1. Ramesh Jarkiholi : ಡಿ.ಕೆ. ಶಿವಕುಮಾರ್ ಪ್ರಕರಣ ಸಿಬಿಐಗೆ ಕೊಡಲೇಬೇಕೆಂದು ಪಟ್ಟು: ದೆಹಲಿಯಲ್ಲಿ ಬೀಡುಬಿಟ್ಟ ʼಸಾಹುಕಾರ್ʼ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧದ ಆರೋಪವನ್ನು ಸಿಬಿಐಗೆ ವಹಿಸುವವರೆಗೂ ಪಟ್ಟು ಬಿಡಲು ಸಿದ್ಧವಾಗಿಲ್ಲದ ಬಿಜೆಪಿ ನಾಯಕ ರಮೇಶ್ ಜಾರಕಹೊಳಿ (Ramesh Jarkiholi), ರಾಜ್ಯದಲ್ಲಿ ಫಲ ಸಿಗಲಿಲ್ಲ ಎಂದರಿತು ನವದೆಹಲಿಗೆ ತೆರಳಿದ್ದಾರೆ. ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮನೆಯಲ್ಲಿ ಭೇಟಿ ಮಾಡಿದ ಜಾರಕಿಹೊಳಿ, ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Prajadhwani : ಜಂಟಿ ಯಾತ್ರೆ ಮುಗಿಯಿತು, ಇನ್ನು ಒಂಟಿ ಯಾತ್ರೆ: ಶುಕ್ರವಾರದಿಂದ ಸಿದ್ದು-ಡಿಕೆಶಿ ಶಕ್ತಿ ಪ್ರದರ್ಶನ ಆರಂಭ
ಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿಯಾಗಿ ಭಾಗವಹಿಸಿ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. ಇದೀಗ ಶುಕ್ರವಾರದಿಂದ ಇಬ್ಬರದ್ದೂ ಪ್ರತ್ಯೇಕ ಯಾತ್ರೆಗಳು ಆರಂಭವಾಗುತ್ತಿವೆ. ಮೊದಲಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ, ದಕ್ಷಿಣ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಯಾತ್ರೆ ನಡೆಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Parliament Session: ಬಜೆಟ್ ಅಧಿವೇಶನದಲ್ಲಿ ಅದಾನಿ ಷೇರು ಕುಸಿತ ಗಲಾಟೆ; ಎರಡೂ ಸದನಗಳ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ
ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಫಾಲೋ-ಆನ್ ಪಬ್ಲಿಕ್ ಆಫರ್ (follow-on public offer – FPO)ನ್ನು ಅದಾನಿ ಎಂಟರ್ಪ್ರೈಸಸ್ ವಾಪಸ್ ಪಡೆದ ವಿಷಯ ಸೇರಿ ಹಲವು ವಿಚಾರಗಳ ಕುರಿತು ಪ್ರತಿಪಕ್ಷಗಳು ಇಂದು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದವು. ವಿರೋಧ ಪಕ್ಷಗಳ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಕಲಾಪವನ್ನು ಮುಂದೂಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Adani Group: ಎಫ್‌ಪಿಒ ಹಿಂಪಡೆದ ಅದಾನಿ ಕಂಪನಿ, ಹೂಡಿಕೆದಾರರಿಗೆ ಹಣ ವಾಪಸ್, ಷೇರುದಾರರಿಗೆ ಪತ್ರ ಬರೆದ ಅದಾನಿ
ಹೆಚ್ಚಿನ ಓದಿಗಾಗಿ: Adani Group shares : ಅದಾನಿ ಎಫ್‌ಪಿಒ ದಿಢೀರ್ ಹಿಂತೆಗೆತ ಏಕೆ? ಷೇರುಗಳ ಕತೆ ಏನು? ಹೂಡಿಕೆದಾರರು ಏನು ಮಾಡಬಹುದು?
೪. Dattatreya Hosabale: ಆರ್‌ಎಸ್ಎಸ್ ಬಲವೂ ಅಲ್ಲ, ಎಡವೂ ಅಲ್ಲ; ರಾಷ್ಟ್ರೀಯವಾದಿ ಎಂದ ಹೊಸಬಾಳೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ನಾಯಕರಾಗಿರುವ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು, ”ನಾವು ಬಲಪಂಥೀಯರೂ ಅಲ್ಲ, ಎಡ ಪಂಥೀಯರೂ ಅಲ್ಲ. ನಾವು ರಾಷ್ಟ್ರೀಯವಾದಿಗಳು. ಸಂಘವು ಯಾವಾಗಲೂ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತದೆ,” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ, ಮೊದಲಿನಿಂದಲೂ ಆರ್‌ಎಸ್ಎಸ್ ಎಂದರೆ, ಬಲಪಂಥದ ಸಂಘಟನೆಯಾಗಿ ಗುರುತಿಸಿಕೊಂಡು ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೫. Budget 2023 : ಕಾಂಗ್ರೆಸ್ ತಪ್ಪಿನಿಂದ ಮೇಕೆದಾಟು ವಿವಾದದಲ್ಲಿದೆ : ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ( Budget 2023) ಕರ್ನಾಟಕವನ್ನು ಕಡೆಗಣಿಸಿದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೇಕೆ ದಾಟು ಯೋಜನೆ ವಿವಾದದಲ್ಲಿ ಸಿಲುಕಿರುವುದು ಕಾಂಗ್ರೆಸ್ ಸರ್ಕಾರದ ತಪ್ಪಿನಿಂದಾಗಿ ಎಂದಿದ್ದಾರೆ. ರಾಜ್ಯದ ಅವಶ್ಯಕತೆಗಳಿಗೆ ತಕ್ಕಂತೆ ಕೇಂದ್ರ ಸರ್ಕಾರವು ಹಣ ಒಡಗಿಸಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೬. Peshawar Blast: ನಾವೇ ಉಗ್ರರನ್ನು ಸೃಷ್ಟಿಸಿದವರು, ಅವರೀಗ ನಮಗೇ ಮುಳುವಾಗಿದ್ದಾರೆ: ಪೇಚಾಡಿದ ಪಾಕ್ ಸಚಿವ
ಪೇಷಾವರದ ಮಸೀದಿಯಲ್ಲಿ ಮಾರಕ ಬಾಂಬ್ ದಾಳಿ ನಡೆದ ದಿನಗಳ ನಂತರ, ಪಾಕಿಸ್ತಾನ ಸರ್ಕಾರದ ಒಳಗೇ ಕೋಲಾಹಲ ಆರಂಭವಾಗಿದೆ. ನಾವು ಜಗತ್ತಿನ ವಿರುದ್ಧ ಹೋರಾಡಲು ಮುಜಾಹಿದೀನ್‌ಗಳನ್ನು ಸೃಷ್ಟಿಸುವ ಅಗತ್ಯವಿಲ್ಲ. ನಾವು ಅವರನ್ನು ಸೃಷ್ಟಿಸಿದೆವು ಮತ್ತು ಅವರು ಭಯೋತ್ಪಾದಕರಾದರು- ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರಾಣಾ ಸನಾವುಲ್ಲಾ ಮೇಲ್ಮನೆಯಲ್ಲಿ ಮಂಗಳವಾರ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೭. ನೇಪಾಳದಿಂದ ಅಯೋಧ್ಯೆಗೆ ತಲುಪಿದ 2 ದೊಡ್ಡ ಶಿಲೆಗಳು; ‘ರಾಮಲ್ಲಲ್ಲಾ’ ಆಗಿ ಬದಲಾಗಲಿವೆ ಈ ಪವಿತ್ರ ಕಲ್ಲುಗಳು
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯಾ ರಾಮಮಂದಿರದ ಗರ್ಭಗುಡಿಯಲ್ಲಿ ‘ರಾಮಲಲ್ಲಾ’ ಆಗಿ ಪ್ರತಿಷ್ಠಾಪನೆಗೊಳ್ಳಲಿರುವ ಎರಡು ಶಿಲೆಗಳು (Shaligram rocks) ಇಂದು ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿವೆ. ರಾಮಲಲ್ಲಾನ ಮೂರ್ತಿ ಚಿಕ್ಕದಾಗಿರುವ ಕಾರಣ, ಈ ಮೂರ್ತಿ ಭಕ್ತರಿಗೆ 9 ಅಡಿ ದೂರದಿಂದ ಕಾಣುವುದಿಲ್ಲ. ಹೀಗಾಗಿ ಹೊಸದಾದ, ಸುಮಾರು 3 ಅಡಿ ಎತ್ತರದ ರಾಮಲಲ್ಲಾ ಮೂರ್ತಿಯನ್ನು ಕೆತ್ತಿಸಿ, ಪ್ರತಿಷ್ಠಾಪಿಸಲು ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ನಿರ್ಧಾರ ಮಾಡಿದೆ. ಹೀಗೆ ರಾಮಲಲ್ಲಾನ ಹೊಸದಾದ ಮೂರ್ತಿಯನ್ನು ಕೆತ್ತಲು ಅಗತ್ಯವಿರುವ ಶಿಲೆಗಳನ್ನು ನೇಪಾಳದಿಂದ ತರಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೮. Anganawadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಲಿದೆಯೇ ಗ್ರಾಚ್ಯುಟಿ?; ಅಧಿಕೃತ ಆದೇಶವೊಂದೇ ಬಾಕಿ!
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು (Anganawadi Workers) ನಡೆಸಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರ ಮೊದಲ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡಲು ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆ ಸಹಮತದ ಪತ್ರವನ್ನು ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಭವಿಷ್ಯದ ದೃಷ್ಟಿಯಿಂದ ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೯. ICC U19 Women’s World Cup: ಚೊಚ್ಚಲ ಐಸಿಸಿ ಅಂಡರ್ 19 ವನಿತೆಯರ ವಿಶ್ವ ಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಸನ್ಮಾನ
ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್ 19 ಮಹಿಳೆಯರ(icc u19 women’s world cup) ಟಿ20 ವಿಶ್ವ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಬಿಸಿಸಿಐ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(sachin tendulkar) ಅಭಿನಂದನೆ ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಕಿವೀಸ್ ವಿರುದ್ಧದ ಅಂತಿಮ ಟಿ20 ಪಂದ್ಯ ಆರಂಭಕ್ಕೆ ಮುನ್ನ ವಿಶ್ವ ವಿಜೇತ ತಂಡಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೧೦. UPSC Recruitment 2023 : ಐಎಎಸ್, ಐಎಫ್‌ಎಸ್ ನೇಮಕಕ್ಕೆ ಅಧಿಸೂಚನೆ; ಈ ಬಾರಿ 1,105 ಹುದ್ದೆಗಳಿಗೆ ನೇಮಕ
ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೆವಾ ಅಧಿಕಾರಿ (ಐಎಎಸ್) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ (UPSC Recruitment 2023) ಹೊರಡಿಸಿದೆ. ದೇಶದ ಪ್ರತಿಷ್ಠಿತ ಪರೀಕ್ಷೆ ಎಂದೇ ಪರಿಗಣಿಸಲಾಗುತ್ತಿರುವ ಈ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಮತ್ತಷ್ಟು ಪ್ರಮುಖ ಸುದ್ದಿಗಳಿವು
- ಪುತ್ತಿಗೆ ಸ್ವಾಮೀಜಿ ಕೈಯಲ್ಲಿ ʻಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲʼ ಪುಸ್ತಕ; ವಿವಾದಕ್ಕೆ ಶ್ರೀಮಠದ ಸ್ಪಷ್ಟೀಕರಣ ಏನು?
- ತೆಲಂಗಾಣ ಸಿಎಂ ಕೆಸಿಆರ್ಗೆ ಶೂ ಗಿಫ್ಟ್ ಕೊಟ್ಟ ಆಂಧ್ರ ಮುಖ್ಯಮಂತ್ರಿ ಸಹೋದರಿ; ವೈ.ಎಸ್.ಶರ್ಮಿಳಾ ಹಾಕಿದ ಸವಾಲೇನು?
- Union Budget 2023: ನಮ್ಮ ಬಜೆಟ್ ಅನ್ನು ಜಗತ್ತು ಸ್ವೀಕರಿಸಲು 10 ಕಾರಣ ನೀಡಿದ ವಿದೇಶಾಂಗ ಸಚಿವ ಜೈಶಂಕರ್
- Tippu book: ಅಡ್ಡಂಡ ಕಾರ್ಯಪ್ಪರ ಟಿಪ್ಪು ನಿಜ ಕನಸುಗಳು ಪುಸ್ತಕ ದಾವೆ ವಾಪಸ್; ಲೇಖಕ ಹೇಳಿದ್ದೇನು?
- KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
- ಮಕ್ಕಳ ಕಥೆ: ಕನ್ನಡಿಯಲ್ಲಿರುವುದು ಯಾರು?
- Wedding Gown Cake : ಇದು ತಿನ್ನಬಹುದಾದ ವೆಡ್ಡಿಂಗ್ ಗೌನ್! ಈ ವಿಚಿತ್ರ ಗೌನ್ ಈಗ ಗಿನ್ನಿಸ್ ರೆಕಾರ್ಡ್