Site icon Vistara News

ವಿಸ್ತಾರ TOP 10 NEWS | ಕೋವಿಡ್‌ ಮುಂಜಾಗ್ರತೆಯಿಂದ ಪಂಚಮಸಾಲಿ ಮೀಸಲು ಮುಂದೂಡಿಕೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news covid precautions across country to panchamasali deadline and more news

ಬೆಂಗಳೂರು: ಕೋವಿಡ್‌ ಸೋಂಕು ಭಾರತದಲ್ಲಿ ಬಾಧಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಪಂಚಮಸಾಲಿ ಮೀಸಲಾತಿ ಬೀಸುಗತ್ತಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವಾರ ಪಾರಾಗಿದೆ. ಮಹಾರಾಷ್ಟ್ರ ಗಡಿ ಕ್ಯಾತೆಗೆ ರಾಜ್ಯ ಒಕ್ಕೊರಲ ಖಂಡನಾ ನಿರ್ಣಯ ಕೈಗೊಂಡಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Coronavirus | ರಾಜ್ಯದಲ್ಲಿ 18 ಜನರಲ್ಲಿ ಕೋವಿಡ್‌ ವೈರಸ್‌ ಪತ್ತೆ, ಮಾಸ್ಕ್‌ ಕಡ್ಡಾಯ ಆದೇಶ ಜಾರಿ ಸಾಧ್ಯತೆ
ಕೋವಿಡ್‌ ಸೋಂಕಿನಿಂದ (Coronavirus ) ಮುಕ್ತವಾಗಿ ಸಹಜ ಸ್ಥಿತಿಗೆ ಮರುಳುತ್ತಿರುವ ಹೊತ್ತಿನಲ್ಲಿ ಮತ್ತೆ ಕೊರೊನಾ ಗುಮ್ಮ ವಾಪಸ್‌ ಆಗುತ್ತಿದೆ. ಚೀನಾ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಟೆನ್ಷನ್‌ ಶುರುವಾಗಿದೆ.
ಹೆಚ್ಚಿನ ಓದಿಗಾಗಿ: ‌coronavirus | ಅಂತೆ ಕಂತೆ ಬಿಡಿ, 3ನೇ ಡೋಸ್‌ ಲಸಿಕೆ ಪಡೆಯಿರಿ ಎಂದ ಸುಧಾಕರ್‌: ಒಳಾಂಗಣದಲ್ಲಿ ಮಾಸ್ಕ್‌ ಕಡ್ಡಾಯ

2. Coronavirus | ಸಂಸತ್ತಿನಲ್ಲಿ ಮೋದಿ ಸೇರಿ ಹಲವು ಸದಸ್ಯರಿಂದ ಮಾಸ್ಕ್‌ ಧಾರಣೆ, ಜನರಿಗೂ ಸಂದೇಶ ರವಾನೆ
ಚೀನಾ, ಅಮೆರಿಕ, ಫ್ರಾನ್ಸ್‌ ಸೇರಿ ಹಲವು ದೇಶಗಳಲ್ಲಿ ಕೊರೊನಾ ಸೋಂಕಿತರ (Coronavirus) ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಭಾರತದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲೂ, ಚೀನಾದಲ್ಲಿ ಮತ್ತೊಂದು ಅಲೆಗೆ ಕಾರಣವಾಗಿರುವ ಓಮಿಕ್ರಾನ್‌ ಉಪ ತಳಿ ಬಿಎಫ್‌.7 ಸೋಂಕಿತರು ಭಾರತದಲ್ಲೂ ಪತ್ತೆಯಾದ ಕಾರಣ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಸದಸ್ಯರು ಗುರುವಾರ ಮಾಸ್ಕ್‌ ಧರಿಸುವ ಮೂಲಕ ಮಾದರಿ ಎನಿಸಿದರು. ಹಾಗೆಯೇ, ಕೊರೊನಾ ಕುರಿತು ಜನರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದರು.

3. Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?
ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್-19 ವೈರಸ್‌ನ ಒಮಿಕ್ರಾನ್ ಸಬ್-ವೇರಿಯಂಟ್ ಬಿಎಎಫ್.7 ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಆದರೆ, ಈ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳು ರವಾನೆಯಾಗುತ್ತಿವೆ. ಅದೇ ರೀತಿ, ಕೋವಿಡ್ ಎಕ್ಸ್‌ಬಿಬಿ(Covid-19 omircron XBB) ಎಂಬ ಉಪತಳಿ ಕೇಸ್ ಭಾರತದಲ್ಲಿ ಪತ್ತೆಯಾಗಿದೆ ಎಂಬ ವಾಟ್ಸ್ಆ್ಯಪ್ ಸಂದೇಶ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಸ್ವತಃ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಪಂಚಮಸಾಲಿ ಮೀಸಲಾತಿ | ಬೀಸೋ ದೊಣ್ಣೆಯಿಂದ 7 ದಿನ ತಪ್ಪಿಸಿಕೊಂಡ ಬೊಮ್ಮಾಯಿ ಸರ್ಕಾರ; ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದ ಯತ್ನಾಳ್‌
ವೀರಶೈವ ಲಿಂಗಾಯತ ಸಮುದಾಯದ ಉಪಪಂಗಡವಾದ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬ ಹೋರಾಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ವಾರ ಕಾಲಾವಕಾಶ ಪಡೆದಿದೆ. ಡಿಸೆಂಬರ್‌ 29ರವರೆಗೆ ಸಮಯ ನೀಡಿ, ಮೀಸಲಾತಿ ಘೋಷಣೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಲಾವಕಾಶ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Border Dispute | ಗಡಿ ವಿವಾದ ಮುಗಿದು ಹೋದ ಅಧ್ಯಾಯ; ಮಹಾರಾಷ್ಟ್ರ ನಡೆ ಖಂಡನೀಯ: ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ
ಮಹಾರಾಷ್ಟ್ರ ಗಡಿ ವಿಚಾರವನ್ನು ಸುಖಾಸುಮ್ಮನೆ ವಿವಾದವಾಗಿಸುತ್ತ ಕಾಲುಕೆರೆದು ಕಗಳಕ್ಕೆ ಬರುವ ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ಖಂಡಿಸಿದೆ. ಈಗಾಗಲೆ ತಿಳಿಸಿದಂತೆ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ಪುಟಗಳ ಖಂಡನಾ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂಬ ಮನವಿಗೆ ಸರ್ವಾನುಮತದ ಅಂಗೀಕಾರ ದೊರಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Medicine price | ಪ್ಯಾರಸಿಟಮಲ್‌ ಸೇರಿದಂತೆ 127 ಔಷಧಗಳ ದರ ಇಳಿಕೆ
ವ್ಯಾಪಕವಾಗಿ ಬಳಕೆಯಲ್ಲಿರುವ ಪ್ಯಾರಸಿಟಮಲ್‌ ಸೇರಿದಂತೆ 127 ಔಷಧಗಳ (Medicine price) ದರದಲ್ಲಿ ಇಳಿಕೆಯಾಗಲಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (National Pharmaceutical Pricing Authority) ಮಂಗಳವಾರ 127 ಔಷಧಗಳ ದರಗಳಿಗೆ ಮಿತಿಯನ್ನು ವಿಧಿಸಿದೆ. ಈ ವರ್ಷ ಒಟ್ಟು ಐದು ಸಲ ದರ ಮಿತಿ ವಿಧಿಸಿದಂತಾಗಿದೆ. ಕೆಲ ಔಷಧಗಳಿಗೆ ಎರಡು ಸಲ ದರ ಮಿತಿಯನ್ನು ನಿಗದಿಪಡಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. CCB Raid | ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ದಾಳಿ; ಜಿಂಕೆ, ಕೃಷ್ಣ ಮೃಗ ಸೇರಿ 29 ವನ್ಯಜೀವಿಗಳು ಪತ್ತೆ
ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಫಾರ್ಮ್‌ ಹೌಸ್‌ ಮೇಲೆ ಸಿಸಿಬಿ ಅಧಿಕಾರಿಗಳು (CCB Raid) ದಾಳಿ ನಡೆಸಿದ್ದಾರೆ. ದಾಳಿ ವೇಳೆ ಫಾರ್ಮ್ ಹೌಸ್‌ನಲ್ಲಿ 29ಕ್ಕೂ ಹೆಚ್ಚು ವನ್ಯಜೀವಿಗಳು ಪತ್ತೆ ಆಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Kirti Azad | ಮೋದಿ ಧರಿಸಿದ್ದ ಉಡುಗೆ ಮಹಿಳೆಯರದ್ದಾ, ಪುರುಷರದ್ದಾ ಎಂದು ಗೇಲಿ ಮಾಡಿದ ಕೀರ್ತಿ ಆಜಾದ್; ಭುಗಿಲೆದ್ದ ವಿವಾದ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇಘಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಅವರು ಧರಿಸಿದ್ದ ಉಡುಗೆ ಈಗ ಚರ್ಚೆಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೂ ಆಗಿರುವ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ (Kirti Azad) ಅವರು, ಮೇಘಾಲಯದ ಕಾರ್ಯಕ್ರಮದಲ್ಲಿ ಧರಿಸಿದ್ದ ಉಡುಗೆಯ ಚಿತ್ರಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ, ”ಇದು ಗಂಡಸರದ್ದೂ ಅಲ್ಲ, ಹೆಂಗಸರದ್ದೂ ಅಲ್ಲ, ಕೇವಲ ಆರಾಧಕನ ಫ್ಯಾಷನ್,” ಎಂದು ವ್ಯಂಗ್ಯವಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Karnataka Election | 2023ರ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಸೆಣಸುತ್ತಿರುವ ಯುವ ರಾಜಕಾರಣಿಗಳು ಇವರು
ಯುವಕರಿಗೆ ರಾಜಕಾರಣದಲ್ಲಿ ಹೆಚ್ಚು ಅವಕಾಶ ನೀಡಬೇಕು ಎಂಬ ಕೂಗು ಕೇಳಿದಂತೆಯೇ ವಿವಿಧ ಪಕ್ಷಗಳು ಅವಕಾಶಗಳನ್ನೂ ನೀಡುತ್ತಿವೆ. ಈಗಾಗಲೆ ಸಾಕಷ್ಟು ಕ್ಷೇತ್ರಗಳಲ್ಲಿ ಯುವ ರಾಜಕಾರಣಿಗಳು ಟಿಕೆಟ್‌ ಕೇಳುತ್ತಿದ್ದು, ಅವರಲ್ಲಿ ಪ್ರಮುಖರ ಪಟ್ಟಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Murder Case | ನಾ ನಿನ್ನ ಬಿಡಲಾರೆ ಎಂದವನು ಪ್ರೇಯಸಿಯ ಕೊಂದೇಬಿಟ್ಟ; ವಿಷ ಸೇವಿಸಿ ಆಸ್ಪತ್ರೆ ಸೇರಿದ ಪ್ರೇಮ ಕೈದಿ
ಲವ್‌ ಕಹಾನಿಯೊಂದು ಯುವತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆಕೆಯ ಅಂದ ಚೆಂದಕ್ಕೆ ಹುಚ್ಚನಂತಾಗಿದ್ದ ಪಾಗಲ್‌ ಪ್ರೇಮಿಯೊಬ್ಬ, ಪ್ರೀತಿಸಿದವಳನ್ನು ಬಿಡಲಾಗದೆ ಅಂತಿಮವಾಗಿ ನಡು ರಸ್ತೆಯಲ್ಲಿ ಆಕೆಯನ್ನು ಕೊಂದು ಹಾಕಿದ್ದಾನೆ (Murder Case), ತಾನು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. ಎಲೆಕ್ಷನ್‌ ಹವಾ | ಚನ್ನಗಿರಿ | ಜೆ.ಎಚ್‌. ಪಟೇಲರ ಕ್ಷೇತ್ರದಲ್ಲಿ ಪೈಪೋಟಿಗೆ ಮುಂದಿನ ಪೀಳಿಗೆ ಸಜ್ಜು
  2. ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ
  3. Student Murder | ಹದಲಿಯ ಅತಿಥಿ ಶಿಕ್ಷಕನ ಅಟ್ಟಹಾಸ: ಬಾಲಕನ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವು
  4. Oscars 2023 shortlist | ಆಸ್ಕರ್ ರೇಸಿನಲ್ಲಿ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಸಾಂಗ್, ಇನ್ನೂ 3 ಚಿತ್ರ ನಾಮನಿರ್ದೇಶನ
  5. ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  6. ಬೆಳಗಾವಿ ಅಧಿವೇಶನ | ಭ್ರಷ್ಟ ನೆಹರೂ ಎಂದಿದ್ದಕ್ಕೆ ಪರಿಷತ್‌ನಲ್ಲಿ ಹಂಗಾಮ: ಒಂಟಿಯಾದ ರವಿಕುಮಾರ್; ಕ್ಷಮೆ ಯಾಚನೆ
Exit mobile version