Site icon Vistara News

ವಿಸ್ತಾರ TOP 10 NEWS: ಕಾಂಗ್ರೆಸ್‌ ʼಜೋಡೆತ್ತುʼ ಘೋಷಣೆಯಿಂದ, ಕಂಬಳಕ್ಕೆ ಸುಪ್ರೀಂ ಅನುಮತಿವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress cm and dcm to sworn in supreme court uphold kambala and more news

#image_title

1. Karnataka CM : ಸಿದ್ದರಾಮಯ್ಯ ಮುಂದಿನ ಸಿಎಂ, ಡಿಕೆಶಿ ಡಿಸಿಎಂ; ಎಐಸಿಸಿಯಿಂದ ಅಧಿಕೃತ ಘೋಷಣೆ
ರಾಜ್ಯದ 24ನೇ ಮುಖ್ಯಮಂತ್ರಿಯಾಗಿ (Karnataka CM) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ನೇಮಕಗೊಂಡಿರುವುದು ಅಧಿಕೃತವಾಗಿ ಖಚಿತ ಪಟ್ಟಿದೆ. ಇದರಿಂದ ಐದು ದಿನಗಳ ಕತೂಹಲಕ್ಕೆ ತೆರೆ ಬಿದ್ದಂತಾಗಿದೆ. 2013ರಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿ ಹಲವಾರು “ಭಾಗ್ಯʼʼ ಯೋಜನೆಗಳ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಿಸಿದ್ದ ಸಿದ್ದರಾಮಯ್ಯಗೆ ಪಕ್ಷ ಈಗ ಮತ್ತೊಂದು ಅವಕಾಶ ನೀಡಿದೆ. ರಾಜ್ಯದ ಮಾಸ್‌ ಲೀಡರ್‌ಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಸಿದ್ದರಾಮಯ್ಯ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದ ಸರ್ಕಾರದ ಮುಖ್ಯಸ್ಥರಾಗಿ ಆಡಳಿತವನ್ನು ಮುನ್ನೆಡೆಸಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka CM: ಸಿಎಂ ಬಿಕ್ಕಟ್ಟು ಬಗೆಹರಿದ ಬಳಿಕ ಈಗ ಡಿಸಿಎಂ ಇಕ್ಕಟ್ಟು ಎದುರಾಗುತ್ತಾ?
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ‌ (Karnataka Election 2023) 135 ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದ ಕಾಂಗ್ರೆಸ್‌ ಕೊನೆಗೂ ಮುಖ್ಯಮಂತ್ರಿ (Karnataka CM) ಯಾರೆಂಬುದನ್ನು ಅಂತಿಮಗೊಳಿಸುವಲ್ಲಿ ಸಫಲವಾಗಿದೆ. ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ನಡುವಿನ ಜಟಾಪಟಿಯಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಹುದ್ದೆ ನೀಡಿ, ಡಿ.ಕೆ ಶಿವಕುಮಾರ್‌ ಅವರನ್ನು ಡಿಸಿಎಂ ಹುದ್ದೆಗೆ ಮನವೊಲಿಸುವಲ್ಲಿ ಸಫಲವಾಗಿದೆ. ಆದರೆ, ಇದರ ನಡುವೆಯೇ ಈಗ ಉಪಮುಖ್ಯಮಂತ್ರಿ ಹುದ್ದೆಯ (Deputy Chief minister post) ಇಕ್ಕಟ್ಟು ಎದುರಾಗುವ ಸಾಧ್ಯತೆ ಕಂಡುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka CM: ಕನ್ನಡಿಗರ ಹಿತರಕ್ಷಣೆಗೆ ನಮ್ಮ ಕೈಗಳು ಒಂದಾಗಿರಲಿವೆ ಎಂದ ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿ ನಿಯೋಜಿತರಾದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ʻಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆʼ ಎಂದು ಘೋಷಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election : ಕಾಂಗ್ರೆಸ್‌ ಸರ್ಕಾರ ತಕ್ಷಣವೇ ಗ್ಯಾರಂಟಿಗಳನ್ನು ಜಾರಿಗೆ ತರಬೇಕು; ಬಿಜೆಪಿ ಆಗ್ರಹ
ʻʻರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆದ್ದಿರುವ ಕಾಂಗ್ರೆಸ್ ಪಕ್ಷವು ಸರಕಾರ ರಚಿಸಿದ ತಕ್ಷಣವೇ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬೇಕುʼʼ ಎಂದು ಬಿಜೆಪಿ (Karnataka BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka CM: ಸಿದ್ದು, ಡಿಕೆಶಿ ಪ್ರಮಾಣವಚನ ಸಮಾರಂಭಕ್ಕೆ 1 ಲಕ್ಷ ಜನ ನಿರೀಕ್ಷೆ; ಕಂಠೀರವದಲ್ಲಿ ಸಿದ್ಧತೆ
ರಾಜ್ಯದ 24ನೇ ಮುಖ್ಯಮಂತ್ರಿಯಾಗಿ (karnataka CM) ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (Siddaramaiah) ಅವರು ಅಧಿಕಾರ ಸ್ವೀಕರಿಸುವ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava stadium) ಮೇ 20ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಕೂಡಾ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಇದರ ಜತೆಗೆ ಕೆಲವು ಮಂತ್ರಿಗಳು ಕೂಡಾ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್; ದೀದಿಗೆ ಹಿನ್ನಡೆ
ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಪಶ್ಚಿಮ ಬಂಗಾಳ (West Bengal)ದಲ್ಲಿ ಹೇರಿದ್ದ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ​ ಹಾಗೇ, ದಿ ಕೇರಳ ಸ್ಟೋರಿ ಸಿನಿಮಾ (The Kerala Story) ಪ್ರದರ್ಶನಗೊಳ್ಳುತ್ತಿರುವ ಎಲ್ಲ ಥಿಯೇಟರ್​ಗಳಿಗೂ ಸೂಕ್ತ ಭದ್ರತೆ ನೀಡಬೇಕು. ಈ ಮೂಲಕ ಅಲ್ಲಿನ ಜನರು ನಿರಾಳವಾಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Supreme Court: ಕಂಬಳ, ಜಲ್ಲಿಕಟ್ಟು, ಚಕ್ಕಡಿ ಸ್ಪರ್ಧೆಗೆ ಅನುಮತಿಸುವ ಕಾನೂನು ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ತಮಿಳುನಾಡು(Tamil Nadu), ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರದಲ್ಲಿ(Maharashtra) ಕ್ರಮವಾಗಿ ಜಲ್ಲಿಕಟ್ಟು (Jallikattu), ಕಂಬಳ (Kambala) ಮತ್ತು ಚಕ್ಕಡಿ ಸ್ಪರ್ಧೆಗೆ (Bull-Cart Race) ಅನುಮತಿಸುವ ಕಾನೂನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ (Supreme Court) ಸಾಂವಿಧಾನಿಕ ಪೀಠವು ತಳ್ಳಿ ಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Arjun Ram Meghwal: ಕಿರೆನ್ ರಿಜಿಜುಗೆ ಕೊಕ್, ಅರ್ಜುನ್ ರಾಮ್ ಮೇಘ್ವಾಲ್ ನೂತನ ಕೇಂದ್ರ ಕಾನೂನು ಸಚಿವ
ಕೇಂದ್ರ ಸರ್ಕಾರದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಿರೆನ್ ರಿಜಿಜು (Kiren Rijiju) ಅವರಿಗೆ ಕಾನೂನು ಖಾತೆಯಿಂದ ಕೊಕ್ ನೀಡಲಾಗಿದ್ದು, ಆ ಹೊಣೆಯನ್ನು ಅರ್ಜುನ್ ರಾಮ್ ಮೇಘ್ವಾಲ್ (Arjun Ram Meghwal) ಅವರಿಗೆ ವಹಿಸಲಾಗಿದೆ. ಕಾನೂನು ಖಾತೆಯಿಂದ (Law Ministry) ಹೊರ ಬಿದ್ದಿರುವ ಕಿರೆನ್ ರಿಜಿಜು ಅವರಿಗೆ ಕೇವಲ ಭೂ ವಿಜ್ಞಾನ ಸಚಿವಾಲಯ ಹೊಣೆಯನ್ನು ವಹಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನವು ಆದೇಶವನ್ನು ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಬಿಜೆಪಿ ನಾಯಕರ ವಿರುದ್ಧ ಸೂಲಿಬೆಲೆ ಕಿಡಿ; ಪೊಲೀಸ್‌ ದೌರ್ಜನ್ಯದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು: ಪುತ್ತಿಲ
ಪುತ್ತೂರಿನಲ್ಲಿ ಹಿಂದು ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ದು ಬಾಸುಂಡೆ ಬರುವಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರು ಬಿಜೆಪಿ ಮುಖಂಡರ ಮೇಲೆ ಹರಿಹಾಯ್ದರೆ, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ (Kalladka Prabhakar Bhat), ಕಾಂಗ್ರೆಸ್‌ ಮೇಲೆ ಕಿಡಿಕಾರಿದ್ದಾರೆ. ಇನ್ನು ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ಪುತ್ತಿಲ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಗುಡುಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023 : ವಿವಾದಾತ್ಮಕ ನೋಬಾಲ್​ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್​​ ಮಾಲೀಕರ ಆಕ್ರೋಶ, ಏನಿದು ಪ್ರಸಂಗ?
ಐಪಿಎಲ್ 2023ರ 64 ನೇ ಪಂದ್ಯದಲ್ಲಿ (IPL 2023) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವೂ ವಿವಾದಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ಪಂಜಾಬ್​ ತಂಡದ ಇನ್ನಿಂಗ್ಸ್​​ನ ಕೊನೆಯ ಓವರ್​​ ಎಸೆದ ಇಶಾಂತ್ ಶರ್ಮಾ ನಾಲ್ಕನೇ ಎಸೆತವನ್ನು ಸೊಂಟದ ಎತ್ತರದ ಫುಲ್​​ಟಾಸ್ ಎಸೆದಿದ್ದರು ಬ್ಯಾಟರ್​ ಲಿಯಾಮ್​ ಲಿವಿಂಗ್​ಸ್ಟನ್​ ಅದನ್ನು ಸಿಕ್ಸರ್​​ಗಟ್ಟಿದ್ದರು. ಆನ್​​ಫೀಲ್ಡ್​ ಅಂಪೈರ್ ತಕ್ಷಣ ಅದನ್ನು ನೋ ಬಾಲ್ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ನಿರ್ಧಾರವನ್ನು ಪರಿಶೀಲಿಸಿದರು. ಮೂರನೇ ಅಂಪೈರ್​ ಅಂಪೈರ್​​ಗಳ ತೀರ್ಪನ್ನು ಎತ್ತಿ ಹಿಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version