Site icon Vistara News

ವಿಸ್ತಾರ TOP 10 NEWS: ಶುಕ್ರವಾರ ಗ್ಯಾರಂಟಿ ಘೋಷಣೆ, ಅಮೆರಿಕದಲ್ಲಿ ರಾಹುಲ್‌ ಭಾಷಣದ ಕಿಡಿ ಇತ್ಯಾದಿ ಪ್ರಮುಖ ಸುದ್ದಿಗಳಿವು

vistara top 10 news congress guarantee announcement on friday to rahul gandhi speech in usa and more news

#image_title

1. Congress Guarantee: ಗ್ಯಾರಂಟಿ ಜಾರಿ ಸಂಪುಟ ಸಭೆ ಮುಂದೂಡಿಕೆ: ಹೊಸ ದಿನಾಂಕ ಯಾವುದು?
ಕಾಂಗ್ರೆಸ್‌ ಸರ್ಕಾರದ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ಗುರುವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮುಂದೂಡಿಕೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Congress Guarantee: ನೀವು ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿ ಆಗೋಲ್ಲ: ಸಿಎಂ ಸಿದ್ದರಾಮಯ್ಯಗೆ ಆರ್ಥಿಕ ಇಲಾಖೆ ಖಡಕ್‌ ಮಾತು
ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಹೇಗಾದರೂ ಮಾಡಿ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಕಸರತ್ತು ನಡೆಸುತ್ತಿದ್ದರೆ, ಇಷ್ಟು ದೊಡ್ಡ ಮೊತ್ತದ ಯೋಜನೆಗಳನ್ನು ಒಂದೇ ಬಾರಿಗೆ ಜಾರಿ ಮಾಡುವುದು ಅಸಾಧ್ಯ ಎಂದು ಹಣಕಾಸು ಇಲಾಖೆ ಸ್ಪಷ್ಟವಾಗಿ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. NIA Raid: ವಿಟ್ಲದ ಫರ್ನಿಚರ್ ಅಂಗಡಿ ಮಾಲೀಕನ ಮನೆ ತೀವ್ರ ತಪಾಸಣೆ; ಕೆರೆಮೂಲೆಯಲ್ಲೂ ಶೋಧಿಸಿದ ಎನ್‌ಐಎ
ಬಿಹಾರದಲ್ಲಿ ಕಳೆದ ವರ್ಷ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಬುಧವಾರ (ಮೇ 31) ಕರ್ನಾಟಕ, ಕೇರಳ ಹಾಗೂ ಬಿಹಾರದಲ್ಲಿ ಸುಮಾರು 25ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಎನ್‌ಐಎ (NIA Raid) ತಂಡ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Drinking Water: ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕುಡಿಯುವ ನೀರಿಲ್ಲ: ನೀರು ಕೊಡಿ ಎಂದು ಮಹಾರಾಷ್ಟ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ
ಈ ಬಾರಿ ಬೇಸಿಗೆ ಝಳಕ್ಕೆ ಕುಡಿಯುವ ನೀರಿನ ಮೂಲಗಳು ಬೇಗ ಬತ್ತಿಹೋಗಿದ್ದು, ಜನ ಹಾಗೂ ಜಾನುವಾರು ಬಳಕೆಗಾಗಿ ನೀರು ಬಿಡುಗಡೆ ಮಾಡಿ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. New Education Policy: ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ನೀತಿ: ಎನ್‌ಇಪಿ ತಿರಸ್ಕಾರ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್‌
ಇದೀಗ ದೇಶಾದ್ಯಂತ ಜಾರಿಯಲ್ಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rahul Gandhi : 1980ರಲ್ಲಿ ದಲಿತರಿಗೆ ಆದಂತೆ ಈಗ ಮುಸ್ಲಿಮರ ಮೇಲೆ ದೌರ್ಜನ್ಯ: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಹೇಳಿಕೆ
ಅಮೆರಿಕ ನೆಲದಲ್ಲಿ ನಿಂತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮತ್ತೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. “1980ರ ದಶಕದಲ್ಲಿ ಹೇಗೆ ದಲಿತರ ಮೇಲೆ ದೌರ್ಜನ್ಯ ನಡೆಯಿತೋ, ಈಗ ದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ” ಎಂದು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್‌ ಕಿ ದುಕಾನ್’‌ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Gyanvapi Case: ಜ್ಞಾನವಾಪಿ ಕೇಸ್; ಮಸೀದಿ ಸಮಿತಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌, ಹಿಂದು ಅರ್ಜಿದಾರರು ನಿರಾಳ
ಕಾಶಿ ವಿಶ್ವನಾಥ ದೇವಾಲಯಕ್ಕೆ ಅಂಟಿಕೊಂಡಂತಿರುವ ಜ್ಞಾನವಾಪಿ (Gyanvapi Case) ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮಾನ್‌ ಇಂತೇಜಾಮಿಯಾ ಸಮಿತಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಳ್ಳಿಹಾಕಿದೆ. ಇದರಿಂದ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ ಐವರು ಹಿಂದು ಮಹಿಳೆಯರಿಗೆ ಮುನ್ನಡೆ ಸಿಕ್ಕಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Wrestlers Protest: ಬ್ರಿಜ್‌​ ಭೂಷಣ್​ ಬಂಧಿಸದಿದ್ದರೆ ಹಾಲು,ತರಕಾರಿ ಪೂರೈಕೆ ಸ್ಥಗಿತ; ಟಿಕಾಯತ್ ಎಚ್ಚರಿಕೆ
ಐದು ದಿನಗಳ ಒಳಗಡೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್​ ಸಿಂಗ್​ ಬಂಧನವಾಗದಿದ್ದರೆ, ಜೂನ್ 5 ರಿಂದ ದೆಹಲಿ ಹಾಗೂ ಇದರ ವ್ಯಾಪ್ತಿಗೆ ಬರುವ ಹಲವು ಪ್ರದೇಶಗಳಿಗೆ ಹಾಲು ಹಾಗೂ ತರಕಾರಿ ಪೂರೈಕೆ ಸ್ಥಗಿತಗೊಳಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: ಇನ್ನೈದು ದಿನ ಭಾರಿ ಮಳೆ; ಇರಲಿದೆ ಗುಡುಗಿನ ಅಬ್ಬರ, ಬಿಸಿಲೂ ಬರಲಿದೆ: ಎಲ್ಲೆಲ್ಲಿ ಹೇಗಿದೆ?
ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆ (Karnataka Rain) ಆಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆ ನೀಡಿದೆ. ವಿದರ್ಭದಿಂದ ದಕ್ಷಿಣ ತಮಿಳುನಾಡಿನವರೆಗೆ ಟ್ರಫ್ ಮುಂದುವರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News: ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಜಾರ್ಖಂಡ್‌ ಸರ್ಕಾರ ನೀಡಿದ ಗಿಫ್ಟ್‌ ನೋಡಿ ನಾಚಿಕೊಂಡ ವಧುವರರು!
ಸರ್ಕಾರ ಏರ್ಪಡಿಸಿದ ಸಾಮೂಹಿಕ ವಿವಾಹ‌ (mass wedding) ಕಾರ್ಯಕ್ರಮದಲ್ಲಿ ಏನು ಗಿಫ್ಟ್‌ ಕೊಡಬಹುದು? ನೀವು ಊಹಿಸಲಾರಿರಿ. ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಹೊಸ ಮದುಮಕ್ಕಳಿಗೆ ಕಾಂಡೋಮ್‌ (condom), ಬರ್ತ್‌ ಕಂಟ್ರೋಲ್‌ ಗುಳಿಗೆ ನೀಡಿ ವಧುವವರು ನಾಚಿಕೊಳ್ಳುವಂತೆ ಮಾಡಿದೆ. ಆದರೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version