ಬೆಂಗಳೂರು: ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಸರ್ವಪಕ್ಷಗಳೂ ಒಗ್ಗಟ್ಟಿನಿಂದ ವರ್ತಿಸಬೇಕೆಂಬ ಸಾಮಾನ್ಯ ತಿಳುವಳಿಕೆಯನ್ನು ಮೀರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಇದೀಗ ಹೊಸ ವಿವಾದ ಸೃಷ್ಟಿಸಿದೆ. ಮುನಿಸಿಕೊಂಡಿದ್ದ ಯಡಿಯೂರಪ್ಪ ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಡಿ ಹೊಗಳಿದ್ದಾರೆ, ಕಾಶ್ಮೀರ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡುವ ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚಾಟಿ ಬೀಸಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
ರಾಜ್ಯ, ದೇಶದಲ್ಲಿ ನಡೆಯುವ ಉತ್ತಮ ಸುದ್ದಿಗಳನ್ನು ಓದಲು ವಿಸ್ತಾರ ನ್ಯೂಸ್ WhatsApp ಕಮ್ಯೂನಿಟಿ ಸೇರಿ. ಇಲ್ಲಿ ಕ್ಲಿಕ್ ಮಾಡಿ.
1. DK Shivakumar | ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಭಯೋತ್ಪಾದಕ ಅಂದಿದ್ದೇಕೆ? ಡಿಕೆಶಿ ಪ್ರಶ್ನೆಗೆ ಬಿಜೆಪಿ ಸಿಡಿಮಿಡಿ
ಯಾವುದೇ ತನಿಖೆ ಮಾಡದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಹೇಗೆ ಭಯೋತ್ಪಾದಕ ಎಂದು ಪೊಲೀಸರು ಘೋಷಿಸಿದರು ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ವಿವಾದಕ್ಕೆ ತುತ್ತಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: DK Shivakumar | ಯಾವ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ: ಭಯೋತ್ಪಾದಕ ಹೇಳಿಕೆಗೆ ಡಿಕೆಶಿ ಸಮರ್ಥನೆ
2. ಬಿ.ಎಸ್. ಯಡಿಯೂರಪ್ಪ ನಮ್ಮ ಪಿತಾಮಹ: ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ರಾಜ್ಯದಲ್ಲಿ ಅತ್ಯಂತ ತಳಮಟ್ಟದಿಂದಲೂ ಬಿಜೆಪಿಯನ್ನು ಕಟ್ಟಿಬೆಳೆಸಿದ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಪಿತಾಮಹ ಇದ್ದಂತೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಡಿ ಹೊಗಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಬಿ.ಎಸ್. ಯಡಿಯೂರಪ್ಪ ಹಾಗೂ ನಮ್ಮದು ತಂದೆ ಮಕ್ಕಳ ಸಂಬಂಧ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
3. ಹೈಕಮಾಂಡ್ ಜತೆ ಮಾತಾಡುವೆ ಎಂದ ಜಗದೀಶ ಶೆಟ್ಟರ್ ಮತ್ತೆ ಕರೆ ಮಾಡಲೇ ಇಲ್ಲ: ಕಾಂಗ್ರೆಸ್ ಸೇರಿದ ವಿ.ಎಸ್. ಪಾಟೀಲ್ ಬೇಸರ
ಬಿಜೆಪಿಯಿಂದ ದೂರಾಗುವುದನ್ನು ತಿಳಿದುಕೊಂಡ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೊರತುಪಡಿಸಿ ಯಾರೂ ತಮ್ಮನ್ನು ಸಂಪರ್ಕ ಮಾಡಿಲ್ಲ. ಹೈಕಮಾಂಡ್ ಜತೆ ಮಾತಾಡುತ್ತೇನೆ ಎಂದ ಜಗದೀಶ ಶೆಟ್ಟರ್ ಅವರೂ ಮತ್ತೆ ಕರೆ ಮಾಡಲೇ ಇಲ್ಲ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಯಲ್ಲಾಪುರ ಮಾಜಿ ಶಾಸಕ ವಿ.ಎಸ್. ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Jai Shankar | ಲಾಡೆನ್‌ಗೆ ಆತಿಥ್ಯ ನೀಡಿದ್ದ ಪಾಕ್‌ಗೆ ವಿಶ್ವಸಂಸ್ಥೆಯಲ್ಲಿ ಉಪದೇಶ ನೀಡುವ ಯೋಗ್ಯತೆ ಇಲ್ಲ: ಭಾರತ ಕಿಡಿ
ಒಸಾಮಾ ಬಿನ್ ಲಾಡೆನ್‌ನಂಥ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ, ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರರ ಅಡಗುತಾಣವಾಗಿದ್ದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವ ಯಾವುದೇ ಯೋಗ್ಯತೆ ಇಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ( Jai Shankar ) ಪಾಕ್ ವಿರುದ್ಧ ಗುಡುಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Rahul Gandhi | ಆರೆಸ್ಸೆಸ್‌ನಲ್ಲಿ ಮಹಿಳಾ ಕಾರ್ಯಕರ್ತರು ಏಕೆ ಇಲ್ಲ? ಇದು ಸ್ತ್ರೀ ಶೋಷಣೆ : ರಾಹುಲ್ ಗಾಂಧಿ
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮಹಿಳೆಯರನ್ನು ದಮನಿಸುತ್ತಿದೆ. ಅಲ್ಲಿ ಮಹಿಳಾ ಕಾರ್ಯಕರ್ತರು ಏಕೆ ಇಲ್ಲ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ) ಪ್ರಶ್ನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಕೆಂಪು ಕಣ್ಣುಗಳಿಗೆ ಚೀನಾ ಕನ್ನಡಕ ಹಾಕಿಕೊಂಡಿದೆ ಮೋದಿ ಸರ್ಕಾರ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ
ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಭಾರತ-ಚೀನಾ ಮಧ್ಯೆ ಡಿಸೆಂಬರ್ 9ರಂದು ನಡೆದ ಘರ್ಷಣೆ ಬಗ್ಗೆ ಟ್ವೀಟ್ ಮಾಡಿರುವ ಖರ್ಗೆ, ‘ಭಾರತದ ಸಂಸತ್ತಿನಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲವೇ? ಮೋದಿ ಸರ್ಕಾರ ತನ್ನ ಕೆಂಪು ಕಣ್ಣನ್ನು ಚೀನಾ ಕನ್ನಡಕದಿಂದ ಮುಚ್ಚಿಕೊಂಡಿದೆ ಎಂದು ತೋರುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. BBMP Election | ಬಿಬಿಎಂಪಿ ಮೀಸಲಾತಿ ನಿಗದಿಗೆ ಮಾ. 31ರವರೆಗೆ ಅವಕಾಶ, ಎಲೆಕ್ಷನ್ ಚಾನ್ಸ್ ಮತ್ತೆ ಮುಂದೂಡಿಕೆ!
ಬಿಬಿಎಂಪಿ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ೨೦೨೩ರ ಮಾರ್ಚ್ ೩೧ರವರೆಗೆ ಸುಪ್ರೀಂಕೋರ್ಟೇ ಕಾಲಾವಕಾಶ ನೀಡಿದೆ. ಈ ಹಿಂದೆ ಡಿಸೆಂಬರ್ ೩೧ರೊಳಗೆ ಮೀಸಲಾತಿಯನ್ನು ಅಂತಿಮಗೊಳಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್ ಈಗ ಗಡುವನ್ನು ಮಾರ್ಚ್ ೩೧ರವರೆಗೆ ವಿಸ್ತರಣೆ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Arecanut News | ಲೋಕಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ ಪ್ರಸ್ತಾಪಿಸಿದ ಸಂಸದ ರಾಘವೇಂದ್ರ
ಎಲೆ ಚುಕ್ಕಿ ರೋಗ, ಧಾರಣೆ ಕುಸಿತ ಮತ್ತಿತರ ಅಡಿಕೆ ಬೆಳೆಗಾರರ ಸಮಸ್ಯೆಗಳು ಗುರುವಾರ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ಸಮಸ್ಯೆ ಹೇಳಲು ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಅವರಿಗೆ ಕೇವಲ ಒಂದು ನಿಮಿಷ ಕಾಲಾವಕಾಶ (Arecanut News) ನೀಡಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Karnataka Bank Locker | ಬ್ಯಾಂಕ್ ಲಾಕರ್ ಎಷ್ಟು ಸೇಫ್? ಭದ್ರಕೋಟೆಯಲ್ಲಿದ್ದ ಬಂಗಾರವೇ ನಾಪತ್ತೆ; ಠಾಣೆ ಮೆಟ್ಟಿಲೇರಿದ ದಂಪತಿ
ಚಿನ್ನಾಭರಣ ಮನೆಯಲ್ಲಿದ್ದರೆ ಮನೆಗಳ್ಳರ ಕಾಟ, ಧರಿಸಿಕೊಂಡು ಹೊರಗೆ ಹೋದರೆ ಸರಗಳ್ಳರ ಹಾವಳಿ. ಇವರಿಬ್ಬರ ಹಾವಳಿ ತಪ್ಪಿಸಲು ಆ ದಂಪತಿ ಬ್ಯಾಂಕ್ ಲಾಕರ್‌ನಲ್ಲಿ (Karnataka Bank Locker) ಬೆಲೆಬಾಳುವ ಚಿನ್ನಾಭರಣ ಇಟ್ಟಿದ್ದರು. ಆದರೆ, ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಬಂಗಾರವೇ ನಾಪತ್ತೆ ಆಗಿದ್ದು, ದಂಪತಿ ಆಘಾತಕ್ಕೆ ಒಳಗಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಎಲೆಕ್ಷನ್ ಹವಾ | ಕುಷ್ಟಗಿ | ಎರಡನೇ ಬಾರಿ ಗೆಲ್ಲಿಸದ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಪೈಪೋಟಿ
ಒಮ್ಮೆ ಜಯಿಸಿ ಶಾಸಕರಾದವರು ಮತ್ತೆ ಮುಂದಿನ ಅವಧಿಗೆ ಗೆದ್ದ ಉದಾಹರಣೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ಇಲ್ಲವಾದರೂ ಅದನ್ನು ಮೀರಿ ಮರು ಆಯ್ಕೆಗೆ ಹಾಲಿ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಪ್ರತಿಸ್ಪರ್ಧಿಗಳೂ ಉತ್ಸಾಹದಲ್ಲಿದ್ದಾರೆ. ಈ ಕುರಿತು ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- INDvsBAN | ಭಾರತದ ಬಿಗಿ ಹಿಡಿತದಲ್ಲಿ ಮೊದಲ ಟೆಸ್ಟ್; 133 ರನ್ಗಳಿಗೆ ಬಾಂಗ್ಲಾದ 8 ವಿಕೆಟ್ ಪತನ
- Sexual Harrassment | ಲೈಂಗಿಕ ಕಿರುಕುಳ ನೀಡಲು ಬಂದ ಶಿಕ್ಷಕನ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿನಿಯರು!
- ಮೊಗಸಾಲೆ ಅಂಕಣ | ಕಾಂಗ್ರೆಸ್‍ನತ್ತ ದತ್ತ ಗಮನ
- ಏನ್ ಮಗಾ ಎಲ್ಲಿದ್ದೀಯ?: ಬೆಂಗಳೂರು ಸಂಚಾರ ದಟ್ಟಣೆ ಕುರಿತು ಪೊಲೀಸರ ಹೊಸ ಡೈಲಾಗ್
- SBI Home loan interest | ಎಸ್‌ಬಿಐ ಗೃಹ ಸಾಲದ ಕನಿಷ್ಠ ಬಡ್ಡಿ ದರ 8.96%ಕ್ಕೆ ಏರಿಕೆ, ಇಎಂಐ ದುಬಾರಿ
- Bangalore street dogs | ಬೆಂಗಳೂರಿನಲ್ಲಿ ದಿನಕ್ಕೆ 70 ಮಂದಿಗೆ ಬೀದಿ ನಾಯಿ ಕಡಿತ, ಮಕ್ಕಳೇ ಟಾರ್ಗೆಟ್!