1ವಿದ್ಯುತ್ ಕಳ್ಳತನ ಆರೋಪ, ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್
ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರ (Decoration of electric lights) ಮಾಡಲಾಗಿದ್ದ ಸಂಬಂಧ ಈಗ ಕುಮಾರಸ್ವಾಮಿ ಮೇಲೆ ಎಫ್‌ಐಆರ್ ದಾಖಲಾಗಿದೆ. ವಿದ್ಯುತ್ ಕಳ್ಳತನದ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಎಚ್‌ಡಿಕೆಯಿಂದ ವಿದ್ಯುತ್ ಕಳ್ಳತನವೆಂದ ಕಾಂಗ್ರೆಸ್; ದಂಡ ಕಟ್ತೇನೆ ಅಂದ್ರು ಕುಮಾರಸ್ವಾಮಿ
2. ಕೆಇಎ ಪರೀಕ್ಷೆ ವೇಳೆ ಇನ್ನು ಹಿಜಾಬ್ ನಿಷೇಧ; ಮಾಂಗಲ್ಯ, ಕಾಲುಂಗುರ ಓಕೆ
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority-KEA) ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳಿಗೆ ಅನ್ವಯವಾಗುವಂತೆ ಹಿಜಾಬ್ (Hijab Ban), ಟೋಪಿ ಸೇರಿದಂತೆ ತಲೆ ಮತ್ತು ಕಿವಿಯನ್ನು ಮುಚ್ಚುವ ವಸ್ತ್ರಧಾರಣೆಯನ್ನು ನಿಷೇಧಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ: ಹಂತಕ ಅರೆಸ್ಟ್
ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ ಮಾಡಿದ ಹಂತಕನನ್ನು (Killer Arrest) ಪೊಲೀಸರು ಬಂಧಿಸಲು (Udupi police) ಸಫಲರಾಗಿದ್ದಾರೆ. ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಅರುಣ್ ಚೌಗಲೆ ಎಂಬಾತನೇ ಈ ಕೊಲೆಗಾರ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಸೆಮಿ ಫೈನಲ್ ನಡೆಯುವ ವಾಂಖೆಡೆ ಸ್ಟೇಡಿಯಂ ಯಾವ ತಂಡಕ್ಕೆ ಫೇವರಿಟ್?
ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (IND vs NZ) ತಂಡಗಳು ಮುಖಾಮುಖಿಯಾಗಲಿವೆ. ಸೆಮಿಫೈನಲ್ ಪಂದ್ಯ ನಡೆಯಲಿರುವ ವಾಂಖೆಡೆ ಸ್ಟೇಡಿಯಂ ಯಾರ ಪಾಲಿಗೆ ಹೆಚ್ಚು ಫೇವರಿಟ್? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಮರುಕಳಿಸದಿರಲಿ 2019ರ ಸೆಮಿಫೈನಲ್ ಸೋಲಿನ ನೋವು
5. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಬುಧವಾರ ಪದಗ್ರಹಣ; ಈ ಹಿಂದಿನ ಅಧ್ಯಕ್ಷರು ಯಾರ್ಯಾರು?
ಬಿ.ವೈ. ವಿಜಯೇಂದ್ರ (BY Vijayendra) ಅವರು ಬುಧವಾರ (ನ. 15) ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ಪದಗ್ರಹಣ ಮಾಡಲಿದ್ದಾರೆ. ಈ ಮೂಲಕ ಇವರು ರಾಜ್ಯ ಬಿಜೆಪಿಗೆ 11ನೇ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಅವಧಿಯಾಗಿ 14ನೇ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದವರ ಪೂರ್ಣ ಪಟ್ಟಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ವಾ, ಟೆನ್ಶನ್ ಬೇಡ! ಯಾಕಂದ್ರೆ…
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಇದಕ್ಕೆ ನ. 17ರ ಗಡುವನ್ನು ವಿಧಿಸಲಾಗಿತ್ತು. ಈಗ ಆ ಗಡು ಮುಂದಿನ ಫೆಬ್ರವರಿ 17ಕ್ಕೆ ವಿಸ್ತರಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ವ್ಯಭಿಚಾರ ಮತ್ತೆ ಕ್ರಿಮಿನಲ್ ಅಪರಾಧ! ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸು
ಅಕ್ರಮ ಸಂಬಂಧ, ವಿವಾಹೇತರ ಸಂಬಂಧ ಅಥವಾ ವ್ಯಭಿಚಾರವನ್ನು (Adultery Criminal Crime) ಮತ್ತೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ (Parliamentary Panel) ಕೇಂದ್ರ ಸರ್ಕಾರಕ್ಕೆ (Central Government) ಶಿಫಾರಸು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8.ಗಾಜಾದಲ್ಲಿ ಎಲ್ಲೆಂದರಲ್ಲಿ ಹೆಣಗಳು! ಆಸ್ಪತ್ರೆ ನೆಲಮಾಳಿಗೆಯೇ ಹಮಾಸ್ ಕಮಾಂಡ್ ಸೆಂಟರ್!
ಗಾಜಾಪಟ್ಟಿಯಲ್ಲಿ (Gaza Strip) ಹಮಾಸ್ (Hamas) ಮತ್ತು ಇಸ್ರೇಲ್ (Israel) ನಡುವಿನ ಸಂಘರ್ಷವು ತಾರಕಕ್ಕೇರಿದೆ. ಗಾಜಾದ ಅತಿದೊಡ್ಡ ಆಸ್ಪತ್ರೆಯಾಗಿರುವ ಅಲ್ ಶಿಫಾ (Al Shifa Hospital) ಆಸ್ಪತ್ರೆಯಲ್ಲಿ ಶಿಶುಗಳು ಸೇರಿದಂತೆ 179 ಜನರನ್ನು ಅದರ ಆವರಣದೊಳಗಿನ ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಎರಡು ವರ್ಷಗಳ ಹಿಂದೆಯೇ ನಡೆದಿತ್ತು ಬಿಗ್ ಬಾಸ್ ಸ್ಪರ್ಧಿ ವರ್ತೂರು ವಿವಾಹ; ಸಹೋದರ ಹೇಳಿದ್ದೇನು?
ವರ್ತೂರು ಸಂತೋಷ್ ಕಾರಣದಿಂದ ಕನ್ನಡ ಬಿಗ್ ಬಾಸ್ ಸೀಸನ್ 10(BBK Season 10) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ಅವರು ಬಳಿಕ ಸ್ಪರ್ಧೆ ಮುಂದುವರಿಸಿದ್ದರು. ಬಳಿಕ ಶೋ ಬಿಟ್ಟು ಮಧ್ಯದಿಂದಲೇ ಹೊರ ಹೋಗುವುದಾಗಿ ಹೇಳಿ ಸುದ್ದಿಯಾಗಿದ್ದರು. ಅವರಿಗೆ 2 ವರ್ಷಗಳ ಹಿಂದೆಯೇ ಮದುವೆಯಾಗಿದೆ ಎನ್ನುವ ವಿಚಾರ ಇದೀಗ ಮುನ್ನಲೆಗೆ ಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಬಿಗ್ ಬಾಸ್‌ನ ಮತ್ತೊಬ್ಬ ಸ್ಪರ್ಧಿ ಮೇಲೆ ಎಫ್‌ಐಆರ್! ಅರೆಸ್ಟ್ ಆಗ್ತಾರಾ ತನಿಷಾ ಕುಪ್ಪಂಡ?
10. ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಬಾಂಬ್ ಇಟ್ಟಳು! ಎದ್ದೆನೋ ಬಿದ್ದೆನೋ ಎಂದು ಓಡಿದ ಸಿಬ್ಬಂದಿ
ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯಲ್ಲಿ ಕೆಲ ಹೊತ್ತು ಆತಂಕದ ವಾತಾವರಣವೇ ಸೃಷ್ಟಿಯಾಗಿತ್ತು. ಕಂಪನಿಯ ಬಿ.ಬ್ಲಾಕ್‌ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೊಂದು (Bomb threat) ಬಂದಿತ್ತು. ಕರೆ ಬರುತ್ತಿದ್ದಂತೆ ಕಂಪನಿಯೊಳಗೆ ಇದ್ದ ಎಲ್ಲರೂ ಹೊರಗೆ ಓಡಿ ಬಂದಿದ್ದರು. ನಿಜಕ್ಕೂ ಅಲ್ಲಿ ಆಗಿದ್ದೇನು? ಆ ಹುಡುಗಿ ಹಾಗೆ ಕರೆ ಮಾಡಲು ಕಾರಣವೇನು? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ