Site icon Vistara News

ವಿಸ್ತಾರ TOP 10 NEWS: ದಶಪಥದಲ್ಲಿ ಕ್ರೆಡಿಟ್‌ ವಾರ್‌ನಿಂದ, ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮೋದಿ ಹವಾವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-credi war in national highway to modi in cricket stadium and more news

#image_title

1. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕ್ರೆಡಿಟ್‌ ವಾರ್;‌ ಬಿಜೆಪಿ, ಕಾಂಗ್ರೆಸ್‌ ಆಯ್ತು ಈಗ ಜೆಡಿಎಸ್‌ ಸರದಿ: ಯೋಜನೆಗಾಗಿ ನಾನೂ ಹೋರಾಡಿದ್ದೆ ಅಂದ್ರು ಸಿ.ಎಸ್.‌ ಪುಟ್ಟರಾಜು
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Bangalore Mysore Highway) ಕ್ರೆಡಿಟ್‌ ವಾರ್‌ ಪ್ರಾರಂಭವಾಗಿದೆ. ಈಗಾಗಲೇ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಬಿಜೆಪಿಯವರು ಇದನ್ನು ತಾವೇ ಮಾಡಿಸಿದ್ದು ಎಂದು ಹೇಳಿಕೊಂಡಿದ್ದರೆ, ಕಾಂಗ್ರೆಸ್‌ ಸಹ ಇದು ತಮ್ಮ ಅವಧಿಯಲ್ಲೇ ಪ್ರಾರಂಭವಾಗಿದ್ದು ಎಂದು ಹೇಳಿಕೊಂಡು ಕಾಮಗಾರಿ ವೀಕ್ಷಣೆಗೂ ಮುಂದಾಗಿತ್ತು. ಈಗ ಜೆಡಿಎಸ್‌ ಶಾಸಕ ಸಿ.ಎಸ್.‌ ಪುಟ್ಟರಾಜು ಈ ಬಗ್ಗೆ ಗುಡುಗಿದ್ದು, ತಾವು ಸಂಸದರಾಗಿದ್ದಾಗ ಇದರ ಬಗ್ಗೆ ಬಹಳವೇ ಹೋರಾಟ ಮಾಡಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ, ಸಂಸದ ಪ್ರತಾಪ್‌ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Illegal Mining Case: ಚುನಾವಣೆಗೂ ಮುನ್ನ ಜನಾರ್ದನ ರೆಡ್ಡಿಗೆ ಸಂಕಷ್ಟ, 4 ದೇಶದಿಂದ ಹೂಡಿಕೆ ಮಾಹಿತಿ ಸಂಗ್ರಹಕ್ಕೆ ಸಿಬಿಐ ಕೋರ್ಟ್‌ ಅಸ್ತು
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನವೇ ಬಹುಕೋಟಿ ಗಣಿಗಾರಿಕೆ ಹಗರಣಕ್ಕೆ (Illegal Mining Case) ಸಂಬಂಧಿಸಿದಂತೆ ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ. ಸ್ವಿಟ್ಜರ್‌ಲೆಂಡ್‌ ಸೇರಿ ನಾಲ್ಕು ದೇಶಗಳಲ್ಲಿ ಜನಾರ್ದನ ರೆಡ್ಡಿ ಅವರು ಹೂಡಿಕೆ ಮಾಡಿರುವ ಕುರಿತು ಮಾಹಿತಿ ಪಡೆಯುವ ದಿಸೆಯಲ್ಲಿ ಆಯಾ ರಾಷ್ಟ್ರಗಳ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಸಿಬಿಐಗೆ ಅನುಮತಿ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Public Exam 2023 : 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ; ನಿಮ್ಮ ನಿಮ್ಮ ಶಾಲೆಗಳಲ್ಲಿಯೇ ನಡೆಯಲಿದೆ ಎಕ್ಸಾಮ್‌
5 ಮತ್ತು 8ನೇ ತರಗತಿಗಳಿಗೆ ಮಾರ್ಚ್‌ 13 ರಿಂದ ನಡೆಯಲಿರುವ ಮೌಲ್ಯಂಕನ ಪರೀಕ್ಷೆ (Public Exam 2023) ಬರೆಯಬೇಕಾಗಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಈ ಪರೀಕ್ಷೆಯನ್ನು ಬರೆಯಲು ನೀವು ಬೇರೆ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಾಗಿಲ್ಲ. ನೀವು ಓದುತ್ತಿರುವ ಶಾಲೆಯಲ್ಲಿಯೇ ಈ ಪರೀಕ್ಷೆಯನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗ ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. PM Modi at Ahmedabad : ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನರೇಂದ್ರ ಮೋದಿ ಹವಾ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಅಭಿಮಾನಿಗಳು
ಭಾರತ ಹಾಗೂ ಆಸ್ಡ್ರೇಲಿಯಾ ತಂಡಗಳ ನಡುವಿನ ಟೆಸ್ಟ್​ ಸರಣಿಯ ಕೊನೇ ಪಂದ್ಯದ ಆರಂಭಕ್ಕೆ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi at Ahmedabad) ಅವರು ಸ್ಟೇಡಿಯಮ್​ಗೆ ಭೇಟಿ ನೀಡಿದರು. ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಟೋನಿ ಆಲ್ಬನೀಸ್​ ಅವರೂ ಈ ವೇಳೆ ಹಾಜರಿದ್ದರು. ಭಾರತದ ಆಹ್ವಾನದ ಮೇರೆಗೆ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್​ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದರು. ಅವರಿಬ್ಬರೂ ಪಂದ್ಯಕ್ಕೆ ಸಾಕ್ಷಿಯಾದರು. ಎರಡೂ ದೇಶಗಳ ಪ್ರಧಾನಿ ಪಂದ್ಯ ಆರಂಭಕ್ಕೆ ಮೊದಲು ಇತ್ತಂಡಗಳ ನಾಯಕರಿಗೆ ಕ್ಯಾಪ್​ ನೀಡಿ ಅಭಿನಂದನೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಹಾಗೂ ಆಲ್ಬನೀಸ್ ರ‍್ಯಾಲಿ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Shivamogga terror : ತೀರ್ಥಹಳ್ಳಿಗೇ ಬೆಂಕಿ ಹಚ್ಚುವ ಸಂಚು ನಡೆಸಿದ್ನಾ ಶಾರಿಕ್‌? 15ಕ್ಕೂ ಅಧಿಕ ಕೃತ್ಯಗಳಲ್ಲಿ ಕೈವಾಡ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದ್ದ 15ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ರೂವಾರಿ ಮೊಹಮ್ಮದ್‌ ಶಾರಿಕ್‌ನ (Shivamogga terror) ಕೈವಾಡವಿರುವುದು ತನಿಖೆಯ ವೇಳೆ ಬಯಲಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. JDS Hassan: ನನಗ್ಯಾಕೆ ಟಿಕೆಟ್ ಇಲ್ಲ?: ನೇರವಾಗಿ ಎಚ್‌.ಡಿ. ದೇವೇಗೌಡರೊಂದಿಗೆ ಭವಾನಿ ರೇವಣ್ಣ ಚರ್ಚೆ
ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ( JDS Hassan) ಟಿಕೆಟ್‌ ನೀಡುವ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದ್ದು, ಟಿಕೆಟ್‌ ಆಕಾಂಕ್ಷಿ ಭವಾನಿ ರೇವಣ್ಣ ಅವರು ನೇರವಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರನ್ನೇ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. US Report: ಪಾಕ್ ಪ್ರಚೋದಿಸಿದರೆ ಸೇನೆಯಿಂದಲೇ ಉತ್ತರ ನೀಡಲು ಭಾರತ ಸಜ್ಜು!
ಒಂದು ವೇಳೆ ಪಾಕಿಸ್ತಾನವು ಏನಾದರೂ ಪ್ರಚೋದಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೇನಾ ಕಾರ್ಯಾಚರಣೆ ಮೂಲಕ ಪ್ರತ್ಯುತ್ತರ ನೀಡಲಿದೆ ಎಂದು ಅಮೆರಿಕದ ಗುಪ್ತಚರ ಸಮುದಾಯದವು ಎಚ್ಚರಿಸಿದೆ. ಅಲ್ಲದೇ, ಪಾಕಿಸ್ತಾನ-ಭಾರತ ಮತ್ತು ಚೀನಾ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದೂ ಎಂದು ಅದು ತಿಳಿಸಿದೆ(US Report). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Electronic Balloon: ‌ಬೈಲಹೊಂಗಲದಲ್ಲಿ ಬಿತ್ತು ನಿಗೂಢ ಬಲೂನ್‌; ಒಡೆದು ನೋಡಿದರೆ ಸಿಕ್ಕವು ಎಲೆಕ್ಟ್ರಾನಿಕ್‌ ಉಪಕರಣಗಳು!
ಬೆಳಗಾವಿ ಜಿಲ್ಲೆಯ ‌ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನ್ (Electronic Balloon) ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WPL 2023 : ಆರ್​ಸಿಬಿ ಮಣಿಸಿದ ನಡುವೆಯೇ ಗುಜರಾತ್​ ಜಯಂಟ್ಸ್​ ತಂಡಕ್ಕೆ ಆಘಾತ, ನಾಯಕಿ ಟೂರ್ನಿಯಿಂದ ಔಟ್​​
ಮಹಿಳೆಯರ ಪ್ರೀಮಿಯರ್​ ಲೀಗ್​ನಲ್ಲಿ (WPL 2023) ಬುಧವಾರ (ಮಾರ್ಚ್8ರಂದು) ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು ಸೋಲಿನ ಸಂಭ್ರಮದಲ್ಲಿರುವ ಗುಜರಾತ್​ ಜಯಂಟ್ಸ್​ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಫೋಟಕ ಬ್ಯಾಟರ್​ ಹಾಗೂ ನಾಯಕಿ ಬೆತ್​ ಮೂನಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಅವರಿಗೆ ಆಗಿರುವ ನೋವು ನಿವಾರಣೆಗೆ ಆರು ವಾರಗಳ ವಿಶ್ರಾಂತಿ ಸೂಚಿಸಿರುವ ಕಾರಣ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News: ಅಜ್ಜಿಯ ಕೊರಳಿಗೆ ಕೈ ಹಾಕಿದ ಸರಗಳ್ಳನಿಗೆ ಥಳಿಸಿ, ಓಡಿಸಿದ 10ರ ಬಾಲಕಿ
ಇತ್ತೀಚೆಗೆ ಸರಗಳ್ಳತನ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಸರ ಧರಿಸಿ ಹೊರಗಡೆ ಓಡಾಡುತ್ತಿದ್ದರೆ ಬೈಕ್‌ನಲ್ಲಿ ಬರುವ ಕಳ್ಳರು ಕೆಲವೇ ಕ್ಷಣಗಳಲ್ಲಿ ಆ ಸರವನ್ನು ಕದ್ದೋಡಿರುತ್ತಾರೆ. ಇದೇ ರೀತಿ ಮಹಾರಾಷ್ಟ್ರದ ಪುಣೆಯಲ್ಲಿ ಇತ್ತೀಚೆಗೆ ಸರಗಳ್ಳತನವೊಂದು ನಡೆಯುವುದರಲ್ಲಿತ್ತು. ಆದರೆ ಬಾಲಕಿಯ ಸಮಯಪ್ರಜ್ಞೆಯಿಂದ ಅಜ್ಜಿಯ ಸರ ಉಳಿದುಕೊಂಡಿದೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ವೈರಲ್‌ (Viral News) ಆಗಿದೆ. ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Karnataka Election: ಬಿಜೆಪಿಯ ಮೊದಲ ವಿಕೆಟ್‌ ಪತನ; MLC ಪುಟ್ಟಣ್ಣ ಕಾಂಗ್ರೆಸ್‌ ಸೇರ್ಪಡೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ
  2. Satish Kaushik: ಬಾಲಿವುಡ್‌ ನಟ ಸತೀಶ ಕೌಶಿಕ್‌ ನಿಧನ
  3. Hindu Doctor Killed In Pakistan: ಹೋಳಿ ಹಬ್ಬದ ದಿನವೇ ಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ
  4. NIMMBUS App : ಬಿಎಂಟಿಸಿಯ ನಿಮ್ಮಬಸ್‌ ಆ್ಯಪ್ ಮುಂದಿನ ವಾರ ಬಿಡುಗಡೆ
  5. ಅಣ್ಣಾಮಲೈ ವಿರುದ್ಧ ಆಕ್ರೋಶ: ತ.ನಾಡು ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಪದಾಧಿಕಾರಿಗಳು
  6. NISAR Satellite: ಅಮೆರಿಕದಿಂದ ಬೆಂಗಳೂರಿಗೆ ಬಂದ ನಿಸಾರ್ ಉಪಗ್ರಹ, ಲಾಂಚ್ ಯಾವಾಗ?
  7. Gold rate : ಬಂಗಾರದ ದರದಲ್ಲಿ 720 ರೂ. ಇಳಿಕೆ, ಬೆಳ್ಳಿ 2,500 ರೂ. ಅಗ್ಗ! ಖರೀದಿದಾರರು ಗಮನಿಸಿ
Exit mobile version