ಬೆಂಗಳೂರು: ಗಡಿ ಪ್ರದೇಶದಲ್ಲಿ ಚೀನಾ-ಭಾರತ ಸೈನಿಕರ ನಡುವಿನ ಸಂಘರ್ಷವು ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಲು ಕಾಂಗ್ರೆಸ್ ಸಭೆ ನಡೆಸಿದೆ, ಒಳ ಮೀಸಲಾತಿ ಕುರಿತು ಅಧ್ಯಯನಕ್ಕೆ ಸರ್ಕಾರ ಸಂಪುಟ ಉಪಸಮಿತಿ ರಚಿಸಿದೆ, ಬೆಂಗಳೂರಿನಲ್ಲಿ ಜಿ20 ಪೂರ್ವಭಾವಿ ಸಭೆ ಆರಂಭವಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Amit Shah On Nehru | ಚೀನಾ ಮೇಲೆ ನೆಹರು ಪ್ರೀತಿಯಿಂದ ಭಾರತದ ಕೈತಪ್ಪಿದ ವಿಶ್ವಸಂಸ್ಥೆ ಕಾಯಂ ಸದಸ್ಯತ್ವ, ಶಾ ವಾಗ್ದಾಳಿ
ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ಉಂಟಾಗಿದೆ. ಚೀನಾ ಸೈನಿಕರ ದಾಳಿ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಇದರ ಮಧ್ಯೆಯೇ, ಚೀನಾ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೆಹರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಚೀನಾ-ಬಾರತ ಗಡಿ ವಿಚಾರ ಕುರಿತು ಮತ್ತಷ್ಟು ಸುದ್ದಿಗಳು:
ಅ. Rajiv Gandhi Foundation | ಚೀನಾ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಫೌಂಡೇಷನ್‌ಗೆ ₹1.35 ಕೋಟಿ ಸಂದಾಯ?
ಆ. ಭಾರತ-ಚೀನಾ ಗಡಿ ಸಂಘರ್ಷ; ಅರುಣಾಚಲ ಪ್ರದೇಶ ಬಾರ್ಡರ್ನಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದ ಚೀನಾ
ಇ. ವಿಸ್ತಾರ Explainer | ಭಾರತದ ಜತೆ ಚೀನಾ ಗಡಿ ಕಿರಿಕ್; ಏನಿದರ ಹಿನ್ನೆಲೆ?
ಈ. ಭಾರತ-ಚೀನಾ ಸಂಘರ್ಷ; ಚೀನಾ ಸೈನಿಕರನ್ನು ನಮ್ಮ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದರು ಎಂದ ರಾಜನಾಥ್ ಸಿಂಗ್
2. ಮುಸ್ಲಿಂ ಮತ ವಿಭಜನೆ ತಡೆಯಲು ಕಾಂಗ್ರೆಸ್ ಮಹತ್ವದ ಸಭೆ: 20 ಹೆಚ್ಚು ಟಿಕೆಟ್‌ಗೆ ಬೇಡಿಕೆ
ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತಗಳು ಇತ್ತೀಚಿನ ವರ್ಷಗಳಲ್ಲಿ ವಿಭಜನೆಯಾಗಿ ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಿರುವ ಕುರಿತು ಗಂಭೀರ ಸಭೆಯನ್ನು ನಡೆಸಲಾಗಿದೆ. ಶಿವಾಜಿನಗರದ ಸಲಾರ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಒಳಮೀಸಲಾತಿ ಕಾರ್ಯಕ್ಕೆ ವೇಗ: ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿದ ಸರ್ಕಾರ
ಪರಿಶಿಷ್ಟ ಜಾತಿಯ ಒಳಪಂಡಗಳಿಗೆ ಮೀಸಲಾತಿ ವರ್ಗೀಕರಣ ಮಾಡುವ ಒಳಮೀಸಲಾತಿ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ವೇಗ ನೀಡಿದ್ದು, ಈ ಕುರಿತು ಅಧ್ಯಯನ ನಡೆಸಲು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಎಲೆಕ್ಷನ್ ಹವಾ | ಕೊಪ್ಪಳ | ಕರಡಿ ವರ್ಸಸ್ ಹಿಟ್ನಾಳ್ ಫೈಟ್ ನಡುವೆ ಮೂರನೆಯವರ ಎಂಟ್ರಿ ಆಗಬಹುದೇ?
ಸದಾ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಗೇ ಕೊಪ್ಪಳ ಕ್ಷೇತ್ರ ಹೆಸರುವಾಸಿ. ಈ ಬಾರಿ ಮೂರನೇ ವ್ಯಕ್ತಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಆಗಲೂ ಎರಡು ಕುಟುಂಗಳ ಫೈಟ್ ಮುಂದುವರಿಯುತ್ತದೆ ಎನ್ನುವುದು ವಾಸ್ತವ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Education News | ಈ ವರ್ಷದಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ; ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ
ಈ ವರ್ಷದಿಂದಲೇ (2022-23 ಸಾಲಿನಿಂದ) ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನೆಡೆಸಲು ಶಿಕ್ಷಣ ಇಲಾಖೆ ಆದೇಶ (Education News) ಹೊರಡಿಸಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಪರೀಕ್ಷೆ ನಡೆಸಲಿದ್ದು, ಮಾರ್ಚ್ 9ರಿಂದ ಮಾ.17ರ ವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ದೆಹಲಿ ಮಾದರಿ ಕೊಲೆ | ತಂದೆಯನ್ನು ಕೊಂದು 30 ಚೂರು ಮಾಡಿ ಕೊಳವೆ ಬಾವಿಗೆ ಎಸೆದ ಮಗ!
ಮಗನೊಬ್ಬ ತಂದೆಯನ್ನು ಕೊಂದು, ದೆಹಲಿಯ ಪ್ರಿಯತಮೆಯ ಕೊಲೆ ಮಾದರಿಯಲ್ಲಿ ದೇಹವನ್ನು ಕೊಚ್ಚಿ ಮೂವತ್ತು ತುಂಡು ಮಾಡಿ ವಿಲೇವಾರಿ ಮಾಡಲು ಯತ್ನಿಸಿದ್ದಾನೆ. ಈ ಘಟನೆ ನಡೆದಿರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ವಿಸ್ತಾರ Explainer | ಏನಿದು ಝಿಕಾ ವೈರಸ್? ಬರದಂತೆ ಹೇಗೆ ತಡೆಯಬಹುದು?
ನಮ್ಮ ರಾಜ್ಯದಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, ಜನರಲ್ಲಿ ಭೀತಿ ಆವರಿಸಿದೆ. ಆದರೆ, ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಂಡರೆ ಈ ವೈರಸ್ ಹಾವಳಿಯಿಂದ ಪಾರಾಗಬಹುದು. ಈ ಕುರಿತು ವಿಸ್ತೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
8. G20 Presidency | ಜಿ 20 ಶೃಂಗ ಸಭೆಗೆ ಬಂದ ಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ, ಕಪ್ಪುಪಟ್ಟಿ ಪ್ರದರ್ಶಿಸಲು ಬಂದ ರೈತರಿಗೆ ತಡೆ
2023ರ ಸೆಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ದೇವನಹಳ್ಳಿಯಲ್ಲಿ ಆಯೋಜನೆಯಾಗಿರುವ ಪೂರ್ವಭಾವಿ ಸಭೆಗೆ (G20 Presidency) ಆಗಮಿಸುತ್ತಿರುವ ಗಣ್ಯಾತಿಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿದೆ. ಗಣ್ಯರಿಗೆ ಆನೆಗಳ ಮೂಲಕ ಸ್ವಾಗತ ನೀಡಿದ್ದು ಮಾತ್ರವಲ್ಲದೆ, ಯಕ್ಷಗಾನದ ವೇಷಗಳ ಕುಣಿತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಂದವರಿಗೆ ಸಾಂಪ್ರದಾಯಿಕ ಶಾಲು, ಪೇಟ ತೊಡಿಸಿ ಖುಷಿಪಡಿಸಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಮಾಹಿತಿಗೆ: ವಿಸ್ತಾರ Explainer | ಏನಿದು ಜಿ 20? ಅಧ್ಯಕ್ಷತೆ ಜವಾಬ್ದಾರಿಯಿಂದ ಭಾರತಕ್ಕೆ ಏನು ಲಾಭ?
9. Pejavara sri | ದಲಿತರ ಮನೆಗಳಿಗೆ ಭೇಟಿ ನೀಡುವ ಹಿರಿಯ ಶ್ರೀಗಳ ಸಂಪ್ರದಾಯ ಮುಂದುವರಿಸಿದ ಪೇಜಾವರ ಸ್ವಾಮೀಜಿ
ದಲಿತರು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಅಸ್ಪೃಶ್ಯತೆ ನಿವಾರಣೆಯ ಮಹಾ ಆಂದೋಲನ ಆರಂಭಿಸಿದ್ದ ಪೇಜಾವರ ಮಠದ ಬೃಂದಾವನಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾ ಮೇಲ್ಪಂಕ್ತಿಯನ್ನು ಈಗಿನ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೂಡಾ ಮುಂದುವರಿಸಿದ್ದಾರೆ. ಮಂಗಳವಾರ ದಾವಣಗೆರೆಯ ಶಕ್ತಿ ನಗರದಲ್ಲಿರುವ ದಲಿತ ಮುಖಂಡ ಲಿಂಗರಾಜ್ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆಕೊಟ್ಟ ಕಾಂಗ್ರೆಸ್ ಮಾಜಿ ಸಚಿವ ಬಂಧನ
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶ ಮಾಜಿ ಸಚಿವ ರಾಜಾ ಪಟೇರಿಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ, ದ್ವೇಷಯುಕ್ತ ಭಾಷಣ ಮಾಡಿದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಅವರ ಭಾಷಣದ ವಿಡಿಯೊ ವೈರಲ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Murugha Seer | ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ಪಿ.ಎಸ್. ವಸ್ತ್ರದ್ ನೇಮಕ
- Arecanut Price | ಕುಸಿಯುತ್ತಲೇ ಇರುವ ಅಡಿಕೆ ಧಾರಣೆ; 2 ತಿಂಗಳಿನಲ್ಲಿ 20 ಸಾವಿರ ರೂ. ಇಳಿಕೆ
- ವಿಸ್ತಾರ Money Guide | PSU Bank Stock | 12ರಲ್ಲಿ 10 ಸಾರ್ವಜನಿಕ ಬ್ಯಾಂಕ್‌ಗಳ ಷೇರು ದರ ದಾಖಲೆಯ ಏರಿಕೆ, ಕಾರಣ ಏನು?
- Mahadayi issue | ಮಹದಾಯಿ ಸಮಸ್ಯೆಗೆ ಸೋನಿಯಾ ಗಾಂಧಿಯೇ ಕಾರಣ ಎಂದ ಸಿಎಂ ಬಸವರಾಜ ಬೊಮ್ಮಾಯಿ
- SBI interest rate | ಸಣ್ಣ ಉಳಿತಾಯಗಾರರಿಗೆ ಸಿಹಿ ಸುದ್ದಿ, ಎಸ್‌ಬಿಐ ಎಫ್‌ಡಿ ಠೇವಣಿ ದರ 7.25% ತನಕ ಏರಿಕೆ
- ಲೈಫ್ ಸರ್ಕಲ್ ಅಂಕಣ | ತಪಸ್ಸಿನ ಆಚರಣೆ ಹೇಗೆ?