1. Tiger Nail : ದರ್ಶನ್, ಜಗ್ಗೇಶ್, ನಿಖಿಲ್ ಪೆಂಡೆಂಟ್ ವಶಕ್ಕೆ; ರಾಕ್‌ಲೈನ್ ಮನೆಯಿಂದ ಬರಿಗೈಲಿ ವಾಪಸ್
ಹುಲಿಯ ಉಗುರಿನ ಪೆಂಡೆಂಟ್ (Tiger nail pendent) ಧರಿಸಿದ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾಗಿರುವ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಮನೆಗೆ ಅರಣ್ಯಾಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ. ಈ ವೇಳೆ ಚಿತ್ರನಟ ದರ್ಶನ್ (Actor Darshan), ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತು ನಟ ಜಗ್ಗೇಶ್ (Actor Jaggesh) ಅವರ ಮನೆಯಲ್ಲಿ ಪೆಂಡೆಂಟ್ ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ರಾಕ್‌ಲೈನ್ ವೆಂಕಟೇಶ್ )Rockline Venkatesh) ಅವರ ವಿದೇಶಕ್ಕೆ ಹೋಗಿದ್ದು, ಅವರ ಅನುಪಸ್ಥಿತಿಯಲ್ಲಿ ಜಾಲಾಡಿದರೂ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : ಧನಂಜಯ ಸ್ವಾಮಿ ಹುಲಿ ಉಗುರಿನ ಪೆಂಡೆಂಟ್ ನಿಗೂಢ ನಾಪತ್ತೆ; ಬೆನ್ನು ಹತ್ತಿದ ಅಧಿಕಾರಿಗಳು!
ಈ ವರದಿಯನ್ನೂ ಓದಿ: ಹುಲಿ ಉಗುರು ಪತ್ತೆಯಾದರೆ ಏನು ಮಾಡೋಣ? ಶಿಫಾರಸು ಮಾಡಲು ಸಮಿತಿ ರಚನೆ
ಇದನ್ನೂ ಓದಿ; ಹುಲಿ ಚರ್ಮ ವಿನಯ್ ಗುರೂಜಿ ಆಶ್ರಮದಲ್ಲಿ ಇದ್ದದ್ದು ಒಂದೇ ದಿನ!; ವೈರಲ್ ರಾದ್ಧಾಂತ
2. ರಾಮ ನಗರ ವಿಭಜನೆ ರಾದ್ಧಾಂತ ತಾರಕಕ್ಕೆ: ಎಚ್‌ಡಿ ಕುಮಾರಸ್ವಾಮಿ, ಶಿವಕುಮಾರ್ ವಾಕ್ಸಮರ
ರಾಮನಗರದಲ್ಲಿರುವ ಕನಕಪುರ ತಾಲೂಕನ್ನು ಬೆಂಗಳೂರಿಗೆ ಸೇರಿಸುವ ಡಿ.ಕೆ. ಶಿವಕುಮಾರ್ ಪ್ರಸ್ತಾಪಕ್ಕೆ ಎಚ್.ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ದೊಡ್ಡ ಪ್ರಮಾಣದ ವಾಕ್ಸಮರಕ್ಕೆ ಸವಾಲಿಗೆ ಕಾರಣವಾಗಿದೆ.
ವರದಿ 1: ಒಡೆದು ಚೂರು ಮಾಡಲು ರಾಮನಗರವೇನು ಕಲ್ಲು ಬಂಡೆಯೆ?: ಎಚ್‌ಡಿಕೆ ಪ್ರಶ್ನೆ
ವರದಿ 2: ನಾನು ಬೆಂಗಳೂರಿಗ, ಏನೀಗ? ಕನಕಪುರ ಸೇರ್ಪಡೆ ಹೇಳಿಕೆ ಸಮರ್ಥಿಸಿದ ಡಿಕೆಶಿ
3. ಶಾಲಾ ಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ ಭಾರತ ಬಳಕೆಗೆ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು
ಶಾಲಾ ಪಠ್ಯಗಳಲ್ಲಿ (School Textbooks) ಇಂಡಿಯಾ (India) ಪದ ಬದಲಿಗೆ ಭಾರತ (Bharat) ಪದ ಬಳಸಲು ಉನ್ನತಾಧಿಕಾರದ ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಬಿಜೆಪಿ ಜತೆಗಿನ ಮೈತ್ರಿ ಬದಲಿಸದಿದ್ದರೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ದೇವೇಗೌಡರೇ ಬದಲು!
ಬಿಜೆಪಿ ಜತೆಗಿನ ಮೈತ್ರಿ (BJP JDS Alliance) ಬದಲಿಸದಿದ್ದರೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ (JDS National President Post) ಎಚ್.ಡಿ. ದೇವೇಗೌಡರನ್ನೇ ಬದಲಾವಣೆ ಮಾಡಬೇಕಾಗುತ್ತದೆ. ಹಾಗಂತ ನಾವು ಅವರನ್ನು ಉಚ್ಚಾಟನೆ ಏನೂ ಮಾಡೋಕೆ ಹೋಗುವುದಿಲ್ಲ. ಆದರೆ, ಅನಿವಾರ್ಯವಾಗಿ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಅಷ್ಟೇ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಗುಡುಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಜಪಾನ್‌ಅನ್ನೂ ಹಿಂದಿಕ್ಕಲಿದೆ ಭಾರತದ ಆರ್ಥಿಕತೆ; ಮೋದಿ ಕನಸು ಶೀಘ್ರ ನನಸು
ಭಾರತವು 2030ರ ವೇಳೆಗೆ ವಿಶ್ವದಲ್ಲೇ ಮೂರನೇ ಬೃಹತ್ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ” ಎಂದು ಎಸ್&ಪಿ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್ (S&P Global Market Intelligence) ವರದಿ ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಸತತ 5ನೇ ದಿನವೂ ಷೇರುಪೇಟೆ ಕುಸಿತ, ಹೂಡಿಕೆದಾರರಿಗೆ 15 ಲಕ್ಷ ಕೋಟಿ ರೂ. ನಷ್ಟ
ಇಸ್ರೇಲ್-ಹಮಾಸ್ (Israel Palestine War) ನಡುವಿನ ಯುದ್ಧವು ಭಾರತೀಯ ಷೇರುಪೇಟೆಯ (Stock Market) ಮೇಲೂ ಪರಿಣಾಮ ಬೀರಿದೆ. ಸತತ ಐದು ದಿನದಿಂದ ಷೇರು ಪೇಟೆ ಕುಸಿತವನ್ನು ದಾಖಲಿಸಿದ್ದು, ಹೂಡಿಕೆದಾರರಿಗೆ 15 ಲಕ್ಷ ಕೋಟಿ (Loss to Investors) ರೂಪಾಯಿ ನಷ್ಟವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಅ.29ರಂದು ಭಾಗಶಃ ಚಂದ್ರ ಗ್ರಹಣ; ಭಾರತದಲ್ಲೂ ಗೋಚರ?
ಅಕ್ಟೋಬರ್ ತಿಂಗಳು ನಿಸರ್ಗದ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ ಅದೂ ಎರಡು ವಾರಗಳ ಅಂತರದಲ್ಲಿ 2 ಗ್ರಹಣಗಳು ಸಂಭವಿಸಲಿವೆ. ಅಕ್ಟೋಬರ್ 29ರಂದು ಚಂದ್ರ ಗ್ರಹಣ (Lunar eclipse) ನಡೆಯಲಿದೆ. ಅಕ್ಟೋಬರ್ 14ರಂದು ಸಂಭವಿಸಿದ ಸೂರ್ಯಗ್ರಹಣದ (Solar Eclipse) ಕೇವಲ 15 ದಿನಗಳ ನಂತರ ಈ ಚಂದ್ರ ಗ್ರಹಣ ಗೋಚರವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಒಂದೇ ದಿನ 3 ಸ್ಪರ್ಧಾತ್ಮಕ ಪರೀಕ್ಷೆ; ದಿನಾಂಕ ಬದಲಿಸುವಂತೆ ಪ್ರಿಯಾಂಕ್ ಖರ್ಗೆ ಮನವಿ
ನವೆಂಬರ್ 5ರಂದು ಒಂದೇ ದಿನ ಮೂರು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿರುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ಮೂರು ಪರೀಕ್ಷೆಗಳಿಗೆ (Competitive Exam) ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ವಿಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಅವರು ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಅದು 40 ಎಸೆತಗಳ ಶತಕ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಪಾಕ್ ವಿರುದ್ಧ ಗೆಲುವು; ಕ್ಯಾಬ್‌ನಲ್ಲಿ ಲುಂಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಆಫ್ಘನ್ ಆಟಗಾರರು
ಪ್ರಸಕ್ತ ಸಾಗುತ್ತಿರುವ ವಿಶ್ವಕಪ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ(Pakistan vs Afghanistan) ವಿರುದ್ಧ ಅಫಘಾನಿಸ್ತಾನ 8 ವಿಕೆಟ್ಗಳ ಐತಿಹಾಸಿಕ ಗೆಲುವು ಸಾಧಿಸಿತ್ತು. ಗೆಲುವಿನ ಬಳಿಕ ಆಟಗಾರರು ಮೈದಾನದಲ್ಲಿ ಮಾತ್ರವಲ್ಲದೆ ತಾವು ಪ್ರಯಾಣಿಸಿದ ಕ್ಯಾಬ್ನಲ್ಲಿಯೂ ಲುಂಗಿ ಡ್ಯಾನ್ಸ್(Lungi Dance) ಮಾಡಿ ಸಂಭ್ರಮಿಸಿದ್ದಾರೆ. ಇದರ ವಿಡಿಯೊ ವೈರಲ್(viral video) ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ