Site icon Vistara News

ವಿಸ್ತಾರ TOP 10 NEWS: ಕೊರೊನಾ ಕೇಸ್‌ ಹೆಚ್ಚಳದ ಆತಂಕದಿಂದ, ನೆಟ್ಟಾರು ಹತ್ಯೆ ಕೇಸ್‌ ಆರೋಪಿ ಬಂಧನದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-covid case raising to praveen nettaru accused arrest and more news

#image_title

1. Coronavirus Cases Rise: ಹೆಚ್ಚಿನ ಜನಕ್ಕೆ ಜ್ವರ, ಶೀತದ ಬೆನ್ನಲ್ಲೇ ಕೊರೊನಾ ಕೇಸ್‌ ಹೆಚ್ಚಳ, ಜನರಲ್ಲಿ ಆತಂಕ
ದೇಶಾದ್ಯಂತ ಕಳೆದ ಮೂರು ತಿಂಗಳಿಂದ ಹೆಚ್ಚಿನ ಜನ ಜ್ವರ, ಶೀತ, ಮೈಕೈ ನೋವು, ಕೆಮ್ಮಿನಿಂದ ಬಳಲುತ್ತಿರುವುದಕ್ಕೆ ಎಚ್‌3ಎನ್‌2 ಸೋಂಕಿನ ಉಪತಳಿಯೇ ಕಾರಣ ಎಂದು ತಜ್ಞರು ಹೇಳಿದ ಬೆನ್ನಲ್ಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೆಲ ದಿನಗಳಿಂದ ಏರಿಕೆಯಾಗುತ್ತಿರುವುದು (Coronavirus Cases Rise) ಆತಂಕ ಮೂಡಿಸಿದೆ. ಕರ್ನಾಟಕದಲ್ಲಿಯೇ 95 ಪ್ರಕರಣಗಳು ದಾಖಲಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: H3N2 Influenza: ಕೋವಿಡ್‌ ಬಳಿಕ H3N2 ವೈರಸ್‌ ಭೀತಿ; ICMRನಿಂದ ಹೈ ಅಲರ್ಟ್‌ ಘೋಷಣೆ

2. Praveen Nettaru murder: ತಲೆ ಮರೆಸಿಕೊಂಡಿದ್ದ ಪಿಎಫ್‌ಐ ಮುಖಂಡ, ಪ್ರವೀಣ್‌ ಕೊಲೆ ಆರೋಪಿ ಬೆಂಗಳೂರಿನಲ್ಲಿ ಬಂಧನ
ರಾಜಧಾನಿಯಲ್ಲಿ ತಲೆ ಮರೆಸಿಕೊಂಡಿದ್ದ ನಿಷೇಧಿತ ಪಿಎಫ್‌ಐ ಸಂಘಟನೆಯ ಮೋಸ್ಟ್‌ ವಾಂಟೆಡ್‌ ಮುಖಂಡ, ಪ್ರವೀಣ್‌ ನೆಟ್ಟಾರು ಕೊಲೆ (Praveen Nettaru murder) ಆರೋಪಿಗಳಲ್ಲಿ ಒಬ್ಬನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಮಡಿಕೇರಿ ಮೂಲದ ತುಫೈಲ್ ಬಂಧಿತ ಆರೋಪಿ. ರಾಜ್ಯವಿಡೀ ಸುದ್ದಿಯಾಗಿದ್ದ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ‌ ಪ್ರಕರಣದಲ್ಲಿ ಈತ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಹಲವು ದಿನಗಳಿಂದ ಈ ಕೊಲೆ‌ ಪ್ರಕರಣದ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಎನ್‌ಐಐ ಹಾಗೂ ಪೊಲೀಸರ ಕಣ್ಣು ತಪ್ಪಿಸಿಕೊಂಡು ಈತ ತಲೆಮರೆಸಿಕೊಂಡಿದ್ದ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Praveen Nettaru Murder: ಪ್ರವೀಣ್‌ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!

3. Karnataka Bandh: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾ.9ರಂದು ರಾಜ್ಯ ಬಂದ್‌: ಡಿ.ಕೆ. ಶಿವಕುಮಾರ್‌ ಘೋಷಣೆ
ಈಗಾಗಲೆ ರಾಜ್ಯ ಬಿಜೆಪಿ ವಿರುದ್ಧ 40% ಕಮಿಷನ್‌ ಆರೋಪವನ್ನು ಮಾಡುತ್ತಿರುವ ಕಾಂಗ್ರೆಸ್‌ ಇದೀಗ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮೇಲೆ ಲೋಕಾಯುಕ್ತ ದಾಳಿ ವಿಚಾರವನ್ನು ಹಿಡಿದು ಹೋರಾಟ ತೀವ್ರಗೊಳಿಸಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾರ್ಚ್‌ 9ರಂದು ರಾಜ್ಯ ಬಂದ್‌ಗೆ (Karnataka Bandh) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕರೆ ನೀಡಿದ್ದು, ಇದಕ್ಕೆ ಎಲ್ಲ ಉದ್ಯಮಿಗಳ, ವ್ಯಾಪಾರಿಗಳ ಬೆಂಬಲ ಕೋರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Lokayukta Raid: ಲೋಕಾಯುಕ್ತ ಬಲಪಡಿಸಿದ್ದೇ ಬಿಜೆಪಿ; ದಾಳಿಯಿಂದ ಪಕ್ಷಕ್ಕೆ ಮುಜುಗರ ಆಗಿಲ್ಲ: ಮಾಡಾಳ್‌ ವಿರೂಪಾಕ್ಷಪ್ಪ ಪ್ರಕರಣಕ್ಕೆ ಬಿಜೆಪಿ ನಾಯಕರ ಪ್ರತಿಕ್ರಿಯೆ

4. JDS Politics: ದೇವೇಗೌಡರ ಕೊನೆ ಆಸೆ ಈಡೇರಿಸುತ್ತೇನೆ; ಮಂಡ್ಯದ ಎಲ್ಲ ಕ್ಷೇತ್ರ ಗೆಲ್ಲುತ್ತೇವೆ: ಪ್ರತಿಜ್ಞಾ ಸಮಾವೇಶದಲ್ಲಿ ಎಚ್‌.ಡಿ. ಕುಮಾರಸ್ವಾಮಿ
ರಾಜ್ಯದಲ್ಲಿ ಸ್ವತಂತ್ರವಾಗಿ ಜೆಡಿಎಸ್‌ ಸರ್ಕಾರವನ್ನು ಆಡಳಿತಕ್ಕೆ ತರುತ್ತೇನೆ ಎಂದು ಆಸ್ಪತ್ರೆಯಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಮಾತು ಕೊಟ್ಟು ಬಂದಿದ್ದೇನೆ ಎಂದಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮಂಡ್ಯದ ಏಳಕ್ಕೆ ಏಳೂ ಕ್ಷೇತ್ರವನ್ನು ಜಯಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. BrahMos Missile Test: ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗ ಯಶಸ್ವಿ, ಆತ್ಮನಿರ್ಭರ ಭಾರತಕ್ಕೆ ಬಲ
ಭಾರತದ ನೌಕಾಪಡೆಯು ಬ್ರಹ್ಮೋಸ್‌ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು (BrahMos Missile Test) ಯಶಸ್ವಿಯಾಗಿ ಕೈಗೊಂಡಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ದೇಶೀಯ ಸೀಕರ್‌ ಹಾಗೂ ಬೂಸ್ಟರ್‌ಗಳೊಂದಿಗೆ ಕ್ಷಿಪಣಿಯನ್ನು ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ನಿಮ್ಮ ಕೇಂದ್ರ ಸರ್ಕಾರ ತನಿಖಾ ದಳಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ; ವಿಪಕ್ಷಗಳ 9 ನಾಯಕರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ
ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಸೇರಿ ಎಲ್ಲ ತನಿಖಾ ದಳಗಳ ದುರ್ಬಳಕೆ ಆಗುತ್ತಿದೆ. ಬೇರೆ ಪಕ್ಷದಲ್ಲಿದ್ದು ಭ್ರಷ್ಟಾಚಾರ ಮಾಡಿ, ನಂತರ ಬಿಜೆಪಿ ಸೇರ್ಪಡೆಯಾದ ರಾಜಕಾರಣಿಗಳ ವಿರುದ್ಧ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಒಂಭತ್ತು ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Cow As National Animal: ಗೋಹತ್ಯೆ ನಿಷೇಧಿಸಿ, ರಾಷ್ಟ್ರೀಯ ಸಂರಕ್ಷಿತ ಪ್ರಾಣಿ ಎಂದು ಘೋಷಿಸಿ:‌ ಅಲಹಾಬಾದ್‌ ಹೈಕೋರ್ಟ್ ನ್ಯಾ. ಶಮೀಮ್‌ ಅಹ್ಮದ್‌ ಸಲಹೆ
ದೇಶದಲ್ಲಿ ಗೋಹತ್ಯೆ ನಿಷೇಧ ಹಾಗೂ ಗೋವನ್ನು ರಾಷ್ಟ್ರೀಯ ಸಂರಕ್ಷಿತ ಪ್ರಾಣಿ (Cow As National Animal) ಎಂಬುದಾಗಿ ಕೇಂದ್ರ ಸರ್ಕಾರ ಘೋಷಿಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ಸೂಚಿಸಿದೆ. ಗೋಹತ್ಯೆ ಹಾಗೂ ಸಾಗಣೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ವಿರುದ್ಧ ದಾಖಲಾದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶಮೀಮ್‌ ಅಹ್ಮದ್‌, ಅರ್ಜಿ ರದ್ದುಗೊಳಿಸಿದರು. ಹಾಗೆಯೇ, ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. WhatsApp Split View: ಆ್ಯಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಳಕೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಸ್ಪ್ಲಿಟ್‌ ವ್ಯೂ ಸೌಲಭ್ಯ
ಇನ್‌ಸ್ಟಂಟ್‌ ಮೆಸೇಜಿಂಗ್‌ ಸೌಲಭ್ಯ ಒದಗಿಸುವ ವಾಟ್ಸ್‌ಆ್ಯಪ್ ನಿಯಮಿತವಾಗಿ ಹೊಸ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಈಗ ಆ್ಯಂಡ್ರಾಯ್ಡ್‌ ಟ್ಯಾಬ್ಲೆಟ್‌ ಬಳಕೆದಾರರಿಗೆ ಹೊಸ ಫೀಚರ್‌ ನೀಡಲು ಮುಂದಾಗಿದೆ. ಟ್ಯಾಬ್‌ ಬಳಕೆದಾರರಿಗೆ ಶೀಘ್ರದಲ್ಲೇ ಸ್ಪ್ಲಿಟ್‌ ವ್ಯೂ (WhatsApp Split View) ಇಂಟರ್‌ಫೇಸ್‌ (ಟ್ಯಾಬ್‌ನ ಸ್ಕ್ರೀನ್‌ ಎರಡು ವಿಭಾಗಗಳಾಗಿ ವಿಂಗಡಣೆಯಾಗುವುದು) ಸೌಲಭ್ಯ ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WPL 2023: ಆರ್​ಸಿಬಿಗೆ ಸೋಲಿನ ಡಿಚ್ಚಿ ಕೊಟ್ಟ ಡೆಲ್ಲಿ; 60 ರನ್ ಅಂತರದ​ ಗೆಲುವು
ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಆರ್​ಸಿಬಿ(Royal Challengers Bangalore) ವಿರುದ್ಧ ಭರ್ಜರಿ 60 ರನ್​ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Sunday Read: ಹೊಸ ಪುಸ್ತಕ
ಹಸ್ತಿನಾವತಿ: ಕನಸು ವಾಸ್ತವಗಳ ನಡುವಿನ ತೂಗುಯ್ಯಾಲೆ
ದಿಗಂಬರ: ಬೀಗ ಹಾಕಿದ ಕದ, ತೆರೆಯದ ಮನಗಳು

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Shivaji Statue: ಸಿಎಂ ಉದ್ಘಾಟಿಸಿದ ಛತ್ರಪತಿ ಶಿವಾಜಿ ಪ್ರತಿಮೆ ಮತ್ತೆ ಲೋಕಾರ್ಪಣೆ: ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ನೇತೃತ್ವ
  2. Insaaf ಎಂಬ ಹೊಸ ವೇದಿಕೆಯನ್ನು ರಚಿಸಿದ ಕಾಂಗ್ರೆಸ್ ಮಾಜಿ ನಾಯಕ ಕಪಿಲ್​ ಸಿಬಲ್​; ಪ್ರತಿಪಕ್ಷಗಳ ಬೆಂಬಲಕ್ಕೆ ಮನವಿ
  3. ಒಂದೇ ಸಿರಿಂಜ್​​ನಿಂದ ಹಲವು ಮಕ್ಕಳಿಗೆ ಇಂಜೆಕ್ಷನ್​ ಮಾಡಿದ ವೈದ್ಯ; ಎಚ್​ಐವಿ ಸೋಂಕಿಗೆ ತುತ್ತಾದ ಬಾಲಕಿಯ ಪಾಲಕರಿಂದ ದೂರು
  4. ಅಮೆರಿಕದಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!
  5. EV Vehicles : ಎಲೆಕ್ಟ್ರಿಕ್​ ವಾಹನ ಮಾಲೀಕರಿಗೆ ಭರ್ಜರಿ ಆಫರ್​ ಕೊಟ್ಟ ಯೋಗಿ ನೇತೃತ್ವದ ಯುಪಿ ಸರಕಾರ, ಏನದು?
Exit mobile version