Site icon Vistara News

Vistara Top 10 News : ಕೈ ರೆಬೆಲ್‌ಗಳಿಗೆ ಸ್ಪೆಷಲ್‌ ಹುದ್ದೆ, ರಾಮ ದರ್ಶನಕ್ಕೆ ಸೋನಿಯಾ ಮತ್ತು ಇತರ ಸುದ್ದಿ

Vistara top10 News2912

1.Congress Politics : ರೆಬೆಲ್‌ ಕೈ ನಾಯಕರಿಗೆ ಸ್ಪೆಷಲ್‌ ಹುದ್ದೆ; ರಾಯರೆಡ್ಡಿ, ಪಾಟೀಲ್‌, ದೇಶಪಾಂಡೆಗೆ ಬಂಪರ್
ರಾಜ್ಯ ಕಾಂಗ್ರೆಸ್‌ ನಲ್ಲಿ ಕಳೆದ ಕೆಲವು ಸಮಯದಿಂದ ರೆಬೆಲ್‌ ನಾಯಕರಂತೆ (Rebel Congress Leaders) ವರ್ತಿಸುತ್ತಿದ್ದ ಇಬ್ಬರು ನಾಯಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸ್ಪೆಷಲ್‌ ಹುದ್ದೆಯನ್ನೇ ಸೃಷ್ಟಿಸಿದ್ದಾರೆ. ಇನ್ನೊಬ್ಬ ಹಿರಿಯ ನಾಯಕರಿಗೆ ಗೌರವದ ಹೊಣೆಗಾರಿಕೆ ನೀಡಿದ್ದಾರೆ (Congress Politics). ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2.ಅಲ್ಪಸಂಖ್ಯಾತರ ಕಾಲೋನಿಗೆ ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ (Development of Minorities Colony) ಸಾವಿರ ಕೋಟಿ ರೂ. ಗಳ ಕ್ರಿಯಾ ಯೋಜನೆ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೂಚಿಸಿದರು. ಕೆಲವೇ ದಿನದ ಹಿಂದೆ ಅವರನ್ನು ಮುಸ್ಲಿಂ ತುಷ್ಟೀಕರಣಕ್ಕಾಗಿ ಬಿಜೆಪಿ ಟೀಕಿಸಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಯಿತು ಐದು ಅಸ್ಥಿಪಂಜರ: ಏನಿದರ ರಹಸ್ಯ?
ಚಿತ್ರದುರ್ಗ ನಗರದ ಜಗನ್ನಾಥ ರೆಡ್ಡಿ ಎಂಬವರ ಮನೆಯಲ್ಲಿ 5 ಅಸ್ಥಿಪಂಜರಗಳು ಪತ್ತೆಯಾಗಿದ್ದು (Skeletons Found) ಹಲವು ಅನುಮಾನಗಳು ವ್ಯಕ್ತವಾಗಿವೆ. ಸಾವಿಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಕುಟುಂಬದ ಐವರು ಸದಸ್ಯರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. Kannada Name plate: ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡದಿದ್ರೆ ಬೆಂಗಳೂರು ಬಂದ್!
ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದ್ದಕ್ಕೆ ಸರ್ಕಾರ ಬಂಧನ ಮಾಡಿರುವುದು ಖಂಡನಾರ್ಹ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ (TA Narayana Gowda) ಸೇರಿ ಕಾರ್ಯಕರ್ತರನ್ನು ಬಿಡುಗಡೆ ಮಾಡದಿದ್ದರೆ ಬೆಂಗಳೂರು ಬಂದ್‌ ಮಾಡಲಾಗುವುದು ಎಂದು ಕರವೇ ‌ಮತ್ತೊಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಭರ್ಜರಿ ಸಿದ್ಧತೆ: ಹಲವು ನಿಯಮ, ಪೊಲೀಸರೂ ಕಟ್ಟುನಿಟ್ಟು
ಬೆಂಗಳೂರಿನಲ್ಲಿ ಡಿಸೆಂಬರ್‌ 31ರಂದು ಹೊಸ ವರ್ಷಾಚರಣೆ ಸಂಭ್ರಮ ಭರ್ಜರಿಯಾಗಿ ಇರಲಿದೆ. ಇದಕ್ಕಾಗಿ ಯುವಜನರು ಮಾತ್ರವಲ್ಲ, ಪೊಲೀಸರು, ಮೆಟ್ರೊ, ಶಾಪಿಂಗ್‌ ಮಾಲ್‌ಗಳು ಭರ್ಜರಿ ಸಿದ್ಧತೆ ನಡೆಸಿವೆ.
ವರದಿ 1. ಹೊಸ ವರ್ಷಾಚರಣೆ: ಬಾರ್‌, ಪಬ್‌ಗಳಿಗೆ ಬಿಗಿ ರೂಲ್‌; ಹೀಗೆಲ್ಲಾ ಆದರೆ ಲೈಸೆನ್ಸ್‌ ಕ್ಯಾನ್ಸಲ್!
ವರದಿ 2. : New Year Celebration : ಡಿ. 31ರ ರಾತ್ರಿ ರಿವಾಲ್ವರ್‌ ಹಿಡ್ಕೊಂಡೇ ತಿರುಗಿ; ಪೊಲೀಸರಿಗೆ ಆರ್ಡರ್‌
ವರದಿ 3. ಡಿ. 31ರ ‌ರಾತ್ರಿ 2ರ ವರೆಗೆ ಮೆಟ್ರೋ ಸಂಚಾರ; ಈ ಒಂದು ಸ್ಟೇಷನ್ ಮಾತ್ರ ಫುಲ್‌ ಬಂದ್!‌

6.Sonia Gandhi: ರಾಮನ ದರ್ಶನ ಪಡೆಯಲಿರುವ ಸೋನಿಯಾ ಗಾಂಧಿ; ಕಾರ್ಯಕ್ರಮದಲ್ಲಿ ಭಾಗಿ ನಿಶ್ಚಿತ
2024ರ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7.savings rates : ಸುಕನ್ಯಾ ಸಮೃದ್ಧಿ, ಅಂಚೆ ಎಫ್‌ಡಿ ಬಡ್ಡಿದರ ಏರಿಕೆ!
ಕೇಂದ್ರ ಸರ್ಕಾರವು (Central Government) ಸಣ್ಣ ಉಳಿತಾಯಗಾರರಿಗೆ (savings rates ) ಸಿಹಿ ಸುದ್ದಿ ನೀಡಿದೆ. 2024ರ ಜನವರಿ-ಮಾರ್ಚ್‌ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ (Small Saving Schemes) ಬಡ್ಡಿ ದರಗಳನ್ನು 0.20% ತನಕ ಏರಿಸಲಾಗಿದೆ.ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.Madhu Bangarappa : ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ
ರಾಜ್ಯದ ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಅವರಿಗೆ ಚೆಕ್‌ ಬೌನ್ಸ್‌ ಪ್ರಕರಣವೊಂದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ದಂಡ-ಶಿಕ್ಷೆಯನ್ನು ವಿಧಿಸಿದೆ. 6.60 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣ (Cheque Bounce Case) ಇದಾಗಿದ್ದು, ಚೆಕ್‌ ಮೊತ್ತವೂ ಸೇರಿ ಆರು ಕೋಟಿ 96 ಲಕ್ಷದ 70 ಸಾವಿರ ರೂ. ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ಇಸ್ರೇಲಿ ಮಹಿಳೆಯರ ಮೇಲೆ ರೇಪ್, ಸೈನಿಕರ ಜನನಾಂಗಕ್ಕೇ ಗುಂಡು! ಹಮಾಸ್ ಪೈಶಾಚಿಕ ಕೃತ್ಯ ಬಯಲು
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್(Hamas-Israel War) ಮೇಲೆ ಹಮಾಸ್ ಬಂಡುಕೋರರು (Hamas Terrorist) ದಾಳಿ ನಡೆಸಿದ್ದ ವೇಳೆ ಇಸ್ರೇಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸಾಚಾರ ಎಸಗಲಾಗಿದೆ. ಇಸ್ರೇಲ್ ಸೈನಿಕರ ಖಾಸಗಿ ಭಾಗಕ್ಕೆ ಗುಂಡು ಹೊಡೆದು ಸಾಯಿಸಲಾಗಿದೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.ಕ್ವಾಟ್ಲೆ ಕೊಟ್ಟ ಬಾಸ್‌ನ ಬೆತ್ತಲೆ ಫೋಟೊ ವೈರಲ್‌ ಮಾಡಿದ ಉದ್ಯೋಗಿಗಳು; ಸೇಡೆಂದರೆ ಇದು
ಗುಜರಾತ್‌ನಲ್ಲಿ ಕ್ವಾಟ್ಲೆ ಕೊಡುತ್ತಿದ್ದ, ರೇಗಾಡುವುದು, ಬಾಯಿಗೆ ಬಂದಹಾಗೆ ಮಾಡುತ್ತಿದ್ದ ಕಂಪನಿ ಬಾಸ್‌ನ ಬೆತ್ತಲೆ ಫೋಟೊಗಳನ್ನು ಇಬ್ಬರು ಉದ್ಯೋಗಿಗಳು ವೈರಲ್‌ (Viral News) ಮಾಡುವ ಮೂಲಕ ಆತನ ವಿರುದ್ಧ ಸೇಡು (Revenge) ತೀರಿಸಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version