Site icon Vistara News

ವಿಸ್ತಾರ TOP 10 NEWS | ಕರ್ತವ್ಯ ಪಥ ಉದ್ಘಾಟನೆಯಿಂದ ದಶಪಥ ಉದ್ಘಾಟನೆ ವಿಳಂಬದವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 08092022

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್‌ ವಿಸ್ಟಾ ಯೋಜನೆಯ ಒಂದು ಭಾಗವಾಗಿ ಕರ್ತವ್ಯ ಪಥ ಉದ್ಘಾಟನೆ ಹಾಗೂ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಪ್ರತಿಮೆ ಸ್ಥಾಪನೆಯ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ. ರಾಜ್ಯದಲ್ಲಿ ಮಳೆಯಿಂದಾದ ಅನಾಹುತವನ್ನು ಕೇಂದ್ರ ತಂಡ ಅಧ್ಯಯನ ನಡೆಸುತ್ತಿದೆ. ದಕ್ಷಿಣ ಕನ್ನಡದ ಪಿಎಫ್‌ಐ ನಾಯಕನ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ, ಬೆಂಗಳೂರು ಮೈಸೂರು ದಶಪಥ ಉದ್ಘಾಟನೆ ಸದ್ಯಕ್ಕಿಲ್ಲ ಎಂಬ ಸಂದೇಶವನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ ಎಂಬುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Central Vista | ಕರ್ತವ್ಯ ಪಥ ಲೋಕಾರ್ಪಣೆ, ಸೆಂಟ್ರಲ್‌ ವಿಸ್ಟಾ ಅವೆನ್ಯೂಗೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ
ಸೆಂಟ್ರಲ್‌ ವಿಸ್ಟಾ (Central Vista) ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಸೆಂಟ್ರಲ್‌ ವಿಸ್ಟಾ ಅವೆನ್ಯೂಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ಮೂರು ಕಿಲೋಮೀಟರ್‌ ಉದ್ದದ “ರಾಜಪಥ”ವೀಗ “ಕರ್ತವ್ಯ ಪಥ” ಹೆಸರಿನಲ್ಲಿ ಲೋಕಾರ್ಪಣೆಯಾಗಿದೆ. ಇಡೀ ಕರ್ತವ್ಯ ಪಥವು ವಿಸ್ತಾರವಾದ ಹುಲ್ಲುಹಾಸುಗಳು, ಎಂಟು ಸುಧಾರಿತ ಸಾರ್ವಜನಿಕ ಸೌಕರ್ಯಗಳ ಬ್ಲಾಕ್‌ಗಳನ್ನು ಹೊಂದಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ಮಾರ್ಗದುದ್ದಕ್ಕೂ 133ಕ್ಕೂ ಹೆಚ್ಚು ದೀಪದ ಕಂಬಗಳಿವೆ. ಕಾರ್ಯಕ್ರಮದಲ್ಲಿ ನೆರೆದವರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮೋದಿ ಭಾಷಣ: ಕರ್ತವ್ಯಪಥವು ಭಾರತೀಯ ಪ್ರಜಾಪ್ರಭುತ್ವದ ಜೀವಂತ ಆದರ್ಶ ಮಾರ್ಗ: ಮೋದಿ

2. Rain News | ಅತಿವೃಷ್ಟಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ;ಬೆಂಗಳೂರಿನ ಪ್ರದೇಶಗಳಿಗೆ ಸಿದ್ದರಾಮಯ್ಯ, ಆರಗ ಜ್ಞಾನೇಂದ್ರ ಭೇಟಿ
ರಾಜ್ಯದ ವಿವಿಧೆಡೆ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ಸಮೀಕ್ಷೆ ನಡೆಸಲು ಕೇಂದ್ರ ಗೃಹ ಇಲಾಖೆ ತಂಡ ರಾಜ್ಯ ಪ್ರವಾಸ ಆರಂಭಿಸಿದೆ. ಮೂರು ದಿನ ಅಧ್ಯಯನ ನಡೆಸಲಿರುವ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಪರಿಹಾರ ಲಭಿಸಲಿದೆ. ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದಾರೆ. ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ಅಧ್ಯಯನ ತಂಡ: ಅತಿವೃಷ್ಟಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ; 10 ದಿನದಲ್ಲಿ ಕೇಂದ್ರಕ್ಕೆ ವರದಿ
ಸಿದ್ದರಾಮಯ್ಯ ಭೇಟಿ: ಒತ್ತುವರಿಯಿಂದ ಮಂತ್ರಿಗಳಿಗೆ ಎಷ್ಟು ಸಿಕ್ಕಿದೆ?: ಅಧಿವೇಶನಕ್ಕೆ ವಿಷಯ ಫಿಕ್ಸ್‌ ಎಂದ ಸಿದ್ದರಾಮಯ್ಯ
ಆರಗ ಜ್ಞಾನೇಂದ್ರ ಭೇಟಿ: ಬೆಂಗಳೂರಿನ ವಿವಿಧೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ, ಮಳೆ ಹಾನಿ ಪರಿಶೀಲನೆ

3. NIA RAID | PFI ನಾಯಕ ರಿಯಾಜ್‌ ಪರಂಗಿಪೇಟೆಗೆ Bihar terror ತಂಡದ ಜತೆ ನಂಟು? ಏನಿದು ಪುಲ್ವಾರಿ ಷರೀಫ್‌ ಕೇಸ್‌?
ದಕ್ಷಿಣ ಕನ್ನಡದಲ್ಲಿ ಪಿಎಫ್‌ಐ ನಾಯಕನಾಗಿ ಸಾಕಷ್ಟು ಸುದ್ದಿಯಲ್ಲಿರುವ ʻತಾಂಟ್ರೆ ಬಾ ತಾಂಟ್‌ʼ ಎಂಬ ಘೋಷಣೆಯ ಮೂಲಕ ಹೆಸರಾದ ರಿಯಾಜ್‌ ಪರಂಗಿಪೇಟೆ ಮನೆಗೆ ಗುರುವಾರ ರಾಷ್ಟ್ರೀಯ ತನಿಖಾ ದಳ (NIA RAID) ದಾಳಿ ನಡೆಸಿದೆ. ದಾಳಿಯ ವೇಳೆ ರಿಯಾಜ್‌ ಪರಂಗಿಪೇಟೆ ಮನೆಯಲ್ಲೇ ಇದ್ದು, ಈಗ ವಿಚಾರಣೆ ನಡೆಯುತ್ತಿದೆ. ಇದು ಕಳೆದ ಜುಲೈ ೨೬ರಂದು ನಡೆದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಸಂಬಂಧ ನಡೆದ ದಾಳಿ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಈಗ ಅದರ ಕೊಂಡಿಗಳು ಬಿಹಾರದತ್ತ ಚಾಚಿಕೊಳ್ಳುವಂತೆ ಕಾಣುತ್ತಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಬೆಂಗಳೂರು-ಮೈಸೂರು ಹೆದ್ದಾರಿ ಸದ್ಯಕ್ಕಿಲ್ಲ ಉದ್ಘಾಟನೆ: ಭೂಸ್ವಾಧೀನ ಸಮಸ್ಯೆ ಎಂದ ಸಿಎಂ ಬೊಮ್ಮಾಯಿ
ಈ ವರ್ಷದ ದಸರಾ ವೇಳೆಗೆ ಉದ್ಘಾಟನೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿಸಿದ್ದ ಮಹತ್ವಾಕಾಂಕ್ಷಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸದ್ಯಕ್ಕಂತೂ ಲೋಕಾರ್ಪಣೆ ಆಗುವುದಿಲ್ಲ. ಈ ಕುರಿತು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದ ನೀರು ನಿಂತಿತ್ತು. ಸುತ್ತಮುತ್ತಲಿನ ಜಮೀನುಗಳಿಗೂ ಅಭೂತಪೂರ್ವವೆಂಬಂತೆ ನೀರು ನುಗ್ಗಿದ್ದರಿಂದ ಸಾಕಷ್ಟು ಬೆಳೆ ಹಾನಿಯಾಗಿತ್ತು, ಇದಕ್ಕೆ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸುತ್ತಮಜತ್ತಲಿನ ಗ್ರಾಮಸ್ಥರು ದೂರಿದ್ದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. 19ರ ಯುವತಿಗೆ ಅವಳಿ ಮಕ್ಕಳು: ಈ ಶಿಶುಗಳಿಗೆ ಇಬ್ಬರು ಅಪ್ಪಂದಿರು! ಅರೆ, ಇದು ಹೇಗೆ?
ಅವಳಿ ಮಕ್ಕಳಿಗೆ ಜನ್ಮ ನೀಡಿದ 19 ವರ್ಷದ ಯುವತಿ ಈಗ ವೈದ್ಯಕೀಯ ಲೋಕಕ್ಕೇ ಅಚ್ಚರಿ ತಂದಿದ್ದಾಳೆ. ಆಕೆ ಗರ್ಭಿಣಿಯಾಗಿದ್ದಾಗಿನಿಂದ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿದ ವೈದ್ಯೆ ತುಲಿಯೊ ಜಾರ್ಜ್ ಫ್ರಾಂಕೊ ‘ಈ ಯುವತಿಯ ಕೇಸ್​ ತುಂಬ ಅಪರೂಪ’ ಎಂದಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ ಯಾಕೆ ಅಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾಳೆ?- ಈ ಸ್ಟೋರಿ ಓದಿ.

6. Telangana Governor | ರಾಜಭವನಕ್ಕೆ ಅವಮಾನ, ಕೆಸಿಆರ್ ವಿರುದ್ಧ ತೆಲಂಗಾಣ ರಾಜ್ಯಪಾಲೆ ಆಕ್ರೋಶ
ಕೇಂದ್ರ ಸರ್ಕಾರದ ಜತೆಗೆ ಸದಾ ಸಂಘರ್ಷದಲ್ಲಿರುವ ತೆಲಂಗಾಣ ಸರ್ಕಾರವು ಇದೀಗ, ರಾಜಭವನ ವಿರುದ್ಧ ಜಟಾಪಟಿ ನಡೆಸುತ್ತಿರುವ ಮಾಹಿತಿ ಹೊರ ಬಿದ್ದಿದೆ. ಸ್ವತಃ ರಾಜ್ಯಪಾಲೆ (Telangana Governor) ಡಾ. ತಮಿಳ್‌ಸಾಯಿ ಸುಂದರರಾಜನ್ ಅವರು ಮಾಹಿತಿ ನೀಡಿದ್ದು, ರಾಜಭವನವನ್ನು ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Crypto Regulation | ಕ್ರಿಪ್ಟೊ ನಿಯಂತ್ರಣಕ್ಕೆ ಐಎಂಎಫ್‌ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಒತ್ತಾಯ
ಕ್ರಿಪ್ಟೊಗಳನ್ನು ನಿಯಂತ್ರಿಸಲು ಜಾಗತಿಕ ಮಟ್ಟದ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು (Crypto Regulation) ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಅವರ ಜತೆಗಿನ ಸಂದರ್ಶನದಲ್ಲಿ ಅವರು, ಕ್ರಿಪ್ಟೊ ನಿಯಂತ್ರಣ ಸಂಬಂಧ ಚರ್ಚಿಸಿದರು. ಹಣಕಾಸು ಸಚಿವಾಲಯ ಈ ಬಗ್ಗೆ ಟ್ವೀಟ್‌ನಲ್ಲಿ ತಿಳಿಸಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Bharat Jodo Yatra | ಕಾಂಗ್ರೆಸ್​ ಪುನರುಜ್ಜೀವನಕ್ಕೆ ಭಾರತ್​ ಜೋಡೋ ಯಾತ್ರೆ ಅತ್ಯವಶ್ಯ: ಸೋನಿಯಾ ಗಾಂಧಿ
ಭಾರತ್​ ಜೋಡೋ ಯಾತ್ರೆ (Bharat Jodo Yatra) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮುಂಜಾನೆ ಕಾಂಗ್ರೆಸ್ ನಾಯಕರು ಕನ್ಯಾಕುಮಾರಿಯ ಅಗಸ್ತೀಶ್ವರಮ್​​ನಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿದ್ದು, ‘ಶತಮಾನಗಳ ಇತಿಹಾಸ ಇರುವ ಬಹುದೊಡ್ಡ ಪಕ್ಷ ಕಾಂಗ್ರೆಸ್​ನ ಪುನರುಜ್ಜೀವನದಲ್ಲಿ ಈ ಸಾಮೂಹಿಕ ಸಂಪರ್ಕ ಕಾರ್ಯಕ್ರಮ ಭಾರತ್ ಜೋಡೋ ಯಾತ್ರೆ ಬಹುಮುಖ್ಯ ಪಾತ್ರ ವಹಿಸಲಿದೆ’ ಎಂದು ಹೇಳಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. iPhone 13 | ಐಫೋನ್ 13 ಮತ್ತು 12 ಬೆಲೆ ಕಡಿತ, ಎಷ್ಟು ಅಗ್ಗವಾಗಿವೆ? ವಾರದಲ್ಲಿ ಮತ್ತಷ್ಟು ಆಫರ್!
ಸಂಪ್ರದಾಯದಂತೆ, ಹೊಸ ಐಫೋನ್ ಲಾಂಚ್ ಮಾಡುತ್ತಿದ್ದಂತೆ ಹಳೆಯ ಐಫೋನ್‌ಗಳ ಬೆಲೆ ಕಡಿತವನ್ನು ಆ್ಯಪಲ್ ಮುಂದುವರಿಸಿದೆ. ಐಫೋನ್ 14 ಹೊಸ ಫೋನ್ ಲಾಂಚ್ ಆಗುತ್ತಿದ್ದಂತೆ ಐಫೋನ್ 13 (iPhone 13) ಮತ್ತು ಐಫೋನ್ 12 (iPhone 12) ಬೆಲೆಯಲ್ಲಿ ಕಡಿತ ಮಾಡಿದೆ. ಐಫೋನ್ 11 ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಭಾರತದಲ್ಲೂ ಈಗ ಐಫೋನ್ 14 ಲಾಂಚ್ ಆಗಿದೆ. ಇದೇ ವೇಳೆ, ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ 13 ಮತ್ತು ಐಫೋನ್ 12 ಫೋನ್ ಅತ್ಯಾಕರ್ಷಕ ಬೆಲೆಯಲ್ಲಿ ದೊರೆಯಲಿವೆ. ಐಫೋನ್ ಖರೀದಿಸಬೇಕು ಎನ್ನುವವರಿಗೆ ಇದು ಸುಸಮಯ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ವಿಸ್ತಾರ ವಿಶೇಷ | 7 ವಿಘ್ನ ಕಂಡ ಜನೋತ್ಸವ: 8ನೇ ವಿಘ್ನಕ್ಕೂ ಮೊದಲು ಹೆಸರನ್ನೇ ಬದಲಿಸಿದ BJP
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಮೂರು ವರ್ಷವಾಗಿದ್ದರ ಕಾರ್ಯಕ್ರಮದ ಮೂಲಕ ಹೇಗಾದರೂ ವಿಧಾನಸಭೆ ಚುನಾವಣೆ ಅಭಿಯಾನಕ್ಕೆ ಚಾಲನೆ ನೀಡಬೇಕೆಂಬ ರಾಜ್ಯ ಬಿಜೆಪಿ ಹಾಗೂ ಸರ್ಕಾರದ ಪ್ರಯತ್ನಕ್ಕೆ ಎದುರಾದ ವಿಘ್ನಗಳು ಅನೇಕ. ಇದೀಗ ಜನೋತ್ಸವ ಹೆಸರಿನ ಕುರಿತೂ ಚರ್ಚೆಗಳು ನಡೆದು, ಬದಲಾದ ಹೆಸರಿನಲ್ಲೂ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಹಾಗೂ ಹೀಗೂ ಸೆಪ್ಟೆಂಬರ್‌ 10ಕ್ಕೆ ದಿನಾಂಕ ನಿಗದಿಯಾಗಿದ್ದು, ಎಂಟನೇ ವಿಘ್ನ ಎದುರಾಗದಿದ್ದರೆ ಕಾರ್ಯಕ್ರಮ ನಡೆಯುವುದು ಖಚಿತ. ಏಳು ಬೀಳುಗಳ ಸಂಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version