Site icon Vistara News

ವಿಸ್ತಾರ TOP 10 NEWS: ಕಾಂಗ್ರೆಸ್‌ ಸೇರಿದ ಮಾಜಿ ಡಿಸಿಎಂ ಸವದಿಯಿಂದ, ಭವಾನಿ ಕೈತಪ್ಪಿದ ಹಾಸನ ಟಿಕೆಟ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news former deputy chief minister laxman savadi joins congress to swarup gets hassan jds ticket and more news

#image_title

1. BJP Karnataka: ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್‌ ಸೇರ್ಪಡೆ
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಪಕ್ಷಕ್ಕೆ ಹಾಗೂ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ನಿವಾಸದಲ್ಲಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಯನ್ನು ಸ್ವೀಕರಿಸಿದ್ದೇನೆ ಎಂದು ಹೊರಟ್ಟಿ ತಿಳಿಸಿದರು. ನಂತರ ಕೆಪಿಸಿಸಿ ಕಚೇರಿಗೆ ತೆರಳಿದ ಲಕ್ಷ್ಮಣ ಸವದಿ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Karnataka Elections: ಜೆಡಿಎಸ್‌ 2ನೇ ಪಟ್ಟಿ ಪ್ರಕಟ, ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್‌, ವೈಎಸ್‌ವಿ ದತ್ತಗೂ ಸಿಕ್ತು ಚಾನ್ಸ್
ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ ಜೆಡಿಎಸ್‌ ಎರಡನೇ ಪಟ್ಟಿ ಪ್ರಕಟಗೊಂಡಿದೆ. ಭಾರಿ ಚರ್ಚೆಗೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಪಿ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಇದು ಟಿಕೆಟ್‌ಗಾಗಿ ಹೋರಾಟ ನಡೆಸಿದ್ದ ಭವಾನಿ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ.‌ ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Elections : ಅಂಗಾರ ಬೇಸರಕ್ಕೆ ಬಿತ್ತು ತೆರೆ, ಬಿಜೆಪಿ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ಘೋಷಣೆ
ʻʻಇನ್ನು ಮುಂದೆ ಬಿಜೆಪಿಯ ಯಾವ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ಚುನಾವಣೆಯ ಪ್ರಚಾರಕ್ಕೂ ಹೋಗುವುದಿಲ್ಲʼʼ ಎಂದು ಹೇಳಿದ್ದ ಸುಳ್ಯದ ಬಿಜೆಪಿ ಶಾಸಕ ಅಂಗಾರ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election 2023: ಪ್ರಚಾರಕ್ಕೆ ಹೋಗಿದ್ದ ಎನ್‌.ಆರ್‌. ಸಂತೋಷ್‌ಗೆ ತರಾಟೆ; ಹಲ್ಲೆಗೆ ಮುಂದಾದರೇ ಗ್ರಾಮಸ್ಥರು?

4. Karnataka Election 2023: ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಪರ ವಿಜಯೇಂದ್ರ ಭರ್ಜರಿ ಪ್ರಚಾರ; ವರುಣ ಕ್ಷೇತ್ರದ ಬಗ್ಗೆ ಮೌನ
ಕೆ.ಆರ್.ಪೇಟೆಯಲ್ಲಿ 2019ರ ಉಪ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅರಳಿಸಲು ಅಖಾಡಕ್ಕೆ ಧುಮುಕಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ವಿಜಯೇಂದ್ರ ಭಾಗವಹಿಸಿದ್ದರು. ಅವರಿಗೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಸೇಬಿನ‌ ಹಾರ ಹಾಕಿ ಭರ್ಜರಿ ಸ್ವಾಗತ ಕೋರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Ambedkar Jayanti 2023: ಹೈದ್ರಾಬಾದ್‌ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ, ಕಾಪ್ಟರ್ ಮೂಲಕ ಪುಷ್ಪಾರ್ಚನೆ
ಹೈದ್ರಾಬಾದ್‌ನಲ್ಲಿ ನಿರ್ಮಿಸಲಾಗಿರುವ ಸಂವಿಧಾನಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆಯನ್ನು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ (cm k chandrasekhar rao) ಅವರು ಏಪ್ರಿಲ್ 14, ಶುಕ್ರವಾರ ಸಂಜೆ ಲೋಕಾರ್ಪಣೆ ಮಾಡಿದರು. ಹೆಲಿಕಾಪ್ಟರ್ ಮೂಲಕ ಪ್ರತಿಮೆ ಮೇಲೆ ಹೂ ಮಳೆ ಸುರಿಸಲಾಯಿತು(Ambedkar Jayanti 2023). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Delhi liquor policy case: ವಿಚಾರಣೆಗೆ ಹಾಜರಾಗಲು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್
ಅಬಕಾರಿ ನೀತಿ ಹಗರಣ ಸಂಬಂಧ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ವಿಚಾರಣೆ ನಡೆಸಲು ಕೇಂದ್ರ ತನಿಖಾ ದಳ (CBI) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Hotel Chains : ಜಾಗತಿಕ ಗ್ರೂಪ್‌ಗಳಿಂದ ಭಾರತದಲ್ಲಿ ಹೊಸ ಐಷಾರಾಮಿ ಹೋಟೆಲ್‌ಗಳ ನಿರ್ಮಾಣ
ಹಿಲ್ಟನ್‌, ರ‍್ಯಾಡಿಸನ್‌, ಮೈನರ್ ಇತ್ಯಾದಿ ಜಾಗತಿಕ ಮಟ್ಟದ ಪ್ರಮುಖ (Hotel Chains) ಹೋಟೆಲ್‌ ಸರಣಿಗಳು ಭಾರತದಲ್ಲಿ ಹೊಸ ಬ್ರಾಂಡ್‌ಗಳ ಹೋಟೆಲ್‌ಗಳನ್ನು ನಿರ್ಮಿಸಲಿದೆ. ವಿಂಡಮ್‌ ಹಲವು ಬ್ರಾಂಡ್‌ಗಳನ್ನು ತರಲಿದೆ. ಹಯಾತ್‌ ತನ್ನ ಬೋಟಿಕ್‌ ಹೋಟೆಲ್‌ ಬ್ರಾಂಡ್‌ ಜೆಡಿವಿಯನ್ನು ಜುಲೈನಲ್ಲಿ ಪರಿಚಯಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Viral Video: ಮೋದಿ ಜೀ ನನ್ನ ಮಾತು ಕೇಳಿ, ಒಳ್ಳೆಯ ಶಾಲೆ ಕಟ್ಟಿಸಿಕೊಡಿ; ತನ್ನ ಸ್ಕೂಲ್​ ದುಸ್ಥಿತಿ ತೋರಿಸಿ, ಮನವಿ ಮಾಡಿದ ಕಾಶ್ಮೀರದ ಬಾಲಕಿ
ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲೋಹಾಯ್​ ಮಲ್ಹಾರ್ ಎಂಬ ಗ್ರಾಮದ ಪುಟ್ಟ ಹುಡುಗಿ ಸೀರಾತ್​ ನಾಜ್​ (Seerat Naaz) ತಾನು ಓದುತ್ತಿರುವ ಶಾಲೆಯ ದುಃಸ್ಥಿತಿಯನ್ನು ವಿಡಿಯೊ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಮನವಿ ಮಾಡಿದ್ದಾಳೆ. ‘ನನ್ನ ಶಾಲೆ ಎಷ್ಟು ಕೊಳಕಾಗಿದೆ ನೋಡಿ ಮೋದಿ ಜೀ, ಈ ಕಲ್ಲು-ಮಣ್ಣು ಎದ್ದಿರುವ ನೆಲದ ಮೇಲೆ ಕುಳಿತುಕೊಂಡು ನಾವು ಪಾಠ ಆಲಿಸುವುದಾದರೂ ಹೇಗೆ?, ದಯವಿಟ್ಟು ನಮಗಾಗಿ ಒಂದು ಒಳ್ಳೆ ಶಾಲೆ ಕಟ್ಟಿಸಿಕೊಡಿ’ ಎಂದು ಪ್ರಧಾನಿಯವರ ಬಳಿ ಕೇಳಿಕೊಂಡಿದ್ದಾಳೆ. ಆ ಪುಟ್ಟ ವಿದ್ಯಾರ್ಥಿನಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ (Viral Video)ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: ರಾಜ್ಯಾದ್ಯಂತ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ; ವೀಕೆಂಡ್‌ ಮೋಜಿಗೆ ಬ್ರೇಕ್‌
ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುವ (Karnataka Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಗದಗ, ಧಾರವಾಡ, ಬಾಗಲಕೋಟೆ, ಕಲಬುರಗಿ, ವಿಜಯಪುರದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023: ಪಂದ್ಯ ಗೆದ್ದರೂ ಹಾರ್ದಿಕ್​ ಪಾಂಡ್ಯಗೆ ಬಿತ್ತು ದಂಡದ ಬರೆ
ಪಂಜಾಬ್​ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟನ್ಸ್​(gujarat titans) ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ತಂಡದ ನಾಯಕ ಹಾರ್ದಿಕ್​ ಪಾಂಡ್ಯ(hardik pandya) ಅವರಿಗೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Infertility problem: ಪ್ರತಿ ಆರು ಜನರ ಪೈಕಿ ಒಬ್ಬರಿಗೆ ಬಂಜೆತನ ಸಮಸ್ಯೆ; ವಿಶ್ವ ಆರೋಗ್ಯ ಸಂಸ್ಥೆ ಕಳವಳ
  2. Footbridge Collapse: ಕಾಶ್ಮೀರದಲ್ಲಿ ಬೈಸಾಕಿ ಹಬ್ಬದ ದಿನವೇ ದುರಂತ; ಸೇತುವೆ ಕುಸಿದು 80 ಜನಕ್ಕೆ ಗಾಯ
  3. KGF 3 Movie : ಕೆಜಿಎಫ್‌ 2ಗೆ ಒಂದು ವರ್ಷ, ಕೆಜಿಎಫ್ 3 ಸಿನಿಮಾ ಪಕ್ಕಾ! ಸುಳಿವು ಬಿಟ್ಟು ಕೊಟ್ಟ ಹೊಂಬಾಳೆ ಫಿಲಂಸ್
  4. Road Accident : ಸ್ವಿಫ್ಟ್‌ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್‌ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಆರು ಮಂದಿ ಮೃತ್ಯು
  5. Govt Websites: 12000 ಸರ್ಕಾರಿ ವೆಬ್‌ಸೈಟ್ ಟಾರ್ಗೆಟ್ ಮಾಡಿದ ಇಂಡೋನೇಷ್ಯಾ ಹ್ಯಾಕರ್ಸ್
  6. Covid 19 Updates: ಇಂದು ದೇಶದಲ್ಲಿ 11 ಸಾವಿರ ಕೊರೊನಾ ಕೇಸ್​ಗಳು; 29 ಮಂದಿ ಸೋಂಕಿನಿಂದ ಸಾವು
Exit mobile version