Site icon Vistara News

ವಿಸ್ತಾರ TOP 10 NEWS: ಗ್ಯಾರಂಟಿ ಮತ್ತಷ್ಟು ಗೊಂದಲದಿಂದ, ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಒಡಕಿನವರೆಗೆ ಪ್ರಮುಖ ಸುದ್ದಿಗಳಿವು

implementation to faction in rajasthan congress and more news

#image_title

1. Congress Guarantee: ಬಾಡಿಗೆದಾರರಿಗೆ ಫ್ರೀ ಕರೆಂಟ್‌ ಶಾಕ್: ಬಾಯಿ ಮಾತು, ಟ್ವೀಟ್‌ನಲ್ಲಷ್ಟೆ ಕಾಂಗ್ರೆಸ್‌ ಗ್ಯಾರಂಟಿ
ಮಾಸಿಕ 200 ಯುನಿಟ್‌ ವಿದ್ಯುತ್‌ ನೀಡುವುದಾಗಿ ತಿಳಿಸಿದ್ದ ಕಾಂಗ್ರೆಸ್‌ ಪಕ್ಷ ಇದೀಗ ಗೃಹ ಜ್ಯೋತಿ ಯೋಜನೆಗೆ ಹೊರಡಿಸಿರುವ ಮಾರ್ಗಸೂಚಿ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರ ಸೋಮವಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಮನೆ ಮಾಲೀಕರಿಗಷ್ಟೆ ಯೋಜನೆ ಅನ್ವಯ ಎಂದು ಕಾಣುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.‌ ಬಾಯಿ ಮಾತಿನಲ್ಲಿ ಹಾಗೂ ಟ್ವೀಟ್‌ ಮೂಲಕ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷ ಸ್ಪಷ್ಟನೆ ನೀಡುತ್ತಿದ್ದು, ಲಿಖಿತವಾಗಿ ಇನ್ನೂ ಹೊರಬಂದಿಲ್ಲ,. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. SC/ST Reservation: ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರವನ್ನು ಕಟ್ಟಿಹಾಕಲು ಸಿಎಂ ಸಿದ್ದರಾಮಯ್ಯ ತಂತ್ರ: ಸ್ವಾಮೀಜಿಗಳೊಂದಿಗೆ ಸಭೆ
ಚುನಾವಣೆ ಹತ್ತಿರದಲ್ಲಿರುವಂತೆ ಎಸ್‌ಸಿ/ಎಸ್‌ಟಿ ಸಮುದಾಯಗಳ ಮೀಸಲಾತಿ (SC/ST Reservation) ಹೆಚ್ಚಳ ಮಾಡಿದ್ದ ಬಿಜೆಪಿ ನಡೆಯನ್ನು ಇದೀಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಬದಲಾಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Moral policing: ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್: ಡಾ. ಜಿ. ಪರಮೇಶ್ವರ್|
ನೈತಿಕ ಪೊಲೀಸ್‌ಗಿರಿ (Moral policing) ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ (Anti communal wing) ಅನ್ನು ಸ್ಥಾಪಿಸಲಾಗುವುದು. ಮಂಗಳೂರು ಕಮೀಷನರೇಟ್‌ (Mangalore Commissionerate) ವ್ಯಾಪ್ತಿಯಲ್ಲಿ ಈ ನೂತನ ಪಡೆ ಅಸ್ಥಿತ್ವಕ್ಕೆ ಬರಲಿದೆ ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwar) ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. JDS Karnataka: ದೇಶದಲ್ಲಿ ಬಿಜೆಪಿ ಜತೆ ಕೈಜೋಡಿಸದ ಪಕ್ಷ ಇದ್ದರೆ ತೋರಿಸಿ: ಬಿಜೆಪಿ ವಿರೋಧಿ ಕೂಟ ಸೇರದ ಬಗ್ಗೆ ಎಚ್‌.ಡಿ. ದೇವೇಗೌಡ ಸುಳಿವು
ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ ಅಲ್ಲವೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಕಾಂಗ್ರೆಸ್‌ಗೆ ಮತ್ತೊಂದು ಆಘಾತ! ಖರ್ಗೆಗೆ ‘ಕೈ’ ಕೊಟ್ಟು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಯುವ ನಾಯಕ
ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ರಾಜಸ್ಥಾನದ ಕಾಂಗ್ರೆಸ್‌ನಲ್ಲಿನ ಬಿರುಕು (Rajasthan Congress Crisis) ಮತ್ತುಷ್ಟು ಹೆಚ್ಚಾಗಿದೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (CM Ashok Gehlot) ಜತೆಗೆ ಮುನಿದುಕೊಂಡಿರುವ ಯುವ ನಾಯಕ ಸಚಿನ್ ಪೈಲಟ್ (Sachin Pilot) ಅವರು, ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿದೆ. ಚುನಾವಣೆ ಎರಡ್ಮೂರು ತಿಂಗಳು ಇರುವಾಗಲೇ ತಮ್ಮದೇ ಆದ ಪ್ರಗತಿಶೀಲ ಕಾಂಗ್ರೆಸ್ (Pragatisheel Congress) ಪಕ್ಷವನ್ನು ಸ್ಥಾಪಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Narendra Modi: ಮೋದಿ ಆಡಳಿತದಡಿ ಪ್ರಜಾಪ್ರಭುತ್ವಕ್ಕೆ ಆತಂಕ? ʼನೀವೇ ದಿಲ್ಲಿಗೆ ಹೋಗಿ ನೋಡಿʼ ಎಂದ ಅಮೆರಿಕ
ನರೇಂದ್ರ ಮೋದಿ ಆಡಳಿತದಡಿ ಭಾರತದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದನಿ ಎತ್ತಿದ್ದರ ಬೆನ್ನಿಗೇ ಅಮೆರಿಕ ಅಧಿಕೃತವಾಗಿ ಮಹತ್ವದ ಹೇಳಿಕೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಆಡಳಿತದಡಿ ಭಾರತದಲ್ಲಿ ಪ್ರಜಾಪ್ರಭುತ್ವದ (indian democracy) ಆರೋಗ್ಯ ಕುಸಿಯುತ್ತಿದೆ ಎಂಬ ಕಳವಳವನ್ನು ಶ್ವೇತಭವನ ತಳ್ಳಿಹಾಕಿದೆ. ʼʼಹೊಸದಿಲ್ಲಿಗೆ ಹೋಗಿ ಸ್ವತಃ ನೀವೇ ನೋಡಬಹುದುʼʼ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರ ಸಂವಹನ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Weather Report: ಮತ್ತೆ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 5 ದಿನ ಭಾರಿ ಮಳೆ
ರಾಜ್ಯಾದ್ಯಂತ ಮೇ 11ರವರೆಗೆ ಭಾರಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಈಗ ಪ್ರಭಾವ ತೀವ್ರಗೊಂಡಿದೆ. ಮುಂದಿನ 12 ಗಂಟೆಯಲ್ಲಿ ಚಂಡಮಾರುತವಾಗಿ ಪರಿವರ್ತನೆ ಆಗಲಿದೆ. ಇದರ ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂದಿನ ಐದು ದಿನಗಳು ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. BBC IT Returns : ಬಿಬಿಸಿಗೆ ಭಾರಿ ಮುಖಭಂಗ, ತೆರಿಗೆ ವಂಚನೆ ಸಾಬೀತು, ಮರೆಮಾಚಿದ್ದ ಆದಾಯ 40 ಕೋಟಿ ರೂ.
ಆದಾಯ ತೆರಿಗೆ ಇಲಾಖೆಯು ಬಿಬಿಸಿಯ (British Broadcasting company -BBC) ತೆರಿಗೆ ವಂಚನೆಯನ್ನು ಬಯಲಿಗೆಳೆದಿದೆ. ಕಂಪನಿಯು 40 ಕೋಟಿ ರೂ. ಆದಾಯವನ್ನು ಮರೆ ಮಾಚಿದ್ದು, ಪರಿಷ್ಕೃತ ಐಟಿ ರಿಟರ್ನ್‌ ಸಲ್ಲಿಸಬೇಕು ಎಂದು ಸೂಚಿಸಿದೆ. ಭಾರತದಲ್ಲಿ ತೆರಿಗೆ ವಂಚಿಸಿರುವ ಹಾಗೂ ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವನ್ನು ಬಿಬಿಸಿ ಎದುರಿಸುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WTC Final 2023 : ಲಂಡನ್​ನಲ್ಲಿ ಭಯಂಕರ ಚಳಿ, ಟೀಮ್​ ಇಂಡಿಯಾಗೆ ಬೌಲರ್​​ಗಳ ಆಯ್ಕೆಯ ಗಲಿಬಿಲಿ!
ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಪಂದ್ಯ ನಡೆಯುವ ಲಂಡನ್​ನಲ್ಲಿ ಸಿಕ್ಕಾಪಟ್ಟೆ ಚಳಿಯಿದೆ. ಬೆಳಗ್ಗೆ 10 ಗಂಟೆಯಾದರೂ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್​ಗೆ ಏರುತ್ತಿಲ್ಲ. ಚಳಿ ಹಾಗೂ ಮಾರುತದ ವೇಗ ಹೆಚ್ಚಿದ್ದಷ್ಟು ವೇಗದ ಬೌಲರ್​ಗಳಿಗೆ ಅನುಕೂಲ. ಹೀಗಾಗಿ ರೋಹಿತ್ ಶರ್ಮಾ ಬಳಗ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೆ ಎಷ್ಟು ಬೌಲರ್​ಗಳೊಂದಿಗೆ ಕಣಕ್ಕೆ ಇಳಿಯಬಹುದು ಎಂಬ ಗೊಂದಲ ಉಂಟಾಗಿದೆ. ವೇಗದ ಬೌಲರ್​ಗಳೇ ಅಥವಾ ಸ್ಪಿನ್ನರ್​ಗಳೇ ಎಂಬ ಕನ್​​ಫ್ಯೂಸ್​ ಶುರುವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. D ಕೋಡ್‌ ಅಂಕಣ: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಹಾಕುವುದು ಯಾವಾಗ?
ಕ್ರೀಡೆ ಎನ್ನುವುದು ಕ್ರೀಡಾಪಟುಗಳ ಬೆವರಿನ ಫಲವೇ ಹೊರತು ರಾಜಕಾರಣಿಗಳ ಆಡುಂಬೊಲ ಅಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಹಿಡಿತ ಹೊಂದಬೇಕು ಎಂಬ ರಾಜಕಾರಣಿಗಳ ಗೀಳು ಕ್ರೀಡಾ ಕ್ಷೇತ್ರವನ್ನು ಹಾಳುಗೆಡವುತ್ತಿರುವುದು ನಿಜ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version