವನಿಗೆ ಹಣ ಬೇಡ, ಚಿನ್ನಾಭರಣ ಬೇಡ, ಅವನ ಕಣ್ಣಿರುವುದು ಎಳನೀರಿನ ಮೇಲೆ!‌ ಎಳನೀರು ಕಳ್ಳ (Coconut thief) ಎಂದ ಕೂಡಲೇ ತೆಂಗಿನ ಮರ ಹತ್ತಿ ಕದೀತಾನೆ ಅಂದುಕೊಳ್ಳಬೇಡಿ. ಅವನದು ಏನಿದ್ದರೂ ಬೀದಿ ಕಳ್ಳತನ (Street theft). ಫುಟ್‌ ಪಾತ್‌ಗಳ ಮೇಲೆ ಎಳನೀರು ಮಾರಾಟ ಮಾಡ್ತಾರಲ್ಲಾ.. ಅವರು ರಾತ್ರಿ ಮನೆಗೆ ಹೋಗುವಾಗ ಉಳಿದ ಎಳನೀರನ್ನು ಚೆನ್ನಾಗಿ ಮೂಟೆ ಕಟ್ಟಿ ಇಟ್ಟು ಹೋಗ್ತಾರಲ್ಲ. ಅವುಗಳನ್ನು ಕದಿಯೋದೇ ಇವನ ಹವ್ಯಾಸ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version