Site icon Vistara News

ವಿಸ್ತಾರ TOP 10 NEWS | ವಿಕ್ರಾಂತ್‌ ಟ್ರೈಲರ್‌ನಿಂದ ʼಮಹಾʼ ಕ್ಲೈಮ್ಯಾಕ್ಸ್‌ವರೆಗಿನ ಪ್ರಮುಖ ಸುದ್ದಿಗಳು

VISTARA Top 10 23062022 11

ಬೆಂಗಳೂರು: ಮಹಾ ವಿಕಾಸ್‌ ಅಘಾಡಿ ಸರ್ಕಾರದ ಅಲುಗಾಟ ಮುಂದುವರಿಯುತ್ತಲೇ ಇದ್ದು, ಇನ್ನೇನು ಸದ್ಯದಲ್ಲೆ ಬೀಳುವ ಲಕ್ಷಣಗಳಿವೆ. ರಾಜ್ಯದ ಕೆಲವೆಡೆ ಭೂಕಂಪನವಾದರೆ, ಬೆಳ್ಳಂಬೆಳಗ್ಗೆ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದೂ ಆಡಳಿತ ಮಂಡಳಿಗಳಿಗೆ ಕಂಪನ ಸೃಷ್ಟಿಸಿದೆ. ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದು, ಇದೇ ಕಾರಣಕ್ಕೆ ನವದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ ಹಸಿರು ನಿಶಾನೆ ತರುತ್ತಾರೆಯೇ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ಪ್ಯಾಕೇಜ್‌ನಲ್ಲಿ.

೧. ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವತ್‌ !
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು (Maharashtra politics) ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಲೇ ಇದೆ. ಶಿವಸೇನೆಯ ನಾಯಕ ಏಕನಾಥ ಶಿಂಧೆ, 30ಕ್ಕೂ ಹೆಚ್ಚು ಶಾಸಕರೊಟ್ಟಿಗೆ ಬಂಡಾಯವೆದ್ದು ರೆಸಾರ್ಟ್‌ ಸೇರಿಕೊಂಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ, ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಸುಳಿವನ್ನು ಶಿವಸೇನೆ ನಾಯಕ ಸಂಜಯ್‌ ರಾವತ್‌ ನೀಡಿದ್ದಾರೆ. ಟ್ವೀಟ್‌ ಮಾಡಿರುವ ಅವರು, ʼಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ರಾಜ್ಯದ ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿವೆʼ ಎಂದು ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೨. ಹಾಸನ ಜಿಲ್ಲೆಯ ಹಲವೆಡೆ ಲಘು ಭೂಕಂಪ, 3.4 ತೀವ್ರತೆ, ಜನತೆಯಲ್ಲಿ ಆತಂಕ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಲವು ಗ್ರಾಮಗಳಲ್ಲಿ ಗುರುವಾರ ಬೆಳಗಿನ ಜಾವದಲ್ಲಿ ಲಘು ಭೂ ಕಂಪನ ಸಂಭವಿಸಿದೆ. ನಿದ್ರೆಯಲ್ಲಿದ್ದವರಿಗೆ ಲಘು ಕಂಪನ ಶಾಕ್‌ ನೀಡಿತು. ದೊಡ್ಡ ರೀತಿಯ ಶಬ್ದ ಬಂದು ಬಳಿಕ ಬೆಳಗಿನ ಜಾವ 4.38ರಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಯಿತು. ರಿಕ್ಟರ್‌ ಮಾಪನದಲ್ಲಿ ಈ ಲಘು ಭೂಕಂಪನದ ತೀವ್ರತೆ ೩.೪ ಇತ್ತು. ಭೂಮಿಯ ೫ ಕಿ.ಮೀ ಅಡಿಯಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಈ ಪ್ರಮಾಣದ ಕಂಪನದಿಂದ ಯಾವುದೇ ಭಯಪಡುವ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಮಂಡಳಿ ತಿಳಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

3. IT Raid | ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ
ನಗರದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ (ಜೂನ್‌ 23) ಬೆಳ್ಳಂಬೆಳ್ಳಗೆ ಐಟಿ (IT Raid) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಬಾಗಲೂರಿನಲ್ಲಿರುವ ರೇವಾ ಶಿಕ್ಷಣ ಸಂಸ್ಥೆ, ದಿವ್ಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಕೃಷ್ಣದೇವರಾಯ ಇನ್ಸ್ಟಿಟ್ಯೂಷನ್ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಇದರ ಜತೆಗೆ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್‌ಗಳ ಮನೆ ಮೇಲೂ ದಾಳಿ ನಡೆಸಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

4. ತ್ರಿವಳಿ ಕೊಲೆ ತಾನೇ ಮಾಡಿದ್ದು ಎಂದಿದ್ದ ಆರೋಪಿ, ಖುಲಾಸೆಗೊಳಿಸಿದ ಹೈಕೋರ್ಟ್
ಐದು ವರ್ಷಗಳ ಹಿಂದೆ ರಾಜ್ಯಾದ್ಯಂತ ತಲ್ಲಣ ಮೂಡಿಸಿದ್ದ ಇಲ್ಲಿನ ಕುವೆಂಪು ನಗರದ ಗೃಹಿಣಿ ಹಾಗೂ ಆಕೆಯ ಇಬ್ಬರು ಪುಟ್ಟ ಮಕ್ಕಳ ಹತ್ಯೆ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡಿದ್ದಾನೆ. ಆರೋಪಿ ಪ್ರವೀಣ್‌ ಭಟ್‌ ಕೊಲೆ ಮಾಡಿದ್ದಾನೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಕೇಳಿದ ಧಾರವಾಡ ಹೈಕೋರ್ಟ್‌ ಪೀಠವು, ಸಾಕ್ಷ್ಯ ಕೊರತೆಯಿಂದಾಗಿ ಜೂನ್ 21ರಂದು (ಮಂಗಳವಾರ) ಆರೋಪಿಯನ್ನು ದೋಷಮುಕ್ತಗೊಳಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೫. President Election: ದ್ರೌಪದಿ ಮುರ್ಮು ನಾಳೆ ನಾಮಪತ್ರ, ಮೋದಿಯೇ ಮೊದಲ ಸೂಚಕ
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಾರ್ಖಂಡ್‌ನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಶುಕ್ರವಾರ (ಜೂನ್‌ ೨೪) ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲ ಸೂಚಕರಾಗಲಿದ್ದಾರೆ ಎಂದು ಹೇಳಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

6. CM ಬಸವರಾಜ ಬೊಮ್ಮಾಯಿಗೆ ಫುಲ್‌ ಡಿಮ್ಯಾಂಡ್‌: ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ
CM ಬಸವರಾಜ ಬೊಮ್ಮಾಯಿ ನವ ದೆಹಲಿಗೆ ಪ್ರಯಾಣ ಮಾಡುತ್ತಾರೆ ಎಂಬ ವಿಚಾರ ಬಹಿರಂಗವಾದಾಗಿನಿಂದ ಪಕ್ಷದಲ್ಲಿ ಡಿಮ್ಯಾಂಡ್‌ ಹೆಚ್ಚಾಗಿದೆ. ತಮಗೂ ಸಚಿವ ಸ್ಥಾನ ಕೊಡಿಸಿ ಎನ್ನುತ್ತ ಹಿರಿಯರು, ಮಾಜಿ ಸಚಿವರುಗಳೆಲ್ಲ ದುಂಬಾಲು ಬಿದ್ದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

7. Team India ಹಿಟ್ಟರ್‌ ರೋಹಿತ್‌ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ಇಲ್ಲಿದೆ ನೋಡಿ ಅಭಿಮಾನಿಗಳಿಗೆ ವಿಶೇಷ ಸಂದೇಶ
ಹಿಟ್ಟರ್‌ ಖ್ಯಾತಿಯ Team India ಬ್ಯಾಟರ್‌ ರೋಹಿತ್‌ ಶರ್ಮ ಗುರುವಾರ ತಮ್ಮ ಹಿತೈಷಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರ ಬರೆಯವುದಕ್ಕೆ ಒಂದು ವಿಶೇಷ ಕಾರಣವಿದೆ. ಅದೇನೆಂದರೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 2022ರ ಜೂನ್‌ ೨೩ಕ್ಕೆ ೧೫ ವರ್ಷಗಳಾದವು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

8. Vikrant Rona Trailer | ಕ್ಯೂರಿಯಾಸಿಟಿ ಕೆರಳಿಸಿದ ʼಗರ ಗರ ಗರ ಗಗ್ಗರ ಜರ್ಬ, ಪಿರ ನಲ್ಕುರಿ ನೆತ್ತರ ಪರ್ಬʼ
ʼನೆತ್ತರ ಹನಿ ಮಣ್ಣಿನಲ್ಲಿ ಬಿದ್ದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ರಕ್ತಕ್ಕೆ ರಕ್ತʼ ಎಂದು ಬುಧವಾರವಷ್ಟೆ ಕುತೂಹಲ ಕೆರಳಿಸಿದ್ದ ವಿಕ್ರಾಂತ್‌ ರೋಣ ಸಿನಿಮಾ ಟ್ರೈಲರ್‌ ಲಾಂಚ್‌ ಆಗಿದೆ. ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ವರ್ಲ್ಡ್‌ ವೈಡ್‌ ಸಿನಿಮಾ ವಿಕ್ರಾಂತ್‌ ರೋಣ ಸಿನಿಮಾ (Vikrant Rona Movie) ಟ್ರೈಲರ್‌ ನೋಡಿ ಅಭಿಮಾನಿಗಳು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ. ಅರ್ಧ ಗಂಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

9. ಪಠ್ಯಪುಸ್ತಕ ವಿಚಾರದಲ್ಲಿ ಆತ್ಮರಕ್ಷಣೆಗೆ ʼಒಕ್ಕಲಿಗʼ ಕಾರ್ಡ್‌ ಬಳಸಿದ ಬೊಮ್ಮಾಯಿ
ರಾಜ್ಯಾದ್ಯಂತ ಚರ್ಚಯಾಗಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ʼಒಕ್ಕಲಿಗʼ ಕಾರ್ಡ್‌ ಬಳಸಿ ಆತ್ಮರಕ್ಷಣೆಗೆ ಮುಂದಾಗಿದ್ದಾರೆ. ಪಠ್ಯಪುಸ್ತಕದ ವಿಚಾರದಲ್ಲಿ ಆರ್‌. ಅಶೋಕ್‌ ಸುದೀರ್ಘ ಸುದ್ದಿಗೋಷ್ಠಿ ನಡೆಸುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

10. ಜುಲೈ ಕೊನೆಯಲ್ಲಿ ಯಾವಾಗಲಾದರೂ ಬನ್ನಿ ಸಾಕು; ಸೋನಿಯಾ ಗಾಂಧಿ ಮನವಿಗೆ ಇ ಡಿ ಸ್ಪಂದನೆ
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಇಂದು (ಜೂ.23) ಇ.ಡಿ. ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ಈಗಷ್ಟೇ ಕೊವಿಡ್‌ 19ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ತಮ್ಮ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದರು. ಅದನ್ನು ಇ.ಡಿ. ಅಧಿಕಾರಿಗಳು ಪುರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೇ ದಿನಾಂಕದಂದು ಬನ್ನಿ ಎಂದು ಕೂಡ ಹೇಳಿಲ್ಲ. ʼಜುಲೈ ಕೊನೆಯಲ್ಲಿ ಬಂದು ಹೇಳಿಕೆ ದಾಖಲಿಸಿದರೆ ಸಾಕುʼ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ರಾಹುಲ್‌ ಗಾಂಧಿಗೂ ಕಳೆದ ಎರಡು ದಿನಗಳಿಂದ ಇ.ಡಿ. ಬ್ರೇಕ್‌ ನೀಡಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version