Site icon Vistara News

ವಿಸ್ತಾರ TOP 10 NEWS: ಕಾಂಗ್ರೆಸ್‌ಗೆ ಬಂಡಾಯದ ಬಿಸಿಯಿಂದ, ಅಮುಲ್‌ ಪ್ರವೇಶಕ್ಕೆ ವಿರೋಧದವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress facing heat from aspirants to oppose to amul entry into karnataka and more news

#image_title

1. Karnataka Elections : ಕಾಂಗ್ರೆಸ್‌ಗೆ 2ನೇ ಪಟ್ಟಿಯಲ್ಲಿ ಭಾರಿ ಒಳಪೆಟ್ಟು: 42 ಕ್ಷೇತ್ರಗಳ ಪೈಕಿ 10ರಲ್ಲಿ ಬಂಡಾಯ
ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿ ಕಾಂಗ್ರೆಸ್‌ ಬಿಡುಗಡೆ ಮಾಡಿದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಚಿತ್ರದುರ್ಗ, ಕಲಘಟಗಿ, ಕಡೂರು, ಕಿತ್ತೂರು, ಸವದತ್ತಿ, ಗೋಕಾಕ್, ಗಂಗಾವತಿ ಸೇರಿದಂತೆ ಸುಮಾರು 10 ಕಡೆಗಳಲ್ಲಿ ಬಂಡಾಯ ಮತ್ತು ಒಳಪೆಟ್ಟಿನ ಆತಂಕ ಎದುರಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Modi in Karnataka: ಏ. 8, 9ರಂದು ಪ್ರಧಾನಿ ಮೋದಿ ಮೈಸೂರು, ಚಾಮರಾಜನಗರ ಪ್ರವಾಸ; ಕ್ಷಣಕ್ಷಣದ ಟೂರ್‌ ಪ್ಲ್ಯಾನ್‌ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 8 ಮತ್ತು 9ರಂದು ಮೈಸೂರು‌, ಚಾಮರಾಜನಗರ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿ ಅವರು ಆಗಮಿಸುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರಧಾನಿ ರಾಜ್ಯ ಪ್ರವಾಸದ (Modi in Karnataka) ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BJP Karnataka: ದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಟಿಕೆಟ್‌ ಆಯ್ಕೆ ಪೂರ್ವಭಾವಿ ಸಭೆ ರದ್ದು
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನವದೆಹಲಿಯಲ್ಲಿ ಶುಕ್ರವಾರ ಸಂಜೆ ನಡೆಯಬೇಕಿದ್ದ ಪೂರ್ವಭಾವಿ ಸಭೆ ರದ್ದಾಗಿದೆ. ಶನಿವಾರ ಸಂಜೆ ಟಿಕೆಟ್‌ ಆಯ್ಕೆ ಸಭೆ ನಡೆಯಲಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿ ಎಲ್ಲರೂ ಉಪಸ್ಥಿತರಿರಲಿದ್ದಾರೆ. ಆದರೆ ಅದಕ್ಕೂ ಮುನ್ನ, ಕರ್ನಾಟಕದ ಸದಸ್ಯರು ಒಂದು ಸಭೆ ನಡೆಸುವುದು ನಿರ್ಧಾರವಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Mallikarjun Kharge: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವೆ: ಪ್ರಿಯಾಂಕ್‌ ಖರ್ಗೆ ಹೇಳಿಕೆ
ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರಿನ ರೀತಿಯಲ್ಲೆ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ ಎಂಬ ಚಕ್ರವರ್ತಿ ಸೂಲಿಬೆಲೆ ಆರೋಪದ ವಿಚಾರಕ್ಕೆ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮಾನಹಾನಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Nandini: ಕರ್ನಾಟಕದ ಮಾರುಕಟ್ಟೆಗೆ ಅಮುಲ್‌ ಕೊಡಲಿದೆ ಎಂಟ್ರಿ; ನಂದಿನಿ ಹಾಲಿಗಿಂತ ಅಮುಲ್‌ ಎಷ್ಟು ದುಬಾರಿ?
ಗುಜರಾತ್‌ ಮೂಲಕ ಸಹಕಾರಿ ಸಂಸ್ಥೆ ಅಮೂಲ್‌ ಈಗಾಗಲೆ ವಿವಿಧ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ಹೊಂದಿದ್ದು, ಇದೀಗ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ (Nandini) ಬ್ರ್ಯಾಂಡ್‌ಗೆ ಈಗಾಗಲೆ ಅನೇಕ ಖಾಸಗಿ ಬ್ರ್ಯಾಂಡ್‌ಗಳು ಸ್ಪರ್ಧೆ ಒಡ್ಡುತ್ತಿದ್ದು, ಇದೀಗ ಅಮುಲ್‌ ಸಹ ಸೇರ್ಪಡೆಯಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. CNG PNG Price: ಪಿಎನ್‌ಜಿ, ಸಿಎನ್‌ಜಿ ದರ ಇಳಿಕೆ! ಶನಿವಾರದಿಂದಲೇ ಪರಿಷ್ಕೃತ ರೇಟ್ ಜಾರಿ
ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ದರವನ್ನು ಕಡಿಮೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ(Cabinet Decision). ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬಹುಪಾಲು ಹೊಸ ಬೆಲೆ ಕಾರ್ಯವಿಧಾನ(APM) ಜಾರಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Fact Check Body: ನಕಲಿ ಸುದ್ದಿ ತಡೆಗೆ ಫ್ಯಾಕ್ಟ್‌ ಚೆಕ್‌ ವಿಭಾಗ ಘೋಷಿಸಿದ ಕೇಂದ್ರ, ಇದರ ಕಾರ್ಯ ಹೇಗೆ? ಕ್ರಮ ಏನು?
ಆನ್‌ಲೈನ್‌ ಯುಗದಲ್ಲಿ ನಕಲಿ ಸುದ್ದಿಗಳ ಹಾವಳಿ ಜಾಸ್ತಿಯಾಗಿದೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಯನ್ನು ಹರಡುವುದು, ತಪ್ಪು ಮಾಹಿತಿ ನೀಡುವುದು ಹೇರಳವಾಗಿ ನಡೆಯುತ್ತಿದೆ. ಹೀಗೆ, ನಕಲಿ ಸುದ್ದಿಗಳ ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರವು ನೂತನ ಫ್ಯಾಕ್ಟ್‌ ಚೆಕ್‌ ವಿಭಾಗವನ್ನು (Fact Check Body) ಘೋಷಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. IPL 2023 : ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಬಟ್ಲರ್ ಡೌಟ್​, ಮದುವೆಗೆಂದು ಊರಿಗೆ ಹೋದ ಮಿಚೆಲ್​ ಮಾರ್ಷ್​​
ಏಪ್ರಿಲ್​ 8ರಂದು ನಡೆಯಲಿರುವ ಐಪಿಎಲ್​ನ ಡಬಲ್ ಹೆಡರ್​ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಪರಸ್ಪರ ಎದುರಾಗಲಿವೆ. ಈ ಪಂದ್ಯಕ್ಕೆ ಇತ್ತಂಡಗಳ ಇಬ್ಬರು ವಿದೇಶಿ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳಿವೆ. ರಾಜಸ್ಥಾನ್​ ತಂಡದ ಜೋಸ್​ ಬಟ್ಲರ್​ ಹಾಗೂ ಡೆಲ್ಲಿ ತಂಡದ ಆಲ್​ರೌಂಡರ್​ ಮಿಚೆಲ್​ ಮಾರ್ಷ್​ ಅಲಭ್ಯರಾಗಲಿದ್ದಾರೆ. ಬಟ್ಲರ್​ ಗಾಯದ ಸಮಸ್ಯೆಗೆ ಒಳಗಾದರೆ ಮಿಚೆಲ್​ ಮಾರ್ಷ್​ ತಮ್ಮ ಮದುವೆ ಕಾರಣಕ್ಕೆ ವಿಶ್ರಾಂತಿ ತೆಗೆದುಕೊಂಡು ಆಸ್ಟ್ರೇಲಿಯಾಗೆ ಮರಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Karnataka Rain: ಮಳೆ ಎಂದು ಮರದ ಆಸರೆ ಪಡೆದರೆ ಸಿಡಿಲು ಬಡಿದು ಪ್ರಾಣ ಕಳೆದುಕೊಂಡರು
ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, (Karnataka Rain) ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಗದಗ ಜಿಲ್ಲೆಯ ಲಿಂಗದಾಳ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಹಿಗಳು ಮೃತಪಟ್ಟಿದ್ದಾರೆ. ಶರಣಪ್ಪ ಪುರದ (21), ದೇವೆಂದ್ರ ಬಾಡಗಿ (18) ಮೃತ ದುರ್ದೈವಿಗಳಾಗಿದ್ದಾರೆ. ಇವರ ಜತೆಗೆ ಇದ್ದ ಮತ್ತೊಬ್ಬ ಬಾಲಕ ಸುನೀಲ್ ಶ್ರೀಕಾಂತ ಪವಾರ ಎಂಬಾತನಿಗೂ ಸಿಡಿಲು ಬಡಿದಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ChatGPT: ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗ್ತಾರಾ?-ಹಾಗಾಗಲು ಏಲಿಯನ್​ಗಳೇ ಭೂಮಿಗೆ ಬರಬೇಕು ಎಂದು ಉತ್ತರಿಸಿದ ಚಾಟ್ ​ಜಿಪಿಟಿ
ಇಂಗ್ಲಿಷ್​ ಮಾಧ್ಯಮವೊಂದು ಚಾಟ್​ ಜಿಪಿಟಿ ಬಳಿ ಭಾರತದ ರಾಜಕೀಯ ಸನ್ನಿವೇಶದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ಮಾಧ್ಯಮದಲ್ಲಿ ಕೆಲಸ ಮಾಡುವವರೊಬ್ಬರು ‘ರಾಹುಲ್ ಗಾಂಧಿ ಭವಿಷ್ಯದಲ್ಲಿ ಭಾರತದ ಪ್ರಧಾನಮಂತ್ರಿಯಾಗಬಹುದಾದ ಸಾಧ್ಯತೆಗಳು ಎಷ್ಟಿವೆ?’ ಎಂದು ನೇರವಾಗಿ ಪ್ರಶ್ನಿಸಿದ್ದರು. ಅದಕ್ಕೆ ಚಾಟ್​ ಜಿಪಿಟಿ ಚೆನ್ನಾಗಿ ಉತ್ತರಿಸಿದೆ. ‘ನಾನ್ಯಾವಾಗ ಇಂಗ್ಲೆಂಡ್ ರಾಣಿಯಾಗುತ್ತೇನೋ..ಆಗ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗಬಹುದು’ ಎಂದು ಕೊನೆಯಲ್ಲಿ ಹೇಳುವ ಮೂಲಕ, ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾಗುವ ಸಾಧ್ಯತೆಯನ್ನು ಅಲ್ಲಗಳೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. KCET 2023 : ಸಿಇಟಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ಏ.9 ಅರ್ಜಿ ಸಲ್ಲಿಸಲು ಕೊನೆಯ ದಿನ
  2. Covid 19 Updates: ಕೋವಿಡ್ ಪರಿಸ್ಥಿತಿ ಎದುರಿಸಲು ಏ.10, 11ರಂದು ಆಸ್ಪತ್ರೆಗಳ ಅಣಕು ಪ್ರದರ್ಶನಕ್ಕೆ ಕೇಂದ್ರ ಸೂಚನೆ
  3. Rudresh Murder : ರುದ್ರೇಶ್‌ ಕೊಲೆ ಆರೋಪಿ ಮಹಮ್ಮದ್‌ ಗೌಸ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಎನ್‌ಐಎ
Exit mobile version