Site icon Vistara News

ವಿಸ್ತಾರ TOP 10 NEWS | ಕೊರೊನಾ ಕುರಿತು ಕೇಂದ್ರದ ಮುನ್ನೆಚ್ಚರಿಕೆಯಿಂದ ತಜ್ಞರ ಅಭಯದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-central government precautions regarding covid to experts opinion and more news

ಬೆಂಗಳೂರು: ಕೋವಿಡ್‌-19 ಹರಡದಂತೆ ಹಾಗೂ ಅಪಾಯ ಮಾಡದಂತೆ ಸರ್ವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಭಾರತವು ಚೀನಾದ ರೀತಿಯಲ್ಲಿ ಕೊರೊನಾದಿಂದ ಬಾಧಿತ ಆಗುವುದಿಲ್ಲ ಎಂದು ವೈರಾಣು ತಜ್ಞರು ಅಭಯ ನೀಡಿದ್ದಾರೆ. ಮೀಸಲಾತಿ ಕಗ್ಗಂಟು ವೈಯಕ್ತಿಕ ಹೊಯ್ದಾಟಕ್ಕೆ ಎಡೆ ಮಾಡಿದೆ, ಕಾಶ್ಮೀರದಲ್ಲಿ ಭಾರೀ ಅಪಾಯವೊಂದನ್ನು ಭಾರತೀಯ ಸೇನೆ ತಪ್ಪಿಸಿದೆ, ಶೂಟಿಂಗ್‌ ಸೆಟ್‌ನಲ್ಲಿಯೇ ನಟಿ ಆತ್ಮಹತ್ಯೆ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Coronavirus | ಆಕ್ಸಿಜನ್‌, ವೆಂಟಿಲೇಟರ್‌ ಕಡೆ ಗಮನಹರಿಸಿ, ಕೇಂದ್ರದ ಹೊಸ ಮಾರ್ಗಸೂಚಿಯಲ್ಲಿ ಮತ್ತೇನಿದೆ?
ದೇಶದಲ್ಲಿ ಕೊರೊನಾ (Coronavirus) ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಿಸಬೇಕು. ಅದರಲ್ಲೂ, ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌, ಹಾಸಿಗೆ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಸೂಚಿಸಿದೆ. ಮಾರ್ಗಸೂಚಿಯ ಪ್ರಮುಖ ಅಂಶಗಳು ಹೀಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Coronavirus | ಭಾರತದಲ್ಲಿ ಹೊಸ ರೂಪಾಂತರಿಯ ಅಲೆ ಬಾರದು: ವೈರಾಣುತಜ್ಞೆ ಅಭಯ
ಕೋವಿಡ್‌ ವೈರಸ್‌ನ ಹೊಸ ರೂಪಾಂತರಿಯಿಂದಾಗಿ ಭಾರತದಲ್ಲಿ ಯಾವುದೇ ಕೋವಿಡ್‌ ಅಲೆಯ ಆತಂಕ ಕಂಡುಬರುತ್ತಿಲ್ಲ ಎಂದು ದೇಶದ ಖ್ಯಾತ ವೈರಾಣುತಜ್ಞೆ ಡಾ.ಗಗನ್‌ದೀಪ್‌ ಕಾಂಗ್‌ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Murugesh Nirani | ಯತ್ನಾಳ್‌ ಕಳೆದ ವಾರ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದರು ಎಂದ ಮುರುಗೇಶ್‌ ನಿರಾಣಿ!
ರಾಜ್ಯದ ಕೈಗಾರಿಕಾ ಸಚಿವರಾಗಿರುವ ಮುರುಗೇಶ್‌ ನಿರಾಣಿ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮೀಸಲಾತಿ ಹೋರಾಟದ ಭಾಗವಾಗಿ ಸಮಾವೇಶಗಳನ್ನು ನಡೆಸುತ್ತಿರುವ, ಪಾದಯಾತ್ರೆ ಮಾಡುತ್ತಿರುವ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳ ವಿರುದ್ಧ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್‌ ಅವರು ಕಳೆದ ದಿಲ್ಲಿಗೆ ಹೋಗಿ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದಿದ್ದಾರೆ ಎಂದು ನಿರಾಣಿ ಲೇವಡಿ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election | ಅವಧಿ ಪೂರ್ವ ಚುನಾವಣೆ ಇಲ್ಲ, ಕೋವಿಡ್‌ ಬಗ್ಗೆ ಭಯ ಬೇಕಾಗಿಲ್ಲ ಎಂದ ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ (Karnataka Election) ಮಾಡುವ ಯೋಚನೆಯನ್ನು ನಮ್ಮ ಸರ್ಕಾರ ಅಥವಾ ಪಕ್ಷ ಹೊಂದಿಲ್ಲ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅದೇ ಹೊತ್ತಿಗೆ ಕೋವಿಡ್‌ ವಿಚಾರದಲ್ಲಿ ಜನರು ಹೆಚ್ಚು ಭಯಪಡಬೇಕಾಗಿಲ್ಲ ಎಂದು ಅವರು ಅಭಯ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ ಅಂಕಣ | ಪರಮ ಸಹಿಷ್ಣ ಹಿಂದೂಗಳು ಈಗಲೂ ಅಸಹಿಷ್ಣರಾಗಿಲ್ಲ, ಎಚ್ಚೆತ್ತುಕೊಂಡಿದ್ದಾರಷ್ಟೆ !
ಹಿಂದು ಸಮಾಜದಷ್ಟು ಸುಧಾರಣೆಗಳನ್ನು ಕಂಡಿರುವ, ಈಗಲೂ ಕಾಣುತ್ತಿರುವ ವಿಶ್ವದ ಇನ್ನೊಂದು ಮತ, ಸಂಪ್ರದಾಯವಿಲ್ಲ. ಆದರೆ ಸುಧಾರಣೆಯ ಕೂಗೆಬ್ಬಿಸುವವರ ಉದ್ದೇಶವನ್ನೂ ಸಮಾಜ ಮೊದಲಿಗೆ ಒರೆಗೆ ಹಚ್ಚುತ್ತದೆ. ಆದರೆ ಬಾಲಿವುಡ್ ಎಂಬ ಸಿನಿ ಜಗತ್ತು ಈ ವಿಚಾರವನ್ನು ಮರೆಯುತ್ತಿದೆ. ವೈಯಕ್ತಿಕ ಜೀವನದಲ್ಲಿ ಅನೈತಿಕತೆ ಹೊಂದಿದ್ದರೂ, ಸಿನಿಮಾ ಪರದೆಯ ಮೇಲೆ ಉಪದೇಶ ಮಾಡಬಹುದು ಎಂದು ಭ್ರಮಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಎಲೆಕ್ಷನ್‌ ಹವಾ | ದಾವಣಗೆರೆ ಉತ್ತರ | ಗಳಿಸಿಕೊಂಡ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಿಜೆಪಿ
ಕಳೆದ ಬಾರಿ ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪ್ರಯತ್ನಿಸುತ್ತಿದ್ದರೆ ಇತ್ತ ಬಿಜೆಪಿಯಿಂದ ಹಾಲಿ ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರು ಸ್ಪರ್ಧಿಸುತ್ತಾರೆಯೇ ಇಲ್ಲವೇ ಎಂಬ ಚರ್ಚೆ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮಥುರಾ ಶ್ರೀಕೃಷ್ಣ ಜನ್ಮಭೂಮಿ-ಮಸೀದಿ ವಿವಾದ; ಶಾಹಿ ಈದ್ಗಾ ಮಸೀದಿ ಸಂಕೀರ್ಣ ಸಮೀಕ್ಷೆ ನಡೆಸಲು ಜಿಲ್ಲಾ ಕೋರ್ಟ್​ ಆದೇಶ
ಉತ್ತರ ಪ್ರದೇಶದ ಮಥುರಾ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾ ಮಸೀದಿ ವಿವಾದ ಕೇಸ್​​ಗೆ ಸಂಬಂಧಪಟ್ಟಂತೆ ಮಥುರಾ ಜಿಲ್ಲಾ ನ್ಯಾಯಾಲಯ ಇಂದು ಒಂದು ಮಹತ್ವದ ಆದೇಶ ಹೊರಡಿಸಿದೆ. ಈದ್ಗಾ ಮಸೀದಿ ಸಂಕೀರ್ಣದ ಅಧಿಕೃತ ಸಮೀಕ್ಷೆ ನಡೆಸುವಂತೆ ಕೋರ್ಟ್​ ಆದೇಶ ಕೊಟ್ಟಿದ್ದು, ಮುಂದಿನ ವಿಚಾರಣೆ ದಿನಾಂಕವನ್ನು 2023ರ ಜನವರಿ 20ಕ್ಕೆ ನಿಗದಿಗೊಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Voter data | ಇಬ್ಬರು ಐಎಎಸ್‌ ಅಧಿಕಾರಿಗಳ ಅಮಾನತು ರದ್ದು ಮಾಡಿ ಸರ್ಕಾರ ಆದೇಶ: ಸಿದ್ದರಾಮಯ್ಯ ಆಕ್ಷೇಪ
ಮತದಾರರ ಪಟ್ಟಿ ಅಕ್ರಮ, ಹೆಸರು ಡಿಲಿಟ್‌, ಮಾಹಿತಿ ದುರುಪಯೋಗ (Voter data) ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ಸೂಚನೆಯ ಮೇರೆಗೆ ಅಮಾನತುಗೊಂಡಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Arms Bust In Kashmir | ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ, 8 ಎಕೆ-74 ರೈಫಲ್‌, 14 ಗ್ರೆನೇಡ್‌ ವಶಕ್ಕೆ, ತಪ್ಪಿದ ಭಾರಿ ಅನಾಹುತ
ಜಮ್ಮು-ಕಾಶ್ಮೀರದಲ್ಲಿ ಒಂದೆಡೆ ರಾಜ್ಯ ತನಿಖಾ ಸಂಸ್ಥೆಯು (SIA) ಉಗ್ರ ಸಂಘಟನೆಗೆ ಸೇರಿದವರ ಆಸ್ತಿಯನ್ನು ಜಪ್ತಿ ಮಾಡಿದೆ. ಮತ್ತೊಂದೆಡೆ, ಸೇನೆಯು ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಶಸ್ತ್ರಾಸ್ತ್ರ ಜಾಲವೊಂದನ್ನು ಭೇದಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು (Arms Bust In Kashmir) ವಶಪಡಿಸಿಕೊಂಡಿದ್ದಾರೆ. ಇದರಿಂದ ಕಣಿವೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Tunisha Sharma | ಸೆಟ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ನಟಿ ತುನಿಶಾ ಶರ್ಮಾ
ಅರೇಬಿಯನ್ ನೈಟ್ಸ್ ಆಧಾರಿತ ಟಿವಿ ಸಿರೀಸ್‌ ʻಅಲಿ ಬಾಬಾ ದಸ್ತಾನ್-ಇ-ಕಾಬೂಲ್‌ʼನಲ್ಲಿ ಶೆಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸಿರುವ ನಟಿ ತುನಿಶಾ ಶರ್ಮಾ ಶನಿವಾರ ಡಿಸೆಂಬರ್ 24 (Tunisha Sharma) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಟಿವಿ ಕಾರ್ಯಕ್ರಮದ ಸೆಟ್‌ ಒಂದರಲ್ಲಿಯೇ ಮೇಕಪ್ ರೂಮ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version