1.ಆಪರೇಷನ್ ಕಮಲದ ಹಿಂದೆ ಯೋಗೇಶ್ವರ್, ರಮೇಶ್ ಜಾರಕಿಹೊಳಿ, ಸಂತೋಷ್?
ಸಿ.ಪಿ. ಯೋಗೇಶ್ವರ್, ರಮೇಶ್ ಜಾರಕಿಹೊಳಿ ಮತ್ತು ಬಿಎಸ್‌ವೈ ಆಪ್ತ ಎನ್.ಆರ್ ಸಂತೋಷ್ ಅವರೇ ರಾಜ್ಯದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿ ಸರ್ಕಾರವನ್ನು ಉರುಳಿಸಲು (Operation Kamala) ಯತ್ನಿಸುತ್ತಿರುವವರು ಎಂದು ಮಂಡ್ಯ ಶಾಸಕ ರವಿ ಗಣಿಗ (Mandya MLA Ravi Ganiga) ಎರಡನೇ ಹಂತದ ಕ್ಲೂ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಜೆಡಿಎಸ್‌ನ 13 ಶಾಸಕರು ಶೀಘ್ರವೇ ಕಾಂಗ್ರೆಸ್‌ಗೆ; ಕೆ.ಎನ್ ರಾಜಣ್ಣ ಹೊಸ ಬಾಂಬ್
2. Congress politics : ಸಿಎಂ ಸಮರಕ್ಕೆ ಪರಂ ಎಂಟ್ರಿ; ಭೋಜನ ಹೆಸರಲ್ಲಿ ಡಿಕೆಶಿಗೆ ಸಿದ್ದರಾಮಯ್ಯ ಚೆಕ್‌ಮೇಟ್!
ಡಿ.ಕೆ. ಶಿವಕುಮಾರ್ ಅವರು ಎರಡೂವರೆ ವರ್ಷದ ನಂತರ ಸಿಎಂ ಆಗೋದು ಹೇಗೆ ಎಂದು ಪ್ಲ್ಯಾನ್ ಮಾಡುತ್ತಿದ್ದರೆ ಸಿದ್ದರಾಮಯ್ಯ ಅವರು ಐದು ವರ್ಷವೂ ಅಧಿಕಾರ ಉಳಿಸಿಕೊಳ್ಳೋದು ಹೇಗೆ ಎಂದು ತಂತ್ರ ಹೆಣೆಯುತ್ತಿದ್ದಾರೆ. ಶುಕ್ರವಾರ ರಾತ್ರಿ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮನೆಯಲ್ಲಿ ಭೋಜನ ಕೂಟವೊಂದು ನಡೆದಿದ್ದು, ಈ ಮೂಲಕ ಪರಮ್ ಅವರನ್ನು ಸಿಎಂ ಗಾದಿ (Chief Minister post) ಚದುರಂಗದಾಟದಲ್ಲಿ ಚೆಕ್‌ಮೇಟ್ ಆಗಿ ಬಳಸುವ ಆಟ ಶುರುವಾದಂತೆ (Congress Politics) ಕಾಣುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3.ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿ ಕೊನೆಗೂ ಫೈನಲ್- 30ರಲ್ಲಿ 20 ಸ್ಥಾನ ಶಾಸಕರ ಪಾಲು
ರಾಜ್ಯದಲ್ಲಿ ನಿಗಮ ಮತ್ತು ಮಂಡಳಿಗಳ (Nigama Mandali) ನೇಮಕಾತಿಯ ಪಟ್ಟಿ ಫೈನಲ್ ಆಗಿದೆ. ಆದರೆ, ಈ ಬಾರಿಯೂ ಕಾರ್ಯಕರ್ತರು ಅವಕಾಶ ಮಿಸ್ ಮಾಡಿಕೊಂಡಿದ್ದಾರೆ. ಒಟ್ಟು 30 ಮಂದಿಯ ಹೆಸರು ಫೈನಲ್ ಆಗಿದ್ದು, ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಶಾಸಕರೇ (MLAs got lion Share) ಆಗಿದ್ದಾರೆ, ಉಳಿದವರು ಪ್ರಭಾವಿಗಳು ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: Nigama Mandali : ನಿಗಮ, ಮಂಡಳಿ ಮಾರಾಟ; Rate Card ಬಿಡುಗಡೆ ಮಾಡಿದ ಬಿಜೆಪಿ!
4. Mahua Moitra: ಮಹುವಾ ಮೊಯಿತ್ರಾಗೆ ಸಂಕಷ್ಟ; ನ.2ಕ್ಕೆ ಹಾಜರಾಗಲು ನೈತಿಕ ಸಮಿತಿ ಆದೇಶ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಗುರಿಯಾಗಿಸಿಕೊಂಡು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಪಡೆದ ಆರೋಪದಲ್ಲಿ ಮಹುವಾ ಮೊಯಿತ್ರಾ (Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಲೋಕಸಭೆಯ ನೈತಿಕ ಸಮಿತಿಯು ಸಮನ್ಸ್ ಜಾರಿ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. KEA Exam : ಪಿಎಸ್‌ಐ ಎಕ್ಸಾಂನಂತೆ ನಿಗಮ ಮಂಡಳಿ ನೇಮಕಾತಿ ಪರೀಕ್ಷೆಯಲ್ಲೂ ಬ್ಲೂಟೂತ್ ಬಳಕೆ
ಅ. 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ (Examination on October 28, 29) ಕೆಇಎ ಪರೀಕ್ಷೆಯನ್ನು ನಡೆಸುತ್ತಿದೆ. ರಾಜ್ಯಾದ್ಯಂತ ಮೊದಲ ದಿನ 350 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಈ ವೇಳೆ ಕಳೆದ ಬಾರಿ ಪಿಎಸ್‌ಐ ಎಕ್ಸಾಂನಲ್ಲಿ ನಡೆದಂತೆ ಬ್ಲೂ ಟೂತ್ ಬಳಕೆಯಾಗಿದೆ. ಯಾದಗಿರಿ ಮತ್ತು ಕಲಬುರಗಿಯಲ್ಲಿ ಈ ಘಟನೆಗಳು ನಡೆದಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವರದಿ : ಕಲಬುರಗಿಯಲ್ಲೂ ಪರೀಕ್ಷೆಯಲ್ಲಿ ನಕಲು ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ!
6. ವಿಸ್ತಾರ ಅಂಕಣ: ʼಭಾರತʼದಲ್ಲಿರುವ ಗಾಂಭೀರ್ಯ ‘ಇಂಡಿಯಾʼದಲ್ಲಿ ಏಕಿಲ್ಲ?
ಇಂಡಿಯಾ ಎನ್ನುವುದು ಸಿಂಧು ನದಿಯ ಹೆಸರಿನಿಂದ ಮೂಡಿಬಂದಿದೆ. ಹಾಗಾಗಿ ಇಂಡಿಯಾ ಎಂಬ ಶಬ್ದ ನಮಗೆ ಕೀಳಲ್ಲ. ಆದರೆ ಭಾರತ ಎಂದ ಕೂಡಲೆ ಅದಕ್ಕಿರುವ ಇತಿಹಾಸ, ಆಳ, ಅಗಲ ಇಂಡಿಯಾ ಪದಕ್ಕೆ ಇಲ್ಲ ಎನ್ನುವುದು ಸತ್ಯ ಎನ್ನುತ್ತಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾರ ಹರಿಪ್ರಕಾಶ್ ಕೋಣೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
7. ನಡುರಸ್ತೆಯಲ್ಲಿ ಪೊಲೀಸ್ ಗೂಂಡಾಗಿರಿ- ಲಾಂಗ್ ಹಿಡಿದು ಯುವಕರಿಬ್ಬರನ್ನು ಅಟ್ಟಾಡಿಸಿದ!
ಕಳ್ಳಕಕಾರಿಗೆ, ರೌಡಿಸಂ ಮಾಡುವವರಿಗೆ ಸಿಂಹಸ್ವಪ್ನವಾಗಿರಬೇಕಾದ ಪೊಲೀಸ್ ಅಧಿಕಾರಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಯುವಕರನ್ನು ಅಟ್ಟಾಡಿಸಿರುವ ಘಟನೆ (Assault Case) ಬೆಂಗಳೂರಲ್ಲಿ ನಡೆದಿದೆ. ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು, ಯಾವ ರೌಡಿಗೂ ಕಮ್ಮಿ ಇಲ್ಲದಂತೆ ಇಬ್ಬರು ಯುವಕರ ಮೇಲೆ ಎಎಸ್‌ಐ ಮಚ್ಚು ಬೀಸಿರುವ ಘಟನೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಹಮಾಸ್ ಹೆಸರಿಲ್ಲದ ನಿರ್ಣಯಕ್ಕೆ ತಿರಸ್ಕಾರ: ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಮೋದಿ ಸರ್ಕಾರ ಸೆಡ್ಡು
ಗಾಜಾ ನಗರದಲ್ಲಿ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸುವ ದಿಸೆಯಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ಆದರೆ, ನಿರ್ಣಯದಲ್ಲಿ ಹಮಾಸ್ ದಾಳಿಯ ಪ್ರಸ್ತಾಪ ಇರದ ಕಾರಣ ಭಾರತವು ಮತದಾನದಿಂದ ದೂರ ಉಳಿದಿದೆ. ಇದು ಪರೋಕ್ಷವಾಗಿ ಇಸ್ರೇಲ್‌ಗೆ ಬೆಂಬಲ ನೀಡಿದಂತಾಗಿದ್ದು, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಲಾಸ್ಟ್ ಬಾಲ್ ಥ್ರಿಲ್ಲರ್: ರೋಚಕ ವಿಶ್ವಕಪ್ ಕದನದಲ್ಲಿ ಕಿವೀಸನ್ನು ಐದು ರನ್ನಿಂದ ಮಣಿಸಿದ ಆಸ್ಟ್ರೇಲಿಯಾ
ಅತ್ಯಂತ ರೋಚಕವಾಗಿ ಸಾಗಿದ ಬೃಹತ್ ಮೊತ್ತದ ಮೇಲಾಟದಲ್ಲಿ ಕೊನೆಗೂ ಆಸ್ಟ್ರೇಲಿಯಾ(AUS vs NZ) ತಂಡದ ಕೈ ಮೇಲಾಗಿದೆ. 5 ರನ್ಗಳಿಂದ ಗೆಲುವು ಸಾಧಿಸಿದೆ. ಕಿವೀಸ್ ತಂಡದ ಈ ಅಸಾಮಾನ್ಯ ಹೋರಾಟ ಪಂದ್ಯದ ಹೈಲೈಟ್ಸ್ ಆಗಿತ್ತು. ಗೆಲುವು ಕಂಡ ಆಸೀಸ್ನ ಸೆಮಿ ಹಾದಿ ಇನ್ನಷ್ಟು ಭದ್ರವಾಯಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಪೋಲಿ ಚಿತ್ರ ನೋಡೋದು, ಲೈಕ್ ಮಾಡೋದು ಅಪರಾಧ ಅಲ್ಲ; ಕೋರ್ಟ್ ಮಹತ್ವದ ಆದೇಶ
ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಲಿ ಹಾಗೂ ಅಶ್ಲೀಲ ಫೋಟೊಗಳು ಮತ್ತು ವಿಡಿಯೊಗಳನ್ನು (Obscene Post) ಅಪ್‌ಲೋಡ್ ಮಾಡುವುದನ್ನು ನಿಷೇಧಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿರುತ್ತವೆ. ಈ ನಡುವೆ “ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ಲೈಕ್ ಮಾಡುವುದು ತಪ್ಪಲ್ಲ” ಎಂದು ಅಲಹಾಬಾದ್ ಹೈಕೋರ್ಟ್‌ಮಹತ್ವದ ಆದೇಶ ಹೊರಡಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ