Site icon Vistara News

ವಿಸ್ತಾರ TOP 10 NEWS: ಮಹದಾಯಿಗೆ ಸಿಗಲಿದೆ ʼಪ್ರವಾಹʼ, ರಾಜ್ಯದಲ್ಲಿ ಗುರುವಾರ ಅಮಿತ್‌ ಶಾ ಪ್ರವಾಸ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

vistara-top-10-news-centre approves prawah for mahadayi to amit shah tour to karnataka and more news

#image_title

1. Mahadayi Dispute: ಮಹದಾಯಿ ಬಿಕ್ಕಟ್ಟು ಶಮನಕ್ಕೆ ಕೇಂದ್ರ ದಿಟ್ಟ ಹೆಜ್ಜೆ, ಮಹದಾಯಿ ಪ್ರವಾಹ್‌ ರಚನೆಗೆ ಅಸ್ತು, ಏನು ಉಪಯೋಗ?
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಮಧ್ಯೆ ಉಂಟಾಗಿರುವ ಜಲ ವಿವಾದ (Mahadayi Dispute) ಬಗೆಹರಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಮಹದಾಯಿ ಜಲ ಬಿಕ್ಕಟ್ಟು ನ್ಯಾಯಾಧಿಕರಣದ ತೀರ್ಪುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ರಾಜ್ಯಗಳ ಮಧ್ಯೆ ಸಮನ್ವಯ ಸಾಧಿಸಲು ʼಮಹದಾಯಿ ಪ್ರವಾಹ್‌ʼ (Mahadayi PRAWAH-Progressive River Authority for Welfare and Harmony) ರಚನೆಗೆ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Sindhuri Vs Roopa : ಡಿ. ರೂಪ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಸಿಂಧೂರಿ, ನಿರ್ಬಂಧ ಕೋರಿದ ಅರ್ಜಿ ಬಗ್ಗೆ ನಾಳೆ ತೀರ್ಪು
ಐಪಿಎಸ್‌ ಅಧಿಕಾರಿ ಡಿ. ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಬೀದಿ ಜಗಳ (Sindhuri Vs Roopa) ಇದೀಗ ಕೋರ್ಟ್‌ ಮೆಟ್ಟಿಲೇರಿದೆ. ಡಿ. ರೂಪಾ ಅವರು ಪದೇಪದೇ ಆರೋಪ ಮಾಡುವುದಕ್ಕೆ ಮತ್ತು ಮಾಧ್ಯಮಗಳು ಅವುಗಳನ್ನು ವರದಿ ಮಾಡುವುದಕ್ಕೆ ತಡೆ ನೀಡುವಂತೆ ಕೋರಿ ರೋಹಿಣಿ ಸಿಂಧೂರಿ ಅವರು ಸಿಸಿಹೆಚ್ 74ನೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್‌ ಗುರುವಾರ (ಫೆ. ೨೩) ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Sindhuri Vs Roopa : ಆಯಮ್ಮ ಕ್ಯಾನ್ಸರ್‌ ಇದ್ದ ಹಾಗೆ, ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ತಾಳೆ: ರೂಪಾ ಮಾತಿನ ಆಡಿಯೊ ವೈರಲ್

3. 7th Pay Commission: ವಿಧಾನಸಭೆಯಲ್ಲಿ ಸರ್ಕಾರಿ ನೌಕರರ ಪರ ನಿಂತ ಬಿ.ಎಸ್‌. ಯಡಿಯೂರಪ್ಪ
ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳದ ಸಲುವಾಗಿ 7ನೇ ವೇತನ ಆಯೋಗದ (7th Pay Commission) ವರದಿ ಪಡೆದು ಜಾರಿ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಒತ್ತಾಯ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ. 7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ

4. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ, 100 ಮೋದಿ, ಶಾ ಬಂದರೂ ತಪ್ಪಿಸಲು ಸಾಧ್ಯವಿಲ್ಲ: ಖರ್ಗೆ ಭರವಸೆ
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಜ್ಜಾಗಿರುವ ವಿಪಕ್ಷಗಳ ಒಕ್ಕೂಟವನ್ನು ಕಾಂಗ್ರೆಸ್​ ಮುನ್ನಡೆಸಲಿದೆ. 137 ವರ್ಷ ಹಳೆಯದಾದ ನಮ್ಮ ಪಕ್ಷ ಈ ಬಗ್ಗೆ ಇನ್ನಿತರ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. B.S. Yediyurappa: ಇದು ನನ್ನ ಕೊನೆಯ ಅಧಿವೇಶನ ಎಂದು ಗದ್ಗದಿತರಾದ ಬಿ.ಎಸ್‌. ಯಡಿಯೂರಪ್ಪ: ಶುಕ್ರವಾರ ವಿದಾಯ ಭಾಷಣ
 ತಾವಿನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ (B.S. Yediyurappa), ಬಿಜೆಪಿ ತಮಗೆ ಎಲ್ಲ ಅವಕಾಶಗಳನ್ನೂ ನೀಡಿದೆ ಎನ್ನುತ್ತ ವಿಧಾನಸಭೆಯಲ್ಲಿ ಗದ್ಗದಿತರಾದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. CT Ravi: ಮಾಂಸ ತಿಂದು ನಾಗಬನ, ಹನುಮ ದೇಗುಲಕ್ಕೆ ಭೇಟಿ ಕೊಟ್ಟರಾ ಸಿ.ಟಿ ರವಿ?;‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು ಈಗ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಮಾಂಸದ ಊಟ ಸೇವಿಸಿ (Meat meals) ದೇವರ ದರ್ಶನ ಮಾಡಿರುವ ಗಂಭೀರ ಆರೋಪ ಅವರ ಮೇಲೆ ಕೇಳಿಬಂದಿದ್ದು, ಈ ಸಂಬಂಧ ಬಾಡೂಟ ಮಾಡಿರುವ ವಿಡಿಯೊಗಳು ಹಾಗೂ ಫೋಟೊಗಳು ವೈರಲ್‌ ಆಗಿವೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಮಾಂಸ ತಿಂದು ದೇವಾಲಯಕ್ಕೆ ಹೋಗುವುದು ಅಪರಾಧ ಅನ್ನೋ ಬಿಜೆಪಿ ಸಿ.ಟಿ.ರವಿ ಬಗ್ಗೆ ತುಟಿ ಬಿಚ್ಚುವುದಿಲ್ಲ: ಕಾಂಗ್ರೆಸ್‌ ಟೀಕೆ

7. Amit shah: ಕಮಲ‌ ಅರಳದ ಸಂಡೂರು ಕ್ಷೇತ್ರದಲ್ಲಿ ಚಾಣಕ್ಯನ ಮೋಡಿ ಯತ್ನ; 4 ಜಿಲ್ಲೆಗಳಿಗೆ ಬಲ ನೀಡುವುದೇ ಜನಪ್ರತಿನಿಧಿಗಳ ಸಭೆ?
ಕಮಲ ಅರಳದ ಕ್ಷೇತ್ರ ಸಂಡೂರಿನಲ್ಲಿ ಬಿಜೆಪಿ ಚುನಾವಣಾ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸಮಾವೇಶ ನಡೆಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಮುಂದಾಗಿದ್ದಾರೆ. ಅಲ್ಲದೆ, ಈ ಭಾಗದ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯ ಮೂಲಕ ಚುನಾವಣೆಗೆ ಬೂಸ್ಟ್ ನೀಡಲಿದ್ದಾರೆ. ಈ ಮೂಲಕ ಈ ಭಾಗದಲ್ಲಿ ವಿಧಾನಸಭಾ ಚುನಾವಣೆಯ (Karnataka Election 2023) ಕಾವನ್ನು ಹೆಚ್ಚಿಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Shiv Sena Symbol Row: ಚುನಾವಣೆ ಆಯೋಗದ ತೀರ್ಮಾನಕ್ಕೆ ತಡೆ ನೀಡಲು ಸುಪ್ರೀಂ ನಕಾರ, ಉದ್ಧವ್‌ಗೆ ಮತ್ತೆ ಹಿನ್ನಡೆ
ಶಿವಸೇನೆಯ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆ ಪ್ರಕರಣಕ್ಕೆ (Shiv Sena Symbol Row) ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹಾಗೂ ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಚುನಾವಣೆ ಆಯೋಗವು ಏಕನಾಥ್‌ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಹಾಗೂ ಚಿಹ್ನೆ ನೀಡಿರುವುದನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ನೋಟಿಸ್‌ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Sensex market crash : ಸೆನ್ಸೆಕ್ಸ್‌ 700 ಅಂಕ ಪತನ, ಹೂಡಿಕೆದಾರರಿಗೆ 4 ದಿನದಲ್ಲಿ 7 ಲಕ್ಷ ಕೋಟಿ ರೂ. ನಷ್ಟ, ಕಾರಣವೇನು?
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ (BSE) ಸೆನ್ಸೆಕ್ಸ್‌ (sensex) ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ 700ಕ್ಕೂ ಹೆಚ್ಚು ಅಂಕ ಕುಸಿತಕ್ಕೀಡಾಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ (nifty) 212 ಅಂಕ ಕುಸಿದು 17,612 ಕ್ಕೆ ಇಳಿಯಿತು. ಮಧ್ಯಾಹ್ನ 1.15ರ ವೇಳೆಗೆ ಸೆನ್ಸೆಕ್ಸ್‌ 707 ಅಂಕ ನಷ್ಟದಲ್ಲಿ ೫೯,೯೬೫ ಕ್ಕೆ ಇಳಿದು 59,963ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 217 ಅಂಕ ನಷ್ಟದಲ್ಲಿ 17,608ಕ್ಕೆ ವಹಿವಾಟು ನಡೆಸುತ್ತಿತ್ತು. ಬುಧವಾರ ಬಿಎಸ್‌ಇ ಮಾರುಕಟ್ಟೆಯ ಮೌಲ್ಯದಲ್ಲಿ 3 ಲಕ್ಷ ಕೋಟಿ ರೂ. ಕುಸಿತಕ್ಕೀಡಾಗಿದ್ದು, 262 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಕಳೆದ 4 ದಿನದಲ್ಲಿ ಹೂಡಿಕೆದಾರರಿಗೆ ಒಟ್ಟು 7 ಲಕ್ಷ ಕೋಟಿ ರೂ. ನಷ್ಟವಾಗಿದೆ. (Sensex market crash) ಮುಖ್ಯವಾಗಿ ಬಡ್ಡಿ ದರಗಳರ ಏರುಗತಿ ಪಡೆಯುವ ಆತಂಕ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್ 1500 ಅಂಕ ನಷ್ಟಕ್ಕೀಡಾಗಿದೆ.‌ ಷೇರು ಸೂಚ್ಯಂಕ ನಷ್ಟಕ್ಕೆ ಕಾರಣವನ್ನು ನೋಡೋಣ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Class 1 Admission Age: 1ನೇ ತರಗತಿ ಪ್ರವೇಶಾತಿಯ ಕನಿಷ್ಠ ವಯಸ್ಸು 6ಕ್ಕೆ ಏರಿಸಿ, ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚನೆ
ಶಾಲೆಗಳಲ್ಲಿ ಒಂದನೇ ತರಗತಿಯ ಪ್ರವೇಶಾತಿಯ (Class 1 Admission Age) ಕನಿಷ್ಠ ವಯಸ್ಸನ್ನು ೬ಕ್ಕೆ ಏರಿಕೆ ಮಾಡಿ ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಎಲ್ಲ ರಾಜ್ಯಗಳಲ್ಲೂ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು ೬ ಇರಬೇಕು ಎಂಬುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version