1. ಭಾರತಕ್ಕೆ ಆಸ್ಕರ್ ಡಬಲ್ ಧಮಾಕಾ
-Oscars 2023: ಇತಿಹಾಸ ಸೃಷ್ಟಿಸಿದ RRR ಸಿನಿಮಾ, ನಾಟು ನಾಟು… ಹಾಡಿಗೆ ಆಸ್ಕರ್ ಪ್ರಶಸ್ತಿ!
ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್‌ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
-Oscars 2023: ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಿತ್ರ, 2023ರ ಆಸ್ಕರ್‌ನ ʼಅತ್ಯುತ್ತಮ ಕಿರು ಸಾಕ್ಷ್ಯಚಿತ್ರʼ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಆಸ್ಕರ್ ಪ್ರಶಸ್ತಿ ಕುರಿತ ಎಲ್ಲ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
2. ವಿಸ್ತಾರ ವಿಶೇಷ: 10 ವರ್ಷದಲ್ಲಿ 7,398 ರೈತರ ಆತ್ಮಹತ್ಯೆ; ದಿನಕ್ಕಿಬ್ಬರ ಸಾವು: ಮೂರೂ ಪಕ್ಷದ ಅವಧಿಯಲ್ಲಿ ನೀಗಲಿಲ್ಲ ಅನ್ನದಾತನ ಬವಣೆ
ಕರ್ನಾಟಕದಲ್ಲಿ ಚುನಾವಣೆಗಳ ನಂತರ ಚುನಾವಣೆಗಳು ಬರುತ್ತಲೇ ಹೋದವು, ರೈತರ ಬವಣೆ ನೀಗಿಸುವ ಆಶ್ವಾಸನೆಯನ್ನು ಪಕ್ಷಗಳು ನೀಡುತ್ತಲೇ ಹೋದವು. ಇದೀಗ ಮತ್ತೊಂದು ಚುನಾವಣೆ ಎದುರಾಗಿದ್ದು, ಆಶ್ವಾಸನೆಗಳು ಹರಿದುಬರುತ್ತಿವೆ. ಆದರೆ ಅನ್ನದಾತ ರೈತನ ಬವಣೆ ಮಾತ್ರ ನೀಗಲೇ ಇಲ್ಲ. ಇದರಿಂದಾಗಿ ಕಳೆದ ಹತ್ತು ವರ್ಷದಲ್ಲಿ ಕರ್ನಾಟಕದಲ್ಲಿ ಬರೊಬ್ಬರಿ 7,398 ರೈತರು ಆತ್ಮಹತ್ಯೆ (Farmers Suicide) ಮಾಡಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Budget Session: ರಾಹುಲ್ ಗಾಂಧಿ ಲಂಡನ್ ಹೇಳಿಕೆ ಗಲಾಟೆ; ರಾಜ್ಯಸಭೆ, ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ
ಸಂಸತ್ತಿನ ಬಜೆಟ್ ಅಧಿವೇಶನದ (Parliament Budget Session) ಎರಡನೇ ಹಂತ ಇಂದು ಪ್ರಾರಂಭವಾಗಿದೆ. ಆದರೆ ಮೊದಲದಿನವೆಲ್ಲ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬರೀ ಗಲಾಟೆಯೇ ಆಯಿತು. ಬಿಜೆಪಿ ಮತ್ತು ಪ್ರತಿಪಕ್ಷಗಳ ದೊಡ್ಡಮಟ್ಟದ ಗಲಾಟೆ/ಪ್ರತಿಭಟನೆ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪವನ್ನು ನಾಳೆ ಬೆಳಗ್ಗೆ (ಮಾರ್ಚ್ 14) 11 ಗಂಟೆಗೆ ಮುಂದೂಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. NHM Workers Protest: ನೌಕರಿ ಕಾಯಂ, ವೇತನ ಹೆಚ್ಚಳಕ್ಕಾಗಿ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಪ್ರತಿಭಟನೆ; ಹೋರಾಟ ತೀವ್ರಕ್ಕೆ ನಿರ್ಧಾರ
ನೌಕರಿ ಕಾಯಂ ಹಾಗೂ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರು (NHM Workers Protest) ನಡೆಸುತ್ತಿರುವ ಪ್ರತಿಭಟನೆ ಸೋಮವಾರಕ್ಕೆ 29 ದಿನ ಪೂರೈಸಿದೆ. ಬೇಡಿಕೆಗಳಿಗೆ ಮೇಲಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಒಳಗುತ್ತಿಗೆ ನೌಕರರು ತೀರ್ಮಾನಿಸಿದ್ದು, 30 ಸಾವಿರ ನೌಕರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. K S Eshwarappa: ಭಾಷಣದ ಮಧ್ಯೆ ಆಜಾನ್; ನನಗೆ ಎಲ್ಲಿ ಹೋದ್ರೂ ಇದೊಂದು ತಲೆನೋವು ಎಂದ ಕೆ.ಎಸ್. ಈಶ್ವರಪ್ಪ
ಮಂಗಳೂರು ನಗರದಲ್ಲಿ ಆಜಾನ್ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದ ಕಾವೂರಿನ ಶಾಂತಿನಗರದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಷಣದ ಮಧ್ಯೆ ಆಜಾನ್ ಆರಂಭವಾಗಿದ್ದಕ್ಕೆ ಸಿಡಿಮಿಡಿಯಾದ ಕೆ.ಎಸ್. ಈಶ್ವರಪ್ಪ (K S Eshwarappa), ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು ಎಂದು ಹೇಳಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ನಮ್ಮ ಬಿಜೆಪಿಯವರಿಗೆ ಅಹಂಕಾರ; ಮುಸ್ಲಿಮರಿಗೆ ಯಾಕೆ ಕೆಲಸ ಮಾಡಿಕೊಡಬೇಕು ಎಂದು ಕೇಳುತ್ತಾರೆ: ಉಮಾನಾಥ ಕೋಟ್ಯಾನ್
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ (Umanath Kotian) ಸ್ವಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ. ಬಿಜೆಪಿಗೆ ಮುಸ್ಲಿಮರು ಅಪ್ಪಿತಪ್ಪಿಯೂ ಮತ ಹಾಕುವುದಿಲ್ಲ ಎಂದು ನಮ್ಮ ಪಕ್ಷದವರೇ ಹೇಳುತ್ತಾರೆ. ಅವರಿಗೆ ನಾವು ಯಾಕೆ ಕೆಲಸ ಮಾಡಬೇಕು ಎಂದೂ ಕೇಳುತ್ತಾರೆ. ನಮ್ಮ ಬಿಜೆಪಿ ಪಕ್ಷದವರಿಗೆ ಅಹಂಕಾರ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Karnataka Congress: ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಆಕ್ರೋಶ ಸ್ಫೋಟವಾಗುತ್ತದೆಯೇ?: ದೆಹಲಿಯಲ್ಲಿ ಕಾವೇರಿದ ಕರ್ನಾಟಕ ರಾಜಕೀಯ
ವಿಧಾನಸಭೆ ಚುನಾವಣೆ ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಹೆಚ್ಚಿದ ಪರಿಣಾಮ ಇದೀಗ ಕಾಂಗ್ರೆಸ್ (Karnataka Congress) ಟಿಕೆಟ್ ಆಯ್ಕೆಯಲ್ಲಿ ಸಂಕಷ್ಟ ಎದುರಾಗಿದೆ. ಹೆಚ್ಚೆಚ್ಚು ಆಕಾಂಕ್ಷಿಗಳು ಒಂದೇ ಕ್ಷೇತ್ರಕ್ಕೆ ಇರುವುದು, ವಿವಿಧ ಸಾಮಾಜಿಕ ಹಿನ್ನೆಲೆಗಳಿಂದ ಟಿಕೆಟ್ ಕೇಳುತ್ತಿರುವುದು ನುಂಗಲಾರದ ತುತ್ತಾಗಿದೆ. ಒಟ್ಟಾರೆ ಪ್ರಕ್ರಿಯೆಗೆ ಸ್ವತಃ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಅವರೇ ಹೈಕಮಾಂಡ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Karnataka Congress: ಫೈಟರ್ ರವಿ ಕುರಿತು ಟೀಕಿಸುತ್ತಲೇ ಕ್ಯಾಸಿನೋ ಮಾಲೀಕನಿಗೆ ಎಂಟ್ರಿ ಕೊಟ್ಟ ಕಾಂಗ್ರೆಸ್: ಇಂದು ಪಕ್ಷ ಸೇರ್ಪಡೆ
8. Same Sex Marriage: ಸಲಿಂಗಿಗಳ ಮದುವೆ ಮಾನ್ಯತೆಗೆ ಅರ್ಜಿ, ಐವರು ಜಡ್ಜ್‌ಗಳ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ
ದೇಶದಲ್ಲಿ ಸಲಿಂಗಿಗಳ ಮದುವೆಯನ್ನು (Same Sex Marriage) ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಹಾಗೆಯೇ, ಏಪ್ರಿಲ್ 18ರಂದು ಅರ್ಜಿಗಳ ಅಂತಿಮ ವಿಚಾರಣೆ ನಡೆಸಲಿದೆ ಎಂದು ಮಾಹಿತಿ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Signature Bank : ಅಮೆರಿಕದಲ್ಲಿ 48 ಗಂಟೆಗಳಲ್ಲಿ ಎರಡನೇ ಪ್ರಮುಖ ಬ್ಯಾಂಕ್ ದಿವಾಳಿ, ಮುಂದಿನ ಸರದಿ ಯಾವುದು?
ಅಮೆರಿಕದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಎರಡನೇ ಬ್ಯಾಂಕ್ ದಿವಾಳಿಯಾಗಿದೆ. ಇದರೊಂದಿಗೆ ಅಲ್ಲಿನ ಬ್ಯಾಂಕಿಂಗ್ ವಲಯ ಆತಂಕಕ್ಕೀಡಾಗಿದೆ. ತಂತ್ರಜ್ಞಾನ ಕ್ಷೇತ್ರ ಮತ್ತು ಕ್ರಿಪ್ಟೊ ಕರೆನ್ಸ್ ಉದ್ದಿಮೆಯ ಅಭಿವೃದ್ಧಿಯಲ್ಲಿ ಈ ಬ್ಯಾಂಕ್‌ಗಳು ಮಹತ್ತರ ಪಾತ್ರ ವಹಿಸಿತ್ತು. ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವಾದ ಬಳಿಕ ಸಿಗ್ನೇಚರ್ ಬ್ಯಾಂಕ್ (Signatutre Bank) ದಿವಾಳಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ; ಸರಣಿ ಗೆದ್ದ ಭಾರತ
ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಡ್ರಾದಲ್ಲಿ ಮುಕ್ತಾಯಕಂಡಿದೆ. ಈ ಮೂಲಕ ಭಾರತ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಕಾರಣ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಪಡೆದಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- ತನ್ನನ್ನು ತಾನೇ ಮದುವೆಯಾಗಿ 24 ಗಂಟೆಯಲ್ಲೇ ವಿಚ್ಛೇದನ ಪಡೆದ ಯುವತಿ; ಒಂದಿನವೂ ಕಳೆಯಲಾಗಲಿಲ್ಲವಂತೆ!
- Death in Flight : ಮಾರ್ಗ ಮಧ್ಯೆ ಪ್ರಯಾಣಿಕ ನಿಧನ; ದಿಲ್ಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
- Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್‌ಗೆ ಲೋಕಾಯುಕ್ತ ಮೊರೆ
- Phone Tapping: ಕುಟುಂಬದ ಫೋನ್ ಮಾಹಿತಿಯನ್ನು ಕದಿಯುತ್ತಿದ್ದಾರೆ: ಎಂ.ಬಿ. ಪಾಟೀಲ್ ದೂರು
- ಡಬಲ್ ಆಯ್ತು ದೆಹಲಿ ಶಾಸಕರ ಸಂಬಳ!; 12 ವರ್ಷಗಳ ನಂತರ ಭರ್ಜರಿ ಏರಿಕೆ, ಸಿಎಂ ವೇತನವೆಷ್ಟು ಇನ್ಮುಂದೆ?
- Illicit relationship: ಪೊಲೀಸ್ ಕಾನ್ಸ್‌ಟೇಬಲ್ ಪತ್ನಿಯೊಂದಿಗೆ IPS ಅಧಿಕಾರಿಯ ಅನೈತಿಕ ಸಂಬಂಧ; ದೂರು ದಾಖಲ