Site icon Vistara News

ವಿಸ್ತಾರ TOP 10 NEWS: ಕಾಂಗ್ರೆಸ್‌ ಗ್ಯಾರಂಟಿಗೆ ʼತಾತ್ವಿಕʼ ಸಮ್ಮತಿಯಿಂದ, ಮತ್ತೆ ಚೀನಾ ಉದ್ಧಟತನದವರೆಗಿನ ಪ್ರಮುಖ ಸುದ್ದಿಗಳಿವು

in principle approval for guarantee scheme and more news of the day

#image_title

1. Karnataka CM: … ಎಂಬ ಹೆಸರಿನವನಾದ ನಾನು…: ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವರ ಪ್ರಮಾಣ
ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಜನರ ಸಮ್ಮುಖದಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣವಚನ ಹಾಗೂ ಗೌಪ್ಯತಾ ಪ್ರಮಾಣ ಸ್ವೀಕರಿಸಿದರು. ನಂತರ ಡಿ.ಕೆ. ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿ ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka CM: ಪ್ರಮಾಣವಚನ ವೇದಿಕೆಯಲ್ಲೇ ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ
ಹೆಚ್ಚಿನ ಓದಿಗಾಗಿ: Karnataka CM: ಒಂದೇ ಸಭೆಯಲ್ಲಿ 10,000 ಕೋಟಿ ರೂ. ಉಳಿಸಿದ ಸಿದ್ದರಾಮಯ್ಯ!: ಗ್ಯಾರಂಟಿ ಜಾರಿ ಹೀಗಿರಲಿದೆಯೇ?

2. Karnataka CM : ಮಹಿಳೆಯರಿಗೆ ಫ್ರೀ ಬಸ್‌ ಪಾಸ್‌, ಕರೆಂಟ್‌ ಫ್ರೀ: 5 ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ, ಜಾರಿ ಸದ್ಯಕ್ಕಿಲ್ಲ
ರಾಜ್ಯದಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಕಾಂಗ್ರೆಸ್‌ ಸರ್ಕಾರ, ಈ ಹಿಂದೆಯೇ ಹೇಳಿದ್ದಂತೆ ತನ್ನ ಮೊದಲ ಸಂಪುಟ ಸಭೆಯಲ್ಲೇ (Cabinet Meeting) ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನೂ ಅನುಷ್ಠಾನಗೊಳಿಸುವ ನಿರ್ಧಾರ ಮಾಡಿದೆ. ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರಾದರೂ ಇದಕ್ಕೆ ಖಚಿತವಾಗಿ ಎಷ್ಟು ವೆಚ್ಚವಾಗುತ್ತದೆ, ಎಷ್ಟು ಫಲಾನುಭವಿಗಳು, ಯಾವಾಗಿನಿಂದ ಜಾರಿ ಎಂಬ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ನಡುವೆ, ಈ ಯೋಜನೆಗಳು ತಕ್ಷಣವೇ ಜಾರಿಗೆ ಬರುವುದಿಲ್ಲ. ಮುಂದಿನ ಸಚಿವ ಸಂಪುಟ ಸಭೆಯ ಬಳಿಕ ಜಾರಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka CM: ಮೊದಲ ಸುದ್ದಿಗೋಷ್ಠಿಯಿಂದಲೇ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ ಸಿದ್ದರಾಮಯ್ಯ!: ಕೇಂದ್ರದ ವಿರುದ್ಧ ಭರ್ಜರಿ ವಾಗ್ದಾಳಿ
ಹೆಚ್ಚಿನ ಓದಿಗಾಗಿ: Karnataka CM : ಪ್ರಮಾಣವಚನಕ್ಕೆ ಬಂದ ದೇವರು, ಅಜ್ಜಯ್ಯ, ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್‌, ತಾಯಿ, ಅಲ್ಲಾಹು!

3. Karnataka CM: ದಾರಿಯಲ್ಲಿ ಹೋಗೋರಿಗೆ ಕೊಡೋಕ್ಕಾಗುತ್ತ ಎಂಬ ಡಿಕೆಶಿ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ನಿಬಂಧನೆ ಹಾಕಲಾಗುತ್ತದೆ, ದಾರಿಯಲ್ಲಿ ಹೋಗುವವರಿಗೆಲ್ಲ ಕೊಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿರುವುದು ಸರ್ಕಾರದ ಬಣ್ಣವನ್ನು ಬಲು ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Video: ಪ್ರಧಾನಿ ಮೋದಿಯನ್ನು ಹುಡುಕಿ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​; ಆತ್ಮೀಯವಾಗಿ ಅಪ್ಪಿಕೊಂಡ ದಿಗ್ಗಜರು
ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ (Joe Biden) ನಡುವೆ ಇರುವ ಆತ್ಮೀಯತೆ ಆಗಾಗ ನಮ್ಮ ಕಣ್ಣಿಗೆ ಕಾಣಿಸುತ್ತಿರುತ್ತದೆ. ಇದೀಗ ಜಪಾನ್ ಪ್ರವಾಸದಲ್ಲಿರುವ ಇಬ್ಬರೂ ದಿಗ್ಗಜರು ಮತ್ತೊಮ್ಮೆ ತಮ್ಮ ನಡುವಿನ ಆಪ್ತತೆಯನ್ನು ತೋರಿಸಿದ್ದಾರೆ. ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ 7 ಶೃಂಗಸಭೆ (G7 Summit)ಯಲ್ಲಿ ನರೇಂದ್ರ ಮೋದಿ, ಜೋ ಬೈಡೆನ್​ ಸೇರಿ ಇತರ ವಿಶ್ವ ನಾಯಕರು ಪಾಲ್ಗೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Narendra Modi: ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ ಮಾಡಿದ ನರೇಂದ್ರ ಮೋದಿ

5. G 20 Meeting: ಚೀನಾ ಮತ್ತೆ ಉದ್ಧಟತನ; ಕಾಶ್ಮೀರ ವಿವಾದಿತ ಪ್ರದೇಶ ಎಂದು ಹೇಳಿಕೆ, ಜಿ-20 ಸಭೆ ಬಹಿಷ್ಕಾರ
ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮಾಡುತ್ತಿರುವ, ಸೈನಿಕರನ್ನು ಬಿಟ್ಟು ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ, ಸಾಲು ಸಾಲು ಸಭೆಗಳ ಹೊರತಾಗಿಯೂ ಉಪಟಳ ಮುಂದುವರಿಸಿರುವ ಚೀನಾ ಈಗ ಮತ್ತೊಂದು ಅಪದ್ಧ ನುಡಿದಿದೆ. “ಜಮ್ಮು-ಕಾಶ್ಮೀರ ವಿವಾದಿತ ಪ್ರದೇಶ” ಎಂದು ಕರೆದಿರುವ ಚೀನಾ, ಕಣಿವೆಯಲ್ಲಿ ನಡೆಯಲಿರುವ ಜಿ-20 ಸಭೆಯನ್ನು (G 20 Meeting) ಬಹಿಷ್ಕರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ದೆಹಲಿಯಲ್ಲಿ ಮತ್ತೆ ಕೇಂದ್ರ, ಆಪ್‌ ಜಟಾಪಟಿ; ಅಧಿಕಾರಿಗಳ ವರ್ಗಾವಣೆಗೆ ಪ್ರಾಧಿಕಾರ ರಚಿಸಿದ್ದಕ್ಕೆ ಆಪ್‌ ಆಕ್ರೋಶ
ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಆಪ್‌ ಸರ್ಕಾರದ ನಡುವಿನ ಸಂಘರ್ಷ ಮತ್ತೆ ಉಲ್ಬಣಿಸಿದೆ. ದೆಹಲಿಯಲ್ಲಿ ಸೇವೆ/ಆಡಳಿತಗಳ ನಿಯಂತ್ರಣವು ಆಪ್‌ ಸರ್ಕಾರಕ್ಕೆ ಸೇರಿದೆ ಎಂದು ಕಳೆದ ವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ, ಎ ಗ್ರೂಪ್‌ ಅಧಿಕಾರಿಗಳ ವರ್ಗಾವಣೆ ಹಾಗೂ ಶಿಸ್ತು ಪ್ರಕ್ರಿಯೆಗಳ ಉಸ್ತುವಾರಿಗಾಗಿ ಕೇಂದ್ರ ಸರ್ಕಾರವು “ರಾಷ್ಟ್ರ ರಾಜಧಾನಿ ಸೇವಾ ಪ್ರಾಧಿಕಾರ”ವನ್ನು (NCCSA) ರಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಹಾಗಾಗಿ, ಆಪ್‌ ಸರ್ಕಾರವು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Instagram: ಟ್ವಿಟರ್​ಗೆ ಪೈಪೋಟಿ ಕೊಡಲು ಮುಂದಾದ ಇನ್​ಸ್ಟಾಗ್ರಾಂ; ಶೀಘ್ರವೇ​ ಹೊಸ ಆ್ಯಪ್ ಬಿಡುಗಡೆ?!
ಮೆಟಾ ಕಂಪನಿಯ, ವಿಡಿಯೊ/ಫೋಟೋ ಶೇರಿಂಗ್​ ಸಾಮಾಜಿಕ ಮಾಧ್ಯಮವಾಗಿರುವ​ ಆಗಿರುವ ಇನ್​ಸ್ಟಾಗ್ರಾಂ (Instagram) ಈಗ ಟ್ವಿಟರ್​ಗೆ ಪೈಪೋಟಿ ಕೊಡಲು ಮುಂದಾಗಿದೆ. ಟ್ವಿಟರ್​​ನಂಥ ಬರಹ ಆಧಾರಿತ ಆ್ಯಪ್ (Text-Based App)​​ವೊಂದನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Viduthalai: ಈಗ ಕನ್ನಡದಲ್ಲಿಯೂ ಒಟಿಟಿಗೆ ಬಂತು ‘ವಿಡುದಲೈ’ ಸಿನಿಮಾ
ತಮಿಳು ಚಿತ್ರರಂಗದ ಮಾಸ್ ಡೈರೆಕ್ಟರ್ ವೆಟ್ರಿಮಾರನ್ ನಿರ್ದೇಶನದ ವಿಡುದಲೈ (Viduthalai) ಸಿನಿಮಾ Zee5 ಒಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ. ವಿಜಯ್ ಸೇತುಪತಿ, ಸೂರಿ, ಕನ್ನಡದ ಸರ್ದಾರ್ ಸತ್ಯ, ಪ್ರಕಾಶ್ ರೈ, ಗೌತಮ್ ಮೆನನ್ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರ ಈಗ ಕನ್ನಡದಲ್ಲಿಯೂ ಲಭ್ಯವಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಮಳೆ; ಇನ್ನೂ ಐದು ದಿನ ಇದೆ ವರ್ಷಧಾರೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ (ಮೇ 20) ಗುಡುಗು ಸಹಿತ ಮಳೆಯಾಗುವ (karnataka Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸಮುದ್ರ ಮಟ್ಟದಿಂದ 900 ಮೀಟರ್ ದೂರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಉತ್ತರ ಪ್ರದೇಶದ ವ್ಯಾಪ್ತಿಯಲ್ಲಿ ಹೀಗಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. 8ನೇ ಮಗುವಿಗೆ ಅಪ್ಪನಾಗ್ತಿದ್ದಾರೆ ಬ್ರಿಟನ್​ ಮಾಜಿ ಪ್ರಧಾನಿ, 58ವರ್ಷದ ಬೋರಿಸ್ ಜಾನ್ಸನ್
ಬ್ರಿಟನ್​ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್​ (Boris Johnson) ಅವರು ತಮ್ಮ 58ನೇ ವಯಸ್ಸಿನಲ್ಲಿ ಮತ್ತೊಮ್ಮೆ ‘ಅಪ್ಪ’ನಾಗುತ್ತಿದ್ದಾರೆ. ಅವರ ಪತ್ನಿ ಕ್ಯಾರಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಕ್ಯಾರಿ ಅವರು ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ.‘ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version