Site icon Vistara News

ವಿಸ್ತಾರ TOP 10 NEWS | ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಸಂಚಲನದಿಂದ, ʼನಾಟು ನಾಟುʼಗೆ ಗೋಲ್ಡನ್‌ ಗ್ಲೋಬ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-congress free electricity to golden globe for naatu naatu and more news

1. Congress Guarantee | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತ ವಿದ್ಯುತ್‌: ಪ್ರಜಾಧ್ವನಿ ಯಾತ್ರೆಯಲ್ಲಿ ಮೊದಲನೆ ಘೋಷಣೆ
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿದೆ. ಚಿಕ್ಕೋಡಿಯಲ್ಲಿ ಬುಧವಾರ ಆರಂಭವಾದ ಮೊದಲ ಹಂತದ ʼಪ್ರಜಾಧ್ವನಿ ಯಾತ್ರೆʼಗೆ ಚಿಕ್ಕೋಡಿಯಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ʼಕಾಂಗ್ರೆಸ್‌ ಗ್ಯಾರಂಟಿʼ ಸರಣಿಯ ಮೊದಲನೆ ಘೋಷಣೆಯನ್ನು ನಾಯಕರು ಮಾಡಿದರು. ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ. ಇದು ಕಾಂಗ್ರೆಸ್‌ ಗ್ಯಾರಂಟಿ ಎಂದು ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. K Srinivasa Gowda | ಕೋಲಾರದಲ್ಲಿ ಸಿದ್ದರಾಮಯ್ಯ ಗೆದ್ರೂ ನಂದೇ ಹವಾ; ಶಾಸಕ ಕೆ.ಶ್ರೀನಿವಾಸಗೌಡ‌ ಆಡಿಯೋ ವೈರಲ್
ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಕ್ಷೇತ್ರ ತ್ಯಾಗ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟರೆ ತಮಗೆ ಆಗುವ ರಾಜಕೀಯ ಲಾಭಗಳ ಬಗ್ಗೆ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿರುವ ಆಡಿಯೊ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. National youth Festival | ಯುವಜನೋತ್ಸವಕ್ಕೆ ಸಜ್ಜಾದ ಅವಳಿ ನಗರ: ಮೋದಿಗೆ ಸ್ಮರಣಿಕೆಯಾಗಿ ವಿವೇಕ ಪುತ್ಥಳಿ
ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸಂಭ್ರಮದಿಂದ ಸಜ್ಜಾಗಿದೆ. ಜನವರಿ ೧೨ರಿಂದ ಐದು ದಿನಗಳ ಕಾಲ ನಡೆಯಲಿರುವ ಈ ವೈಭವದ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರಧಾನಿಗಳ ಸ್ವಾಗತಕ್ಕೆ ವಾಣಿಜ್ಯ ನಗರಿ ಸಿಂಗಾರಗೊಂಡಿದ್ದು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Drugs Mafia | ಮಂಗಳೂರಿನಲ್ಲಿ ಬೃಹತ್‌ ಗಾಂಜಾ ಜಾಲ: ವೈದ್ಯರು, ಮೆಡಿಕಲ್‌ ವಿದ್ಯಾರ್ಥಿನಿಯರ ಸಹಿತ 10 ಮಂದಿ ಬಂಧನ
ಕರ್ನಾಟಕದ ವಾಣಿಜ್ಯ, ಶೈಕ್ಷಣಿಕ ರಾಜಧಾನಿ ಎಂದೇ ಹೆಸರಾದ ಮಂಗಳೂರು ಮಾದಕ ದ್ರವ್ಯ ಜಾಲದಲ್ಲಿ (Drugs Mafia) ಮುಳುಗಿ ಉಡ್ತಾ ಮಂಗಳೂರು ಆಗುವ ಅಪಾಯಕಾರಿ ಸನ್ನಿವೇಶ ಎದುರಾಗಿದೆ. ಮಂಗಳೂರು ಪೊಲೀಸರು ಬುಧವಾರ ಬೃಹತ್‌ ಗಾಂಜಾ ದಂಧೆಯನ್ನು ಬೇಧಿಸಿದ್ದಾರೆ. ಇದರಲ್ಲಿ ಮಂಗಳೂರಿನ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು ಮತ್ತು ವೈದ್ಯರು ಕೂಡಾ ಭಾಗಿಯಾಗಿರುವುದು ಆತಂಕಕಾರಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. RRR Golden Globe Award | ʼಆರ್‌ಆರ್‌ಆರ್‌ʼಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ತಂದುಕೊಟ್ಟ ಎಂ ಎಂ ಕೀರವಾಣಿ ಹಿನ್ನೆಲೆ ಗೊತ್ತಾ?
ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾದ ʼನಾಟು ನಾಟುʼ ಹಾಡು ಇದೀಗ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು (RRR Golden Globe Award) ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಮೂಲಗೀತೆ ಎನ್ನುವ ವಿಭಾಗದಲ್ಲಿ ಈ ಹಾಡಿಗೆ ಪ್ರಶಸ್ತಿ ಲಭಿಸಿದೆ. ಹಾಡಿನ ಮಾಂತ್ರಿಕ, ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ(61) ಕೈಗೆ ಪ್ರಶಸ್ತಿ ತಲುಪಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Shivamogga terror | ತೀರ್ಥಹಳ್ಳಿಯಲ್ಲಿ ಇ.ಡಿ ದಾಳಿ: ಮೂವರು ಶಂಕಿತ ಉಗ್ರರ ಮನೆಯಲ್ಲಿ ಶೋಧ ಕಾರ್ಯಾಚರಣೆ
ರಾಜ್ಯ ಮತ್ತು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಶಿವಮೊಗ್ಗದ ಟೆರರ್‌ (Shivamogga terror) ಕಾರ್ಯಾಚರಣೆಗೆ ಸಂಬಂಧಿಸಿ ಈಗ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಶಿವಮೊಗ್ಗದ ಶಂಕಿತ ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವವರು ಯಾರು, ಅವರ ಹಣಕಾಸು ವ್ಯವಹಾರಗಳು ಹೇಗೆಲ್ಲ ನಡೆಯುತ್ತಿವೆ ಎನ್ನುವುದನ್ನು ತನಿಖೆ ಮಾಡುವುದಕ್ಕಾಗಿ ಇ.ಡಿ. ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ದಾಳಿ ಆರಂಭಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Mohan Bhagwat | ಮುಸ್ಲಿಮರಿಗೆ ಭಾರತದಲ್ಲಿ ಅಪಾಯ ಇಲ್ಲ, ಆದರೆ ಅವರು ತಮ್ಮದೇ ಸರಿ ಎಂದು ಅಬ್ಬರಿಸುವುದನ್ನು ಬಿಡಬೇಕು: ಭಾಗವತ್
ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಅಥವಾ ಬೆದರಿಕೆ ಇಲ್ಲ. ಅವರು ತುಂಬ ಸುರಕ್ಷಿತವಾಗಿದ್ದಾರೆ. ಆದರೆ, ಮುಸ್ಲಿಮರು ತಮ್ಮದೇ ಸರಿ, ತಾವೇ ಶ್ರೇಷ್ಠ ಎಂಬ ಪ್ರತಿಪಾದನೆಯನ್ನು ಬಿಡಬೇಕು. ಇಂತಹ ಅಬ್ಬರಗಳನ್ನು, ಅಬ್ಬರದ ವಾಕ್ಚಾತುರ್ಯವನ್ನು ನಿಲ್ಲಿಸಬೇಕು” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ (Mohan Bhagwat) ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Santro Ravi case | ಸ್ಯಾಂಟ್ರೋ ರವಿ ಮೊದಲ ಪತ್ನಿ ಮನೆಗೆ ಲಗ್ಗೆ ಇಟ್ಟ 30 ಪೊಲೀಸರ ವಿಶೇಷ ತಂಡ: ಡೈರಿ, ಗ್ಯಾಸ್‌ ಬಿಲ್‌ ವಶಕ್ಕೆ!
ಕಳೆದ ೨೫ ವರ್ಷಗಳಿಂದಲೂ ಕ್ರಿಮಿನಲ್‌ ಚಟುವಟಿಕೆಗಳನ್ನು ನಡೆಸುತ್ತಿರುವ, ವೇಶ್ಯಾವಾಟಿಕೆ, ವರ್ಗಾವಣೆ ದಂಧೆಗಳಲ್ಲಿ ಮುಳುಗೇಳುತ್ತಿರುವ, ರಾಜಕಾರಣಿಗಳು ಮತ್ತು ಅಧಿಕಾರಿಗಳ ಆಪ್ತ ಸಖ ಮೈಸೂರಿನ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಹುಡುಕಾಟದ ನಾಟಕ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Namma metro collapse | ಮೆಟ್ರೋ ಪಿಲ್ಲರ್‌ ಕುಸಿತ: ತನಿಖೆಗಿಳಿದ ಐಐಎಸ್‌ಸಿ ತಂಡ; ತಪ್ಪಾಗಿರುವುದು ನಿಜ ಎಂದ ತಜ್ಞರು!
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿತ (Namma Metro Collapse) ಘಟನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಂಡ ಬುಧವಾರ ತನಿಖೆ ಆರಂಭಿಸಿತು. ಬ್ಬಿಣದ ತೂಕ ಜಾಸ್ತಿ ಆಗಿ ನಿರ್ಮಾಣ ಹಂತದ ಪಿಲ್ಲರ್ ಬಿದ್ದಿದೆ. ಪಿಲ್ಲರ್‌ಗೆ ಸಪೋರ್ಟ್‌ ಕೊಡಬೇಕಿತ್ತು. ಪ್ರಾಥಮಿಕ ತನಿಖೆಯಲ್ಲಿ ತಪ್ಪಾಗಿರುವುದು ತಿಳಿದುಬಂದಿದೆ ಎಂದು ಐಐಎಸ್‌ಸಿ ಪ್ರೊಫೆಸರ್ ಚಂದ್ರಕಿಶನ್ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Vivekananda Jayanti 2023 | ವಿವೇಕಾನಂದ ಜಯಂತಿ ಅಂಗವಾಗಿ ಜ.13ರಂದು ವಿಸ್ತಾರ ನ್ಯೂಸ್‌ನಿಂದ ವಿವೇಕ ವಂದನೆ ಕಾರ್ಯಕ್ರಮ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಿಮ್ಮ ನೆಚ್ಚಿನ ಸುದ್ದಿ ಸಂಸ್ಥೆ ವಿಸ್ತಾರ ನ್ಯೂಸ್‌ ಭಾರತ ಕಂಡ ಕ್ರಾಂತಿಕಾರಿ ಸಂತರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ (Vivekananda Jayanti 2023) ಅಂಗವಾಗಿ “ವಿವೇಕ ವಂದನೆʼʼ ಕಾರ್ಯಕ್ರಮ ಏರ್ಪಡಿಸಿವೆ. ಜನವರಿ 13 ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಲಿದ್ದಾರೆ. ಬೆಂಗಳೂರಿನ ವಿವೇಕಯುಗ ಫೌಂಡೇಷನ್‌ ಈ ಕಾರ್ಯಕ್ರಮಕ್ಕೆ ಸಾಥ್‌ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Mass suicide | ಮೂರು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ
  2. US Flights Grounded | ಅಮೆರಿಕದಲ್ಲಿ ಭಾರಿ ತಾಂತ್ರಿಕ ದೋಷ, ಎಲ್ಲ ವಿಮಾನ ಹಾರಾಟ ಸ್ಥಗಿತ, ಭಾರತದ ಪ್ರಯಾಣಿಕರಿಗೂ ತೊಂದರೆ
  3. Students protest | ಕಾಲೇಜಿನೊಳಗೆ ಪ್ರವೇಶಿಸಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಯತ್ನ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
  4. Heart attack | 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು; ಶಾಲೆಗೆ ಹೊರಟಾಗ ಹಿಂಡಿತು ಹೃದಯ
  5. Student suicide | ಪ್ರಿನ್ಸಿಪಾಲ್ ಬೈದದ್ದಕ್ಕೆ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ
Exit mobile version