1. Chandrayaan 3: ದೇಶದ ಕನಸು ಆಗಸಕ್ಕೆ; ಫ್ರಾನ್ಸ್ನಿಂದಲೇ ಚಂದ್ರಯಾನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ
ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan 3)ಗೆ ಕೌಂಟ್ಡೌನ್ ಶುರುವಾಗಿದೆ. ಒಂದು ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶ ಕಾತರತೆಯಿಂದ ಕಾಯುತ್ತಿದೆ. ಇದೇ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಟ್ವೀಟ್ ಮಾಡಿ, ಇಸ್ರೋದ (ISRO) ಮಹಾನ್ ಮಿಷನ್ ಚಂದ್ರಯಾನ-3ಕ್ಕೆ ಶುಭ ಹಾರೈಸಿದ್ದಾರೆ. ‘ಭಾರತದ ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿಯೇ ಜುಲೈ 14 ಸುವರ್ಣಾಕ್ಷರಗಳಿಂದ ಬರೆದಿಡಲ್ಪಡುವ ದಿನ ಆಗಲಿದೆ. ನಮ್ಮ ಚಂದ್ರಯಾನ 3ರ ಪ್ರಯಾಣ ಇನ್ನೇನು ಕೆಲವೇ ಹೊತ್ತಲ್ಲಿ ಪ್ರಾರಂಭವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ನಮ್ಮ ದೇಶದ ಭರವಸೆ ಮತ್ತು ಕನಸುಗಳನ್ನು ಹೊತ್ತು ಸಾಗಲಿದೆ’ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Chandrayaan 3: ಚಂದ್ರಯಾನ 3 ಉಡಾವಣೆ ಯಶಸ್ವಿ; ಆದರೂ, ಆಗಸ್ಟ್ 23ರವರೆಗೆ ನಾವೇಕೆ ಕಾಯಬೇಕು?
2. Chakravarti Sulibele: ಬಿಜೆಪಿ-ಕಾಂಗ್ರೆಸ್ ಇಬ್ಬರಿಗೂ ನಾನು ಡೇಂಜರ್ ಎನ್ನೋದು ಗೊತ್ತು: ಚಕ್ರವರ್ತಿ ಸೂಲಿಬೆಲೆ ಸಂದರ್ಶನ
ತಮ್ಮನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರೆ, ಕಾಂಗ್ರೆಸ್‌ನವರು ಮಾತ್ರ ತೆಗಳುತ್ತಾರೆ ಎಂಬುದನ್ನು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಅಲ್ಲಗಳೆದಿದ್ದಾರೆ. ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರೊಂದಿಗೆ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Chakravarti Sulibele: ನಾನು ಎಂಟ್ರಿ ಕೊಟ್ಟ ತಕ್ಷಣ ಬಿಜೆಪಿಯಲ್ಲಿ ತಲ್ಲಣ: ರಾಜಕೀಯ ಸೇರ್ಪಡೆ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತು
3. PM Modi France Visit: ನರೇಂದ್ರ ಮೋದಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿದ ಫ್ರಾನ್ಸ್
ಫ್ರಾನ್ಸ್ ದೇಶಕ್ಕೆ ಭೇಟಿ ನೀಡಿರುವ (PM Modi France Visit) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಆಗಿರುವ ʼಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ʼ ಅನ್ನು ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Rashtriya Swayamsevak Sangh: ಆರ್‌ಎಸ್‌ಎಸ್ ಸಂಸ್ಥೆಗಳಿಗೆ ಭೂಮಿ ಹಂಚಿಕೆಗೆ ತಡೆ: ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಆಕ್ರೋಶ
ಆರ್‌ಎಸ್‌ಎಸ್‌ನ (Rashtriya Swayamsevak Sangh) ಅಂಗಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಇದ್ದಾಗ ಭೂಮಿ ಹಂಚಿಕೆ ಮಾಡಿದ್ದನ್ನು ತಡೆ ಹಿಡಿಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚನ್ನೇನಹಳ್ಳಿಯ ಜನಸೇವಾ ಟ್ರಸ್ಟ್, ರಾಷ್ಟ್ರೋತ್ಥಾನ ಪರಿಷತ್ ಸೇರಿ ಅನೇಕ ಸಂಸ್ಥೆಗಳಿಗೆ ಬಿಜೆಪಿ ಅವಧಿಯಲ್ಲಿ ಭೂಮಿ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ತಡೆ ನೀಡಲಾಗಿದೆ ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಉತ್ತರ ನೀಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Vanshika Anjani kashyapa : ವಂಶಿಕಾ ಮಾಸ್ಟರ್ ಆನಂದ್ ಹೆಸ್ರಲ್ಲಿ ಹಣ ಪೀಕಿದ ನಿಶಾಗೆ 14 ದಿನಗಳ ನ್ಯಾಯಾಂಗ ಬಂಧನ
ಸೋಶಿಯಲ್ ಮೀಡಿಯಾ ಹಾಗೂ ರಿಯಾಲಿಟಿ ಸ್ಟಾರ್ ಆಗಿರುವ ವಂಶಿಕಾ ಹೆಸರಿನಲ್ಲಿ (Vanshika Anjani kashyapa) ನಿಶಾ ನರಸಪ್ಪ ಎಂಬಾಕೆ ಹಣ ಲೂಟಿ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮಾಸ್ಟರ್ ಆನಂದ್ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿದ್ದರು. ಇದೀಗ ನಿಶಾ ನರಸಪ್ಪಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎಸಿಎಮ್‌ಎಮ್ ಕೋರ್ಟ್ ಆದೇಶ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Delhi Flood: ದೆಹಲಿ ಮಳೆ ಮಧ್ಯೆ ಯಮಸ್ವರೂಪಿ ವಿದ್ಯುತ್ ಕಂಬಗಳು, ಪಾದಚಾರಿಗಳಿಗೆ ಶಾಕ್
ದೆಹಲಿಯಲ್ಲಿ ವಿಪರೀತ ಮಳೆ-ಯಮುನಾ ನದಿಯ ಪ್ರವಾಹದ (Delhi Flood) ಮಧ್ಯೆ ರಸ್ತೆಗಳಲ್ಲಿ ಜನರ ಓಡಾಟ-ವಾಹನ ಸಂಚಾರವೇ ಕಷ್ಟವಾಗಿದೆ. ಅದರ ಮಧ್ಯೆ ಇನ್ನೊಂದು ಸಮಸ್ಯೆ ಶುರುವಾಗಿದೆ. ದೆಹಲಿಯ ಹಲವು ಕಡೆಗಳಲ್ಲಿ ಕೆಟ್ಟು ನಿಂತಿರುವ ವಿದ್ಯುತ್ ಕಂಬಗಳು ಯಮಸ್ವರೂಪಿಯಾಗಿ ಕಾಡುತ್ತಿವೆ. ಹರಿದು ಬಿದ್ದ ವೈಯರ್ಗಳಲ್ಲಿ ಪ್ರವಹಿಸುತ್ತಿರುವ ವಿದ್ಯುತ್ನಿಂದಾಗಿ ಜನರು ರಸ್ತೆಗೆ ಕಾಲಿಡಲು ಭಯಪಡುವಂತಾಗಿದೆ. ವಿದ್ಯುತ್ ಶಾಕ್ಗೆ ಒಳಗಾಗುತ್ತಿದ್ದಾರೆ. ಈಗಾಗಲೇ ಒಂದಿಬ್ಬರ ಪ್ರಾಣವೂ ಹೋಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Weather Report : ಕರಾವಳಿಯಲ್ಲಿ ನಾಳೆ ಮಳೆ ವೈಲೆಂಟ್; ದಕ್ಷಿಣ ಒಳನಾಡಿನಲ್ಲಿ ಫುಲ್ ಸೈಲೆಂಟ್!
ರಾಜ್ಯಾದ್ಯಂತ ಮುಂದಿನ 4 ದಿನಗಳಲ್ಲಿ ಭಾರಿ ಮಳೆಯಾಗುವ (Rain news) ಸಾಧ್ಯತೆ ಇದ್ದು, ಹವಾಮಾನ ಇಲಾಖೆ (Weather report) ಯೆಲ್ಲೋ ಅಲರ್ಟ್ ನೀಡಿದೆ. ಮಹಾರಾಷ್ಟ್ರ ದಕ್ಷಿಣದಿಂದ ಕರಾವಳಿಯ ಉತ್ತರಕ್ಕೆ ಸಮುದ್ರದ ಮಟ್ಟದಲ್ಲಿ ಟ್ರಫ್ ಹಾದುಹೋಗಿದೆ. ಇದರ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. IND vs WI: ಮೊದಲ ಶತಕ, ಜೈಸ್ವಾಲ್ ಭಾವುಕ
ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ತಮ್ಮ ಶತಕದ ಬಳಿಕ ಭಾವುಕರಾಗಿದ್ದಾರೆ. ತಮ್ಮ ಕಷ್ಟದ ಸಮಯದಲ್ಲಿ ಜತೆಯಾಗಿ ನಿಂತು ಸಹಕರಿಸಿದ ತಂದೆ ತಾಯಿ ಮತ್ತು ಸ್ನೇಹಿತರಿಗೆ ಈ ಶತಕವನ್ನು ಅರ್ಪಿಸಿಸಿದ್ದಾರೆ. ಜೈಸ್ವಾಲ್ ಅವರು ಭಾವನಾತ್ಮಕವಾಗಿ ಮಾತನಾಡಿದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Tomato Price: ಟೊಮ್ಯಾಟೊ ಬೆಳೆದು 30 ಲಕ್ಷ ರೂ. ಸಂಪಾದಿಸಿದ ರೈತನ ಬರ್ಬರ ಹತ್ಯೆ
ದೇಶಾದ್ಯಂತ ಟೊಮ್ಯಾಟೊ ಬೆಲೆ (Tomato Price) ಏರಿಕೆಯಾಗುತ್ತಿದ್ದು, ಬೆಳೆಗಾರರಿಗೆ ಬಂಪರ್ ಎಂಬಂತಾಗಿದೆ. ಜತೆಜತೆಗೇ ಟೊಮ್ಯಾಟೊ ಕಳವು ಕೇಸ್ಗಳೂ ಹೆಚ್ಚುತ್ತಿವೆ. ಆದರೆ ಆಂಧ್ರಪ್ರದೇಶದಲ್ಲಿ ಟೊಮ್ಯಾಟೊ ರೈತನೊಬ್ಬನ ಹತ್ಯೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ರೈತ ನರೇಮ್ ರಾಜಶೇಖರ್ ರೆಡ್ಡಿ ಎಂಬುವರು ಇತ್ತೀಚೆಗಷ್ಟೇ ತಾನು ಬೆಳೆದ ಟೊಮ್ಯಾಟೊವನ್ನು ಮಾರಾಟ ಮಾಡಿ, 30 ಲಕ್ಷ ರೂಪಾಯಿ ಆದಾಯ ಗಳಿಸಿದ್ದರು (Tomato Price Rise). ಅದರ ಬೆನ್ನಲ್ಲೇ ಅವರನ್ನು ಹತ್ಯೆ ಮಾಡಿ, ಹಣವನ್ನೆಲ್ಲ ದೋಚಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ರೆಸ್ಟೋರೆಂಟ್ಗೇ ದುಬಾರಿಯಾದ ಮಸಾಲೆ ದೋಸೆ; ವಕೀಲನ ‘ಸಾಂಬಾರ್’ ಹೋರಾಟಕ್ಕೆ ಸಿಕ್ತು ಜಯ
ಬಿಹಾರದ ರೆಸ್ಟೋರೆಂಟ್ವೊಂದಕ್ಕೆ (Bihar Restaurant) ಸ್ಪೆಶಲ್ ಮಸಾಲಾ ದೋಸೆ ತುಂಬ ದುಬಾರಿಯಾಗಿ ಪರಿಣಮಿಸಿದೆ. ಗ್ರಾಹಕರೊಬ್ಬರು ಆರ್ಡರ್ ಮಾಡಿದ 140 ರೂಪಾಯಿ ಸ್ಪೆಶಲ್ ಮಸಾಲೆ ದೋಸೆಗೆ ಸಾಂಬಾರ್ ಕೊಡದ ಕಾರಣ, ಈಗ ಗ್ರಾಹಕ ನ್ಯಾಯಾಲಯ, ರೆಸ್ಟೋರೆಂಟ್ಗೆ 3500 ರೂಪಾಯಿ ದಂಡ ವಿಧಿಸಿದೆ. ಮಸಾಲೆ ದೋಸೆಯೊಂದಿಗೆ ಚಟ್ನಿ ಮತ್ತು ಸಾಂಬಾರ್ ನೀಡಬೇಕು. ಆದರೆ ರೆಸ್ಟೋರೆಂಟ್ನಲ್ಲಿ 140 ರೂಪಾಯಿ ಕೊಟ್ಟು ದೋಸೆ ಆರ್ಡರ್ ಮಾಡಿದರೂ, ಬರೀ ಚಟ್ನಿ ಮಾತ್ರ ಕೊಟ್ಟಿದ್ದಾರೆ. ಸಾಂಬಾರ್ ಕೊಟ್ಟಿಲ್ಲ ಎಂದು ಗ್ರಾಹಕರೇ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಆ ಕೇಸ್ನಲ್ಲಿ ಈಗ ರೆಸ್ಟೋರೆಂಟ್ಗೆ ಹಿನ್ನಡೆಯಾಗಿದೆ. ಸುದ್ದಿ ಭರ್ಜರಿ ವೈರಲ್ ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.