Site icon Vistara News

ವಿಸ್ತಾರ TOP 10 NEWS | ದೇಶಾದ್ಯಂತ ʼಚೀನಾʼ ವೈರಸ್‌ ಆತಂಕದಿಂದ PFIಗೆ ಅಲ್‌ಖೈದಾ ನಂಟಿನವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-covid-virus-high-alert-in-nation-to-pfi-links-with-al qaeda and more news of the day

ಬೆಂಗಳೂರು: ಇನ್ನೇನು ಸಂಪೂರ್ಣ ಕರಗಿತು ಎನ್ನುವ ವೇಳೆಗೆ ಕೋವಿಡ್‌-19 ಮತ್ತೆ ತಲೆಯೆತ್ತುವ ಮುನ್ಸೂಚನೆ ನೀಡಿದ್ದು, ದೇಶಾದ್ಯಂತ ಮುನ್ನೆಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಸಿಎಂ ಕುರಿತು ಮಹಾರಾಷ್ಟ್ರ ಶಾಸಕರ ಉದ್ಧಟತನದ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ, 2ಎ ಮೀಸಲಿಗೆ ಆಗ್ರಹಿಸುತ್ತಿರುವ ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ಗಡುವು ನೀಡಿದೆ, ನಿಷೇಧಿತ ಪಿಎಫ್‌ಐಗೆ ಅಲ್‌ಖೈದಾ ನಂಟಿರುವುದು ಎನ್‌ಐಎ ವರದಿಯಿಂದ ತಿಳಿದುಬಂದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Coronavirus | ಚೀನಾದ ಅರ್ಧದಷ್ಟು ವೈದ್ಯರಿಗೆ ಕೊರೊನಾ ಸೋಂಕು! ಹೆಚ್ಚಿದ ಆತಂಕ
ಚೀನಾದಲ್ಲಿ ಕೋವಿಡ್ ಪ್ರಕರಣಗಳು (Covid-19) ದಿಢೀರ್ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಎಲ್ಲ ನಿಯಂತ್ರಣವನ್ನು ಮೀರಿ ಕೋವಿಡ್ ಸೋಂಕು ಚೀನಾದಲ್ಲಿ ಹರಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಣಾಮ, ಭಾರತವು ಸೇರಿದಂತೆ ಇತರ ರಾಷ್ಟ್ರಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವತ್ತ ಲಕ್ಷ ವಹಿಸಿವೆ. ಏತನ್ಮಧ್ಯೆ, ಚೀನಾದ ಅರ್ಧದಷ್ಟು ವೈದ್ಯರಿಗೆ ಸೋಂಕು ತಗುಲಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Coronavirus | ಚೀನಾದಲ್ಲಿ ಕೊರೊನಾ ಉಲ್ಬಣದ ಬೆನ್ನಲ್ಲೇ ಭಾರತದಲ್ಲಿ ಮೂವರಿಗೆ ಓಮಿಕ್ರಾನ್‌, ಏರ್‌ಪೋರ್ಟ್‌ನಲ್ಲಿ ತಪಾಸಣೆ
ಚೀನಾ ಸೇರಿ ಹಲವು ರಾಷ್ಟ್ರಗಳಲ್ಲಿ ಕೊರೊನಾ (Covid-19) ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ, ಭಾರತದಲ್ಲೂ ಮೂವರಿಗೆ ಓಮಿಕ್ರಾನ್‌ ಉಪತಳಿ ಓಮಿಕ್ರಾನ್‌ ದೃಢಪಟ್ಟಿದ್ದು, ಆತಂಕ ಹೆಚ್ಚಾಗಿದೆ. ಗುಜರಾತ್‌ನ ವಡೋದರಾದಲ್ಲಿ ಇಬ್ಬರಿಗೆ ಹಾಗೂ ಒಡಿಶಾದಲ್ಲಿ ಒಬ್ಬರಿಗೆ ಬಿಎಫ್‌.7 ಉಪತಳಿ ದೃಢಪಟ್ಟಿದೆ. ಎರಡೂ ರಾಜ್ಯಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ವಿಸ್ತಾರ Explainer | ಚೀನಾದಲ್ಲಷ್ಟೇ ಇಲ್ಲ ಕೊರೊನಾ, ವಿಶ್ವದ ಎಲ್ಲೆಲ್ಲಿ ಆತಂಕ? ಭಾರತದ ಪರಿಸ್ಥಿತಿ ಏನು?
ಜಗತ್ತಿಗೇ ಕೊರೊನಾ ಪಸರಿಸಿದ ಚೀನಾದಲ್ಲೇ ಈಗ ಮತ್ತೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಸಹಜವಾಗಿಯೇ ಇದು ಭಾರತ ಸೇರಿ ಬಹುತೇಕ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಈ ಕುರಿತು ವಿಸ್ತೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. Border Dispute | ಕರ್ನಾಟಕಕ್ಕೆ ನೀರು ಬಂದ್‌ ಮಾಡಲು ಡ್ಯಾಂ ಅವರ ತಾತನದಲ್ಲ: ಮಹಾರಾಷ್ಟ್ರ ಶಾಸಕರು, ಸಚಿವರಿಗೆ ಕಾರಜೋಳ ಖಾರದ ಉತ್ತರ
ಕರ್ನಾಟಕಕ್ಕೆ ನೀರು ಬಂದ್‌ ಮಾಡಲು, ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅದು ಮಹಾರಾಷ್ಟ್ರ ಶಾಸಕರು, ಸಚಿವರ ತಾತನ ಆಸ್ತಿಯಲ್ಲ ಎಂದು ಸಚಿವ ಗೋವಿಂದ ಕಾರಜೋಳ ಅವರು ಸದನದಲ್ಲಿ ಖಡಕ್‌ ಆಗಿ ಹೇಳಿದ್ದಾರೆ. ಮಹಾರಾಷ್ಟ್ರ ಎನ್‌ಸಿಪಿ ಶಾಸಕರು ನೀಡಿರುವ ಉದ್ಧಟತನದ ಹೇಳಿಕೆಗೆ ಕರ್ನಾಟಕದಲ್ಲಿ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಸದನದ ಒಳಗೆ ಹಾಗೂ ಹೊರಗೆ ಪ್ರತಿಕ್ರಿಯೆ ನೀಡಿರುವ ನಾಯಕರು, ಕರ್ನಾಟಕ ಹಾಗೂ ಕರ್ನಾಟಕ ಮುಖ್ಯಮಂತ್ರಿಯನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Panchamasali Reservation | ನಾಳೆ ಪಂಚಮಸಾಲಿ ಮೀಸಲು ಘೋಷಿಸಿದರೆ ಸಿಎಂಗೆ ಸನ್ಮಾನ, ಇಲ್ಲದಿದ್ದರೆ ಅಪಮಾನ: ಶ್ರೀ ಎಚ್ಚರಿಕೆ
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮವಾಗಿ ಡಿ.೧೯ರ ಗಡುವನ್ನು ನೀಡಿದ್ದು ಅದು ಕೂಡಾ ಪಾಲನೆಯಾಗಿಲ್ಲ ಎಂದು ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಕೂಡಲ ಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರು ಸಿಟ್ಟಿಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬೆಳಗಾವಿಯಲ್ಲಿ ಪಂಚಮಸಾಲಿ ವಿರಾಟ್‌ ಸಮಾವೇಶವನ್ನು ಆಯೋಜಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಬೆಳಗಾವಿ ಅಧಿವೇಶನ | ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆ ಪ್ರಶ್ನಿಸಿದ್ದಕ್ಕೆ ಗೆಟ್‌ ಔಟ್‌ ಎಂದ ಕಾರಜೋಳ; ಸರ್ಕಾರ-ಪ್ರತಿಪಕ್ಷಗಳ ನಡುವೆ ವಾಗ್ವಾದ
ರಾಜ್ಯದ ವಿವಿಧೆಡೆ ಸರ್ಕಾರಿ ಬಸ್‌ಗಳ ಸಮರ್ಪಕ ಸೇವೆ ಇಲ್ಲದಿರುವುದರಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂಬ ಪ್ರಶ್ನೆಯು ವಿಧಾನ ಸಭೆಯ ಅರ್ಧ ದಿನವನ್ನು ಆಪೋಶನ ತೆಗೆದುಕೊಂಡಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. PFI Links | ‌ನಿಷೇಧಿತ ಪಿಎಫ್‌ಐ ಮುಖಂಡರಿಗೆ ಅಲ್‌ ಖೈದಾ, ಐಸಿಸ್‌ ಜತೆ ಲಿಂಕ್: ವಿಶೇಷ ಕೋರ್ಟ್‌ಗೆ ಎನ್‌ಐಎ ವರದಿ
ನಿಷೇಧಿತ ಸಂಘಟನೆ ಪಿಎಫ್‌ಐಗೆ ಅಲ್‌ ಖೈದಾ ಮತ್ತು ಐಸಿಸ್ ಜತೆಗೆ ಸಂಪರ್ಕ ಇತ್ತು ಎಂಬ ಕಳವಳಕಾರಿ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಕೊಚ್ಚಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.‌ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Karnataka Election | ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ: ಸಿ.ಟಿ. ರವಿ
ಕರ್ನಾಟಕದಲ್ಲಿ ಚುನಾವಣೆ (Karnataka Election) ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ರಾಜಕೀಯ ನಾಯಕರ ವಾಗ್ವಾದಗಳೂ ತಾರಕಕ್ಕೇರಿದೆ. ಬಿಜೆಪಿ ನಾಯಕರ ಮನೆ ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದು, ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ ಎಂದು ಕಿಡಿಕಾರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Forced Conversions | ದೇಶದ ಭದ್ರತೆಗೆ ಬಲವಂತದ ಮತಾಂತರ ಅಪಾಯ ಎಂದ ಅಮಿತ್‌ ಶಾ, ಶೀಘ್ರವೇ ಮತಾಂತರ ನಿಷೇಧ?
ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಬೇರೆ ರಾಜ್ಯಗಳಲ್ಲೂ ಇಂತಹ ನಿಯಮ ಇದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಜಾರಿಗೆ ಚಿಂತನೆ ನಡೆದಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಸುಳಿವು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಬೆಳಗಾವಿ ಅಧಿವೇಶನ | ಕುರುಬ ವರ್ಸಸ್‌ ಲಿಂಗಾಯತ ಕದನದಲ್ಲಿ ಗೆದ್ದು ಬಂದ ಬಸವರಾಜ ಹೊರಟ್ಟಿ: ಸಭಾಪತಿಯಾಗಿ ಆಯ್ಕೆ
ಅನೇಕ ತಿಂಗಳುಗಳ ಹೋರಾಟದ ನಂತರ ವಿಧಾನ ಪರಿಷತ್‌ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಕೊನೆಗೂ ಅಧಿಕಾರ ಸ್ವೀಕರಿಸಿದ್ದಾರೆ. ಬುಧವಾರ ನಡೆದ ಔಪಚಾರಿಕ ಚುನಾವಣಾ ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್‌ ಸಭಾಪತಿಯಾಗಿ, ರಾಜ್ಯದ ಅತ್ಯಂತ ಹಿರಿಯ ಪರಿಷತ್‌ ಸದಸ್ಯ ಹೊರಟ್ಟಿ ವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. ಎಲೆಕ್ಷನ್‌ ಹವಾ | ಮಾಯಕೊಂಡ | ಲಿಂಗಣ್ಣ ಬದಲಾದರೆ ತಮಗೊಂದು ಚಾನ್ಸ್‌ ಎನ್ನುತ್ತಿರುವ ಬಿಜೆಪಿಗರು
  2. Delhi liquor scam| ದೆಹಲಿ ಲಿಕ್ಕರ್​ ಉದ್ಯಮದಲ್ಲಿ ಹಿಡಿತ ಸಾಧಿಸಲು ಆಪ್​ಗೆ 100 ಕೋಟಿ ಲಂಚ ಕೊಟ್ಟಿದ್ದರು ತೆಲಂಗಾಣ ಸಿಎಂ ಪುತ್ರಿ
  3. Accident coverage | ಅಕ್ರಮ ಸಂಬಂಧದ ಮಗುವೇ ಆದರೂ ಅಪಘಾತ ವಿಮೆ ಪಡೆಯಲು ಅರ್ಹತೆ ಇದೆ ಎಂದ ಹೈಕೋರ್ಟ್‌
  4. Adhik Maasa 2023 | ಹೊಸ ವರ್ಷ 2023ರಲ್ಲಿ ಬರಲಿದೆ ಅಧಿಕ ಮಾಸ; ಏನಿದರ ವಿಶೇಷ?
  5. UNESCO List | ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಮೋದಿ ಜನಿಸಿದ ವಡ್ನಗರ್ ಪಟ್ಟಣ!
  6. New Year 2023 | ಹೊಸ ವರ್ಷಕ್ಕೂ ನೈತಿಕ ಪೊಲೀಸ್‌ಗಿರಿ ಟೆನ್ಶನ್; ಹಿಂದು ಸಂಘಟನೆಗಳ ಪ್ರಮುಖರಿಗೆ ನೋಟಿಸ್‌
  7. ಮಕ್ಕಳ ಕಥೆ | ಬಾವಿಯ ನೀರು ಯಾರದ್ದು?
Exit mobile version