Site icon Vistara News

ವಿಸ್ತಾರ TOP 10 NEWS: ಸ್ತ್ರೀಯರಿಗೆ ಭಾನುವಾರದಿಂದ ಫ್ರೀ ʼಶಕ್ತಿʼ, ಡಿಜಿಟಲ್‌ ಪಾವತಿಯಲ್ಲಿ ಭಾರತದ ಕೀರ್ತಿ ಹಾಗೂ ಇನ್ನಿತರೆ ಪ್ರಮುಖ ಸುದ್ದಿಗಳಿವು

news free bus service from sunday to india tops digital payment and more news

#image_title

1. Free Bus: ನಾಳೆ ಮಹಿಳೆಯರಲ್ಲಿ ‘ಶಕ್ತಿ’ ಸಂಚಾರ! ಉಚಿತ ಪ್ರಯಾಣಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್‌ಕಾರ್ಡ್‌ ಸಿಗೋದು ಯಾವಾಗ?
ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್‌ (Free Bus) ಪ್ರಯಾಣವುಳ್ಳ ಶಕ್ತಿ ಯೋಜನೆಗೆ ಭಾನುವಾರ (ಜೂನ್‌ 11) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಲಿದ್ದಾರೆ. ಈ ಉಚಿತ ಪ್ರಯಾಣಕ್ಕೆ ಏಳು ಕಂಡೀಷನ್ ಅನ್ನು ಈಗಾಗಲೇ ಹಾಕಲಾಗಿದೆ. ಯಾವ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ, ಸ್ಮಾರ್ಟ್‌ ಕಾರ್ಡ್‌ ಪಡೆಯುವುದು ಎಲ್ಲಿ? ಅದಕ್ಕೆ ಏನೇನು ಬೇಕು? ಸ್ಮಾರ್ಟ್‌ ಕಾರ್ಡ್‌ ವಿತರಣೆ ಪ್ರಕ್ರಿಯೆ ಯಾವಾಗ? ಅಲ್ಲಿಯವರೆಗೆ ಏನು ಬೇಕು? ಎಂಬ ಬಗ್ಗೆ ಇಲ್ಲಿದೆ ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. H.D. Kumaraswamy: ಇದು 40+5 ಪರ್ಸೆಂಟ್ ಕಮಿಷನ್‌ ಸರ್ಕಾರ: ಕಾಂಗ್ರೆಸ್‌ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಹೊಸ ಬಾಂಬ್‌!
ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್‌ ಸರ್ಕಾರ ಎಂದು ಬ್ರ್ಯಾಂಡ್‌ ಮಾಡಿದ್ದ ಕಾಂಗ್ರೆಸ್‌ ಪಕ್ಷದ ಈಗಿನ ಸರ್ಕಾರವನ್ನು 40+5 ಪರ್ಸೆಂಟ್‌ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗೇಲಿ ಮಾಡಿದ್ದಾರೆ. ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್‌ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha 2024) ನರೇಂದ್ರ ಮೋದಿ ಸೋಲಲಿದ್ದು, ಆಗ ರಸಗೊಬ್ಬರ, ಎಲ್‌ಪಿಜಿ ಸಿಲಿಂಡರ್‌ ದರವನ್ನು ಕಡಿಮೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವರುಣ ಕ್ಷೇತ್ರಕ್ಕೆ ತೆರಳಿದ ಸಿದ್ದರಾಮಯ್ಯ, ಬಿಳಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೃತಜ್ನತಾ ಸಮಾವೇಶದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Moral Policing: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಬಿಜೆಪಿ ಠಕ್ಕರ್:‌ ಹೆಲ್ಪ್‌ಲೈನ್‌ಗೆ ಕಾಲ್‌ ಮಾಡಿದ್ರೆ ಬರ್ತಾರೆ 100 ಲಾಯರ್!
ರಾಜ್ಯದ ವಿವಿಧೆಡೆ ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಈಗಾಗಲೆ ಹೇಳಿರುವ ಹಿನ್ನೆಲೆಯಲ್ಲಿ, ತನ್ನ ಕಾರ್ಯಕರ್ತರ ಸಹಾಯಕ್ಕೆ ಬಿಜೆಪಿ ಹೆಲ್ಪ್‌ಲೈನ್‌ ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Fraud Case: ಡೇಟಿಂಗ್‌ ಆ್ಯಪ್‌ನಲ್ಲಿ ಅನಿರುದ್ಧ್‌ ಆಗಿ ಬದಲಾದ ಮುದಾಸಿರ್;‌ ಎಲ್ಲವನ್ನೂ ಮುಗಿಸಿ ಕಾಸೂ ಪಡೆದ!
ಡೇಟಿಂಗ್‌ ಆ್ಯಪ್‌ನಲ್ಲಿ (Dating App)ನಯವಾಗಿ ಮಾತಾಡಿ ವಂಚಿಸುವವರು (Fraud Case) ಹೆಚ್ಚಾಗಿದ್ದಾರೆ. ಹಿಂದೂ ಯುವಕನ ಹೆಸರಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್‌ ಕ್ರಿಯೇಟ್‌ ಮಾಡಿ ಯುವತಿಗೆ ಲಕ್ಷಾಂತರ ರೂ. ವಂಚಿಸಿದವನ ಬಂಧನವಾಗಿದೆ. ಮುದಾಸಿರ್ ಅಲಿಯಸ್ ಅನಿರುದ್ಧ್‌ ಬಂಧಿತ ಆರೋಪಿಯಾಗಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Weather Report: ಕರ್ನಾಟಕಕ್ಕೆ ಕಾಲಿಟ್ಟ ಮುಂಗಾರು; ಕರಾವಳಿಯಲ್ಲಿ ಮಳೆ ಜೋರು
ಕರ್ನಾಟಕಕ್ಕೆ ನೈರುತ್ಯ ಮುಂಗಾರು (Southwest Monsoon) ಕಾಲಿಟ್ಟಿದ್ದು, ಕಾರವಾರ ಮತ್ತು ಮಡಿಕೇರಿಯನ್ನು ಪ್ರವೇಶಿಸಿದೆ. ಇನ್ನೆರಡು ದಿನಗಳಲ್ಲಿ ಕೆಲವು ಭಾಗಗಳಲ್ಲಿ ಆವರಿಸಲಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain news) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Digital Payments: ಡಿಜಿಟಲ್ ಪಾವತಿ, ಇಂಡಿಯಾದ್ದೇ ಕೀರ್ತಿ! ಎಲ್ಲ ದೇಶಗಳನ್ನು ಹಿಂದಿಕ್ಕಿ ನಂ.1 ಆದ ಭಾರತ
ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ(digital revolution in india). ಇದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. 2022ರ ಅಂಕಿ ಅಂಶಗಳ ಪ್ರಕಾರ, ಡಿಜಿಟಲ್ ಪೇಮೆಂಟ್ಸ್‌ನಲ್ಲಿ (Digital Payments) ಭಾರತವು (India) ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. 2022ರಲ್ಲಿ 8.95 ಕೋಟಿ ಡಿಜಿಟಲ್ ಪಾವತಿಗಳಾಗಿವೆ ಎಂದು ಮೈಗೌವ್‌ಇಂಡಿಯಾ (MyGovIndia) ಅಂಕಿ ಅಂಶಗಳಿಂದ ಗೊತ್ತಾಗಿದೆ. ಅಂದರೆ, ಜಾಗತಿಕವಾಗಿ (World) ನಡೆಯುವ ರಿಯಲ್‌ಟೈಮ್ ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಕೊಡುಗೆಯೇ ಶೇ.46ರಷ್ಟಾಗುತ್ತದೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. NCP: ಸುಪ್ರಿಯಾ ಸುಳೆ, ಪಟೇಲ್ ಎನ್‌ಸಿಪಿ ಕಾರ್ಯಾಧ್ಯಕ್ಷರು! ಸಹೋದರನ ಪುತ್ರ ಅಜಿತ್‌ಗೆ ಕೈ ಕೊಟ್ರಾ ಶರದ ಪವಾರ್?
ತಮ್ಮ ಪುತ್ರಿ ಸುಪ್ರಿಯಾ ಸುಳೆ (Supriya Sule) ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್ (Praful Patel) ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (NCP)ಯ ಕಾರ್ಯಾಧ್ಯಕ್ಷರನ್ನಾಗಿ (Working President) ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ನೇಮಕ ಮಾಡಿದ್ದಾರೆ. ಪಕ್ಷದ ಸಂಸ್ಥಾಪನೆಯ 25 ವರ್ಷ ಆಚರಣೆ ವೇಳೆ ಈ ಘೋಷಣೆಯನ್ನು ಪವಾರ್ ಅವರ ಮಾಡಿದರು. 1999ರಲ್ಲಿ ಶರದ್ ಪವಾರ್ (Sharad Pawar) ಅವರು ಪಿಎ ಸಂಗ್ಮಾ ಜತೆಗೂಡಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದರು. ಆದರೆ, ಪಕ್ಷದ ಮತ್ತೊಬ್ಬ ಪ್ರಮುಖ ನಾಯಕನಾಗಿರುವ ಅಜಿತ್ ಪವಾರ್ (Ajit Pawar) ಅವರಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ವಿಶೇಷ ಎಂದರೆ, ಕಾರ್ಯಾಧ್ಯಕ್ಷರ ಘೋಷಣೆಯನ್ನು ಪವಾರ್ ಅವರು, ಅಜಿತ್ ಅವರ ಸಮ್ಮುಖದಲ್ಲಿ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WTC Final 2023: 44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2023) ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಪ್ರಮುಖ 2 ವಿಕೆಟ್ ಪಡೆಯುವ ಮೂಲಕ 44 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ದ್ವಿತೀಯ ಇನಿಂಗ್ಸ್‌ನಲ್ಲಿ ಆಸೀಸ್‌ ಪ್ರಮುಖ ಬ್ಯಾಟರ್​ಗಳಾದ ಸ್ಟೀವನ್ ಸ್ಮಿತ್(Steven Smith) ಹಾಗೂ ಟ್ರಾವಿಸ್ ಹೆಡ್(Travis Head) ಅವರ ವಿಕೆಟ್ ಪಡೆಯುವಯುವ ಮೂಲಕ ಭಾರತದ ಮಾಜಿ ಎಡಗೈ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿಯವರ ದಾಖಲೆಯನ್ನು ಮರಿದಿದ್ದಾರೆ.  ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Miyazaki Mango: ಇದು ಜಗತ್ತಿನ ಅತ್ಯಂತ ಕಾಸ್ಟ್ಲೀ ಮಾವು! ಆ ರೊಕ್ಕದಲ್ಲಿ ಸೆಕೆಂಡ್ ಹ್ಯಾಂಡ್ ಕಾರೇ ಖರೀದಿಸಬಹುದು!
ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯಲ್ಲಿ 7ನೇ ಮ್ಯಾಂಗೋ ಫೆಸ್ಟಿವಲ್ ಆಯೋಜಿಸಲಾಗಿದ್ದು, ಜಗತ್ತಿನ ಅತ್ಯಂತ ದುಬಾರಿ ಮಾವು ಮಿಯಾಜಾಕಿ (Miyazaki) ಪ್ರದರ್ಶನಕ್ಕೀಡಲಾಗಿದೆ. ಜೂನ್ 9ರಿಂದ ಆರಂಭವಾಗಿರುವ ಮಾವು ಮೇಳವು (Mango) ಮೂರು ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ ಸಂತೆಯಲ್ಲಿ ನಾವು ಖರೀದಿಸುವ ಮಾವು ಕೆಜಿಗೆ ಎಷ್ಟಿದ್ದಿತ್ತು? ಅಬ್ಬಬ್ಬಾ ಎಂದರೆ, 200 ರೂ. 300 ರೂ. 500 ರೂ. ಸಾವಿರ ರೂಪಾಯಿ ಅಲ್ಲವೇ? ಆದರೆ, ಈ ಮಾವು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿರುವ ಮಿಯಾಜಾಕಿ ಮಾವು ಬೆಲೆಯನ್ನು ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಈ ಮಾವು ಪ್ರತಿ ಕೆಜಿಗೆ 2.75 ಲಕ್ಷ ರೂಪಾಯಿ! ಒಂದು ಕೆಜಿ ಮಾವು ಖರೀದಿಸುವ ಮೊತ್ತದಲ್ಲಿ ಸೆಕೆಂಡ್ ಹ್ಯಾಂಡ್ ಅಲ್ಟೋ ಕಾರ್ (Car) ಖರೀದಿಸಬಹುದು! ಈ ದುಡ್ಡಿನಲ್ಲಿ ಮತ್ತೆ ಏನೇನು ಖರೀದಿಸಬಹುದು ನೋಡಿ(viral News). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version