Site icon Vistara News

ವಿಸ್ತಾರ TOP 10 NEWS: 42 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾಂಗ್ರೆಸ್‌ನಿಂದ, ಬಡ್ಡಿದರ ಏರಿಕೆಗೆ RBI ಬ್ರೇಕ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress announces second list to rbi action regarding repo rate and more news

#image_title

1. Karnataka Election 2023 : ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟ; 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ
ನಿರೀಕ್ಷೆಯಂತೆ ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಸ್ಪರ್ಧಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿಯೂ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಸ್ಪರ್ಧಿಸುವ ಕುರಿತು ಇನ್ನೂ ಪಕ್ಷ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಇದ್ದ ಕುತೂಹಲ ಹಾಗೆಯೇ ಮುಂದುವರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election 2023: ವಲಸೆ ಹಕ್ಕಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ಕನ್ಫರ್ಮ್‌; ಗೋಪಾಲಯ್ಯ, ಸೋಮಶೇಖರ್‌ ಬಿಜೆಪಿಯಲ್ಲೇ ಖಾತ್ರಿ

2. Karnataka Election 2023: ಕಾಂಗ್ರೆಸ್‌ 2ನೇ ಪಟ್ಟಿ ಪ್ರಕಟ; ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಉಡುಪಿಯಲ್ಲಿ ಭಿನ್ನಮತ ಸ್ಫೋಟ
ವಿಧಾನಸಭಾ ಚುನಾವಣೆ ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡುವ ಮೂಲಕ ಒಂದು ಹಂತದಲ್ಲಿ ಮುಂದಿದೆ. ಆದರೆ, ಎಷ್ಟೇ ಅಳೆದು ತೂಗಿ ಮಾಡಿದರೂ ಪಕ್ಷದಲ್ಲಿ ಬಂಡಾಯದ ಕೂಗು ಕೇಳಿ ಬರುತ್ತಲೇ ಇದೆ. ಗುರುವಾರ (ಏ. 6) ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಉಡುಪಿ ಸೇರಿದಂತೆ ಹಲವು ಕಡೆ ಆಕಾಂಕ್ಷಿಗಳು ಅಸಮಾಧಾನವನ್ನು ಹೊರಹಾಕಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಪಕ್ಷೇತರವಾಗಿ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Prakash Raj: ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದುಕೊಂಡಿರಲಿಲ್ಲ; ಸುದೀಪ್‌ಗೆ ಪ್ರಕಾಶ್‌ ರಾಜ್‌ ಮತ್ತೆ ಕ್ಲಾಸ್
ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಅವರಂತೂ ಸುದೀಪ್‌ ಅವರ ನಿರ್ಧಾರವನ್ನು ಖಂಡಿಸುತ್ತಲೇ ಇದ್ದಾರೆ. ಸುದೀಪ್‌ ಅವರ ತೀರ್ಮಾನದಿಂದ ನನಗೆ ಶಾಕ್‌ ಆಗಿದೆ ಎಂದಿದ್ದ ಪ್ರಕಾಶ್‌ ರಾಜ್‌ ಅವರೀಗ ಮತ್ತೆ ಸುದೀಪ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. “ನೀವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ” ಎಂದು ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Inside Story: ಕಾಂಗ್ರೆಸ್‌ ಮೊಲವಂತೆ, ಬಿಜೆಪಿ ಆಮೆಯಂತೆ: ದಾಪುಗಾಲಿಗೆ ಪುಟಾಣಿ ಹೆಜ್ಜೆಯೇ ಉತ್ತರವಂತೆ ಹೌದಾ?
ಅನೇಕ ಅಬ್ಬರ, ಅಭಿಯಾನಗಳ ಮೂಲಕ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದರೆ, ಬಿಜೆಪಿ ವಿಶಿಷ್ಠ ತಂತ್ರ ಅನುಸರಿಸಿ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಆ ಪಕ್ಷದ ನಾಯಕರ ವಾದ. ಇದು ನಿಜ ಆಗುವುದು ಹೌದ? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. BJP Foundation Day: ಪ್ರಜಾಪ್ರಭುತ್ವದ ಗರ್ಭದಿಂದ ಹುಟ್ಟಿದ ಪಕ್ಷ ಬಿಜೆಪಿ, 2024ರಲ್ಲಿ ನಮ್ಮ ಗೆಲುವು ನಿಶ್ಚಿತ: ಪ್ರಧಾನಿ ಮೋದಿ
ಬಿಜೆಪಿ ಪಕ್ಷದ 44ನೇ ಸಂಸ್ಥಾಪನಾ ದಿನದ (BJP Foundation Day) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರಜಾಪ್ರಭುತ್ವವನ್ನು ಹೊಗಳಿದ ಪ್ರಧಾನಿ ಮೋದಿ ‘ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಗರ್ಭದಿಂದ ಹುಟ್ಟಿದೆ. ಪ್ರಜಾಪ್ರಭುತ್ವ ಎಂಬ ಅಮೃತದಿಂದ ಪೋಷಿಸಲ್ಪಟ್ಟಿದೆ. ಹಾಗೇ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗಟ್ಟಿಗೊಳಿಸಿದೆ, ಪವಿತ್ರಗೊಳಿಸಿದೆ’ ಎಂದು ಹೇಳಿದರು.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. PFI In Karnataka: ನಿಷೇಧದ ಬಳಿಕವೂ ಕರ್ನಾಟಕದಲ್ಲಿ ಪಿಎಫ್‌ಐ ಹಾವಳಿ; ಎಸ್‌ಡಿಪಿಐ ಮೂಲಕ ವಿವಿಧ ಚಟುವಟಿಕೆ
ಉಗ್ರ ಚಟುವಟಿಕೆಗಳಿಗೆ ಉತ್ತೇಜನ, ಉಗ್ರರಿಗೆ ಹಣಕಾಸು ನೆರವು, ಉಗ್ರರ ಜತೆ ನಂಟು, ದೇಶದಲ್ಲಿ ಅಶಾಂತಿ ಸೃಷ್ಟಿ ಸೇರಿ ಹಲವು ಕಾರಣಗಳಿಂದ ದೇಶದಲ್ಲಿ ಪಾಪ್ಯುಲರ್‌ ಫ್ರಂಟ್‌ ಇಂಡಿಯಾ (PFI)ವನ್ನು ಕೇಂದ್ರ ಸರ್ಕಾರವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಯೇ ನಿಷೇಧಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಪಿಎಫ್‌ಐ (PFI In Karnataka) ಸಕ್ರಿಯವಾಗಿದೆ. ಮೊದಲಿನಂತೆಯೇ ಪಿಎಫ್‌ಐ ವಿಚಾರಗಳ ಪಸರಿಸುವಿಕೆ, ತಂಡವಾಗಿ ಕಾರ್ಯನಿರ್ವಹಣೆ ಸೇರಿ ಹಲವು ವಿಧದಲ್ಲಿ ಅಸ್ತಿತ್ವದಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. RBI Repo rate : ಕೊನೆಗೂ ಸಾಲದ ಬಡ್ಡಿ ದರ ಏರಿಕೆಗೆ ಆರ್‌ಬಿಐ ಬ್ರೇಕ್‌, ಸದ್ಯಕ್ಕೆ ಗೃಹಸಾಲ ಬಡ್ಡಿ ಏರಲ್ಲ
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಕೊನೆಗೂ ಸಾಲದ ಬಡ್ಡಿ ದರ ಏರಿಕೆಗೆ ಗುರುವಾರ ಬ್ರೇಕ್‌ ಹಾಕಿ ಅಚ್ಚರಿಗೊಳಿಸಿದೆ. ಅಮೆರಿಕ, ಯುರೋಪ್‌ ಮೊದಲಾದೆಡೆಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳು ಇತ್ತೀಚೆಗೆ ಬಡ್ಡಿ ದರ ಏರಿಸಿರುವುದರಿಂದ ಆರ್‌ಬಿಐ ಕೂಡ ಬಡ್ಡಿ ದರ ಏರಿಸಲಿದೆ ( RBI Repo rate) ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರೆಪೊ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಆದರೆ ಈ ಹಿಂದಿನ ಬಡ್ಡಿ ದರ ಏರಿಕೆಯು ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ನಿರೀಕ್ಷಿತ ಪರಿಣಾಮ ಬೀರದಿರುವುದರಿಂದ ಆರ್‌ಬಿಐ ಯಥಾಸ್ಥಿತಿಯಲ್ಲಿರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. RBI Policy : ಶೀಘ್ರದಲ್ಲೇ ನೀವು ಯುಪಿಐ ಮೂಲಕವೂ ಸಾಲ ಪಡೆಯಬಹುದು, ಆರ್‌ಬಿಐ ಹೊಸ ಪ್ರಸ್ತಾಪದಲ್ಲಿ ಏನಿದೆ?
ಖಾತೆಯಿಂದ ಹಣ ಪಡೆಯಲು ಬ್ಯಾಂಕ್‌ ಶಾಖೆಗೆ ತೆರಳುತ್ತಿದ್ದ ದಿನಗಳು ಎಟಿಎಂ ಬಂದ ನಂತರ ಮುಗಿಯಿತು. ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಬಂದ ಬಳಿಕ ಎಟಿಎಂನ ಅಗತ್ಯವೂ ಕಡಿಮೆಯಾಗಿದೆ. ಇದೀಗ ಸಾಲವನ್ನೂ ಯುಪಿಐ ಮೂಲಕ ಪಡೆಯಲು ಆರ್‌ಬಿಐ ಹಾದಿ (RBI Policy) ಸುಗಮಗೊಳಿಸಿದೆ. ಇದು ಭಾರತೀಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. IPL 2023: ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿಯಲ್ಲಿ ಒಂದು ಬದಲಾವಣೆ ಸಾಧ್ಯತೆ; ಹೇಗಿರಲಿದೆ ಪ್ಲೇಯಿಂಗ್​ ಇಲೆವೆನ್​
ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ರಾಯಲ್​ ಚಾಲೆಂಜರ್ಸ್ ಬೆಂಗಳೂರು​ ತಂಡಗಳ ವಿರುದ್ಧದ ಐಪಿಎಲ್​ನ(IPL 2023) 9ನೇ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಉಳಿದಿದೆ. ಈ ಮಧ್ಯೆ ಆರ್​ಸಿಬಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವುದಾಗಿ ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಎಂಬಿಎ‌ ಓದಿದ್ದರೂ ಪತಿಯಿಂದ 50 ಸಾವಿರ ರೂ. ಜೀವನಾಂಶ ಕೇಳಿದ ಮಹಿಳೆ; ದುಡಿದು ತಿನ್ನಿ ಎಂದ ಕೋರ್ಟ್
ಜೀವನ ಸಾಗಿಸಲು ಪತಿಯು ಮಾಸಿಕ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂಬುದಾಗಿ ಸಲ್ಲಿಸಿದ ಮಹಿಳೆಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಆಕೆಯ ಪದವಿ, ಪತಿಯು ನಿರುದ್ಯೋಗಿಯಾಗಿರುವುದನ್ನು ಗಮನಿಸಿ ಜೀವನಾಂಶ ನೀಡುವಂತೆ ಆದೇಶಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Bengaluru Karaga 2023: ಬೆಂಗಳೂರು ಕರಗ ಮಹೋತ್ಸವದಲ್ಲಿ ಅಗ್ನಿ ಅವಘಡ: ಕರ್ಪೂರ ಸೇವೆ ವೇಳೆ ಹೊತ್ತಿ ಉರಿದ ವಾಹನಗಳು
  2. Weather Report: ರಾಜ್ಯಾದ್ಯಂತ ಇನ್ನೆರಡು ದಿನ ಭಾರಿ ಮಳೆ; ವಿಜಯಪುರ, ಬೀದರ್‌ನಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಮಳೆ ಸಾಧ್ಯತೆ
  3. Snake On Plane: ಹಾರುತ್ತಿದ್ದ ವಿಮಾನದಲ್ಲಿ ನಾಗರಹಾವು ಪತ್ತೆ, ತುರ್ತು ಭೂಸ್ಪರ್ಶದ ಬಳಿಕ ಓಡಿದ ಜನ
  4. CRPF Recruitment 2023 : ಸಿಆರ್‌ಪಿಎಫ್‌ನಲ್ಲಿ ನಡೆಯಲಿದೆ ಭರ್ಜರಿ ನೇಮಕ; 1.30 ಲಕ್ಷ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ
Exit mobile version