Site icon Vistara News

ವಿಸ್ತಾರ TOP 10 NEWS | ಗುಜರಾತ್‌, ಹಿಮಾಚಲ Exit Pollನಲ್ಲಿ ಬಿಜೆಪಿ ಜಯಭೇರಿಯಿಂದ ಜನಾರ್ದನ ರೆಡ್ಡಿ ರಿ-ಎಂಟ್ರಿವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-exit polls suggest bjp win in gujarat and gaali janardan reddy re entered into politics and more news

ಬೆಂಗಳೂರು: ಕರ್ನಾಟಕ ಸೇರಿ ದೇಶಾದ್ಯಂತ ಕುತೂಹಲ ಕೆರಳಿಸಿರುವ ಗುಜರಾತ್‌ ವಿಧಾನಸಭೆ ಚುನಾವಣೆ ಜತೆಗೆ ಹಿಮಾಚಲ ಪ್ರದೇಶ ಚುನಾವಣೆಯ ಮತದಾನವೂ ಸೋಮವಾರ ಪೂರ್ಣವಾಗಿದ್ದು, ಬಿಜೆಪಿಯೇ ಜಯಭೇರಿ ಬಾರಿಸುವುದಾಗಿ ಮತದಾನೋತ್ತರ ಸಮೀಕ್ಷೆಗಳು ತಿಳಿಸುತ್ತಿವೆ. ನವದೆಹಲಿಯ ಸ್ಥಳೀಯ ಸಂಸ್ಥೆಗಳಲ್ಲಿ ಆಪ್‌ ಜಯಗಳಿಸುವ ನಿರೀಕ್ಷೆಯಿದೆ, ಜನಾರ್ದನ ರೆಡ್ಡಿ ವಿಭಿನ್ನ ರೀತಿಯಲ್ಲಿ ರಾಜಕಾರಣ ಪ್ರವೇಶಿಸುವ ಮುನ್ಸೂಚನೆ ನೀಡಿದ್ದಾರೆ, ಎಸ್‌ಎಸ್‌ಎಲ್‌ ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ, ಮತಾಂತರದ ಕುರಿತು ವಿಸ್ತೃತ ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಹೇಳಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Exit Poll 2022 | ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ನಾಗಾಲೋಟ, ಕಾಂಗ್ರೆಸ್‌, ಆಪ್‌ ಧೂಳೀಪಟ, ಪ್ರಮುಖ ಸಮೀಕ್ಷಾ ವರದಿ ಇಲ್ಲಿವೆ
ಅಗತ್ಯ ವಸ್ತುಗಳ ಬೆಲೆಯೇರಿಕೆ, ಆಡಳಿತವಿರೋಧಿ ಅಲೆ, ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ, ಆಮ್‌ ಆದ್ಮಿ ಪಕ್ಷದ ಭರವಸೆಗಳ ಮಹಾಪೂರವನ್ನು ಮೀರಿಯೂ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಗೆಲುವಿನ ನಗಾರಿ ಬಾರಿಸುವುದು ಖಚಿತ ಎಂದು ಚುನಾವಣೋತ್ತರವಾಗಿ (Exit Poll 2022) ಸಂಸ್ಥೆಗಳು ನಡೆಸಿದ ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಆಯಾ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹಿಮಾಚಲ ಚುನಾವಣೆ: Exit Poll 2022 | ಹಿಮಾಚಲ ಪ್ರದೇಶದಲ್ಲಿ ಕಡಿಮೆ ಅಂತರದಲ್ಲಿ ಬಿಜೆಪಿಗೆ ಗೆಲುವು! ಕಾಂಗ್ರೆಸ್ ಜತೆ ಟೈಟ್ ಫೈಟ್

2. MCD Exit Poll | ದಿಲ್ಲಿಯಲ್ಲಿ ಬಿಜೆಪಿಗೆ ಮುಖಭಂಗ, ಆಪ್‌ಗೆ ಭರ್ಜರಿ ಜಯ!
ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ಚುನಾವಣೆಯನ್ನು ಆಮ್ ಆದ್ಮಿ ಪಾರ್ಟಿ(ಆಪ್) ಪ್ರಚಂಡ ಬಹುಮತದಿಂದ ಗೆಲ್ಲುವ ಸಾಧ್ಯತೆಗಳಿವೆ ಎಂದು ಎಕ್ಸಿ‌ಟ್‌ ಪೋಲ್‌ಗಳಿಂದ ಗೊತ್ತಾಗಿದೆ. ಒಟ್ಟು 250 ಸೀಟುಗಳ ಪೈಕಿ ಆಪ್ ಭರ್ಜರಿ 140ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಲಿದೆ. ಆಡಳಿತಾರೂಢ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಡಿಸೆಂಬರ್ 7ರಂದು ಚುನಾವಣೆ ಫಲಿತಾಂಶವು ಪ್ರಕಟವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Criminal politics | ರೌಡಿ ಮಾರ್ಕೆಟ್‌ ವೇಡಿ, ಒಂಟೆ ರೋಹಿತ್‌ ಜತೆ ಸಚಿವ ಅಶ್ವತ್ಥನಾರಾಯಣ: ಫೋಟೊ ವೈರಲ್‌
ರಾಜ್ಯದಲ್ಲಿ ರೌಡಿ ಪಾಲಿಟಿಕ್ಸ್‌ (Criminal politics) ಚರ್ಚೆ ಜೋರಾಗಿ ನಡೆಯುತ್ತಿರುವ ನಡುವೆಯೇ ಸಚಿವ ಸಿ.ಎನ್‌. ಅಶ್ವತ್ಥ ನಾರಾಯಣ ಅವರೊಂದಿಗೆ ಇಬ್ಬರು ರೌಡಿಗಳಿರುವ ಚಿತ್ರವೊಂದು ವೈರಲ್‌ ಆಗಿದೆ. ಈಗಾಗಲೇ ನಾಗಮಂಗಲ ಕ್ಷೇತ್ರದಲ್ಲಿ ರೌಡಿಸಂ ಹಿನ್ನೆಲೆಯಿರುವ ಫೈಟರ್‌ ರವಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮತ್ತು ಅದನ್ನು ಸಮರ್ಥಿಸಲು ಹೋಗಿ ಅಶ್ವತ್ಥ ನಾರಾಯಣ ಅವರು ಚರ್ಚೆಗೆ ಒಳಗಾಗಿದ್ದಾರೆ. ಈಗ ರೌಡಿಗಳ ಜತೆಗಿನ ಫೋಟೊ ಸುದ್ದಿ ಮಾಡಿದೆ. ಈಗ ಅಶ್ವತ್ಥನಾರಾಯಣ ಅವರು ಕಾಣಿಸಿಕೊಂಡಿರುವುದು ರೌಡಿಗಳಾದ ಮಾರ್ಕೆಟ್ ವೇಡಿ‌, ಒಂಟೆ ರೋಹಿತ್. ಚಿತ್ರದಲ್ಲಿ ಸಚಿವರು ವೇದಿಕೆ ಹಂಚಿಕೊಂಡಿರುವುದು ಮಾತ್ರವಲ್ಲ, ಆತ್ಮೀಯವಾಗಿ ಮಾತನಾಡುತ್ತಿರುವ ಚಿತ್ರವೂ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Criminal politics | ರೌಡಿಶೀಟರ್‌ಗಳಿಗೆ ಕ್ಲೀನ್‌ ಚಿಟ್‌ ಕೊಟ್ಟಿಲ್ಲ ಎಂದ ಸಿ.ಟಿ ರವಿ, ಕೆಪಿಸಿಸಿ ಅಧ್ಯಕ್ಷರೇ ಕೊತ್ವಾಲ ಶಿಷ್ಯ ಎಂದ ರೇಣುಕಾಚಾರ್ಯ

4. Gali Janardhan Reddy | ಗಂಗಾವತಿಯಿಂದ ರೆಡ್ಡಿ ರಾಜಕೀಯ ಜೀವನ ಮರು ಆರಂಭ; ಪ್ರಾದೇಶಿಕ ಪಕ್ಷ ಸ್ಥಾಪನೆ?
ಹನುಮ ಜಯಂತಿ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದಿದ್ದಾರೆ. ಹನುಮ ಮಾಲೆ ಧರಿಸಿ ಗಂಗಾವತಿಯ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ನಡುವೆ ಹಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದ ಅವರು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಿ, ಗಂಗಾವತಿಯಿಂದ ರಾಜಕೀಯ ಜೀವನ ಮರು ಆರಂಭ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಕೋಲಾರ ಕಾಂಗ್ರೆಸ್‌ನಲ್ಲಿ ಕೋಲಾಹಲ: ಸಿದ್ದರಾಮಯ್ಯ ಸ್ಪರ್ಧೆ ಕುರಿತು ಮುನಿಯಪ್ಪ ಎದುರೇ ಜಟಾಪಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಯತ್ನಗಳ ನಡುವೆಯೇ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮತ್ತೊಮ್ಮೆ ಸ್ಪೋಟವಾಗಿದೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದ ಕೈ ಮುಖಂಡರ ಸಭೆಯಲ್ಲಿ ೨ ಬಣದ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 31 ರಿಂದಲೇ ಎಕ್ಸಾಮ್‌ ಶುರು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ (SSLC Exam 2023) ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್‌ 31 ರಿಂದಲೇ ಪರೀಕ್ಷೆ ಆರಂಭವಾಗಲಿದೆ. ಏಪ್ರಿಲ್‌ 15 ಕ್ಕೆ ಪರೀಕ್ಷೆ ಕೊನೆಗೊಳ್ಳಲಿದೆ. ತಾತ್ಕಾಲಿಕ ವೇಳಾಪಟ್ಟಿಲ್ಲಿ ಏಪ್ರಿಲ್‌ 1 ರಿಂದ ಪರೀಕ್ಷೆ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಈ ಬದಲಾವಣೆ ಬಿಟ್ಟರೆ ಅಂತಿಮ ವೇಳಾಪಟ್ಟಿಯಲ್ಲಿ ಮತ್ಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Tipu Sultan Drama | ಟಿಪ್ಪು ನಿಜಕನಸುಗಳು: ಇದು ʼಕರ್ನಾಟಕದ ಕಾಶ್ಮೀರ್‌ ಫೈಲ್ಸ್‌ʼ!
ಡಾ. ಗಿರೀಶ್‌ ಕಾರ್ನಾಡರು 25 ವರ್ಷಗಳ ಹಿಂದೆ ಬರೆದ ಟಿಪೂ ಸುಲ್ತಾನ್‌ ಕಂಡ ಕನಸುಗಳು ನಾಟಕಕ್ಕೆ ಪ್ರತಿಯಾಗಿ ಅಡ್ಡಂಡ ಕಾರ್ಯಪ್ಪ ಅವರು ರಚಿಸಿರುವ ಟಿಪ್ಪು ನಿಜಕನಸುಗಳು ಕೃತಿ ಲೋಕಾರ್ಪಣೆಯಾಗಿದೆ. ಸಾಕಷ್ಟು ಜನಪ್ರಿಯತೆ ಪಡೆದಿದೆ, ಸದ್ಯಕ್ಕೆ ಮಾರಾಟ ಮಾಡದಂತೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ. ಈ ಎರಡೂ ಕೃತಿಗಳನ್ನು ಓದಿದ ಸಂದರ್ಭದಲ್ಲಿ ರಮೇಶ ದೊಡ್ಡಪುರ ಮಾಡಿಕೊಂಡ ಟಿಪ್ಪಣಿಗಳು ಇಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. INDvsBAN | ಕೊನೇ ಕ್ಷಣದಲ್ಲಿ ಆಡುವುದಿಲ್ಲ ಎಂದ ರಿಷಭ್! ಶಿಸ್ತು ಕ್ರಮ ಕೈಗೊಂಡಿಲ್ಲ ಯಾಕೆ?
ಟೀಮ್‌ ಇಂಡಿಯಾದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಶನಿವಾರ ನಡೆದ ಟೀಮ್‌ ಇಂಡಿಯಾದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಅವರು ಪಂದ್ಯ ಆರಂಭಕ್ಕೆ ಸ್ವಲ್ಪ ಹೊತ್ತಿನ ಮೊದಲು ಡ್ರೆಸ್ಸಿಂಗ್‌ ರೂಮ್‌ ತೊರೆದಿದ್ದರು. ಹೀಗಾಗಿ ಕೆ ಎಲ್‌ ರಾಹುಲ್‌ ವಿಕೆಟ್‌-ಕೀಪರ್ ಜವಾಬ್ದಾರಿ ವಹಿಸಿಕೊಂಡಿದ್ದರು. ರಿಷಭ್‌ ಪಂತ್‌ ತಂಡಕ್ಕೆ ಲಭ್ಯರಿಲ್ಲ ಎಂಬುದನ್ನು ಬಿಸಿಸಿಐ ಹೇಳಿದೆ. ಆದರೆ ಯಾಕೆ ಆಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Supreme Court | ಬಲವಂತದ ಮತಾಂತರ, ವಿಸ್ತೃತ ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಒತ್ತಾಯದ ಮತಾಂತರವು ಗಂಭೀರ ಸಮಸ್ಯೆಯಾಗಿದ್ದು, ವಿಸ್ತೃತ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಸೂಚಿಸಿದೆ. ಮತಾಂತರ ವಿರೋಧಿ ಕಾನೂನಿಗೆ ಸಂಬಂಧಿಸಿದಂತೆ ರಾಜ್ಯಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Murder case | ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ?; ಉದ್ಯಮಿ ಪುತ್ರನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಹುಬ್ಬಳ್ಳಿ ಖ್ಯಾತ ಉದ್ಯಮಿಯೊಬ್ಬರ ಪುತ್ರನ ನಾಪತ್ತೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರ ತೋಟದ ಮನೆಯಲ್ಲಿಯೇ ಶವವಾಗಿ (Murder case) ಪತ್ತೆಯಾಗಿದ್ದು, ಮಗನ ಕೊಲೆಗೆ ತಂದೆಯೇ ಸುಪಾರಿ ನೀಡಿರುವ‌ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ರೋಹಿಣಿ ಸಿಂಧೂರಿ ವಿರುದ್ಧ ಲಕ್ಕಿ ಅಲಿ ಆರೋಪ: ಕಾನೂನು ಕ್ರಮದ ಎಚ್ಚರಿಕೆ ನೀಡಿದ IAS ಅಧಿಕಾರಿ
  2. Kashmiri Pandits | ಕಾಶ್ಮೀರದಲ್ಲಿ ಪಂಡಿತರ ಪಟ್ಟಿ ತಯಾರಿಸಿದ ಉಗ್ರರು, ಮತ್ತೆ ನರಮೇಧ ಶುರು?
  3. RRR Movie | ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಆರ್‌ಆರ್‌ಆರ್‌ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗುತ್ತಾ?
  4. Gujarat Election | ವೋಟ್ ಮಾಡಿದ ಪ್ರಧಾನಿ ಮೋದಿ ತಾಯಿ, ಶತಾಯುಷಿ ಹೀರಾಬೆನ್
Exit mobile version