Site icon Vistara News

ವಿಸ್ತಾರ TOP 10 NEWS | ನೋಟು ಅಮಾನ್ಯವನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್‌, ದೆಹಲಿಯಲ್ಲಿ ಮತ್ತೊಂದು ಹೀನ ಕೃತ್ಯ, ಮತ್ತಷ್ಟು ಪ್ರಮುಖ ಸುದ್ದಿಗಳಿವು

vistara-top-10-news-Demonetisation verdict to delhi crime and more news

1. Demonetisation verdict | ನೋಟು ಬ್ಯಾನ್‌ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಚಾರಿತ್ರಿಕ ತೀರ್ಪು
ಕೇಂದ್ರ ಸರ್ಕಾರ 2016ರ ನವೆಂಬರ್‌ 8 ರಂದು ಹೊರಡಿಸಿದ್ದ 500 ರೂ. ಹಾಗೂ 1000 ರೂ. ನೋಟುಗಳ ಅಮಾನ್ಯತೆಯನ್ನು ಸುಪ್ರೀಂಕೋರ್ಟ್‌( Demonetisation verdict) ಎತ್ತಿ ಹಿಡಿದಿದೆ. ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನೋಟು ಬ್ಯಾನ್‌ ಕ್ರಮವನ್ನು ಪ್ರಶ್ಮಿಸಿ ಸಲ್ಲಿಸಿದ್ದ 58 ಅರ್ಜಿಗಳನ್ನು ತಿರಸ್ಕರಿಸಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: Demonetisation verdict | ಮೋದಿ ಸರ್ಕಾರದ ನೋಟು ಅಮಾನ್ಯತೆ ವಿರುದ್ಧ ನ್ಯಾಯಮೂರ್ತಿ ಬಿವಿ ನಾಗರತ್ನ ಹೇಳಿದ್ದೇನು?

2. Siddheshwar Swamiji | ಸಿದ್ದೇಶ್ವರ ಶ್ರೀಗಳು ಆಹಾರ ಸ್ವೀಕರಿಸುತ್ತಿಲ್ಲ, ಆಸ್ಪತ್ರೆಗೆ ಶಿಫ್ಟ್‌ ಆಗಲು ಒಪ್ಪುತ್ತಿಲ್ಲ: ವೈದ್ಯ ಪಾಟೀಲ್‌
ನಡೆದಾಡುವ ದೇವರು, ಜಗತ್ತಿನ ಶ್ರೇಷ್ಠ ಸಂತ, ಪ್ರವಚನದ ಮೂಲಕ ವಿಶ್ವಾದ್ಯಂತ ಭಕ್ತರನ್ನು ಹೊಂದಿದ್ದ ದಣಿವರಿಯದ ಮಹಾನ್ ದಾರ್ಶನಿಕ, ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಆರೋಗ್ಯ ಚೇತರಿಕೆಗಾಗಿ ಭಕ್ತರು ದೇವರಿಗೆ ಮೊರೆ ಇಟ್ಟಿದ್ದಾರೆ, ಸ್ವಾಮೀಜಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲದೆ, ರಾಜಕೀಯ ನಾಯಕರು, ವಿವಿಧ ಮಠಾಧೀಶರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Accident In Delhi | ದೆಹಲಿ ಯುವತಿ ಆ್ಯಕ್ಸಿಡೆಂಟ್​ ಕೇಸ್​​ನಲ್ಲಿ ಬಿಜೆಪಿ ಮುಖಂಡ ಅರೆಸ್ಟ್​; ರಾಜಕೀಯ ಸ್ವರೂಪ ಪಡೆದ ಪ್ರಕರಣ
ದೆಹಲಿಯಲ್ಲಿ ನಡೆದ ಭೀಕರ ಕಾರು ಅಪಘಾತವೀಗ (Accident In Delhi) ರಾಜಕೀಯ ಸ್ವರೂಪಕ್ಕೆ ತಿರುಗಿದೆ. ಇಲ್ಲಿನ ಸುಲ್ತಾನ್​​ಪುರಿಯಲ್ಲಿ ಹೊಸವರ್ಷದ ದಿನವೇ 20ವರ್ಷದ ಯುವತಿಯೊಬ್ಬಳು ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಳು. ಈ ಅಮಾನುಷ ಕೃತ್ಯಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ ಅಮಿತ್​ ಮಿತ್ತಲ್​​ರನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Mahadayi Dispute | ಮಹದಾಯಿ ಡಿಪಿಆರ್‌ಗೆ ಕೇಂದ್ರದ ಸಮ್ಮತಿ ವಿರೋಧಿಸಿ ಶೀಘ್ರವೇ ಮೋದಿ ಬಳಿ ನಿಯೋಗ ಎಂದ ಗೋವಾ
ಮಹದಾಯಿ ನದಿಗೆ (Mahadayi Dispute) ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ನಿರ್ಮಿಸುವ ಕರ್ನಾಟಕದ ಸಮಗ್ರ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ಗೋವಾ ಸರ್ಕಾರ ಕ್ಯಾತೆ ತೆಗೆದಿದೆ. ಡಿಪಿಆರ್‌ಗಳಿಗೆ ಅನುಮೋದನೆ ನೀಡಿರುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Kalasa Bhanduri | ಹೋರಾಟ ಮಾಡಿದವರನ್ನು ಹೊಡೆದು ಜೈಲಿಗೆ ಕಳಿಸಿದ್ದು ಕಾಂಗ್ರೆಸ್‌: ಸಚಿವ ಗೋವಿಂದ ಕಾರಜೋಳ

5. NPS News | ಸರ್ಕಾರದಿಂದ ಒಪಿಎಸ್‌ ಜಾರಿ ಕುರಿತು ಚರ್ಚಿಸುವ ಭರವಸೆ; 14 ದಿನಗಳ ಧರಣಿ ಸತ್ಯಾಗ್ರಹ ಅಂತ್ಯ
ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಬೃಹತ್‌ ಧರಣಿ ಪ್ರತಿಭಟನೆಯನ್ನು (NPS News) ಸೋಮವಾರ ಅಂತ್ಯಗೊಳಿಸಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Karnataka Election | ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ 130 ಸ್ಥಾನ ಖಚಿತ: ಸಿಎಂ ಬಸವರಾಜ ಬೊಮ್ಮಾಯಿ; ಬೂತ್‌ ವಿಜಯ್‌ ಅಭಿಯಾನಕ್ಕೆ ಚಾಲನೆ
ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದರೆ ರಾಜ್ಯದಲ್ಲಿ ಬಿಜೆಪಿಯು 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಕರ್ನಾಟಕ ರಾಜಕೀಯ (Karnataka Election) ದಿಕ್ಸೂಚಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಬೊಮ್ಮಾಯಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Viral story | ಗರ್ಭಿಣಿಯಾಗಿದ್ದಕ್ಕೆ ಕೆಲಸದಿಂದ ವಜಾ! 15 ಲಕ್ಷ ರೂ ಪರಿಹಾರ ಪಡೆದಳಾಕೆ!
ಗರ್ಭಿಣಿ ಎಂದು ಕಚೇರಿಯಲ್ಲಿ ತಿಳಿಸಿದ್ದಕ್ಕಾಗಿ, ಆಕೆಯನ್ನು ಗರ್ಭಿಣಿಯೆಂಬ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ. ಈ ಸಂಬಂಧ ಆ ಮಹಿಳೆ, ಕಾನೂನಿನ ಮೊರೆ ಹೋದಳು. ಆಕೆ, ಬರೋಬ್ಬರಿ ೧೫ ಲಕ್ಷ ರೂಪಾಯಿಗಳ ಪರಿಹಾರವನ್ನು ಪಡೆದಿದ್ದಾರೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Karnataka Election | ಅಮಿತ್‌ ಶಾ ದೇವೇಗೌಡರ ಉಗುರಿಗೂ ಸಮವಲ್ಲ ಎಂದ ಎಚ್‌ಡಿಕೆ, ಬಿಜೆಪಿ ಪತನ ಆರಂಭ ಎಂದು ಕಿಡಿ
ಅಮಿತ್ ಶಾ ಅವರು ಯಾವಾಗ ದೇವೇಗೌಡರು ಭ್ರಷ್ಟರು ಅಂದರೋ ಆಗಲೇ ಅವರ ಪತನ ಆರಂಭ ಆಗಿಹೋಗಿದೆ. ಅವರು ದೇವೇಗೌಡರ ಉಗುರಿಗೂ ಸಮವಲ್ಲ ಎಂದು ಆಕ್ರೋಶದಿಂದ ಮಾತನಾಡಿದ್ದಾರೆ (Karnataka Election) ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Suicide Case | ಡೆತ್‌ ನೋಟ್‌ನಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಬರೆದರೆ ಏನು ಮಾಡ್ತೀರಿ?: ಯಾವುದೇ ತನಿಖೆಗೆ ಸಿದ್ಧ ಎಂದ ಅರವಿಂದ ಲಿಂಬಾವಳಿ
ಪ್ರದೀಪ್‌ ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರರಕಣದಲ್ಲಿ (Suicide Case) ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಕುರಿತು ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಯಾವುದೇ ರೀತಿಯ ತನಿಖೆಗೂ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Murder Case | ಕ್ಲಾಸ್‌ ರೂಮ್‌ನಲ್ಲಿಯೇ ವಿದ್ಯಾರ್ಥಿನಿಗೆ ಚಾಕು ಇರಿದು ಕೊಂದ ಪಾಗಲ್‌ ಪ್ರೇಮಿ; ತಾನೂ ಇರಿದುಕೊಂಡ!
ಬೆಂಗಳೂರಿನ ರಾಜಾನುಕುಂಟೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಯುವಕನೊಬ್ಬ ಯುವತಿಗೆ ಚಾಕು (Murder Case) ಇರಿದು ಕೊಂದಿದ್ದಾನೆ. ಕ್ಲಾಸ್‌ ರೂಮ್‌ನಲ್ಲಿಯೇ ವಿದ್ಯಾರ್ಥಿನಿಗೆ ಪವನ್ ಕಲ್ಯಾಣ ಎಂಬ ಯುವಕ ಚಾಕು ಹಾಕಿದ್ದಾನೆ. ಆಕೆ ತನ್ನ ಪ್ರೀತಿಯನ್ನು ಒಪ್ಪಿಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

  1. Hombale Films | ಅಧಿಕೃತ ಪೋಸ್ಟ್‌ ಮೂಲಕ ಕೊನೆಗೂ ಸೀಕ್ರೆಟ್‌ ರಿವೀಲ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌!
  2. Vaikuntha Ekadashi 2023 | ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ;‌ ಎಲ್ಲೆಲ್ಲಿ ಹೇಗಿತ್ತು?
  3. Road Accident Deaths | ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆವರೆಗೆ ವಾಹನ ಓಡಿಸಬೇಡಿ! ಇದಕ್ಕೇನು ಕಾರಣ?
  4. Coronavirus | ಸೆಪ್ಟೆಂಬರ್‌ನಲ್ಲೇ ಬೆಂಗಳೂರಿಗೆ ಕಾಲಿಟ್ಟಿತ್ತು ಬಿಎಫ್.7 ರೂಪಾಂತರಿ!
  5. Rangayana row | ರಂಗಾಯಣ ನಾಟಕ ʻಸಾಂಬಶಿವʼದಲ್ಲಿ ಸಿದ್ದರಾಮಯ್ಯ, ಕೈ ನಾಯಕರ ಅಪಹಾಸ್ಯ, ವೇದಿಕೆಗೆ ನುಗ್ಗಿದ ಫ್ಯಾನ್ಸ್‌
  6. Pakistan Economy Collapse | ಪ್ಲಾಸ್ಟಿಕ್‌ನಲ್ಲಿ ಅಡುಗೆ ಅನಿಲ ತುಂಬಿಸಿ ಹೊತ್ತೊಯ್ಯುವ ದುಸ್ಥಿತಿ, ದಿವಾಳಿಯತ್ತ ಪಾಕಿಸ್ತಾನ
  7. Unemployment in India | ಶೇ.8.3ಕ್ಕೇರಿದ ದೇಶದ ನಿರುದ್ಯೋಗ ದರ! ಯಾವ ರಾಜ್ಯದಲ್ಲಿ ಹೆಚ್ಚು?
  8. Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆ; ಕನಕದಾಸರ ಕೋಟೆ ಮಾದರಿ ವೇದಿಕೆ
Exit mobile version