1. Tender Scam: ಸಚಿವ ಸ್ಥಾನ ಸಿಗದವರಿಗೆ ಓಪನ್ ಟೆಂಡರ್: ರಾಜ್ಯ ಸರ್ಕಾರದ ವಿರುದ್ಧ ಟೆಂಡರ್ ಅಕ್ರಮ ಆರೋಪ ಮಾಡಿದ ಕಾಂಗ್ರೆಸ್
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡವರನ್ನು ಮನವೊಲಿಸಲು, ಯಾವುದೇ ಪಾರದರ್ಶಕತೆ ಇಲ್ಲದ ಟೆಂಡರ್‌ಗಳನ್ನು ನೀಡುವ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: Tender Scam: ಕಾಂಗ್ರೆಸ್ ಕಾಲದ ಟೆಂಡರ್ ಅಕ್ರಮಗಳಿಗೆ ಉತ್ತರ ಕೊಡಲಿ: ಟೆಂಡರ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಉತ್ತರ
2. BJP Karnataka: ಪ್ರಧಾನಿ ಮೋದಿಯೇ ಬಿಜೆಪಿಯ ಆಸ್ತಿ; ಕಾಂಗ್ರೆಸ್‌ನವರು ರಾಹುಲ್ ಹೆಸರಲ್ಲಿ ಮತ ಕೇಳಲಿ: ಬಿ.ಎಸ್. ಯಡಿಯೂರಪ್ಪ ಸವಾಲು
ಬಿಜೆಪಿಯ ಪ್ರಮುಖ ಆಸ್ತಿಯೇ ಪ್ರಧಾನಿ ನರೇಂದ್ರ ಮೋದಿ ಎಂದಿರುವ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್‌ನವರು ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಮತ ಕೇಳಲು ಸಾಧ್ಯವೇ? ಎಂದು ಸವಾಲು ಹಾಕಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ರಾಜ್ಯ ಬಿಜೆಪಿ (BJP Karnataka)ಮಂಡಲ ಪ್ರಭಾರಿಗಳ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: BJP Karnataka: ಮಾರ್ಚ್ 1ರಿಂದ ಬಿಜೆಪಿ ರಥಯಾತ್ರೆ: ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದ ಸಿಎಂ ಬಸವರಾಜ ಬೊಮ್ಮಾಯಿ
3. Karnataka Election: ಟಿಪ್ಪುನನ್ನು ಹೊಡೆದು ಹಾಕಿದಂತೆಯೇ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು: ಅಶ್ವತ್ಥನಾರಾಯಣ
ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಸಮೀಪವಾಗುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರಗಳೂ ಮಿತಿಮೀರುತ್ತಿವೆ. ಈ ನಡುವೆ ರಾಜ್ಯದಲ್ಲಿ ಟಿಪ್ಪು ವಿವಾದ ಜ್ವಲಂತವಾಗಿದೆ. ಬೇರೆ ಬೇರೆ ವಿಧದಲ್ಲಿ ಟಿಪ್ಪುವಿನ ವಿಚಾರಗಳು ಆಡಳಿತ ಮತ್ತು ಪ್ರತಿಪಕ್ಷ ನಾಯಕರ ವಾಕ್ಸಮರಕ್ಕೆ ತುತ್ತಾಗುತ್ತಿವೆ. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಕಾಂಗ್ರೆಸ್ ಹೇಳಿದರೆ, ಆತ ಒಬ್ಬ ದೇಶದ್ರೋಹಿ ಎಂದು ಬಿಜೆಪಿ ಹೇಳುತ್ತಾ ಬಂದಿದೆ. ಅಲ್ಲದೆ, ಟಿಪ್ಪು ಕುರಿತಾದ ಪುಸ್ತಕಗಳನ್ನೂ ಪರಸ್ಪರ ಬಿಡುಗಡೆ ಮಾಡಿಕೊಂಡಿದ್ದವು. ಈಗ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನು ಟಿಪ್ಪು ಸುಲ್ತಾನ್ ಮಾದರಿಯಲ್ಲಿ ಹೊಡೆದು ಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ (Ashwathnarayan) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಆರ್‌ಎಸ್‌ಎಸ್ ಶಿಸ್ತು ಕಲಿಸುತ್ತದೆ; ಕೋಟಿ ಕೋಟಿ ಮಾಡಿ ಅಂತ ಹೇಳಿಕೊಟ್ಟಿಲ್ಲ: ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಮಾತು
ರಾಜ್ಯಪಾಲರ ಭಾಷಣದ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ಸದಸ್ಯ ಭೋಜೆಗೌಡ, ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ಹಾಗೂ ಆರ್‌ಎಸ್‌ಎಸ್ ಕುರಿತು ಗಮನ ಸೆಳೆದರು. ತನ್ನ ಸ್ವಯಂಸೇವಕರಿಗೆ ಆರ್‌ಎಸ್‌ಎಸ್ ಶಿಸ್ತು ಕಲಿಸಿದೆಯೇ ವಿನಃ ಹಣ ಮಾಡಲು ಹೇಳಿಲ್ಲ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. MLA Satish Reddy: ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸ್ಕೆಚ್: ಹೊಳಲ್ಕೆರೆಯಲ್ಲಿ ಮೂವರ ಸೆರೆ; ಪ್ಲ್ಯಾನ್ ಲೀಕ್ ಆಗಿದ್ದು ಹೇಗೆ?
ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ (MLA Satish Reddy) ಅವರ ಕೊಲೆಗೆ ಸ್ಕೆಚ್ ಹಾಕಿ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೊಮ್ಮನಹಳ್ಳಿ ಪೊಲೀಸರಿಂದ ಹೊಳಲ್ಕೆರೆ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಒಬ್ಬ ಬಾಲಕ ಎಂದು ತಿಳಿದುಬಂದಿದೆ. ಆದರೆ, ಈ ಕೊಲೆ ಸುಪಾರಿ ವಿಷಯ ಲೀಕ್ ಆಗಿದ್ದೇ ರೋಚಕ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. NIA Raid: ಕೊಯಮತ್ತೂರ್ ಸ್ಫೋಟದ ತನಿಖೆ ಚುರುಕು; ಕರ್ನಾಟಕ ಸೇರಿ 3 ರಾಜ್ಯಗಳ 60 ಪ್ರದೇಶಗಳಲ್ಲಿ ಎನ್ಐಎ ದಾಳಿ
2022ರ ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರಿನ ಕೊಟ್ಟಾಮೇಡು ಸಂಗಮೇಶ್ವರ ದೇವಸ್ಥಾನದ ಸಮೀಪ ಮಾರುತಿ 800 ಕಾರೊಂದರಲ್ಲಿ ಉಂಟಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಭಯೋತ್ಪಾದನಕಾ ಕೃತ್ಯವೆಂದು ಸಾಬೀತಾಗಿದ್ದು, ಈ ಕೇಸ್ನ್ನು ರಾಷ್ಟ್ರೀಯ ತನಿಖಾ ದಳ ಈಗಾಗಲೇ ಕೈಗೆತ್ತಿಕೊಂಡಿದೆ. ಈ ಕೊಯಮತ್ತೂರ್ ಸಿಲಿಂಡರ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಇದೀಗ ಎನ್ಐಎ ತಮಿಳುನಾಡು-ಕೇರಳ ಮತ್ತು ಕರ್ನಾಟಕ ಸೇರಿ ಒಟ್ಟು 60 ಪ್ರದೇಶಗಳಲ್ಲಿ ದಾಳಿ (NIA Raid) ಮಾಡಿದೆ. ಈ ಹಿಂದೆ ನವೆಂಬರ್ನಲ್ಲಿ ತಮಿಳುನಾಡಿನಲ್ಲಿ ಚೆನ್ನೈ ಸೇರಿ 45 ಪ್ರದೇಶಗಳಲ್ಲಿ ತನಿಖಾ ದಳ ರೇಡ್ ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. RSS Chief Mohan Bhagwat: ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ, ಒಂದು ಗ್ರೂಪ್‌ನಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದ ಭಾಗವತ್
ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ ಅಥವಾ ಒಂದೇ ಗ್ರೂಪ್‌ನಿಂದ ಮಾತ್ರವೇ ದೇಶವನ್ನು ನಿರ್ಮಾಣ ಮಾಡುವುದಾಗಲೀ ಅಥವಾ ವಿನಾಶ ಮಾಡುವುದಾಗಲೀ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಕೆನಡಾದಲ್ಲಿ ರಾಮಮಂದಿರದ ಗೋಡೆ ಮೇಲೆ ಪ್ರಧಾನಿ ಮೋದಿ ವಿರುದ್ಧ ಗೀಚುಬರಹ; ಬಿಬಿಸಿ ಡಾಕ್ಯುಮೆಂಟರಿ ಉಲ್ಲೇಖ
ಕೆನಡಾದಲ್ಲಿ ಹಿಂದು ದೇವಾಲಯಗಳನ್ನು ವಿರೂಪಗೊಳಿಸುವ ಕೃತ್ಯ ಸತತವಾಗಿ ನಡೆದುಕೊಂಡೇ ಬರುತ್ತಿದೆ. ಅಲ್ಲಿನ ಖಲಿಸ್ತಾನಿಗಳು ಇದನ್ನೊಂದು ಚಟವನ್ನಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಕೆನಡಾದ ಬ್ರಾಂಪ್ಟನ್ನಲ್ಲಿರುವ ಗೌರಿ ಶಂಕರ ಮಂದಿರದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಕಿಡಿಗೇಡಿಗಳು ಬರೆದಿದ್ದರು. ಈಗ ಮತ್ತೊಂದು ಅಂಥದ್ದೇ ಕೃತ್ಯ ಬೆಳಕಿಗೆ ಬಂದಿದೆ. ಕೆನಡಾದ ಮಿಸಿಸೌಗಾದಲ್ಲಿರುವ ರಾಮಮಂದಿರದ (Ram Mandir In Canada) ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚುವ ಮೂಲಕ ವಿರೂಪಗೊಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆ; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ
ಅಂಚೆ ಇಲಾಖೆಯು ದೇಶದಾದ್ಯಂತ ಖಾಲಿ ಇರುವ 40,889 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ (India Post GDS Recruitment 2023) ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ ಅಂದರೆ ಫೆಬ್ರವರಿ 16 ಕೊನೆಯ ದಿನವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Elephant Menace : ಸೊಸೈಟಿ ಬಾಗಿಲು ಒಡೆದು ನಾಲ್ಕು ಕ್ವಿಂಟಾಲ್ ಅಕ್ಕಿ ತಿಂದು ಹೋದ ಆನೆ!
ಕಾಡಿನ ಪಕ್ಕದ ಗದ್ದೆಗಳಿಗೆ ಆನೆಗಳು ದಾಳಿ (Elephant Menace) ಮಾಡುವುದು ಸಾಮಾನ್ಯವಾಗಿದೆ. ಕಾಡಿನ ದಾರಿಯಲ್ಲಿ ಸಾಗುವವರನ್ನು ಅಟ್ಟಾಡಿಸುವುದು, ಕೊಂದೇ ಹಾಕಿದ ಹಲವು ಘಟನೆಗಳು ನಡೆದಿವೆ. ರಸ್ತೆಯಲ್ಲಿ ವಾಹನಗಳಲ್ಲಿ ಸಾಗುವವರನ್ನೂ ಆನೆಗಳು ಬೆನ್ನಟ್ಟಿ ಭಯಗೊಳಿಸುತ್ತಿವೆ. ಕೆಲವೊಮ್ಮೆ ಮನೆ ಮುಂದೆ ಬಂದು ಆಹಾರ ಕೊಡಿ ಎಂದು ಕೇಳುವ ಧಾಟಿಯಲ್ಲಿ ವರ್ತಿಸಿದ್ದೂ ಇದೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಆನೆಯೊಂದು ಸೊಸೈಟಿಯ ಪಡಿತರ ಅಕ್ಕಿಯನ್ನು ಇಡುವ ಕೋಣೆಗೇ ನುಗ್ಗಿದೆ!. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Areca News : ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಕನಿಷ್ಠ ಆಮದು ಬೆಲೆಯನ್ನು 351 ರೂ.ಗಳಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ
- Male Pill: ಇನ್ನು ಪುರುಷರು ಗರ್ಭನಿರೋಧಕ ಮಾತ್ರೆಗಳನ್ನು ತಗೋಬಹುದು! ಇವು ಎಷ್ಟು ಸೇಫ್?
- Who is Father?: ಪಂಜರದಲ್ಲಿ ಏಕಾಂಗಿಯಾಗಿದ್ದ ಚಿಂಪಾಂಜಿ ಗರ್ಭ ಧರಿಸಿದ್ದು ಹೇಗೆ? ತಲೆ ಕೆಡಿಸಿಕೊಂಡ ಜಪಾನ್ ಮೃಗಾಲಯ ಸಿಬ್ಬಂದಿ!
- Pocso Case : ನಿರಂತರ ಲೈಂಗಿಕ ಕಿರುಕುಳದಿಂದ ನೊಂದು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್Donations To Political Parties: ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕ ದೇಣಿಗೆಯಲ್ಲಿ ಬಿಜೆಪಿ ಪಾಲು 80%, ಬೇರೆ ಪಕ್ಷಗಳಿಗೆ ಸಿಕ್ಕ ಹಣ ಎಷ್ಟು?
- Live In Partner: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಹತ್ಯೆಗೈದ ವ್ಯಕ್ತಿ
- Interest rate : ಜನವರಿಯಲ್ಲಿ ಹಣದುಬ್ಬರ ಹೆಚ್ಚಳ ಎಫೆಕ್ಟ್, ಏಪ್ರಿಲ್‌ನಲ್ಲಿ ಆರ್‌ಬಿಐನಿಂದ ಮತ್ತೆ 0.25% ಬಡ್ಡಿ ದರ ಏರಿಕೆ ಸಂಭವ
- IT Raid : ಅವರು ಸತ್ಯ ಹೇಳಿದ ಬಿಬಿಸಿಯವರನ್ನೇ ಬಿಟ್ಟಿಲ್ಲ, ನಮ್ಮನ್ನು ಬಿಡ್ತಾರಾ?; ಪ್ರಭಾಕರ ರೆಡ್ಡಿ ಐಟಿ ದಾಳಿಗೆ ಎಚ್‌ಡಿಕೆ ಪ್ರತಿಕ್ರಿಯೆ