Site icon Vistara News

ವಿಸ್ತಾರ TOP 10 NEWS: ಆಗಸ್ಟ್‌ನಲ್ಲಿ ಗ್ಯಾರಂಟಿ ಜಾರಿಗೆ ಸಿದ್ಧ, ಬಿಜೆಪಿ ಅವಲೋಕನ ಸಭೆಯಲ್ಲಿ ಯುದ್ಧ ಹಾಗೂ ಮತ್ತಷ್ಟು ಪ್ರಮುಖ ಸುದ್ದಿಗಳಿವು

vistara top 10 news congress guarantee launch in august to bjp introspection meeting and more news

#image_title

1. Congress Guarantee: ಆ. 1ರಂದು ಫ್ರೀ ಕರೆಂಟ್‌, ಆ.18ರಂದು ಮನೆಯೊಡತಿಗೆ 2000 ರೂ. ಯೋಜನೆಗೆ ಚಾಲನೆ
ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Congress Guarantee: ಸೇವಾ ಸಿಂಧುಗೆ ʼಗ್ಯಾರಂಟಿʼ ಲೋಡ್‌ ಆತಂಕ: ಕೋಟ್ಯಂತರ ಜನರ ಅರ್ಜಿ ಭಾರ ತಡೆಯಬಲ್ಲದೇ?

2. Textbook Revision: ʼಕೇಸರಿʼ ಪಠ್ಯಕ್ಕೆ ರೆಡ್‌ ಸಿಗ್ನಲ್‌!: ಪಠ್ಯ ಪರಿಷ್ಕರಣೆ ಶತಃಸಿದ್ಧ ಎಂದ ಶಿಕ್ಷಣ ಸಚಿವ
ಬಿಜೆಪಿ ಅವಧಿಯಲ್ಲಿ ಕೈಗೊಂಡ ಪಠ್ಯಪುಸ್ತಕ ಪರಿಷ್ಕರಣೆಯನ್ನು ಬದಲಾವಣೆ ಮಾಡುವುದು ಖಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Text Book: ಹಿಂದಿನ ಪಠ್ಯದಲ್ಲಿ ಹುಸಿ ದೇಶಭಕ್ತಿ; ಪಠ್ಯ ಪರಿಷ್ಕರಣೆ ಮಾಡುವುದೇ ಸರಿ ಅಂದ್ರು ಕುಂ. ವೀರಭದ್ರಪ್ಪ!

3. BJP Karnataka: ನಿಮ್ಮ ತಪ್ಪಿನಿಂದ ನಾವು ಬಲಿಯಾದೆವು: ಬಿಜೆಪಿ ಅವಲೋಕನ ಸಭೆಯಲ್ಲಿ ನಾಯಕರ ವಿರುದ್ಧ ಅಸಮಾಧಾನ ಸ್ಫೋಟ
ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಮೊದಲ ಬಾರಿಗೆ ನಡೆಸಿದ ಅವಲೋಕನ ಸಭೆಯಲ್ಲಿ, ಪರಾಜಿತ ಅಭ್ಯರ್ಥಿಗಳು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂತನ ಶಾಸಕರಿಗೆ ಬೆಳಗ್ಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸಂಜೆ ಅವಲೋಕನ ಸಭೆಯನ್ನು ಏರ್ಪಡಿಸಲಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆಗಳು ನಡೆದವು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Bengaluru Rain: ಡಿಕೆಶಿ ಅಪಾರ್ಟ್‌ಮೆಂಟ್ ಆದರೂ ಬುಲ್ಡೋಜರ್‌ ಪಕ್ಕಾ: ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಮಾತು
ಬೆಂಗಳೂರಿನಲ್ಲಿ ಮಳೆ ಸುರಿದಾಗ ಹಾನಿಯಾಗುವ ಹಾಗೂ ಲೇಔಟ್‌ಗಳಿಗೆ ನೀರು ನುಗ್ಗುವ ಪ್ರದೇಶಗಳಿಗೆ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಯಮಲೂರು, ದೊಮ್ಮಲೂರು, ಬೆಳಂದೂರು ಸರ್ಜಾಪುರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಒತ್ತುವರಿಯಾದ ರಾಜಕಾಲುವೆ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಬೆಂಗಳೂರು ಮೆಟ್ರೊ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಜತೆಗೆ ವೀಕ್ಷಣೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Monsoon 2023: ‘ಲೇಟ್ ಲತೀಫ್’ ಮಳೆರಾಯ! ಒಂದು ವಾರ ತಡವಾಗಿ ಕೇರಳಕ್ಕೆ ಬಂದ
ವಾಡಿಕೆಗಿಂತ ಒಂದು ವಾರ ತಡವಾಗಿ ಮುಂಗಾರು (Monsoon 2023) ಕೇರಳಕ್ಕೆ (Kerala) ಕಾಲಿಟ್ಟಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ಕ್ಕೆ ಮುಂಗಾರು ಮಾರುತಗಳು ಕೇರಳದ ಕರಾವಳಿಗೆ ಅಪ್ಪಳಿಸುತ್ತಿದ್ದವು. ಆದರೆ, ಈ ಬಾರಿ ಒಂದು ವಾರ ತಡವಾಗಿದೆ. ಇದರಿಂದ ಸಹಜವಾಗಿಯೇ ಪರಿಣಾಮ ಬೀರಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಹವಾಮಾನ ಸಂಸ್ಥೆ (India Meteorological Department – IMD), ನೈಋತ್ಯ ಮಾನ್ಸೂನ್ ಜೂನ್ 1ರ ಬದಲಿಗೆ ಇಂದು ಅಂದರೆ ಜೂನ್ 8ರಂದು ಕೇರಳದಲ್ಲಿ ಆರಂಭವಾಗಿದೆ ಎಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ ಸಂಪಾದಕೀಯ: ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ ಸ್ವಾಗತಾರ್ಹ
ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ, ಸದ್ಯಕ್ಕೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡುವ (ಶೇ.6.50) ನಿರ್ಧಾರವನ್ನು ಆರ್‌ಬಿಐ ಪ್ರಕಟಿಸಿದೆ. ಈ ಮೂಲಕ ಆರ್‌ಬಿಐ ಸಾಲಗಾರರ ಆತಂಕವನ್ನು ದೂರ ಮಾಡಿದೆ. ಸತತ ಆರು ಬಾರಿಯಿಂದ ಆರ್‌ಬಿಐ ರೆಪೊ ದರ ಏರಿಸುತ್ತಲೇ ಬಂದಿದೆ. 2022ರ ಮೇ ತಿಂಗಳಿನಿಂದ ರೆಪೊ ದರ ಏರಿಕೆ ಆರಂಭವಾಗಿತ್ತು. ಇದರಿಂದಾಗಿ ಬಡ್ಡಿ ದರ ಏರಿಕೆಗೂ ಕಾರಣವಾಗಿತ್ತು. ಹೀಗಾಗಿ ಮುಖ್ಯವಾಗಿ ಗೃಹ ಸಾಲ, ವಾಹನ ಸಾಲಗಾರರ ಮೇಲೆ ಭಾರಿ ಬಡ್ಡಿ ಹೊರೆ ಬೀಳುವಂತಾಗಿತ್ತು. ಈ ಬಾರಿಯೂ ರೆಪೊ ದರ ಏರಬಹುದು ಎಂಬ ಆತಂಕ ಜನಸಾಮಾನ್ಯರಲ್ಲಿತ್ತು. ಆದರೆ ಆರ್‌ಬಿಐ ನಿರ್ಧಾರದಿಂದಾಗಿ ಜನ ತುಸು ನಿರಾಳವಾಗುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Sam Altman: ಚಾಟ್‌ಜಿಪಿಟಿ ಬಗ್ಗೆಯೂ ಮೋದಿ ಬಳಿ ಉತ್ತರವಿದೆ; ಭೇಟಿ ಬಳಿಕ ಓಪನ್‌ಎಐ ಮುಖ್ಯಸ್ಥ ಹೀಗೆ ಹೇಳಿದ್ದೇಕೆ?
ಚಾಟ್‌ಜಿಪಿಟಿಯ ಮಾತೃಸಂಸ್ಥೆಯಾದ ಓಪನ್‌ಎಐ (OpenAI) ಸಿಇಒ ಸ್ಯಾಮ್‌ ಅಲ್ಟ್‌ಮನ್‌ (Sam Altman) ಅವರು ಭಾರತ ಪ್ರವಾಸದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಭೇಟಿ, ಚರ್ಚೆಯ ವಿಷಯಗಳನ್ನು ಹರಡಿರುವ ಅವರು, ಭಾರತದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಅಳವಡಿಕೆ, ಕಾನೂನು ನಿಯಂತ್ರಣ ಸೇರಿ ಹಲವು ವಿಚಾರ ತಿಳಿಸಿದ್ದಾರೆ. ಹಾಗೆಯೇ, “ನರೇಂದ್ರ ಮೋದಿ ಅವರ ಉತ್ಸಾಹ ಅತ್ಯದ್ಭುತ” ಎಂದು ಬಣ್ಣಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Viral News : ಮೆರವಣಿಗೆಯಲ್ಲಿ ಕಾಣಿಸಿತು ಇಂದಿರಾಗಾಂಧಿ ಹತ್ಯೆಯ ಸ್ತಬ್ಧಚಿತ್ರ!
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅವರನ್ನು ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದವರೇ ಕೊಂದ ವಿಚಾರ ಎಲ್ಲರಿಗೂ ತಿಳಿದಿರುವುದು. ಆ ದಿನದಂದು ಪೂರ್ತಿ ದೇಶ ಕಣ್ಣೀರು ಹಾಕಿತ್ತು. ಆದರೆ ಆ ಕೃತ್ಯವನ್ನು ಕೆಲವರು ಮಾತ್ರ ಸಂಭ್ರಮಿಸಿದ್ದರು. ಇದೀಗ ಆ ಕೊಲೆಯನ್ನೇ ತಮ್ಮ ಹೆಮ್ಮೆ ಎನ್ನುವಂತೆ ಕೆನಡಾದಲ್ಲಿರುವ ಖಲಿಸ್ತಾನಿಗಳು (Viral News) ಪ್ರದರ್ಶಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WTC Final 2023: 87 ವರ್ಷಗಳ ಹಿಂದಿನ ದಾಖಲೆ ಮುರಿದ ಸ್ಮಿತ್​-ಹೆಡ್​ ಜೋಡಿ
ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ಸ್ಟೀವನ್​ ಸ್ಮಿತ್​ ಮತ್ತು ಟ್ರಾವಿಸ್​ ಹೆಡ್​ ಅವರು 87 ವರ್ಷಗಳ ಹಿಂದಿನ ಜತೆಯಾಟದ ದಾಖಲೆಯೊಂದನ್ನು ಮುರಿದಿದ್ದಾರೆ. ಲಂಡನ್‌ನ ಐತಿಹಾಸಿಕ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನಲ್ಲಿ 469 ರನ್​ ಗಳಿಸಿ ಸವಾಲೊಡ್ಡಿದೆ. ದ್ವಿತೀಯ ದಿನವಾದ ಗುರುವಾರ ಆಟ ಮುಂದುವರಿಸಿದ ವೇಳೆ ಸ್ಟೀವನ್​ ಸ್ಮಿತ್​ ಮತ್ತು ಟ್ರಾವಿಸ್ ಹೆಡ್ ಅವರು ದಾಖಲೆಯ ಜತೆಯಾಟವೊಂದನ್ನು ನಿರ್ಮಿಸಿದರು. ಈ ಮೂಲಕ 87 ವರ್ಷಗಳ ಹಿಂದಿನ ದಾಖಲೆಯೊಂದು ಪತನಗೊಂಡಿತು. ಉಭಯ ಆಟಗಾರರು ನಾಲ್ಕನೇ ವಿಕೆಟ್‌ಗೆ ಓವಲ್‌ ಮೈದಾನದಲ್ಲಿ ಅತ್ಯಧಿಕ ಜತೆಯಾಟ ನಡೆಸಿದ ಆಟಗಾರರಾಗಿ ಮೂಡಿಬಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Mumbai Murder Case: ತನ್ನ ಲಿವ್ ಇನ್‌ ಸಂಗಾತಿಯನ್ನು ತುಣುಕುಗಳಾಗಿ ಕತ್ತರಿಸಿ, ಕುಕ್ಕರ್‌ನಲ್ಲಿ ಕುದಿಸಿದ ಮುಂಬೈ ವ್ಯಕ್ತಿ
 ಶ್ರದ್ಧಾ ವಾಳ್ಕರ್ ರೀತಿಯ ಪ್ರಕರಣವೊಂದು ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ನಡೆದಿದೆ. 56 ವರ್ಷದ ವ್ಯಕ್ತಿಯೊಬ್ಬ ತನ್ನ ಲೈವ್ ಇನ್ ಸಂಗಾತಿಯನ್ನು (Live-in-Partner) ತುಣುಕುಗಳಾಗಿ ಕತ್ತರಿಸಿ, ಕೆಲವು ತುಣುಕುಗಳ್ನು ಕುಕ್ಕರ್‌ನಲ್ಲಿ (Cooker) ಬೇಯಿಸಿದ ಭೀಭೀತ್ಸ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಮರ ಕತ್ತರಿಸುವ ಕಟ್ಟರ್ (Tree Cutter) ಬಳಸಿ, ತನ್ನ ಸಂಗಾತಿಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version